ಜಿದ್ದಾಜಿದ್ದಿಗೆ ಬಿದ್ದಂತೆ ಕಮ್ಮಿ ಬೆಲೆಗೆ ಸಿಗಲಿವೆ ದೊಡ್ಡ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು: ಜಾಸ್ತಿ ರೇಂಜ್

ಭಾರತದಲ್ಲಿ ಕಳೆದ ಎರಡು ವರ್ಷದಿಂದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಅದರಲ್ಲೂ ದೇಶೀಯ ವಾಹನ ತಯಾರಕ 'ಟಾಟಾ' ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದು, ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರುತ್ತಿದೆ. ನಾವೇನು ಕಮ್ಮಿ ಇಲ್ಲವೆಂಬಂತೆ ಎಂಜಿ ಹಾಗೂ ಸಿಟ್ರಸ್ ಕಂಪನಿಗಳು ಕೂಡ ಇವಿಗಳನ್ನು ಸೇಲ್ ಮಾಡುತ್ತಿವೆ.

ಮೊದಲಿಗೆ ತೀರಾ ಇತ್ತೀಚೆಗೆ ಬಿಡುಗಡೆಯಾದ ಕಡಿಮೆ ಬೆಲೆಯ 2 ಡೋರ್ ಎಂಜಿ ಕಾಮೆಟ್ ಇವಿ ಬಗ್ಗೆ ಮಾತನಾಡೋಣ. ಇದು, ರೂ.7.98 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 17.3 KWh ಬ್ಯಾಟರಿ ಪ್ಯಾಕ್, ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ನೀಡಲಿದ್ದು, ಇದರಲ್ಲಿ ಬಳಕೆ ಮಾಡಿರುವ ಸಿಂಗಲ್ PMS ಮೋಟಾರ್ 41.4 hp ಪವರ್, 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಜಿದ್ದಾಜಿದ್ದಿಗೆ ಬಿದ್ದಂತೆ ಕಡಿಮೆ ಬೆಲೆಗೆ ಸಿಗುವ ದೊಡ್ಡ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿವು: ಜಾಸ್ತಿಯೇ ಓಡುತ್ತವೆ!

ಈ ಕಾರಿನಲ್ಲಿ ಉಪಯೋಗಿಸಿರುವ ಬ್ಯಾಟರಿ, 3.3 kW ಚಾರ್ಜರ್ ಆಯ್ಕೆಯಲ್ಲಿ ಸಂಪೂರ್ಣ ಚಾರ್ಜ್ ಆಗಲು 7 ಗಂಟೆಬೇಕು. ಇದೊಂದು ಪುಟ್ಟ ಕಾರಾಗಿದ್ದು, ನಗರ ಪ್ರದೇಶದ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಸುಲಭವಾಗಿ ಓಡಿಸಬಹುದು. ಎಂಜಿ ಕಾಮೆಟ್ ಇವಿ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25 ಇಂಚಿನ ಸ್ಕ್ರೀನ್ ಹೊಂದಿದೆ.

ಟಾಟಾದ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರಾಗಿರುವ ಟಿಯಾಗೊ ಇವಿ ಭಾರೀ ಖ್ಯಾತಿಗಳಿಸಿದೆ. ಈ ಕಾರು, ರೂ.8.69 ಲಕ್ಷದಿಂದ ರೂ.11.99 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದರದಲ್ಲಿ ಎರಡು ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಣ್ಣದಾದ 19.2 kWh ಬ್ಯಾಟರಿ ಹೊಂದಿರುವ ಕಾರು, 250 ಕಿಲೋಮೀಟರ್, ದೊಡ್ಡದಾದ 24 kWh ಬ್ಯಾಟರಿ ಪಡೆದಿರುವ ಕಾರು ಸಂಪೂರ್ಣ ಚಾರ್ಜಿನಲ್ಲಿ 315 ಕಿಲೋಮೀಟರ್ ರೇಂಜ್ ನೀಡಲಿದೆ.

ಈ ಕಾರಿನ ಬ್ಯಾಟರಿ, DC ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಶೇಕಡ 10 ರಿಂದ 80% ಚಾರ್ಜ್ ಆಗಲು ಕೇವಲ 57 ನಿಮಿಷಗಳು ಸಾಕು. ಟಾಟಾ ಟಿಯಾಗೊ ಇವಿ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, ಮುಖ್ಯವಾಗಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇಯನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 2 ಫ್ರಂಟ್ ಏರ್ ಬ್ಯಾಗ್ ಪಡೆದಿದೆ.

ಫ್ರೆಂಚ್ ಪ್ರಮುಖ ವಾಹನ ತಯಾರಕ ಸಿಟ್ರಸ್ ಕಂಪನಿಯ 'ಇಸಿ3' ಎಲೆಕ್ಟ್ರಿಕ್ ಕಾರು, ಎರಡು ರೂಪಾಂತರಗಳಲ್ಲಿ ಭಾರತದ ಗ್ರಾಹಕರಿಗೆ ಸಿಗಲಿದೆ. ಅವುಗಳಲ್ಲಿ ಲೈವ್ ರೂಪಾಂತರ ರೂ.12.42 ಲಕ್ಷ ಹಾಗೂ ಫೀಲ್ ರೂಪಾಂತರ ರೂ.13.40 ಲಕ್ಷ (ಆನ್-ರೋಡ್) ಬೆಲೆಯನ್ನು ಹೊಂದಿದೆ. ಇದು 29.2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 320 km (ARAI) ರೇಂಜ್ ನೀಡಲಿದೆ.

ಟಾಟಾದ ಪ್ರಮುಖ ಕಾರುಗಳಲ್ಲಿ ಟಿಗೂರ್ ಇವಿ ಕೂಡ ಒಂದು. ಇದು, ರೂ.12.49 ಲಕ್ಷದಿಂದ ರೂ.13.75 ಲಕ್ಷ ಬೆಲೆಯಲ್ಲಿ ವಾಣಿಜ್ಯ ಉಪಯೋಗಕ್ಕೆ ಮಾತ್ರ ಖರೀದಿಗೆ ಲಭ್ಯವಿದೆ. ಟಿಯಾಗೊ ಇವಿಯಂತೆ ಸಂಪೂರ್ಣ ಚಾರ್ಜಿನಲ್ಲಿ 315 ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ 26 kWh ಸಾಮರ್ಥ್ಯದ ಬ್ಯಾಟರಿ 75 bhp ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾದ ಜನಪ್ರಿಯ ಎಸ್‌ಯುವಿಗಳಲ್ಲಿ ನೆಕ್ಸಾನ್ ಇವಿ ಮ್ಯಾಕ್ಸ್ ಹಾಗೂ ನೆಕ್ಸಾನ್ ಇವಿ ಪ್ರೈಮ್ ಪ್ರಮುಖವಾಗಿವೆ. ಈ ಕಾರುಗಳು 14.49 ಲಕ್ಷ ರೂ. 17.19 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿವೆ. ನೆಕ್ಸಾನ್ ಇವಿ ಮ್ಯಾಕ್ಸ್ ಸಂಪೂರ್ಣ ಚಾರ್ಜಿನಲ್ಲಿ 453 km ರೇಂಜ್ ನೀಡಿದರೆ, ನೆಕ್ಸಾನ್ ಇವಿ ಪ್ರೈಮ್ ಫುಲ್ ಚಾರ್ಜಿನಲ್ಲಿ 312 ರೇಂಜ್ ಕೊಡಲಿದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Friday, May 26, 2023, 16:05 [IST]
English summary
Electric cars priced under rs 15 lakh in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+