Exponent Energy: 15 ನಿಮಿಷಗಳಲ್ಲಿ ವಾಹನ ಫುಲ್ ಚಾರ್ಜ್: ಹೊಸ ತಂತ್ರಜ್ಞಾನ ಬಹಿರಂಗ
Exponent Energy, EV ಉದ್ಯಮಕ್ಕಾಗಿ ತನ್ನ 15 ನಿಮಿಷಗಳ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಈ ತಂತ್ರಜ್ಞಾನವು ಬ್ಯಾಟರಿ ಪ್ಯಾಕ್ (ಇ^ಪ್ಯಾಕ್), ಚಾರ್ಜಿಂಗ್ ಸ್ಟೇಷನ್ (ಇ^ಪಂಪ್) ಮತ್ತು ಚಾರ್ಜಿಂಗ್ ಕನೆಕ್ಟರ್ (ಇ^ಪ್ಲಗ್)ಮೂಲಕ ಕೇವಲ 15 ನಿಮಿಷಗಳಲ್ಲಿಯೇ ವಾಹನಗಳನ್ನು ವೇಗವಾಗಿ ಚಾರ್ಜ್ ಮಾಡಬಲ್ಲವು ಎಂದು ಎಕ್ಸ್‌ಪೋನೆಂಟ್ ಎನರ್ಜಿ ತಿಳಿಸಿದೆ.
ಹಾಗೆಯೇ ಇದು ದೀರ್ಘ ಬ್ಯಾಟರಿ ಬಾಳಿಕೆಗಾಗಿ (3000 ಸೈಕಲ್ ಲೈಫ್ ವಾರಂಟಿ, ಮೂರು ಪಟ್ಟು ಉದ್ಯಮದ ಗುಣಮಟ್ಟ) ಇತಿಹಾಸದಲ್ಲೇ ಮೊದಲ ಬಾರಿಗೆ ನಿಯಮಿತ LFP ಕೋಶಗಳಿಂದ ಮಾಡಲಾಗಿದೆ. ಫಾಸ್ಟ್ ಚಾರ್ಜಿಂಗ್, ರೇಂಜ್ ಆತಂಕ ಮತ್ತು ದುಬಾರಿ ಬೆಲೆ, ದೊಡ್ಡ ಬ್ಯಾಟರಿ ಪ್ಯಾಕ್‌ಗಳ ಅಗತ್ಯವನ್ನು ನಿವಾರಿಸಲಿದೆ ಎಂದು ಎಕ್ಸ್‌ಪೋನೆಂಟ್ ಎನರ್ಜಿ ತಿಳಿಸಿದೆ.

ಈ ಮೂಲಕ ಎಕ್ಸ್‌ಪೋನೆಂಟ್‌ನಿಂದ ಬರುವ ಇವಿ ವಾಹನಗಳು ಶೇ30 ರಷ್ಟು ಹೆಚ್ಚು ಕೈಗೆಟುಕುವ ದರದಲ್ಲಿ ಸಿಗಲಿವೆ ಎಂದು ಕಂಪನಿ ಘೋಷಿಸಿದೆ. ಹೆಚ್ಚುವರಿಯಾಗಿ, ಅದರ 15-ನಿಮಿಷದ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, EV ಚಾರ್ಜಿಂಗ್ ವೆಚ್ಚವನ್ನು ಶೇ 33 ರಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿರುವುದಾಗಿ ಎಕ್ಸ್‌ಪೋನೆಂಟ್ ಎನರ್ಜಿ ಹೇಳಿಕೊಂಡಿದೆ.
ಈ ಹೊಸ ತಂತ್ರಜ್ಞಾನದ ಕುರಿತು ಮಾತನಾಡಿದ ಎಕ್ಸ್‌ಪೋನೆಂಟ್ ಎನರ್ಜಿಯ ಸಿಇಒ ಮತ್ತು ಸಹ-ಸಂಸ್ಥಾಪಕ ಅರುಣ್ ವಿನಾಯಕ್, "ಎಕ್ಸ್‌ಪೋನೆಂಟ್‌ನಲ್ಲಿ ನಾವು ಅತ್ಯಾಧುನಿಕ ಎಂಜಿನಿಯರಿಂಗ್ ಅನ್ನು ನೈಜ-ಪ್ರಪಂಚದ ಅರ್ಥಶಾಸ್ತ್ರದೊಂದಿಗೆ ಸಂಯೋಜಿಸುವ ಶಕ್ತಿಯ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಇದಕ್ಕೆ ಸಾಕ್ಷಿಯಾಗಲಿದೆ ಎಂಬ ನಂಬಿಕೆ ನಮಗಿದೆ ಎಂದರು.

