ಸಿಎಂ ರೇಸಿನಲ್ಲಿರುವ ಡಿಕೆ ಶಿವಕುಮಾರ್‌ ಹೆಸರಿನಲ್ಲಿರೋದು ಒಂದೇ ಕಾರು! ಯಾವುದು ಆ ಕಾರು!

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಬಹುಮತ ಸಾಧಿಸಿದೆ. ಪ್ರಸ್ತುತ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿರೋ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಿ.ಎಂ ರೇಸ್‌ನಲ್ಲಿದ್ದಾರೆ. ಸದ್ಯ ರಾಜ್ಯದ ಸಿ.ಎಂ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ ಅವರ ಹೆಸರಿನಲ್ಲಿ ಇಲ್ಲಿಯ ತನಕ ಇರೋದು ಒಂದೇ ಕಾರು ಅನ್ನೊದು ವಿಶೇಷ.

ಹೌದು, ಡಿ.ಕೆ.ಶಿವಕುಮಾರ್‌ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರದಲ್ಲಿ ನಮೂದಿಸಿರುವಂತೆ ಅವರ ಹೆಸರಿನಲ್ಲಿರೋದು ಒಂದೇ ಕಾರು ಎನ್ನಲಾಗಿದೆ. ರಾಜ್ಯ ಮಾತ್ರವಲ್ಲ ದೇಶದ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ಡಿ.ಕೆ.ಶಿ ಬಳಿ ಇರೋದು ಒಂದೇ ಕಾರು ಎಂದರೇ ಅಚ್ಚರಿ ಪಡಬೇಕಾದ ವಿಚಾರ. ಹಾಗಾದ್ರೆ ಡಿ.ಕೆ.ಶಿವಕುಮಾರ್‌ ಬಳಿ ಇರುವ ಕಾರು ಯಾವುದು ಅನ್ನೊದನ್ನ ಈ ಲೆಕನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

dk-shivakumar

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರದಲ್ಲಿ ನಮೂದಿಸಿರುವಂತೆ ಡಿ.ಕೆ.ಶಿವಕುಮಾರ್ 1,413 ಕೋಟಿ ಆಸ್ತಿಯ ಒಡೆಯ. ಇಷ್ಟೊಂದು ಆಸ್ತಿ ಇದ್ದರೂ ಅವರ ಹೆಸರಿನಲ್ಲಿರೋದು ಒಂದೇ ಕಾರು ಎನ್ನಲಾಗಿದೆ. ಡಿ.ಕೆ.ಶಿವಕುಮಾರ್‌ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ಪ್ರಕಾರ ಡಿ.ಕೆ.ಶಿವಕುಮಾರ್ ಬಳಿ ಟೊಯೊಟಾ ಕ್ವಾಲಿಸ್ ಕಾರು ಇದೆ. ಈ ಕಾರನ್ನು ಅವರು 31-10-2002 ರಂದು ಖರೀದಿಸಿರುವಾಗಿ ಹೇಳಿದ್ದಾರೆ. ಇನ್ನು ಈ ಕಾರಿನ ಬೆಲೆ 8.35 ಲಕ್ಷ ರೂ. ಆಗಿದ್ದು, ಇದರ ರಿಜಿಸ್ಟರ್‌ ನಂಬರ್‌ ಕೂಡ ವಿಶೇಷವಾಗಿದೆ. ಯಾಕಂದ್ರೆ ಇದರ ನಂಬರ್‌ ಪ್ಲೇಟ್‌ನಲ್ಲಿ '1000' ನಂಬರ್ ಅನ್ನು ಕಾಣಬಹುದಾಗಿದೆ.

ಟೊಯೋಟಾ ಕ್ವಾಲಿಸ್ ಕಾರಿನ ಫೀಚರ್ಸ್‌ ಏನಿದೆ!

ಡಿ.ಕೆ.ಶಿವಕುಮಾರ್ ಬಳಿ ಇರೋದು 2002 ಮಾಡೆಲ್ ಟೊಯೋಟಾ ಕ್ವಾಲಿಸ್ ಎನ್ನಲಾಗಿದೆ. ಇದು ಡೀಸೆಲ್ SUV ಆಗಿದ್ದು, ಆ ಸಮಯದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದ ಕಾರುಗಳಲ್ಲಿ ಒಂದಾಗಿದೆ. ಇನ್ನು ಟೊಯೊಟಾ ಕ್ವಾಲಿಸ್ 2446cc, 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಪವರ್ ಟ್ರಾನ್ಸ್ಮಿಷನ್‌ಗಾಗಿ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಸಹ ನೀಡಲಾಗಿದೆ. ಇದು 5 ಬಾಗಿಲುಗಳ SUV ಆಗಿದ್ದು, 8 ಜನರು ಕುಳಿತುಕೊಳ್ಳುವುದಕ್ಕೆ ಅವಕಾಶವಿದೆ. ಇನ್ನು ಈ ಕಾರಿನ ಇಂಧನ ಟ್ಯಾಂಕ್ 53 ಲೀಟರ್ ಸಾಮರ್ಥ್ಯ ಪಡೆದಿದೆ.

dk-shivakumar

ಕಾರುಗಳಿಗಿಂತ ಕೈ ಗಡಿಯಾರಗಳಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ ಡಿ.ಕೆ.ಶಿ.

ಡಿ.ಕೆ.ಶಿವಕುಮಾರ್ ಅವರಿಗೆ ಕಾರುಗಳಿಗಿಂತ ವಾಚ್‌ಗಳ ಮೇಲೆ ಹೆಚ್ಚಿನ ವ್ಯಾಮೋಹವಿದೆ. ಅವರ ಬಳಿ 23.90 ಲಕ್ಷ ಮೌಲ್ಯದ ಹ್ಯೂಬ್ಲೋಟ್ ವಾಚ್ ಇದೆ ಎನ್ನಲಾಗಿದೆ. ಇದರೊಂದಿಗೆ ಡಿ.ಕೆ.ಶಿವಕುಮಾರ್‌ ಬಳಿ ಇನ್ನು ಹಲವು ಬೆಲೆ ಬಾಳುವ ವಾಚ್‌ಗಳು ಇದೇ ಎಂದು ಹೇಳಲಾಗಿದೆ.

ಟೊಯೋಟಾ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ನೀಡಿದ ಮೊದಲ ಉತ್ಪನ್ನವೆಂದರೆ ಕ್ವಾಲಿಸ್ MPV. ಇದನ್ನು 2000 ರಲ್ಲಿ ಬಿಡುಗಡೆ ಮಾಡಿ 2004 ರವರೆಗೆ ಮಾರಾಟಕ್ಕೆ ಲಭ್ಯವಿರಿಸಲಾಗಿತ್ತು. ಕ್ವಾಲಿಸ್ ಕಡಿಮೆ ಸಮಯದಲ್ಲಿ ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆಗಿನ ಕಾಲಕ್ಕೆ ಟೊಯೊಟಾ ಕ್ವಾಲಿಸ್ ತನ್ನ ವಿಭಾಗದಲ್ಲಿ ಮಹೀಂದ್ರಾ ಬೊಲೆರೊ ಮತ್ತು ಟಾಟಾ ಸುಮೊಗಳೊಂದಿಗೆ ಸ್ಪರ್ಧಿಸುತ್ತಿತ್ತು. ಇಂದಿಗೂ ಸಹ, ಉತ್ತಮವಾಗಿ ನಿರ್ವಹಿಸಲಾದ ಟೊಯೋಟಾ ಕ್ವಾಲಿಸ್‌ಗಳನ್ನು ಅಲ್ಲಲ್ಲಿ ನೋಡಬಹುದು.

ಇನ್ನು ಇತ್ತೀಚಿಗೆ ಹೊಸದಾಗಿ ಮಾಡಿಫೈಗೊಳಿಸಿರುವ ಕ್ವಾಲಿಸ್ MPV ವಿಡಿಯೋವನ್ನು ದಾಜಿಶ್.ಪಿ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಕಾರನ್ನು ಸಂಪೂರ್ಣವಾಗಿ ಫ್ಯಾಕ್ಟರಿ ಸ್ಥಿತಿಗೆ ಮರುಸ್ಥಾಪಿಸಲಾಗಿದೆ. ಇದು ಈಗ ಕಸ್ಟಮ್ ಒಳಾಂಗಣದೊಂದಿಗೆ ಬರುತ್ತದೆ. ಈ ಕ್ವಾಲಿಸ್‌ನ ಮಾಲೀಕರು ಕಾರನ್ನು ಅದರ ಮೂಲ ಹಸಿರು ಮತ್ತು ಸಿಲ್ವರ್ ಡ್ಯುಯಲ್-ಟೋನ್‌ನಲ್ಲಿ ಪುನಃ ರೀಪೇಂಟ್ ಮಾಡಿಸಿದ್ದಾರೆ. ಕೊಚ್ಚಿಯ ಗ್ಯಾರೇಜ್‌ನಲ್ಲಿ ಪೇಂಟಿಂಗ್ ಕೆಲಸ ಮಾಡಲಾಗಿದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.

More from DriveSpark

Article Published On: Saturday, May 13, 2023, 21:55 [IST]
English summary
DK Shivakumar bought only 1 car till date: see the details of his car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+