ಟಾಪ್ ಸೆಲೆಬ್ರಿಟಿಗಳು ಕೂಡ ಬಳಸಿದ ಕಾರುಗಳನ್ನು ಖರೀದಿಸುತ್ತಾರೆ... ಯಾರಿಗೂ ತಿಳಿಯದ ಪ್ರಯೋಜನಗಳಿವು!

ಭಾರತದಲ್ಲಿ ಕಳೆದ ಐದಾರು ವರ್ಷಗಳಿಂದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯು ಅಗಾಧ ಬೆಳವಣಿಗೆಯನ್ನು ಸಾಧಿಸಿದೆ. ಪ್ರಮುಖವಾಗಿ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳೇ ಬಳಸಿದ ಕಾರುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಟಾಪ್ ಸೆಲೆಬ್ರಿಟಿಗಳು ಕೂಡ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಾರೆ ಎಂದರೆ ನಂಬುವುದು ತುಸು ಕಷ್ಟ. ಅಂತಹ ಕೆಲ ಸೆಲಬ್ರಿಟಿಗಳನ್ನು ಇಲ್ಲಿ ನೋಡೋಣ.

ಶಿಲ್ಪಾ ಶೆಟ್ಟಿ, ಯುವರಾಜ್ ಸಿಂಗ್:
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ಹಲವಾರು ಅತ್ಯಾಧುನಿಕ ವಾಹನಗಳನ್ನು ಹೊಂದಿದ್ದಾರೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಲಾಂಗ್ ವ್ಹೀಲ್‌ಬೇಸ್ ಆವೃತ್ತಿಯು ಶಿಲ್ಪಾ ಶೆಟ್ಟಿಗೆ ದೊರೆತ ಕಾರುಗಳಲ್ಲಿ ಒಂದಾಗಿದೆ. ಬಿಗ್ ಬಾಯ್ಜ್ ಟಾಯ್ಜ್ ಕೆಲವು ವರ್ಷಗಳ ಹಿಂದೆ ಶೆಟ್ಟಿಗೆ ಈ ಬಳಸಿದ ಕಾರನ್ನು ತಲುಪಿಸಿದ್ದರು. ಹಾಗೆಯೇ ಯುವರಾಜ್ ಅವರು ಬಿಗ್ ಬಾಯ್ಜ್ ಟಾಯ್ಜ್‌ನಿಂದ ಖರೀದಿಸಿದ ಲಂಬೋರ್ಗಿನಿ ಮುರ್ಸಿಲಾಗೊವನ್ನು ಹೊಂದಿದ್ದರು. ಜೊತೆಗೆ BMW X6 M ಅನ್ನು ಸೆಕೆಂಡ್ಸ್‌ನಲ್ಲಿ ಖರೀದಿಸಿದ್ದರು.

ಟಾಪ್ ಸೆಲೆಬ್ರಿಟಿಗಳು ಕೂಡ ಬಳಸಿದ ಕಾರುಗಳನ್ನು ಖರೀದಿಸುತ್ತಾರೆ... ಯಾರಿಗೂ ತಿಳಿಯದ ಪ್ರಯೋಜನಗಳಿವು!

ದಿನೇಶ್ ಕಾರ್ತಿಕ್, ಪೃಥ್ವಿರಾಜ್ ಸುಕುಮಾರ್:
ದಿನೇಶ್ ಕಾರ್ತಿಕ್ ದೊಡ್ಡ ಕಾರು ಪ್ರೇಮಿ ಮತ್ತು ಅವರು ಬಿಗ್ ಬಾಯ್ಜ್ ಟಾಯ್ಜ್‌ನಿಂದ ಪೋರ್ಷೆ 911 ಟರ್ಬೊ ಎಸ್ ಅನ್ನು ಖರೀದಿಸಿದ್ದರು. ಈ ಪೋರ್ಷೆಗಾಗಿ ಎಷ್ಟು ಹಣ ಖರ್ಚು ಮಾಡಿದ್ದಾರೆಂದು ಮಾಹಿತಿಯಿಲ್ಲ. ಆದರೆ ಇದು ಹೊಚ್ಚಹೊಸ ಕಾರಿಗೆ ಖರ್ಚು ಮಾಡುವುದಕ್ಕಿಂತ ಕಡಿಮೆಯಿರಬಹುದು. ಇನ್ನು ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಪೃಥ್ವಿರಾಜ್ ಸುಕುಮಾರ್ ಕೊಚ್ಚಿ ಮೂಲದ ಡೀಲರ್‌ಶಿಪ್‌ನಿಂದ ಬಳಸಿದ ಲಂಬೋರ್ಗಿನಿ ಉರುಸ್ ಅನ್ನು ಖರೀದಿಸಿದ್ದರು.

