ಕೇವಲ ರೂ. 4 ಲಕ್ಷದೊಳಗೆ ಖರೀದಿಸಬಹುದಾದ ಮುದ್ದಾದ ವಿಂಟೇಜ್ ಎಲೆಕ್ಟ್ರಿಕ್ ಕಾರುಗಳು

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಳಕೆ ಹೆಚ್ಚಾಗುತ್ತಿದೆಯಾದರೂ ಎಲ್ಲಾ ಗ್ರಾಹಕರಿಗೂ ಇವಿಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿಲ್ಲ. ಅವುಗಳ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಂದ ದೂರವಿರಿಸುತ್ತಿವೆ. ಆದರೆ ಕೆಲ ವಿಂಟೇಜ್ ಕಾರು ಪ್ರೇಮಿಗಳು ತಮ್ಮ ಬಜೆಟ್‌ನಲ್ಲಿ ಹಳೆಯ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ ಮಾರ್ಪಡಿಸಿಕೊಳ್ಳುವ ಮೂಲಕ ಇವಿಗಳನ್ನು ಓಡಿಸುವ ಆಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಭಾರತದಲ್ಲಿನ ಕೆಲವು ತಯಾರಕರು ಬೇರ್-ಬೇಸಿಕ್ ಪವರ್‌ಟ್ರೇನ್‌ಗಳು ಮತ್ತು ಘಟಕಗಳನ್ನು ಬಳಸಿಕೊಂಡು ಕಸ್ಟಮ್-ನಿರ್ಮಿತ ವಿಂಟೇಜ್-ಥೀಮ್ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿದ್ದಾರೆ. ಈ ವಾಹನಗಳಲ್ಲಿ ಕೆಲವನ್ನು ಗರಿಷ್ಠ 45 kmph ವೇಗಕ್ಕೆ ನಿರ್ಬಂಧಿಸಿರುವುದರಿಂದ, ರಸ್ತೆಗಳಲ್ಲಿ ಓಡಿಸಲು ಅವುಗಳಿಗೆ ಚಾಲನಾ ಪರವಾನಗಿ ಕೂಡ ಅಗತ್ಯವಿಲ್ಲ. ಸದ್ಯ ದೇಶದಲ್ಲಿ ಎಲೆಕ್ಟ್ರಿಕ್ ಕಾರು ಪ್ರೇಮಿಗಳು ನಿರ್ಮಿಸಿರುವ ಇಂತಹ ಕೆಲವು ವಿಂಟೇಜ್ ಇವಿ ಕಾರುಗಳನ್ನು ಈ ಲೇಖನದಲ್ಲಿ ನೋಡೋಣ.

ಕೇವಲ ರೂ. 4 ಲಕ್ಷದೊಳಗೆ ಖರೀದಿಸಬಹುದಾದ ಮುದ್ದಾದ ವಿಂಟೇಜ್ ಎಲೆಕ್ಟ್ರಿಕ್ ಕಾರುಗಳು

ಗ್ರೀನ್ ಮಾಸ್ಟರ್
ಹೆಸರೇ ಸೂಚಿಸುವಂತೆ, 'ಗ್ರೀನ್‌ಮಾಸ್ಟರ್' ಹೆಸರಿನ ಈ ಹಸಿರು-ಬಣ್ಣದ ವಿಂಟೇಜ್-ಥೀಮ್ ಎಲೆಕ್ಟ್ರಿಕ್ ಕಾರು ಎರಡು-ಆಸನಗಳ ಕೊಡುಗೆಯಾಗಿದೆ. ಇದು ಡ್ಯುಯಲ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನ ಸ್ಪೋಕ್ ವೀಲ್‌ಗಳು ಮತ್ತು ಟ್ಯೂಬ್-ಟೈಪ್ ಟೈರ್‌ಗಳೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ವಿಂಟೇಜ್ ಕಾರು 1.2 kW ಮೋಟರ್ ಹೊಂದಿದೆ. ಈ ಮೂಲಕ 2.2 Nm ನ ಗರಿಷ್ಠ ಟಾರ್ಕ್, 100 km ಗರಿಷ್ಠ ರೇಂಜ್, 45 kmph ಗರಿಷ್ಠ ವೇಗವನ್ನು ಹೊಂದಿದೆ. ಇದರ ಬ್ಯಾಟರಿಗೆ 3 ವರ್ಷಗಳ ವಾರಂಟಿ ಇದೆ.

