ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ, ಹುಂಡೈ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್: ಕೆಲವೇ ದಿನ ಬಾಕಿ

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಗಳಾದ ಟಾಟಾ, ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಸೇರಿದಂತೆ ವಿದೇಶಿ ಕಂಪನಿಗಳು ತಮ್ಮ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿವೆ. ಬಹುತೇಕ ಈ ತಿಂಗಳು (ಮಾರ್ಚ್) ಮಾತ್ರ ಪ್ರಯೋಜನಗಳು ಲಭ್ಯವಾಗಲಿದೆ. ಆ ಬಗ್ಗೆ ತಿಳಿಯೋಣ.

ದೇಶದ ಜನಪ್ರಿಯ ಕಾರು ತಯಾರಕ ಮಾರುತಿ ಸುಜುಕಿ, ಅರೆನಾ ಡೀಲರ್‌ಶಿಪ್‌ ಮೂಲಕ ಮಾರಾಟ ಮಾಡುವ ಮಾದರಿಗಳ ಮೇಲೆ ರೂ.64,000ವರೆಗೆ ಡಿಸ್ಕೌಂಟ್ ಘೋಷಿಸಿದೆ. ಇದು ಆಲ್ಟೊ 800, ಆಲ್ಟೊ ಕೆ10, ಎಸ್ ಪ್ರೆಸ್ಸೋ, ವ್ಯಾಗನ್ ಆರ್, ಸೆಲೆರಿಯೊ, ಸ್ವಿಫ್ಟ್, ಡಿಜೈರ್ ಕಾರುಗಳಿಗೆ ಅನ್ವಯಿಸುತ್ತದೆ. ನೆಕ್ಸಾ ಡೀಲರ್‌ಶಿಪ್‌ ಮೂಲಕ ಸೇಲ್ ಮಾಡುವ ಪ್ರೀಮಿಯಂ ಮಾದರಿಗಳಿಗೆ ರೂ.54,000ವರೆಗೆ ರಿಯಾಯಿತಿ ನೀಡುತ್ತಿದೆ. ಇಗ್ನಿಸ್ ರೂ.54,000, ಬಲೆನೊ ರೂ.35,000 ಹಾಗೂ ಸಿಯಾಜ್ ರೂ.28,000 ಡಿಸ್ಕೌಂಟ್ ಹೊಂದಿದೆ.

ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ, ಹುಂಡೈ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್: ಕೆಲವೇ ದಿನ ಬಾಕಿ

ಮಹೀಂದ್ರಾ, ಅತಿಹೆಚ್ಚು ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುವ ಕಾರುಗಳಿಗೆ ಅತ್ಯುತ್ತಮ ರಿಯಾಯಿತಿ ಪ್ರಯೋಜನವನ್ನು ಘೋಷಿಸಿದೆ. 4WD (ಫೋರ್ ವೀಲ್ಸ್ ಡ್ರೈವ್) ಪೆಟ್ರೋಲ್ ಹಾಗೂ ಡಿಸೇಲ್ ಮಹೀಂದ್ರಾ ಥಾರ್, ರೂ.60,000 ಆಕ್ಸೆಸರಿ ಪ್ರಯೋಜನವನ್ನು ಹೊಂದಿದೆ. ಬೊಲೆರೋ ರೂ.45,000 ನಗದು ರಿಯಾಯಿತಿ, ರೂ.15,000 ಆಕ್ಸೆಸರಿ ಪ್ರಯೋಜನವನ್ನು ಪಡೆದಿದೆ. ಬೊಲೆರೋ ನಿಯೋ ರೂ.37,000 ನಗದು ರಿಯಾಯಿತಿ, ರೂ.12,000 ಆಕ್ಸೆಸರಿ ಪ್ರಯೋಜನ ಹೊಂದಿದೆ.

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸುವ ಟಾಟಾ ಮೋಟಾರ್ಸ್, ವಿವಿಧ ಪೆಟ್ರೋಲ್ ಹಾಗೂ ಸಿಎನ್‌ಜಿ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಎಂಟ್ರಿ ಲೆವೆಲ್ ಟಿಯಾಗೊ ಹಾಗೂ ಟಿಗೂರ್ ರೂ.35,000 ಡಿಸ್ಕೌಂಟ್ ಆಫರ್ ಹೊಂದಿದೆ. ಟಾಟಾ ಆಲ್ಟ್ರಾಜ್ ರೂ.28,000 ಹಾಗೂ 2022ರ ಹ್ಯಾರಿಯರ್ ಹಾಗೂ ಸಫಾರಿ ಎಸ್‌ಯುವಿಗಳು ರೂ.25,000 ಎಕ್ಸ್ಚೇಂಜ್ ಬೋನಸ್, ರೂ.10,000 ಕಾರ್ಪೊರೇಟ್ ಡಿಸ್ಕೌಂಟ್ ಪಡಿದಿವೆ.

ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ, ಹುಂಡೈ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್: ಕೆಲವೇ ದಿನ ಬಾಕಿ

ಹುಂಡೈ ಕಂಪನಿಯು ತನ್ನ ಕೈಗೆಟುಕುವ ಬೆಲೆಯ ಕಾರುಗಳಿಗೆ ರಿಯಾಯಿತಿ ಆಫರ್ ಘೋಷಣೆ ಮಾಡಿದೆ. ಗ್ರಾಂಡ್ ಐ10 ನಿಯೋಸ್ ರೂ.38,000 ಗರಿಷ್ಠ ರಿಯಾಯತಿ ಪ್ರಯೋಜನವನ್ನು ಹೊಂದಿದೆ. ಹುಂಡೈ ಐ20 ರೂ.20,000 ವರೆಗೆ ಡಿಸ್ಕೌಂಟ್ ಅನ್ನು ಪಡೆದಿದೆ. ಬಹುನೀರಿಕ್ಷಿತ ಔರಾ ಸಬ್ 4 ಮೀಟರ್ ಸೆಡಾನ್ ಒಟ್ಟು ರೂ.33,000 ರಿಯಾಯಿತಿ ಹೊಂದಿದೆ. ಪೆಟ್ರೋಲ್ ಮಾದರಿ ರೂ.10,000 ಎಕ್ಸ್ಚೇಂಜ್ ಬೋನಸ್, ರೂ.10,000 ನಗದು ರಿಯಾಯಿತಿ, ರೂ.3000 ಕಾರ್ಪೊರೇಟ್ ಡಿಸ್ಕೌಂಟ್ ಪಡೆದಿದೆ.

ಹೋಂಡಾ ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅಮೇಜ್, ಸಿಟಿ ಮತ್ತು WR-V ಕಾರುಗಳ ಮೇಲೆ ದೊಡ್ಡ ಮಟ್ಟದಲ್ಲಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ರೂ.26,000 ಹಾಗೂ 2022ರ WR-V ರೂ.70,000 ವರೆಗೆ ಡಿಸ್ಕೌಂಟ್ ಹೊಂದಿದೆ. 2022ರ 5ನೇ ಜನರೇಷನ್ ನ ಹೋಂಡಾ ಸಿಟಿ ಫೇಸ್‌ಲಿಫ್ಟ್, ರೂ.1.3 ಲಕ್ಷಗಳ ರಿಯಾಯಿತಿ ಇದೆ. ಹತ್ತಿರದ ಡೀಲರ್ ಶಿಪ್ ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಸ್ಕೋಡಾ ಕಂಪನಿಯು ಸ್ಲಾವಿಯಾ ಕಾರಿನ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ರೂ.20,000 ನಗದು ರಿಯಾಯತಿ, ರೂ.20,000 ಲಾಯಲ್ಟಿ ಪ್ರಯೋಜನಗಳು, ರೂ.15,000 ಕಾರ್ಪೊರೇಟ್ ಡಿಸ್ಕೌಂಟ್ ಹಾಗೂ ರೂ.30000 ಎಕ್ಸ್ಚೇಂಜ್ ಬೋನಸ್ ಅನ್ನು ಪಡೆದುಕೊಂಡಿದೆ. ಮತ್ತೊಂದು ಕಾರು, ಸ್ಕೋಡಾ ಕುಶಾಕ್ ರೂ.25,000 ನಗದು ರಿಯಾಯಿತಿ, ರೂ.25,000, ಲಾಯಲ್ಟಿ ಪ್ರಯೋಜನ ಹಾಗೂ ರೂ.30000 ಎಕ್ಸ್ಚೇಂಜ್ ಬೋನಸ್ ಹೊಂದಿದೆ.

ಒಟ್ಟಾರೆ, ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ ಸೇರಿದಂತೆ ವಿವಿಧ ಕಂಪನಿಗಳು, ಈ ತಿಂಗಳಿಗೆ ಮಾತ್ರ ಅನ್ವಯವಾಗುವಂತೆ ರಿಯಾಯತಿ ಪ್ರಯೋಜನವನ್ನು ನೀಡಿದ್ದು, ಆಸಕ್ತ ಗ್ರಾಹಕರು ಸಮೀಪದ ಡೀಲರ್ ಶಿಪ್ ಗೆ ಭೇಟಿ, ನೀಡುವ ಮೂಲಕ ಆಕರ್ಷಕ ಆಫರ್ ಗಳನ್ನು ಪಡೆಯಬಹುದು. ವಿಶೇಷವಾಗಿ ಕೆಲವೊಂದು ಕಾರುಗಳು ರೂ.1 ಲಕ್ಷಕ್ಕಿಂತ ಹೆಚ್ಚಿನ ಡಿಸ್ಕೌಂಟ್ ಆಫರ್ ಒಳಗೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ರಿಯಾಯಿತಿ ಪ್ರಯೋಜನ ದೊರೆಯಬಹುದು.

Article Published On: Wednesday, March 22, 2023, 9:30 [IST]
English summary
Discounts tata maruti suzuki mahindra hyundai cars details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+