ಭಾರತದಲ್ಲಿ ಕಾರುಗಳ ಸುರಕ್ಷತೆ ಹೆಚ್ಚಿಸಲು ಸಜ್ಜಾದ ಕಾಂಟಿನೆಂಟಲ್: ಬೆಂಗಳೂರಿನಲ್ಲಿ ADAS ತಂತ್ರಜ್ಞಾನ ಪ್ರದರ್ಶನ
ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳು (ADAS) ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಟ್ರೆಂಡ್ ಆಗಿ ಮಾರ್ಪಟ್ಟಿವೆ. ADAS ಸಿಸ್ಟಂ ಭಾರತದಾದ್ಯಂತ ಅನೇಕ ಕಾರುಗಳ ವಿಭಾಗಗಳಲ್ಲಿ ಪ್ರತಿಸ್ಪರ್ಧಿಗಳ ನಡುವೆ ಪ್ರಮುಖ ಆಕರ್ಷಕ ತಂತ್ರಜ್ಙಾನವಾಗಿದೆ. ಕಾಂಟಿನೆಂಟಲ್, ಜರ್ಮನ್ ವಾಹನ ಬಿಡಿಭಾಗಗಳ ಪೂರೈಕೆ, ಪ್ರಸ್ತುತ ಭಾರತಕ್ಕೆ ಲೆವೆಲ್ 2 ADAS ಅನ್ನು ತರಲು ನೋಡುತ್ತಿದೆ.
ಹ್ಯಾನೋವರ್ ಮೂಲದ ದೈತ್ಯ ತನ್ನ ADAS ಸೆಟಪ್‌ಗಳನ್ನು ತಮ್ಮ ಕಾರುಗಳಿಗೆ ತರಲು ಭಾರತೀಯ ವಾಹನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ. ಕಾಂಟಿನೆಂಟಲ್ ಭಾರತೀಯ ಕಾರು ತಯಾರಕರಿಗೆ ಲೆವೆಲ್ 2 ADAS ತಂತ್ರಜ್ಞಾನವನ್ನು ಪೂರೈಸುವ ಸಾಧ್ಯತೆಯಿರುವುದರಿಂದ, ನೀವು ಮತ್ತು ನಾನು ಪ್ರತಿದಿನ ಓಡಿಸುವ ಸಾಮಾನ್ಯ ಕಾರುಗಳನ್ನು ಮಾಡುವ ಮೊದಲು ಸಿಸ್ಟಮ್‌ಗಳ ಕೆಲಸವನ್ನು ಪ್ರದರ್ಶಿಸಲು ಜರ್ಮನ್ ಸಂಸ್ಥೆಯು ನಮ್ಮನ್ನು ಆಹ್ವಾನಿಸಿತು.

ಅವರ ಆಹ್ವಾನ ಸ್ವಾಗತಿಸಿ ಬೆಂಗಳೂರಿನ ಹೊರವಲಯದಲ್ಲಿರುವ Taneja Aerospace & Aviation Ltd (TAAL) ಏರ್‌ಸ್ಟ್ರಿಪ್‌ನಲ್ಲಿರುವ ಕಾಂಟಿನೆಂಟಲ್‌ನ ಸೌಲಭ್ಯಗಳನ್ನು ಅಭಿವೃದ್ದಿ ಹಂತದಲ್ಲಿರುವ ತಂತ್ರಜ್ಞಾನದ ಕಾರ್ಯವನ್ನು ನೋಡಲು ನಾವು ಹೊರಟೆವು. ಕಾಂಟಿನೆಂಟಲ್ ತನ್ನ ಕೆಲವು ಲೆವೆಲ್ 2 ಡ್ರೈವರ್ ಅಸಿಸ್ಟ್ ಗಳನ್ನು ಪ್ರದರ್ಶಿಸಿದೆ ಮತ್ತು ನಾವು ನೋಡಬೇಕಾದ ಪ್ರಮುಖ ADAS ಸಿಸ್ಟಮ್‌ಗಳ ಬಗ್ಗೆ ಇಲ್ಲಿ ನೋಡೋಣ.