ಕೇವಲ ರೂ. 4 ಲಕ್ಷದೊಳಗೆ ಖರೀದಿಸಬಹುದಾದ ಮುದ್ದಾದ ವಿಂಟೇಜ್ ಎಲೆಕ್ಟ್ರಿಕ್ ಕಾರುಗಳು

ಪ್ಲುಟೊ ಮೋಟಾರ್ಸ್‌ನಿಂದ ವಿಂಟೇಜ್ ಕಾರು

ಪಂಜಾಬ್ ಮೂಲದ ಪ್ಲುಟೊ ಮೋಟಾರ್ಸ್ ಈ ಬಿಳಿ-ಬಣ್ಣದ ವಿಂಟೇಜ್-ಥೀಮ್ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಿದೆ, ಇದರ ಬಾನೆಟ್‌ನ ಕೆಳಗೆ ಎರಡು ಬ್ಯಾಟರಿಗಳು ಮತ್ತು ಹಿಂಭಾಗದಲ್ಲಿ ಎರಡು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಈ ಎರಡು ಆಸನಗಳ ಕಾರು ಗಂಟೆಗೆ 45 ಕಿ.ಮೀ ವೇಗವನ್ನು ಹೊಂದಿದೆ. ಈ ಕಾರಣದಿಂದಾಗಿ ಯಾವುದೇ ಚಾಲನಾ ಪರವಾನಗಿ ಅಗತ್ಯವಿಲ್ಲ. ಸಂಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, 19-ಇಂಚಿನ ಟ್ಯೂಬ್-ಟೈಪ್ ಟೈರ್ ಮತ್ತು ಎಲ್ಇಡಿ ಆಕ್ಸುಲರಿ ಲ್ಯಾಂಪ್‌ಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಕಾರು ಗರಿಷ್ಠ 100 ಕಿ.ಮೀ. ರೇಂಜ್ ನೀಡುತ್ತದೆ.

ರಾಯಲ್ ಸಫಾರಿ
ಮತ್ತೊಂದು EV ಬ್ರ್ಯಾಂಡ್ ರಾಯಲ್ ಸಫಾರಿ. ಇದು ಶೀಟ್ ಲೋಹದಿಂದ ಮಾಡಲ್ಪಟ್ಟಿದ್ದು, ಲಗೇಜ್ ಜಾಗವನ್ನು ಸಹ ಒಳಗೊಂಡಿದೆ. ಇದರಲ್ಲಿ ವಾಟರ್ ಪ್ರೂಫ್ ರೂಫ್ ಸಹ ಇದೆ. ಇದು EV ಯ ಎಲ್ಲಾ ವಿವರಗಳು ಮತ್ತು ಸ್ಥಿತಿಯನ್ನು ತೋರಿಸುವ ಸಿಂಗಲ್ ಕಲರ್ಡ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಕಾರಿನೊಂದಿಗೆ ಬ್ಯಾಟರಿ ಪ್ಯಾಕ್ ಆಯ್ಕೆಗಳು ಲಭ್ಯವಿವೆ. ಲಿಥಿಯಂ-ಐಯಾನ್ ಮತ್ತು ಲೀಡ್ ಆಸಿಡ್ ಮಾದರಿಯ ಬ್ಯಾಟರಿಗಳು ಲಭ್ಯವಿದ್ದು, ಸೀಂಗಲ್ ಜಾರ್ಜ್‌ನಲ್ಲಿ ಸುಮಾರು 100 ಕಿ.ಮೀ ಓಡಿಸಬಹುದು.

