Euler Motors ನಿಂದ 2023 ಹೈಲೋಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆ... 170 ಕಿ.ಮೀ ರೇಂಜ್

ಭಾರತದಲ್ಲಿ ಪ್ರಯಾಣಿಕ ವಾಹನ ವಿಭಾಗದಷ್ಟೇ ಪ್ರಾಮುಖ್ಯತೆಯನ್ನು ವಾಣಿಜ್ಯ ವಿಭಾಗ ಕೂಡ ಪಡೆದುಕೊಂಡಿದೆ. ದೇಶದಲ್ಲಿ ಟಾಟಾದಂತಹ ಬ್ರಾಂಡ್‌ಗಳು ಸದ್ಯ ಇವಿ ವಾಣಿಜ್ಯ ವಿಭಾಗವನ್ನು ಆಳುತ್ತಿವೆ. ಇವುಗಳ ಜೊತೆಗೆ ಹೊಸ ಸ್ಟಾರ್ಟ್‌ಅಪ್‌ಗಳು ಕೂಡ ಉತ್ತಮ ಮಾರಾಟ ಗಳಿಸುತ್ತಿವೆ. ಯೂಲರ್ ಮೋಟಾರ್ಸ್ ಕೂಡ ಈಗ ತನ್ನ ನವೀಕೃತ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ.

ಯೂಲರ್ ಮೋಟಾರ್ಸ್ 2023 ಹೈಲೋಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವಾದ E3W ಅನ್ನು ಬಿಡುಗಡೆ ಮಾಡಿದೆ. ಹಳೆಯ ಮಾದರಿಗೆ ಹೋಲಿಸಿದರೆ ಅತಿದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಹೆಚ್ಚಿನ ಶ್ರೇಣಿಯೊಂದಿಗೆ ಇದು ಬರುತ್ತದೆ. HiLoad E3W ನ ನವೀಕರಿಸಿದ 2023 ಆವೃತ್ತಿಯು ಹಿಂದಿನ 12.4 kWh ಬ್ಯಾಟರಿ ಪ್ಯಾಕ್‌ಗೆ ಹೋಲಿಸಿದರೆ 12.96 kWh ನ ದೊಡ್ಡ ಬ್ಯಾಟರಿ ಪ್ಯಾಕ್‌ ಅನ್ನು ಪಡೆದಿದ್ದು, ಈಗ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

Euler Motors ನಿಂದ 2023 ಹೈಲೋಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆ... 170 ಕಿ.ಮೀ ರೇಂಜ್

ವಿನ್ಯಾಸದಲ್ಲಿ ಏನೆಲ್ಲಾ ನವೀಕರಣಗಳಾಗಿವೆ ಎಂಬುದನ್ನು ನೋಡುವುದಾದರೆ, ಪೇಲೋಡ್ ಸಾಮರ್ಥ್ಯದ ಹೆಚ್ಚಳದ ಹೊರತಾಗಿಯೂ 2023 HiLoad EV ಹಿಂದಿನ ಆವೃತ್ತಿಗಿಂತ 30 ಕೆ.ಜಿ ಹಗುರವಾಗಿದೆ. ಬಾಹ್ಯ ವಿನ್ಯಾಸವನ್ನು ಈಗ ತೀಕ್ಷ್ಣವಾದ ಶೈಲಿಯೊಂದಿಗೆ ನವೀಕರಿಸಲಾಗಿದೆ. ಹೊಸ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಘಟಕಗಳು ಮತ್ತು ಆಪ್ಟಿಮೈಸ್ಡ್ ಕ್ಯಾಬಿನ್, ವಿಶಾಲವಾದ ವಿಂಡ್‌ಶೀಲ್ಡ್ ಮತ್ತು ಸ್ಲೈಡರ್ ಕಿಟಕಿಗಳು ಅನ್ನು ನೀಡಲಾಗಿದೆ. 200 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್‌ಗಳು, ಸ್ವತಂತ್ರ ಆಕ್ಸಲ್ ಮತ್ತು ಟೈರ್ ಅಗಲವನ್ನು ಶೇ 30 ರಷ್ಟು ಹೆಚ್ಚಿಸಲಾಗಿದೆ.

