Electric Tata Nano: ಹೊಸ ಅವತಾರದಲ್ಲಿ ಆಗಮನ... ಕೈಗೆಟುಕುವ ಬೆಲೆ, ಪರಿಪೂರ್ಣ ಸಿಟಿ ಕಾರು

ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಕಾರನ್ನು ನೀಡುವ ಉದ್ದೇಶದಿಂದ ಟಾಟಾ ನ್ಯಾನೋವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಈ ಕಾರು ರತನ್ ಟಾಟಾ ಅವರ ಮೆದುಳಿನಿಂದ ಹೊರಬಂದ ಕೂಸಾಗಿದೆ. ಆದ್ರೆ ಕಾರಣಾಂತರಗಳಿಂದ ಸ್ಥಗಿತಗೊಂಡ ಇದೇ ಕಾರು ಈಗ ಎಲೆಕ್ಟ್ರಿಕ್ ಅವತಾರದಲ್ಲಿ ಖರೀದಿಗೆ ಲಭ್ಯವಿದೆ.

ನಿಮಗೆ ಜಯಮ್ ನಿಯೋ ಬಗ್ಗೆ ತಿಳಿದಿದೆಯೇ? ತಿಳಿಯದವರಿಗೆ ಜಯಮ್ ನಿಯೋ EV ಕೊಯಮತ್ತೂರು ಮೂಲದ ಎಂಜಿನಿಯರಿಂಗ್ ಮತ್ತು ಪ್ರೊಡಕ್ಷನ್ ಹೌಸ್ ಜಯಮ್ ಮತ್ತು ಟಾಟಾ, ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ಅವರ ನಿಕಟ ಮೇಲ್ವಿಚಾರಣೆಯಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ. 2018 ರಲ್ಲಿ, ಜಯಮ್ ಓಲಾ ಕ್ಯಾಬ್ಸ್‌ಗಾಗಿ 400 ಕಾರುಗಳ ಬ್ಯಾಚ್ ಅನ್ನು ತಯಾರಿಸಿದ್ದರು. ಇವುಗಳನ್ನು ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ವಿತರಿಸಲಾಯಿತು.

electric-tata-nano-new-avatar-price-details

ಖರೀದಿಸುವುದೇಗೆ? ಬಳಸಿದ ಕಾರು ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ನ್ಯಾನೊ (Electric Tata Nano) ಮಾರಾಟಕ್ಕಿದೆ. ಇದು ಮೂಲತಃ ವಾಣಿಜ್ಯ ನೋಂದಣಿ ಫಲಕಗಳನ್ನು ಹೊಂದಿದ್ದರೂ, ಖರೀದಿದಾರರು ಅದನ್ನು ಖಾಸಗಿ ವಾಹನವಾಗಿ ನೋಂದಾಯಿಸುವ ಆಯ್ಕೆಯನ್ನು ಹೊಂದಿದ್ದಾರೆ. ಏಕೆಂದರೆ ಇದು ಪೂರ್ವ ಸ್ವಾಮ್ಯದ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ಇನ್ನು ಇದರ ಬೆಲೆ ವಿಷಯಕ್ಕೆ ಬಂದರೆ ಮಾರಾಟಗಾರರು ರೂ. 3 ಲಕ್ಷದಿಂದ 5 ಲಕ್ಷದವರೆಗೆ ಕೇಳುತ್ತಿದ್ದಾರೆ.

ಮಾರುಕಟ್ಟೆಯಲ್ಲಿ MG ಕಾಮೆಟ್ ಅಥವಾ ಟಾಟಾ ಟಿಯಾಗೊ EV ಯಂತಹ ಹೊಸ ಪ್ರವೇಶ ಮಟ್ಟದ EV ಗಳಿಗೆ ಹೋಲಿಸಿದರೆ ಬೆಲೆಯು ಕಡಿಮೆ ಎಂದು ತೋರುತ್ತದೆ. ಕಾಮೆಟ್ ಹಾಗೂ ಟಿಯಾಗೋ ಇವಿ ಬೆಲೆಗಳು ರೂ. 7.98 ಲಕ್ಷ ಮತ್ತು ರೂ. 8.69 ಲಕ್ಷದಿಂದ ಪ್ರಾರಂಭವಾಗುತ್ತವೆ. ಈ ನ್ಯಾನೋ ಎಲೆಕ್ಟ್ರಿಕ್ ಪೂರ್ಣ ಚಾರ್ಜ್‌ನಲ್ಲಿ ಸರಿಸುಮಾರು 130 ಕಿ.ಮೀ ವ್ಯಾಪ್ತಿ ನೀಡುವುದಾಗಿ ತಿಳಿದುಬಂದಿದೆ.

