Citroenನಿಂದ 2 ಲಕ್ಷ ರೂಪಾಯಿ ರಿಯಾಯಿತಿ ಘೋಷಣೆ

ಭಾರತದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು, 'ಇಸಿ3' ಬಿಡುಗಡೆಯೊಂದಿಗೆ ಸಂಚಲ ಮೂಡಿಸಿದ್ದ ಸಿಟ್ರನ್, ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ತನ್ನ ಹಳೆಯ ಸ್ಟಾಕ್ ಖಾಲಿ ಮಾಡಬೇಕಾಗಿದೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಪ್ರಮುಖ ಫ್ರೆಂಚ್ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಸಿಟ್ರನ್, ತನ್ನ 2022ರ 'ಸಿ5 ಏರ್ ಕ್ರಾಸ್' ಎಸ್‌ಯುವಿ ಮೇಲೆ ಭರ್ಜರಿ ರೂ.2 ಲಕ್ಷವರೆಗೆ ರಿಯಾಯಿತಿ ನೀಡುತ್ತಿದೆ. ಕೆಲವು ಡೀಲರ್ ಗಳು ಹೆಚ್ಚುವರಿಯಾಗಿಯು ಡಿಸ್ಕೌಂಟ್ ನೀಡುತ್ತಿದ್ದಾರೆ. ಜೊತೆಗೆ ಸಿಟ್ರನ್ ಸಿ3 (Citroen C3) ಕಾರಿನ ಮಾರಾಟವನ್ನು ವೃದ್ಧಿಸಿಕೊಳ್ಳಲು ರೂ.50,000ವರೆಗೆ ಖಾತರಿ ಪ್ರಯೋಜನವನ್ನು (assured benefits) ಕಂಪನಿ ನೀಡುತ್ತಿದೆ. ಈ ಸೌಲಭ್ಯಗಳು ಮಾರ್ಚ್ 31ರವರೆಗೆ ಅನ್ವಯವಾಗಲಿವೆ.

Citroen 2

ಸಿಟ್ರನ್ ಸಿ5 ಏರ್ ಕ್ರಾಸ್ (Citroen C5 Aircross) ಬಗ್ಗೆ ಮಾತನಾಡುವುದಾದರೆ, ಇದು ರೂ.37.17 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 5 ಆಸನ ಆಯ್ಕೆಯನ್ನು ಹೊಂದಿದ್ದು, 17.5 kmpl ಮೇಲೆಜ್ ನೀಡಲಿದೆ. 2 ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು, 177 PS ಗರಿಷ್ಠ ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ.

ಈ ಕಾರು ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10 ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3 ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಹಾಗೂ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬಾಗ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

Citroen 2

ದೇಶೀಯ ಮಾರುಕಟ್ಟೆಗೆ ಖರೀದಿಗೆ ದೊರೆಯುವ ಸಿಟ್ರನ್ ಸಿ3 (Citroen C3), ರೂ.5.98 ಲಕ್ಷದಿಂದ ರೂ.8.25 ಲಕ್ಷ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಲೈವ್ ಹಾಗೂ ಫೀಲ್ ಎಂಬ ಎರಡು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದೆ. 19.44 - 19.8 kmpl ಮೈಲೇಜ್ ನೀಡಲಿದೆ. 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 82 PS ಪವರ್, 115 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

1.2 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ 110 PS ಪವರ್ ಹಾಗೂ 190 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯೆಲ್ ಏರ್ ಬಾಗ್ಸ್ ಹೊಂದಿದೆ.

ಸದ್ಯ, ದೇಶದಲ್ಲಿ ಖರೀದಿಗೆ ದೊರೆಯುವ ಸಿಟ್ರನ್ ನ ಮೊದಲ ಎಲೆಕ್ಟ್ರಿಕ್ ಕಾರು 'ಇಸಿ3', ರೂ.11.50 ಲಕ್ಷದಿಂದ ರೂ.12.13 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರು, 29.2kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 56.2 bhp ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 320 km ರೇಂಜ್ ನೀಡಲಿದ್ದು, 107 kmph ಟಾಪ್ ಸ್ವೀಡ್ ಹೊಂದಿದೆ. ಆದರೆ, ಈ ಕಾರಿಗೆ ಯಾವುದೇ ರಿಯಾಯಿತಿ ಪ್ರಯೋಜನಗಳು ಲಭ್ಯವಿಲ್ಲ.

ಸಿಟ್ರನ್ ಕಂಪನಿಯಂತೆ ಈಗಾಗಲೇ ಮುಂಬರಲಿರುವ ಎಮಿಷನ್ ಮಾನದಂಡಗಳು ಹಾಗೂ ಮಾರಾಟ ಪ್ರಮಾಣವನ್ನು ವೃದ್ಧಿಸಿಕೊಳ್ಳಲು ಹಲವು ಕಾರು ಹಾಗೂ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ರಿಯಾಯಿತಿಯನ್ನು ನೀಡುತ್ತಿವೆ. ಆದರೆ ಸಿಟ್ರಸ್‌ ತನ್ನ ಬಹುನಿರೀಕ್ಷಿತ 'ಸಿ5 ಏರ್ ಕ್ರಾಸ್' ಎಸ್‌ಯುವಿಗೆ ದೊಡ್ಡ ಮಟ್ಟದ ರಿಯಾಯಿತಿ ನೀಡಿದೆ ಎಂದು ಹೇಳಬಹುದು. ಇದರಿಂದ ಈ ಕಾರಿನ ಮಾರಾಟ ಸುಧಾರಿಸಬಹುದು.

More from DriveSpark

Article Published On: Monday, March 13, 2023, 10:16 [IST]
English summary
Citroen offering discounts up to rs 2 lakh details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+