"ಪ್ರತಿಯೊಬ್ಬರೂ ಎಲೆಕ್ಟ್ರಿಕ್ ವಾಹನಗಳಿಗೆ ಮುಖ ಮಾಡಬೇಕೆಂದರೆ ಗ್ರಾಹಕರಿಗೆ ವೇಗವಾಗಿ ಚಾರ್ಜ್ ಮಾಡುವ, ಹೆಚ್ಚು ಕಾಲ ಉಳಿಯುವ ಮತ್ತು ಕಡಿಮೆ ವೆಚ್ಚದ ಇವಿಗಳ ಅಗತ್ಯವಿದೆ. 15 ನಿಮಿಷಗಳ ವೇಗದ ಚಾರ್ಜಿಂಗ್‌ಗೆ ನಮ್ಮ ವಿಶಿಷ್ಟವಾದ ಎರಡು ಬದಿಯ ವಿಧಾನವು EVಗಳನ್ನು 3 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಹಾಗೆಯೇ ಸಾಂಪ್ರದಾಯಿಕ EVಗಳಿಗಿಂತ ಶೇ30 ರಷ್ಟು ಕಡಿಮೆ ವೆಚ್ಚವಾಗುವಂತೆ ಮಾಡುತ್ತದೆ ಎಂದರು.
ಕಳೆದ 3 ತಿಂಗಳುಗಳಲ್ಲಿ, ಎಕ್ಸ್‌ಪೋನೆಂಟ್ 25,000 ಕ್ಕೂ ಹೆಚ್ಚು ಫಾಸ್ಟ್ ಚಾರ್ಜಿಂಗ್ ಸೆಷನ್‌ಗಳ ಮೂಲಕ ಬೆಂಗಳೂರಿನಲ್ಲಿ ಎಕ್ಸ್‌ಪೋನೆಂಟ್ ಎನರ್ಜಿಯ 200 ಕ್ಕೂ ಹೆಚ್ಚು EVಗಳೊಂದಿಗೆ 10,00,000 ಕಿ.ಮೀಗಳನ್ನು ಪೂರ್ಣಗೊಳಿಸಿದೆ. ಜೊತೆಗೆ ಕಂಪನಿಯು ಬೆಂಗಳೂರಿನ ಮಹದೇವಪುರದಲ್ಲಿರುವ ಅವರ e^ಪಂಪ್ ಒಂದೇ ದಿನದಲ್ಲಿ 41 ಚಾರ್ಜಿಂಗ್ ಸೆಷನ್‌ಗಳನ್ನು ಮಾಡಿ EV ಉದ್ಯಮದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಇದು ಆರ್ಥಿಕ ವರ್ಷ 2024 ರ ಅಂತ್ಯದ ವೇಳೆಗೆ ದೆಹಲಿ NCR, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ನೋಡುತ್ತಿದೆ. ಹಾಗೆಯೇ 2025 ರ ಹೊತ್ತಿಗೆ 1,000 e^ಪಂಪ್‌ಗಳು ಮತ್ತು 25,000 EV ಗಳನ್ನು ಎಕ್ಸ್‌ಪೋನೆಂಟ್‌ನಿಂದ ನಡೆಸಲ್ಪಡುವ ಗುರಿಯನ್ನು ಹೊಂದಿದೆ.
ಕಳೆದ ವರ್ಷದಲ್ಲಿ, ಎಕ್ಸ್‌ಪೋನೆಂಟ್ ಆಲ್ಟಿಗ್ರೀನ್‌ನೊಂದಿಗೆ ಪಾಲುದಾರಿಕೆ ಹೊಂದಿತ್ತು, ಇದರ ಪರಿಣಾಮವಾಗಿ ಎಕ್ಸ್‌ಪೋನೆಂಟ್ neEV Tez ಚಾಲಿತವಾದ ಮೊದಲ EV ಬಿಡುಗಡೆಯಾಯಿತು. ಮುಂದೆ ಎಕ್ಸ್‌ಪೋನೆಂಟ್ ಮೂರು-ಚಕ್ರಗಳ ಸರಕು ಮತ್ತು ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಹೊಸ ವಾಹನ ವಿಭಾಗಗಳನ್ನು ಅನ್ವೇಷಿಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications