ಕೇವಲ 15 ನಿಮಿಷಗಳಲ್ಲಿ ವಾಹನ ಫುಲ್ ಚಾರ್ಜ್ ಮಾಡಿ... ಈ ತಂತ್ರಜ್ಞಾನದ ವಿವರವಾದ ವಿಡಿಯೋ...

Exponent Energy, EV ಉದ್ಯಮಕ್ಕಾಗಿ ತನ್ನ 15 ನಿಮಿಷಗಳ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಈ ತಂತ್ರಜ್ಞಾನವು ಬ್ಯಾಟರಿ ಪ್ಯಾಕ್ (ಇ^ಪ್ಯಾಕ್), ಚಾರ್ಜಿಂಗ್ ಸ್ಟೇಷನ್ (ಇ^ಪಂಪ್) ಮತ್ತು ಚಾರ್ಜಿಂಗ್ ಕನೆಕ್ಟರ್ (ಇ^ಪ್ಲಗ್)ಮೂಲಕ ಕೇವಲ 15 ನಿಮಿಷಗಳಲ್ಲಿಯೇ ವಾಹನಗಳನ್ನು ವೇಗವಾಗಿ ಚಾರ್ಜ್ ಮಾಡಬಲ್ಲವು ಎಂದು ಎಕ್ಸ್‌ಪೋನೆಂಟ್ ಎನರ್ಜಿ ತಿಳಿಸಿದೆ.

15-ನಿಮಿಷದ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, EV ಚಾರ್ಜಿಂಗ್ ವೆಚ್ಚವನ್ನು ಶೇ 33 ರಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿರುವುದಾಗಿ ಎಕ್ಸ್‌ಪೋನೆಂಟ್ ಎನರ್ಜಿ ಹೇಳಿಕೊಂಡಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಡ್ರೈವ್‌ಸ್ಪಾರ್ಕ್ ಓದುಗರಿಗೆ ನೀಡಲು ನಮ್ಮ ಡ್ರೈವ್‌ಸ್ಪಾರ್ಕ್ ಕನ್ನಡ ತಂಡವು Exponent Energy ಅನಾವರಣಗೊಳಿಸಿದ ಸ್ಥಳಕ್ಕೆ ಭೇಟಿ ನೀಡಿದ್ದು, ಆ ಕುರಿತ ವಿಡಿಯೋ ಕೆಳಗಿದೆ.

ಈ ಹೊಸ ತಂತ್ರಜ್ಞಾನದ ಕುರಿತು ಮಾತನಾಡಿದ ಎಕ್ಸ್‌ಪೋನೆಂಟ್ ಎನರ್ಜಿಯ ಸಿಇಒ ಮತ್ತು ಸಹ-ಸಂಸ್ಥಾಪಕ ಅರುಣ್ ವಿನಾಯಕ್, "ಎಕ್ಸ್‌ಪೋನೆಂಟ್‌ನಲ್ಲಿ ನಾವು ಅತ್ಯಾಧುನಿಕ ಎಂಜಿನಿಯರಿಂಗ್ ಅನ್ನು ನೈಜ-ಪ್ರಪಂಚದ ಅರ್ಥಶಾಸ್ತ್ರದೊಂದಿಗೆ ಸಂಯೋಜಿಸುವ ಶಕ್ತಿಯ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಇದಕ್ಕೆ ಸಾಕ್ಷಿಯಾಗಲಿದೆ ಎಂಬ ನಂಬಿಕೆ ನಮಗಿದೆ ಎಂದರು.

"ಪ್ರತಿಯೊಬ್ಬರೂ ಎಲೆಕ್ಟ್ರಿಕ್ ವಾಹನಗಳಿಗೆ ಮುಖ ಮಾಡಬೇಕೆಂದರೆ ಗ್ರಾಹಕರಿಗೆ ವೇಗವಾಗಿ ಚಾರ್ಜ್ ಮಾಡುವ, ಹೆಚ್ಚು ಕಾಲ ಉಳಿಯುವ ಮತ್ತು ಕಡಿಮೆ ವೆಚ್ಚದ ಇವಿಗಳ ಅಗತ್ಯವಿದೆ. 15 ನಿಮಿಷಗಳ ವೇಗದ ಚಾರ್ಜಿಂಗ್‌ಗೆ ನಮ್ಮ ವಿಶಿಷ್ಟವಾದ ಎರಡು ಬದಿಯ ವಿಧಾನವು EVಗಳನ್ನು 3 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಹಾಗೆಯೇ ಸಾಂಪ್ರದಾಯಿಕ EVಗಳಿಗಿಂತ ಶೇ30 ರಷ್ಟು ಕಡಿಮೆ ವೆಚ್ಚವಾಗುವಂತೆ ಮಾಡುತ್ತದೆ ಎಂದರು.

exponent-energy-water-based-thermal-management-technology-video

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, August 3, 2023, 14:15 [IST]
English summary
Exponent energy water based thermal management technology video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+