ಹೊಸ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ: ಕೇವಲ 12 ಗಂಟೆಗಳ ಪ್ರಯಾಣ.. ಟೋಲ್ ದರ, ವೇಗದ ಮಿತಿ ಎಷ್ಟು?

ವಿಶ್ವದ ಅತಿ ಉದ್ದದ ರಸ್ತೆ ಜಾಲವನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದ್ದು, ಪ್ರಯಾಣಿಕರಿಗೆ ಇನ್ನೂ ಸುಗಮವಾಗಿಸಲು ಕಳೆದ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತಿ ಉದ್ದದ ಹೆದ್ದಾರಿಯ ಮೊದಲ ಹಂತ, ನವದೆಹಲಿ ಮತ್ತು ಮುಂಬೈಯನ್ನು ಸಂಪರ್ಕಿಸುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟಿಸಿದರು.

ಈ ವಿಭಾಗದ ಪ್ರಾರಂಭವು ಇಡೀ ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ಗಮನಾರ್ಹವಾಗಿ ವೇಗಗೊಳಿಸುತ್ತದೆ. ದೆಹಲಿ ಮತ್ತು ಜೈಪುರ ನಡುವಿನ ಪ್ರಯಾಣದ ಸಮಯವನ್ನು ಐದು ಗಂಟೆಗಳಿಂದ ಸುಮಾರು ಮೂರೂವರೆ ಗಂಟೆಗಳವರೆಗೆ ಕಡಿತಗೊಳಿಸುತ್ತದೆ. 1,386 ಕಿ.ಮೀ ಉದ್ದದಲ್ಲಿ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದ್ದು, ದೆಹಲಿ ಮತ್ತು ಮುಂಬೈ ನಡುವಿನ ಅಂತರವನ್ನು 24 ಗಂಟೆಗಳಿಂದ 12 ಗಂಟೆಗಳವರೆಗೆ ಅಂದರೆ ಸುಮಾರು ಅರ್ಧದಷ್ಟು ಕಡಿತಗೊಳಿಸುತ್ತದೆ.

ಹೊಸ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ: ಕೇವಲ 12 ಗಂಟೆಗಳ ಪ್ರಯಾಣ.. ಟೋಲ್ ದರ, ವೇಗದ ಮಿತಿ ಎಷ್ಟು?

ಪ್ರಯಾಣದ ಉದ್ದವು 1,424 ಕಿಲೋಮೀಟರ್‌ಗಳಿಂದ 1,242 ಕಿ.ಮೀವರೆಗೆ ಕಡಿಮೆಯಾಗುತ್ತದೆ. ಇದು ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಆರು ರಾಜ್ಯಗಳ ಮೂಲಕ ಹಾದುಹೋಗುವಾಗ ಕೋಟಾ, ಇಂದೋರ್, ಜೈಪುರ, ಭೋಪಾಲ್, ವಡೋದರಾ ಮತ್ತು ಸೂರತ್‌ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಈ ಮೂಲಕ ಪ್ರಯಾಣಿಕರು ತಮ್ಮ ಗಮ್ಯ ಸ್ಥಳಗಳನ್ನು ಮೊದಲಿಗಿಂತಲು ವೇಗವಾಗಿ ತಲುಪಬಹುದಾಗಿದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಒಟ್ಟು ದೂರ:
ದೆಹಲಿ- ಮುಂಬೈ ನಡುವಿನ ಪ್ರಯಾಣದ ಅಂತರವು 1,424 ಕಿ.ಮೀ ನಿಂದ 1,242 ಕಿ.ಮೀಗೆ ಕಡಿಮೆಯಾಗಿದೆ. ಯೋಜನೆಯ ಒಟ್ಟಾರೆ ಬಜೆಟ್ 98,000 ಕೋಟಿ ರೂ. ಎಂದು ವರದಿಯಾಗಿದೆ. ಈ ಹೊಸ ಎಕ್ಸ್‌ಪ್ರೆಸ್‌ ಹೈವೇ ತನ್ನ ಸುತ್ತಮುತ್ತಲಿನ ಪ್ರದೇಶಗಳ ಬೆಳವಣಿಗೆಯ ವೇಗವನ್ನು ಹೆಚ್ಚಿಸಲಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ರಾಷ್ಟ್ರದ ಆರ್ಥಿಕ ಪರಿವರ್ತನೆಗೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ: ಕೇವಲ 12 ಗಂಟೆಗಳ ಪ್ರಯಾಣ.. ಟೋಲ್ ದರ, ವೇಗದ ಮಿತಿ ಎಷ್ಟು?

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಟೋಲ್ ದರಗಳು:
ಹೊಸ ಎಕ್ಸ್‌ಪ್ರೆಸ್‌ವೇಯಲ್ಲಿನ ಟೋಲ್ ಅನ್ನು ಒಟ್ಟು ಕಿಲೋಮೀಟರ್ ಓಡಿಸುವುದರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಆರಂಭಿಕ ಸ್ಥಳದಿಂದ ಸರಿಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಖಲೀಲ್‌ಪುರಕ್ಕೆ ಹೋಗಲು ಲಘು ವಾಹನಕ್ಕೆ ರೂ. 90 ಮತ್ತು ಲಘು ವಾಣಿಜ್ಯ ವಾಹನಕ್ಕೆ ರೂ. 145 ಟೋಲ್ ಶುಲ್ಕವನ್ನು ಪಾವತಿಸಬೇಕು. ಬರ್ಕಾಪಾರಕ್ಕೆ ಲಘು ವಾಹನಕ್ಕೆ 500 ರೂ. ಮತ್ತು ಲಘು ವಾಣಿಜ್ಯ ವಾಹನಕ್ಕೆ 805 ರೂ. ಪಾವತಿಸಬೇಕಾಗುತ್ತದೆ.