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್: ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸಿಸ್ಟಮ್ ಕಾರಿನ ಮುಂಭಾಗಕ್ಕೆ ಜೋಡಿಸಲಾದ ರಾಡಾರ್ ಸೆನ್ಸಾರ್ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಸಿಸ್ಟಂ ರೇಡಾರ್, ಪವರ್‌ಟ್ರೇನ್ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಸಿಸ್ಟಮ್ ಅನ್ನು ಬಳಸುತ್ತದೆ, ನಿಮ್ಮ ಲೇನ್‌ನಲ್ಲಿ ಆಯ್ಕೆಮಾಡಿದ ವೇಗದಲ್ಲಿ ನಿಮ್ಮ ಮುಂದೆ ಇರುವ ಕಾರಿನಿಂದ ಆಯ್ದ ದೂರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ADAS ಸಹಾಯದಿಂದ ಒಂದೇ ವೇಗದಲ್ಲಿ ಹೋಗುತ್ತಿರುವಾಗ ಮುಂದೆ ಹೋಗುವ ಕಾರು ನಿಧಾನಗೊಳಿಸಿದರೆ. ADAS ಸಿಸ್ಟಂ ಆಟೋಮ್ಯಾಟಿಕ್ ಆಗಿ ನಮ್ಮ ಕಾರನ್ನು ನಿಧಾನಗೊಳಿಸುತ್ತದೆ. ಇನ್ನು ಮುಂದಿನ ಕಾರು ಭಾರೀ ವೇಗ ಚಲಿಸಿದರು ನಮ್ಮ ಕಾರು ADAS ಸಿಸ್ಟಂನಲ್ಲಿ ಸೆಟ್ ಮಾಡಿದ ವೇಗದಲ್ಲಿ ಚಲಿಸುತ್ತದೆ. ನಿಮ್ಮ ಕಾರು ಒಂದೇ ವೇಗದಲ್ಲಿ ಚಲಿಸಲು ಇದು ಸಾಹಯ ಮಾಡುತ್ತದೆ.
ಬ್ಲೈಂಡ್ ಸ್ಪಾಟ್ ಡಿಟೆಕ್ಷನ್: ಈ ಸಿಸ್ಟಂ ಕಾರಿನ ಬ್ಲೈಂಡ್ ಸ್ಪಾಟ್‌ಗಳನ್ನು ಮೇಲ್ವಿಚಾರಣೆ ಮಾಡಲು ರಾಡಾರ್ ಅನ್ನು ಬಳಸುತ್ತದೆ. ಯಾವುದೇ ವಾಹನ ಅಥವಾ ವ್ಯಕ್ತಿ ಅವರ ಬ್ಲೈಂಡ್ ಸ್ಪಾಟ್‌ನಲ್ಲಿ ಇದ್ದರೆ ಚಾಲಕನಿಗೆ ಬಾಹ್ಯ ಮೀರರ್ ಮೂಲಕ ಅಲರ್ಟ್ ಅನ್ನು ನೀಡುತ್ತದೆ. ಇದು ಅಪಘಾತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಕೆಲವು ಸಂದರ್ಭದಲ್ಲಿ ತಿರುವುಗಳನ್ನು ಪಡೆಯುವಾಗ ಬ್ಲೈಂಡ್ ಸ್ಪಾಟ್ ಕಡೆ ವಾಹನ ಕಾಣುವುದಿಲ್ಲ.

ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್: ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್ ಫೀಚರ್ ಚಾಲಕರು ಮುಂದೆ ರಸ್ತೆಯಲ್ಲಿರುವ ವಾಹನ ಅಥವಾ ವ್ಯಕ್ತಿಗೆ ತುಂಬಾ ಹತ್ತಿರವಾದರೆ ಎಚ್ಚರಿಕೆ ನೀಡುತ್ತದೆ. ಚಾಲಕನಿಗೆ ವೇಗವನ್ನು ಕಡಿಮೆ ಮಾಡಲು ಸಾಧ್ಯವಾಗದಿದ್ದಲ್ಲಿ, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್ ಸಿಸ್ಟಮ್ ಕಾರ್ಯರೂಪಕ್ಕೆ ಬರುತ್ತದೆ. ಕಾರಿನ ಒಳಗಿರುವ ಪ್ರಯಾಣಿಕರನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿರಿಸಲು ಕಾರನ್ನು ನಿಧಾನಗೊಳಿಸುತ್ತದೆ ಅಥವಾ ಸಂಪೂರ್ಣ ಸ್ಟಾಪ್ ಮಾಡುತ್ತದೆ.
ಸಿ ಥ್ರೋ ಬಾನೆಟ್: ಈ ಸಿಸ್ಟಂ ಚಾಲಕನಿಗೆ ಕಾರಿನ ಕೆಳಗಿರುವ ನೋಟವನ್ನು ನೀಡಲು ಕಾರಿನ ಸುತ್ತಲೂ ಅಳವಡಿಸಲಾದ ಕ್ಯಾಮೆರಾಗಳನ್ನು ಬಳಸುತ್ತದೆ. ಈ ಫೀಚರ್ ವಿಶೇಷವಾಗಿ ಪ್ರವೇಶಿಸಲು ಕಷ್ಟಕರವಾದ ಆಫ್ ರೋಡ್ ಮಾರ್ಗಗಳ ಮೂಲಕ ಪ್ರಯಾಣಿಸುವವರಿಗೆ ಮತ್ತು ನಮ್ಮ ಪಾಕ್‌ಮಾರ್ಕ್ ಮತ್ತು ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಚಲಿಸಲು ವಿಶೇಷವಾಗಿ ಉಪಯುಕ್ತವಾಗಿದೆ.
