ಅಧಿಕ ಟೋಲ್ ಶುಲ್ಕ ವಸೂಲಿ... ನ್ಯಾಯಾಲಯ ಇಂಥಾ ಪಾಠ ಕಲಿಸುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ!

ಭಾರತದಲ್ಲಿ ವಿವಿಧ ರಾಜ್ಯಗಳಿಗೆ ತಲುಪಲು ಈಗ ನಮಗೆ ಅಂತರಾಷ್ಟ್ರೀಯ ಮಟ್ಟದ ಹೆದ್ದಾರಿಗಳಿವೆ. ಪ್ರಯಾಣಿಕರು ಮೊದಲಿನಂತಲ್ಲದೇ ಹೈವೇಗಳಲ್ಲಿ ಈಗ ಆರಾಮದಾಯಕ ಪ್ರಯಾಣ ಮಾಡಬಹುದು. ಆದರೆ ಟೋಲ್ ಪಾವತಿಯು ಕಡ್ಡಾಯವಾಗಿರುತ್ತದೆ. ಈ ಹಿಂದೆ ಈ ಟೋಲ್ ಸಂಗ್ರಹಣೆಯಲ್ಲಿ ತುಂಬಾ ಗೋಲ್‌ಮಾಲ್ ಮಾಡುತ್ತಿರುವುದು ಬೆಳಿಕಿಗೆ ಬಂದಿತ್ತು.

ಪ್ರಯಾಣಿಕರಿಂದಲೂ ಈ ಕುರಿತ ದೂರುಗಳು ಹೆಚ್ಚಾದ ಬಳಿಕ ಟೋಲ್ ಬೂತ್‌ಗಳಲ್ಲಿನ ಅಕ್ರಮಗಳನ್ನು ತಪ್ಪಿಸಲು ಮತ್ತು ಟೋಲ್ ಪಾವತಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ಪರಿಚಯಿಸಿತು. ಪ್ರಸ್ತುತ ಫಾಸ್ಟ್‌ಟ್ಯಾಗ್ ಬಳಕೆಯಲ್ಲಿದ್ದು, ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿಸಿದೆ. ಕೇವಲ ಒಂದು ಆಟೋಮ್ಯಾಟಿಕ್ ಸ್ಕ್ಯಾನ್ ಮೂಲಕ ನಿರ್ದಿಷ್ಟ ಪಾವತಿಯನ್ನು ಮಾಡಬಹುದು.

Toll Plaza Charging more Fee

ಇದರಲ್ಲಿ ಮಧ್ಯವರ್ತಿಗಳ (ಟೋಲ್ ಸಂಗ್ರಹಣಾಕಾರರು) ಪ್ರಮೇಯವಿರುವುದಿಲ್ಲ, ನೇರವಾಗಿ ನಿಗಧಿಪಡಿಸಿರುವ ಮೊತ್ತವನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಪಾವತಿಸುತ್ತೇವೆ. ಫಾಸ್ಟ್‌ಟ್ಯಾಗ್ ಬಳಕೆಗೆ ಬಂದ ನಂತರ ಯಾವುದೇ ಅವ್ಯವಹಾರ ನಡೆಯುವುದಿಲ್ಲ ಎಂದು ಸರ್ಕಾರವು ಕೂಡ ಈ ಹಿಂದೆ ಹೇಳಿತ್ತು. ಆದ್ರೂ ಕೂಡ ಹಲವರ ಗಮನಕ್ಕೆ ಬಾರದಂತೆ ಇದರಲ್ಲೂ ಗೋಲ್‌ಮಾಲ್ ಮಾಡಲಾಗುತ್ತಿದೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

2020 ರಲ್ಲಿ ಗಾಂಧಿನಗರದ ಸಂತೋಷ್ ಕುಮಾರ್ ಎಂಬುವವರು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬಾರಿ ಪ್ರಯಾಣಿಸಿದ್ದರು. ಪ್ರತಿ ಟೋಲ್ ಪಾಯಿಂಟ್‌ನಿಂದ ರೂ. 35 ಶುಲ್ಕದ ಬದಲು ರೂ. 40 ಕಡಿತಗೊಳಿಸಲಾಗಿತ್ತು. ಆಗಲೇ ಹೇಳಿದಂತೆ ಅವರು ಎರಡು ಬಾರಿ ಟೋಲ್ ಪಾಸ್ ಮಾಡಿದ್ದು, ಎರಡೂ ಬಾರಿಯೂ ಹೆಚ್ಚುವರಿಯಾಗಿ ತಲಾ 5 ರೂ.ಗಳಷ್ಟು ಕಡಿತಗೊಳಿಸಲಾಗಿದೆ.

Toll Plaza Charging more Fee

ಸಾರಿಗೆ ಸಚಿವಾಲಯವು ನಿಯೋಜಿಸಿರುವ FASTag ಮೂಲಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದಲ್ಲಿನ ಮೋಸವು, ತಮ್ಮ ಫಾಸ್ಟ್‌ಟ್ಯಾಗ್ ಖಾತೆಯನ್ನು ಪರಿಶೀಲಿಸಿದಾಗ ತಿಳಿದು ಬಂದಿದೆ. ಇದರಿಂದ ಆಘಾತಕ್ಕೊಳಗಾದ ಅವರು ಟೋಲ್ ಪ್ಲಾಜಾ ಹೆಚ್ಚುವರಿ ಐದು ರೂ. ವಸೂಲಿ ಮಾಡುತ್ತಿರುವ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಆದರೆ ಯೋಜನಾ ವ್ಯವಸ್ಥಾಪಕರು ಮತ್ತು ಆಯೋಗದ ಮುಖ್ಯಾಧಿಕಾರಿ ಈ ಕುರಿತು ವಿವರಣೆ ನೀಡಿಲ್ಲ.

ಇಷ್ಟಾದರೂ ಅಧಿಕ ಶುಲ್ಕ ಕಡಿಮೆ ಮಾಡಲು ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ತೀವ್ರ ನೊಂದಿದ್ದ ಸಂತೋಷ್ ಕುಮಾರ್, ನಾಗ್ಪುರದ ಜಾಸ್ ಟೋಲ್ ರೋಡ್ ಕಂಪನಿ ಹಾಗೂ ಚಿತ್ರದುರ್ಗದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ, ಹಲವರ ಶ್ರಮ ವ್ಯರ್ಥವಾಗಬಾರದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು.

ಈ ಪ್ರಕರಣ ಕುರಿತು ಸ್ವತಃ ಸಂತೋಷ್ ಕುಮಾರ್ ತಮ್ಮ ಕೇಸ್‌ ಅನ್ನು ಕೈಗೆತ್ತಿಕೊಂಡು ವಾದ ಮಾಡಿ ತಮ್ಮ ಗೆದ್ದಿದ್ದಾರೆ ಎಂದು ವರದಿಯಾಗಿದೆ. ಹೆಚ್ಚುವರಿಯಾಗಿ ವಸೂಲಾದ ರೂ. 10 ವಾಪಸ್ ನೀಡುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಇದರ ಜೊತೆಗೆ ಪರಿಹಾರವಾಗಿ ರೂ. 8,000 ನೀಡಬೇಕು, ಜೊತೆಗೆ ಸೂಕ್ತ ಶುಲ್ಕ ಮಾತ್ರ ವಸೂಲಿ ಮಾಡುವಂತೆ ವ್ಯವಸ್ಥೆ ಬದಲಿಸಿ ಆದೇಶ ಹೊರಡಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬದಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Thursday, May 11, 2023, 15:16 [IST]
English summary
Consumer court penalty imposed toll plaza charging more fee
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+