ಕೇವಲ ರೂ. 4 ಲಕ್ಷದೊಳಗೆ ಖರೀದಿಸಬಹುದಾದ ಮುದ್ದಾದ ವಿಂಟೇಜ್ ಎಲೆಕ್ಟ್ರಿಕ್ ಕಾರುಗಳು

ರೋಲ್ಸ್ ರಾಯ್ಸ್ ಕ್ಲಾಸಿಕ್ ಲುಕ್ ವಿಂಟೇಜ್ ಕಾರು
ರೋಲ್ಸ್ ರಾಯ್ಸ್‌ನ ವಿಂಟೇಜ್ ಕಾರುಗಳ ವಿನ್ಯಾಸಗಳನ್ನು ಒಳಗೊಂಡಿರುವ ಈ ಎಲೆಕ್ಟ್ರಿಕ್ ಕಾರು ಎರಡು-ಬಾಗಿಲಿನ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ, ಈ ಎಲೆಕ್ಟ್ರಿಕ್ ಕಾರ್ ಫಾಕ್ಸ್ ರೋಲ್ಸ್ ರಾಯ್ಸ್ ಬ್ಯಾಡ್ಜ್‌ಗಳೊಂದಿಗೆ ರೌಂಡ್-ಥೀಮ್ ಕ್ರೋಮ್ ಗ್ರಿಲ್ ಅನ್ನು ಹೊಂದಿದೆ. ಈ ಎರಡು ಆಸನಗಳ ಕಾರು ಮಾರುತಿ ಸುಜುಕಿ ಝೆನ್‌ನಿಂದ ತೆಗೆದ ಸ್ಟೀರಿಂಗ್ ಮತ್ತು ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಬರುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿ.ಮೀ ವರೆಗೆ ಓಡಿಸಬಹುದು. ಗಂಟೆಗೆ 80 ಕಿ.ಮೀ ವೇಗವನ್ನು ಹೊಂದಿದ್ದು, ಇದನ್ನು ಓಡಿಸಲು ಪರವಾನಗಿ ಬೇಕಾಗುತ್ತದೆ.

ಎಲೆಕ್ಟ್ರಿಕ್ ವಿಲ್ಲೀಸ್
ವಿಲ್ಲೀಸ್ ಜೀಪ್‌ನ ಸ್ಕೇಲ್ಡ್-ಡೌನ್ ಆವೃತ್ತಿಯ ಈ ಎಲೆಕ್ಟ್ರಿಕ್ ಆವೃತ್ತಿಯು ವಿಲ್ಲಿಸ್ CJ3B ಜೀಪ್‌ಗೆ ಅನುಗುಣವಾಗಿ ಸಣ್ಣ ಉದ್ದಳತೆಗಳನ್ನು ಹೊಂದಿದೆ. ಬ್ಯಾಟರಿಯನ್ನು ಮುಂಭಾಗದ ಹುಡ್‌ನ ಕೆಳಗೆ ಇರಿಸಿದರೆ, ಮೋಟಾರು ಹಿಂದಿನ ಚಕ್ರಗಳ ನಡುವೆ ಇರಿಸಲಾಗುತ್ತದೆ. ಬ್ಯಾಟರಿ ಪೂರ್ಣ ಚಾರ್ಜ್‌ಗೆ 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಒಂದೇ ಚಾರ್ಜ್‌ನಲ್ಲಿ 100 ಕಿ.ಮೀ ಓಡಿಸಬಹುದು, ಆದರೆ ಮೋಟಾರ್ ಕೇವಲ 45 ಕಿ.ಮೀ ವೇಗವನ್ನು ಮಾತ್ರ ತಲುಪಬಲ್ಲದು. ಇ-ವಿಲ್ಲೀಸ್ ಅನ್ನು ತಯಾರಕರು 2.50 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, February 13, 2023, 15:33 [IST]
English summary
Cute vintage electric cars that can be bought under 3 lakhs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+