ಲೇನ್ ಕೀಪಿಂಗ್ ಅಸಿಸ್ಟ್: ಕಾಂಟಿನೆಂಟಲ್ ತನ್ನ ಲೇನ್ ಕೀಪಿಂಗ್ ಅಸಿಸ್ಟ್ ಸಿಸ್ಟಮ್ ಅನ್ನು ಪ್ರದರ್ಶಿಸಿದೆ. ಇದು ಚಾಲಕರಿಗೆ ತಮ್ಮ ಕಾರನ್ನು ಎರಡೂ ಲೇನ್‌ನ ಮಧ್ಯದಲ್ಲಿ ಇರಿಸಲು ಸಹಾಯ ಮಾಡುತ್ತದೆ. ಈ ಸಿಸ್ಟಂ ಆಕ್ಟಿವ್ ಆದಾಗ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಸ್ಟೀಯರಿಂಗ್ ಮೇಲೆ ಡ್ರೈವರ್ ಕೈ ಇರಬೇಕು.
ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್: RCA ಸಿಸ್ಟಂ ಕಾರುಗಳು ಮತ್ತು ಪಾದಚಾರಿಗಳು ಸೇರಿದಂತೆ ನಿಮ್ಮ ವಾಹನದ ಹಿಂದೆ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಯಾವುದೇ ವ್ಯಕ್ತಿ ಅಥವಾ ವಾಹನವು ಹಿಂದಿನಿಂದ ಅವರಿಗೆ ತುಂಬಾ ಹತ್ತಿರವಾದರೆ ಸಿಸ್ಟಮ್ ಚಾಲಕನಿಗೆ ಅಲರ್ಟ್ ನೀಡುತ್ತದೆ. ಇದು ತುಂಬಾ ಉಪಯುಕ್ತವಾದ ಫೀಚರ್ ಆಗಿದೆ.
ಕಾಂಟಿನೆಂಟಲ್ ತನ್ನ ARS540 ರಾಡಾರ್ ಮಾಡ್ಯೂಲ್ ಅನ್ನು ಭಾರೀ ವಾಹನಗಳಿಗಾಗಿ Taneja Aerospace & Aviation Ltd (TAAL) ನಲ್ಲಿ ಪ್ರದರ್ಶಿಸಿತು. ಕಾಂಟಿನೆಂಟಲ್ ಕಂಪ್ಯೂಟರ್ ಸಿಮ್ಯುಲೇಶನ್‌ಗಳ ಮೂಲಕ ಟ್ರಕ್‌ಗಳಲ್ಲಿ ಪಾದಚಾರಿ ಕ್ರಾಸಿಂಗ್ ಅಲರ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರೈಲರ್ ಮ್ಯಾನೇಜ್‌ಮೆಂಟ್ ಮತ್ತು ಹೆಚ್ಚಿನವುಗಳಂತಹ ADAS ವೈಶಿಷ್ಟ್ಯಗಳ ಬಳಕೆಯನ್ನು ಪ್ರದರ್ಶಿಸಿದೆ.
ತನೇಜಾ ಏರ್‌ಫೀಲ್ಡ್‌ನಲ್ಲಿ ಕಾಂಟಿನೆಂಟಲ್ ಪ್ರದರ್ಶಿಸಿದ ಕೊನೆಯ ಪ್ರಮುಖ ಅಂಶವೆಂದರೆ ಅದರ HMI ಸ್ಕ್ರೀನ್ ಟೆಕ್ ತಂತ್ರಜ್ಞಾನವಾಗಿದ್ದು, ಅದು ಸ್ಕ್ರೀನ್ ಮೇಲೆ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಗ್ಯಾಮಿಫಿಕೇಶನ್ ಪ್ರಕ್ರಿಯೆಯ ಭಾಗವಾಗಿ ಫೋಕಸ್‌ನಲ್ಲಿರುವ ವಿಷಯದ ಬಣ್ಣವು ಬದಲಾಗುತ್ತದೆ. ಇಮೇಜ್ ಮ್ಯಾಪಿಂಗ್ ಮತ್ತು 3D ಇಮೇಜ್ ಸ್ಟಿಚಿಂಗ್‌ಗೆ HMI ಒಳಗೊಂಡಿದೆ,
ಜೀವ ರಕ್ಷಕವಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಭಾರತೀಯ OEM ಗಳನ್ನು ಪಡೆಯಲು ಕಾಂಟಿನೆಂಟಲ್ ತನ್ನ ಪ್ರಬಲವಾದ ADAS ಸಿಸ್ಟಮ್‌ಗಳನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದೆ. ಭಾರತದಲ್ಲಿ ಕಾಂಟಿನೆಂಟಲ್‌ನ ADAS ಸೂಟ್ ಅಲರ್ಟ್-ಆಧಾರಿತ ಸಿಸ್ಟಂಗಳೊಂದಿಗೆ ಪ್ರಾರಂಭವಾಗಲಿದೆ, ನಂತರದಲ್ಲಿ ಮತ್ತಷ್ಟು ಅಡಾನ್ಸ್ ಆಗಲಿದೆ. ಇದು ಭಾರತದಲ್ಲಿ ವಾಹನ ತಯಾರಕರು ಅಳವಡಿಸಿಕೊಂಡರೆ ಸುರಕ್ಷತೆಯು ಮತ್ತಷ್ಟು ಹೆಚ್ಚುತ್ತದೆ.


Click it and Unblock the Notifications