HiLoad EV ಯ ಹೊಸ ಆವೃತ್ತಿಯು ತನ್ನ ಹಿಂದಿನ ಮಾದರಿಗಿಂತ ಈಗ 20 ಕಿ.ಮೀ ಹೆಚ್ಚಿನ ರೇಂಜ್ ನೀಡಲಿದೆ. ಅಂದರೆ 170 ಕಿ.ಮೀಗಳ ARAI ಪ್ರಮಾಣೀಕೃತ ಶ್ರೇಣಿಯನ್ನು ಹೊಂದಿದೆ ಎಂದು ಯೂಲರ್ ಮೋಟಾರ್ಸ್ ಹೇಳಿಕೊಂಡಿದೆ. ಆದರೆ ತಯಾರಕರು 100 ರಿಂದ 120 ಕಿ.ಮೀ ನಡುವಿನ ರಿಯಲ್ ವರ್ಲ್ಡ್ ವ್ಯಾಪ್ತಿಯನ್ನು ಸಹ ಬಹಿರಂಗಪಡಿಸಿದ್ದಾರೆ. ಈ ಮೂಲಕ ತನ್ನ ವಿಭಾಗದಲ್ಲಿ ಈಗ ಸ್ಟಾಂಡರ್ಡ್ ಗುಣಮಟ್ಟದೊಂದಿಗೆ HiLoad EV ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Euler Motors

HiLoad EV ಯ ಪೇಲೋಡ್ ಸಾಮರ್ಥ್ಯವನ್ನು ನೋಡುವುದಾದರೆ, ಕಂಪನಿಯವರು ನವೀಕರಣದ ಭಾಗವಾಗಿ ಶೇ 30 ರಷ್ಟು ಪೇಲೋಡ್ ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ. ಅಂದರೆ ಈಗ ಹೊಸ ಮಾದರಿಯು ಬರೋಬ್ಬರಿ 688 ಕೆ.ಜಿ ವರೆಗೆ ಸರಕುಗಳನ್ನು ಸಾಗಿಸಬಲ್ಲದು. HiLoad EV ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, 2023 ಆವೃತ್ತಿಯ ಬುಕಿಂಗ್‌ಗಳನ್ನು ಈಗಾಗಲೇ ತೆರೆಯಲಾಗಿದೆ. ಹೊಸ ಮಾದರಿಯ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಈಗ ಮಾರಾಟದಲ್ಲಿರುವ ಮಾದರಿಯ ಬೆಲೆ 3.78 ಲಕ್ಷದಿಂದ 4.03 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ.

ಯೂಲರ್ ಮೋಟಾರ್ಸ್ ಸಂಸ್ಥಾಪಕ ಸೌರವ್ ಕುಮಾರ್ ಮಾತನಾಡಿ. ತನ್ನ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಬ್ಯಾಟರಿ ಪ್ಯಾಕ್, ಸಾಮೂಹಿಕ ನಿಯೋಜನೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ನಮ್ಮ ಗ್ರಾಹಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ EV ಅನುಭವವನ್ನು ಒದಗಿಸಲು ಅದನ್ನು ವರ್ಧಿಸಲಾಗಿದೆ. ಜೊತೆಗೆ ಪೇಟೆಂಟ್ ಲಿಕ್ವಿಡ್ ಕೂಲಿಂಗ್ ಮತ್ತು DC ವೇಗದ ಚಾರ್ಜಿಂಗ್ ಹೊಂದಿರುವ ಯೂಲರ್ 13 kWh ಬ್ಯಾಟರಿ ಪ್ಯಾಕ್ ಈಗ AIS 156 ತಿದ್ದುಪಡಿ III ಹಂತ 2 ಮಾನದಂಡಗಳಿಗೆ ಸಂಪೂರ್ಣವಾಗಿ ಅನುಸರಣೆಯಾಗಿದೆ ಎಂದರು.

ಸದ್ಯ ವಾಣಿಜ್ಯ ವಿಭಾಗದಲ್ಲಿ ಐಸಿಇ ಎಂಜಿನ್ ವಾಹನಗಳೇ ಹೆಚ್ಚಾಗಿವೆ. ಪ್ರಯಾಣಿಕ ವಿಭಾಗದಲ್ಲಿ ಈಗಾಗಲೇ ಇವಿಗಳು ಹೆಚ್ಚಾಗಿ ಮಾರಾಟಗೊಳ್ಳುತ್ತಿದ್ದು, ವಾಣಿಜ್ಯ ವಿಭಾಗದಲ್ಲೂ ಇವಿಗಳು ಹೆಚ್ಚಾಗಬೇಕಿದೆ. ಏಕೆಂದರೆ ಪ್ರಯಾಣಿಕ ಐಸಿಇ ವಾಹನಗಳಿಗೆ ಹೋಲಿಸಿಕೊಂಡರೆ ವಾಣಿಜ್ಯ ವಾಹಗಳು ಲೋಡ್ ಸಾಮರ್ಥ್ಯವನ್ನು ಹೆಚ್ಚು ಹೊಂದಿರುವುದರಿಂದ ಇವುಗಳಿಂದ ಹೊರಹೊಮ್ಮುವ ಕಾರ್ಬನ್ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಇವಿಗಳು ಈ ವಿಭಾಗದಲ್ಲಿ ಹೆಚ್ಚಾಗಬೇಕಿದ್ದು, ಹೊಸ ಇವಿ ಸ್ಟಾರ್ಟಪ್ ಗಳಿಗೆ ಗ್ರಾಹಕರಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, April 11, 2023, 18:22 [IST]
English summary
Euler motors launched new hiload three weeler ev
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+