ಇವರಷ್ಟೇ ಅಲ್ಲದೇ ಭಾರತದ ಹಾಕಿ ಆಟಗಾರ ಮತ್ತು ಕಿರಿಯ ತಂಡದ ನಾಯಕ ಸರ್ದಾರ್ ಸಿಂಗ್ ಅವರು ಬಳಸಿದ ಲ್ಯಾಂಡ್ ರೋವರ್ ರೇಂಜ್ ರೋವರ್ ಅನ್ನು ಬಿಬಿಟಿಯಿಂದ ಖರೀದಿಸಿದ್ದಾರೆ. ಹಾಗೆಯೇ ಬಾಲಿವುಡ್ ಗಾಯಕ ಬಾದ್‌ಶಾ ಅವರು ಈ ವರ್ಷದ ಆರಂಭದಲ್ಲಿ ಬಳಸಿದ ರೋಲ್ಸ್ ರಾಯ್ಸ್ ವ್ರೈತ್ ಅನ್ನು ಖರೀದಿಸಿದರು. ಮತ್ತೊಬ್ಬ ಜನಪ್ರಿಯ ಗಾಯಕ ಹನಿ ಸಿಂಗ್ ಕೂಡ ಬಳಸಿದ ಆಡಿ ಆರ್8 ಅನ್ನು ಬಿಬಿಟಿಯಿಂದ ಖರೀದಿಸಿದರು. ರಾಖಿ ಸಾವಂತ್ ಕೂಡ ಬಳಸಿದ BMW X1 ಅನ್ನು ಹೊಂದಿದ್ದಾರೆ.

ಟಾಪ್ ಸೆಲೆಬ್ರಿಟಿಗಳು ಕೂಡ ಬಳಸಿದ ಕಾರುಗಳನ್ನು ಖರೀದಿಸುತ್ತಾರೆ... ಯಾರಿಗೂ ತಿಳಿಯದ ಪ್ರಯೋಜನಗಳಿವು!

ಹಾಗಾಗಿ ಭಾರತದಲ್ಲಿ ಬಳಸಿದ ಕಾರನ್ನು ಹೊಂದಿರುವ ಸೆಲೆಬ್ರಿಟಿಗಳ ದೊಡ್ಡ ಪಟ್ಟಿಯೇ ಇದೆ. ಆದರೆ ಹೊಚ್ಚಹೊಸ ವಾಹನವನ್ನು ಖರೀದಿಸುವುದಕ್ಕಿಂತ ಬಳಸಿದ ಕಾರನ್ನು ಹೊಂದಲು ಕಾರಣಗಳು ಏನಿರಬಹುದು. ಸೆಲಬ್ರಿಟಿಗಳ ಬಳಿ ಹಣದ ಕೊರತೆಯೇ.. ಖಂಡಿತ ಹಣದ ಕೊರತೆಯಲ್ಲ, ಬದಲಿಗೆ ಈ ಬಳಸಿದ ಕಾರುಗಳಿಂದ ಹಲವು ಪ್ರಯೋಜನಗಳಿವೆ. ಇವು ಸಾಮಾನ್ಯ ಜನರಿಗೂ ವರ್ತಿಸುತ್ತವೆ, ಆದರೆ ಹಲವರು ಸೆಕೆಂಡ್ಸ್ ಎಂದಾಕ್ಷಣ ಹಿಂದೇಟು ಹಾಕುತ್ತಾರೆ. ಇಲ್ಲಿ ವಿವರಿಸಲಾದ ವಿಷಯಗಳನ್ನು ತಿಳಿದರೆ ಖಂಡಿತ ನಿಮ್ಮ ಅಭಿಪ್ರಾಯ ಬದಲಾಗಬಹುದು.

ಮೆಗಾ ಉಳಿತಾಯ, ಕಡಿಮೆ ಬೆಲೆ:
ಹೌದು, ಸೆಲೆಬ್ರಿಟಿಗಳು ಕೂಡ ನಮ್ಮೆಲ್ಲರಂತೆ ಹಣ ಉಳಿಸಲು ಇಷ್ಟಪಡುತ್ತಾರೆ. ಕಾರುಗಳ ಬೆಲೆಯು ಬಹಳ ಬೇಗನೆ ಕುಸಿಯುತ್ತದೆ, ವಿಶೇಷವಾಗಿ ಅವು ಐಷಾರಾಮಿ ಬ್ರಾಂಡ್‌ಗಳಾಗಿದ್ದರೆ. ಉದಾಹರಣೆಗೆ ಬಳಸಿದ ಬೆಂಟ್ಲಿ ಅಥವಾ ಲಂಬೋರ್ಗಿನಿ ಹೊಸದಕ್ಕೆ ಹೋಲಿಸಿದರೆ ಕನಿಷ್ಠ 1 ಕೋಟಿ ರೂ. ಕಡಿಮೆಯಾಗುತ್ತದೆ. ಹೊಸ ಕಾರು ಶೋರೂಂನಿಂದ ಹೊರಬಂದ ಕ್ಷಣದಲ್ಲಿ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಬಳಸಿದ ಕಾರಿಗೆ ಸವಕಳಿ ದರವು ತುಂಬಾ ಕಡಿಮೆಯಿರುತ್ತದೆ. ಅಗ್ಗವಾಗಿ ಖರೀದಿಸಿ ಮೂರನೇ ಮಾಲೀಕರಿಗೆ ಉತ್ತಮ ಮೌಲ್ಯದಲ್ಲಿ ಮಾರಾಟ ಮಾಡಬಹುದು.