ಈ ಹಿಂದೆ ನಿಯೋ EV ಕೇವಲ ಬಿಳಿ ಬಣ್ಣದಲ್ಲಿ ಲಭ್ಯವಿತ್ತು, ಹಾಗಯೇ ಹಳದಿ ನಂಬರ್‌ ಪ್ಲೇಟ್‌ಗಳೊಂದಿಗೆ ಬರುತ್ತಿತ್ತು. ಏಕೆಂದರೆ ಇವುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿತ್ತು. ಆದ್ರೆ ಈಗ ಮೇಲೆ ತಿಳಿಸಿದಂತೆ ಖಾಸಗಿ ಬಳಕೆಗೂ ಅನುಕೂಲ ಮಾಡಿಕೊಡಲಾಗಿದೆ. ಇದು 17kWh ಬ್ಯಾಟರಿ ಮತ್ತು 27hp ಪವರ್ ಮತ್ತು 68Nm ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ.

ಖರೀದಿಸಲು ಆಸಕ್ತಿಯಿರುವ ಗ್ರಾಹಕರಿಗೆ ನಮ್ಮ ಸಲಹೆಗಳು: ಹೆಚ್ಚಿನ ನಿಯೋ ಇವಿಗಳು ಕಮಿಷನ್‌ನಿಂದ ಹೊರಗುಳಿದಿವೆ. ಕೆಲ ವಿತರಕರು ಅವುಗಳನ್ನು ನವೀಕರಿಸುತ್ತಿದ್ದಾರೆ, ಬ್ಯಾಟರಿ ನಿರ್ವಹಣಾ ವ್ಯವಸ್ಥೆಯನ್ನು (BMS) ಮರುಮಾಪನ ಮಾಡುತ್ತಾರೆ. ಮಾರಾಟಕ್ಕೆ ಇಡುವ ಮೊದಲು ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸಲು ತಮ್ಮ ನಿಷ್ಕ್ರಿಯ ಸೆಲ್ ಬ್ಯಾಲೆನ್ಸಿಂಗ್ ತಂತ್ರಜ್ಞಾನವನ್ನು ನವೀಕರಿಸುತ್ತಿದ್ದಾರೆ.

ಹಾಗಾಗಿ ಎಲೆಕ್ಟ್ರಿಕ್ ಪವರ್‌ಟ್ರೇನ್ ಜೊತೆಗೆ, ಎಲ್ಲಾ ಆಯಿಲ್‌ಗಳು (ಉದಾಹರಣೆಗೆ ಬ್ರೇಕ್ ಆಯಿಲ್) ಮತ್ತು ಅದರ 12V ಬ್ಯಾಟರಿಯನ್ನು ಬದಲಾಯಿಸಲಾಗಿದೆಯೇ ಎಂದು ಪರಿಶೀಲಿಸಿ. ಎಲೆಕ್ಟ್ರಿಕ್ ಬಿಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ, ಅದರ ಸಸ್ಪೆನ್ಷನ್, ಬ್ರೇಕ್‌ಗಳು, ಸ್ಟೀರಿಂಗ್ ಮತ್ತು ಟೈರ್‌ಗಳು ಉತ್ತಮವಾಗಿವೆಯೇ ತಿಳಿದುಕೊಳ್ಳಿ. ಜೊತೆಗೆ, ನೀವು ಎಲ್ಲಾ ಮಾಲೀಕತ್ವದ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ನಿಮಗೆ ಸರಿಯೆನಿಸಿದರೆ ಖರೀದಿಗೆ ಮುಂದಾಗಿ, ಆದರೆ Jayem Neo EV ಯಾವುದೇ ವಾರಂಟಿಯಿಂದ ಬೆಂಬಲಿತವಾಗಿಲ್ಲ. ಹಾಗೆಯೇ ಟಾಟಾ ಸೇವಾ ಕೇಂದ್ರಗಳು ಈ ಸ್ಥಾಪಿತ, ಎಲೆಕ್ಟ್ರಕ್ ಕಾರಿಗೆ ತಾಂತ್ರಿಕ ಬೆಂಬಲವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Friday, September 1, 2023, 12:14 [IST]
English summary
Electric tata nano new avatar price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+