ಇನ್ನು ಬಸ್ ಅಥವಾ ಟ್ರಕ್‌ಗಳಂತಹ ಭಾರೀ ವಾಹನಗಳಿಗೆ 1,680 ರೂ. ಪಾವತಿಸಬೇಕಾಗುತ್ತದೆ. ಸಂಸಾಬಾದ್, ಶಿತಾಲ್, ಪಿನಾನ್ ಮತ್ತು ಡುಂಗರ್‌ಪುರ್ ಕೂಡ ಖಲೀಲ್‌ಪುರ್ ಮತ್ತು ಬರ್ಕಾಪಾರಾ ಜೊತೆಗೆ ಟೋಲ್ ಗೇಟ್‌ಗಳನ್ನು ಹೊಂದಿರುತ್ತದೆ. ಪ್ರವೇಶ ಸ್ಥಳದಿಂದ ಬರ್ಕಾಪಾರ ತನಕ ಏಳು ಆಕ್ಸಲ್‌ಗಳನ್ನು ಹೊಂದಿರುವ ವಾಹನಗಳಿಗೆ 3,215 ರೂ.ಗಳನ್ನು ಪಾವತಿಸಬೇಕು. ನವದೆಹಲಿ ಮತ್ತು ಜೈಪುರ ನಡುವೆ ಪ್ರಯಾಣಿಸುವ ಖಾಸಗಿ ವಾಹನಕ್ಕೆ ಒಟ್ಟು ಏಕಮುಖ ಟೋಲ್ 585 ರೂ. ಇರುತ್ತದೆ.

ಹೊಸ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ: ಕೇವಲ 12 ಗಂಟೆಗಳ ಪ್ರಯಾಣ.. ಟೋಲ್ ದರ, ವೇಗದ ಮಿತಿ ಎಷ್ಟು?

ಎಕ್ಸ್‌ಪ್ರೆಸ್‌ವೇಯ ಆರಂಭಿಕ ವಿಭಾಗವು ಗುರುಗ್ರಾಮ್‌ನ ಅಲಿಪುರದಲ್ಲಿ ಪ್ರಾರಂಭವಾಗುತ್ತದೆ, ಇದನ್ನು ಸೋಹ್ನಾ ಎಲಿವೇಟೆಡ್ ರಸ್ತೆಯ ಮೂಲಕ ತಲುಪಬಹುದು. ವೆಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ, ಖಲೀಲ್‌ಪುರದ ಬಳಿ ವಿಭಾಗವನ್ನು ಸಂಪರ್ಕಿಸುತ್ತದೆ, ಇದನ್ನು ಎಕ್ಸ್‌ಪ್ರೆಸ್‌ ಹೈವೇಗೆ ತಲುಪಲು ಸಹ ಬಳಸಬಹುದು. ಒಟ್ಟಾರೆ ಹೇಳುವುದಾದರೆ ಇದು ಉತ್ತಮ ರಸ್ತೆ ಮಾರ್ಗವಾಗಿದ್ದು, ಪ್ರಯಾಣಿಕರಿಗೆ ಮೊದಲಿಗಿಂತ ವೇಗವಾಗಿ ತಲುಪುವ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಅನುವು ಮಾಡಿಕೊಡುವುದಲ್ಲದೇ ಸಂಭವನೀಯ ಅವಘಡಗಳನ್ನು ತಪ್ಪಿಸಲು ವೇಗದ ಮಿತಿಯನ್ನು ಲಾಗಿದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ವೇಗದ ಮಿತಿ:
ಕಾರುಗಳಂತಹ ಲಘು ವಾಹನಗಳಿಗೆ ಎಕ್ಸ್‌ಪ್ರೆಸ್‌ವೇಯ ಗರಿಷ್ಠ ವೇಗವು ಗಂಟೆಗೆ 120 ಕಿ.ಮೀ ಆಗಿದ್ದು, ದ್ವಿಚಕ್ರ ವಾಹನಗಳು ಅಥವಾ ನಿಧಾನವಾಗಿ ಚಲಿಸುವ ವಾಹನಗಳನ್ನು ಈ ರಸ್ತೆಯಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ. ಪ್ರತಿ 10 ಕಿಲೋಮೀಟರ್‌ಗೆ, ಅತಿ ವೇಗದ ಕಾರುಗಳನ್ನು ಗುರುತಿಸಲು ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, ಪ್ರತಿ ಕಿಲೋಮೀಟರ್ ನಂತರ, ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

Article Published On: Thursday, February 23, 2023, 19:20 [IST]
English summary
Delhi mumbai expressway toll charges speed limit Information
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+