ಟಾಪ್ ಸೆಲೆಬ್ರಿಟಿಗಳು ಕೂಡ ಬಳಸಿದ ಕಾರುಗಳನ್ನು ಖರೀದಿಸುತ್ತಾರೆ... ಯಾರಿಗೂ ತಿಳಿಯದ ಪ್ರಯೋಜನಗಳಿವು!

ಕೈಗೆಟುಕುವ ಬೆಲೆಯಲ್ಲಿ ಹೊಸ ಕಾರುಗಳನ್ನು ಚಾಲನೆ ಮಾಡಿ:
ಅನೇಕ ಜನರು ತಮ್ಮ ಗ್ಯಾರೇಜುಗಳನ್ನು ಆಗಾಗ್ಗೆ ನವೀಕರಿಸಲು ಇಷ್ಟಪಡುತ್ತಾರೆ, ಇದಕ್ಕಾಗಿ ಬಳಸಿದ ಕಾರನ್ನು ಖರೀದಿಸಲು ಬಯಸುತ್ತಾರೆ. ಸೆಕೆಂಡ್ಸ್ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರುವ ಆಯ್ಕೆಗಳ ಒಂದು ಶ್ರೇಣಿಯಿದೆ, ಇದು ಸೆಲೆಬ್ರಿಟಿಗಳಿಗೆ ಕಾರುಗಳ ಬೃಹತ್ ಕ್ಯಾಟಲಾಗ್‌ನಿಂದ ಆಯ್ಕೆ ಮಾಡಲು ಸಹಕರಿಸುತ್ತದೆ. ಜೊತೆಗೆ ಅವರು ಹೊಸ ಕಾರಿಗೆ ಖರ್ಚು ಮಾಡಬೇಕಾದ ಮೊತ್ತವನ್ನು ಖರ್ಚು ಮಾಡಬೇಕಾಗಿಲ್ಲ, ಬದಲಿಗೆ ಕಡಿಮೆ ಮೊತ್ತಕ್ಕೆ ತಮ್ಮ ಗ್ಯಾರೆಜ್ ಸೇರಿಸಬಹುದು.

ವಿಶ್ವಾಸಾರ್ಹ ಡೀಲರ್‌ಶಿಪ್‌ಗಳು, ವಿಸ್ತೃತ ಖಾತರಿ:
ಬಳಸಿದ ಕಾರು ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಸಂಘಟಿತವಾಗಿದೆ. ಬಳಸಿದ ಕಾರ್ ಡೀಲರ್‌ಶಿಪ್‌ಗಳು ಈಗ ವಾಹನಗಳನ್ನು ಪ್ರಮಾಣೀಕರಿಸುತ್ತವೆ. ವಾಹನವು ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಬಹು ಪಾಯಿಂಟ್ ಚೆಕ್‌ಗಳನ್ನು ಮಾಡುತ್ತವೆ. ಬಿಗ್ ಬಾಯ್ಜ್ ಟಾಯ್ಜ್‌ನಂತಹ ಉಪಯೋಗಿಸಿದ ಕಾರ್ ನೆಟ್‌ವರ್ಕ್‌ಗಳು ವಿಶ್ವಾಸಾರ್ಹವಾಗಿ ಗ್ರಾಹಕರಿಗೆ ವಾಹನಗಳನ್ನು ಒದಗಿಸುತ್ತಿವೆ. ಐಷಾರಾಮಿ ಕಾರು ವಿತರಕರು 8 ವರ್ಷಗಳವರೆಗೆ ವಿಸ್ತರಿಸಬಹುದಾದ ವಿಸ್ತೃತ ವಾರಂಟಿ ಪ್ಯಾಕ್‌ಗಳ ಶ್ರೇಣಿಯನ್ನು ನೀಡುತ್ತಾರೆ. ವಿಸ್ತೃತ ವಾರಂಟಿ ಖರೀದಿದಾರರಿಗೆ ವಿಶ್ವಾಸವನ್ನು ಹೆಚ್ಚಿಸುತ್ತದೆ.

Most Read Articles

Kannada
English summary
Even top celebrities buy used cars benefits that no one knows
Story first published: Thursday, February 2, 2023, 13:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X