ಪ್ರಪಂಚವೇ ಮೆಚ್ಚಿದ್ದ Fiat ಟೊಪೊಲಿನೊ ಎಲೆಕ್ಟ್ರಿಕ್ ಕಾರಾಗಿ ರೀ-ಎಂಟ್ರಿ: ಬೆಲೆ ಫುಲ್ ಕಡಿಮೆ.. ಹೇಗಿದೆ?

ಸುದೀರ್ಘ 124 ವರ್ಷಗಳ ಇತಿಹಾಸ ಹೊಂದಿರುವ ಇಟಾಲಿ ದೇಶದ ಪ್ರಮುಖ ಕಾರು ತಯಾರಕ ಕಂಪನಿ ಫಿಯೆಟ್ (Fiat) ತನ್ನ ಫೇಮಸ್ ಟೊಪೊಲಿನೊ ಕಾರನ್ನು ಎಲೆಕ್ಟ್ರಿಕ್ ಆವೃತ್ತಿಯಾಗಿ ರೀ-ಲಾಂಚ್ ಮಾಡಲು ಸಿದ್ಧತೆ ನಡಿಸಿದೆ. ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಫಿಯೆಟ್ ಕಂಪನಿ, ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ 500e ಹೆಸರಿನ ಎಲೆಕ್ಟ್ರಿಕ್ ಕಾರನ್ನು ಮಾರಾಟ ಮಾಡುತ್ತಿದೆ. 'ಟೊಪೊಲಿನೊ' ಎರಡನೇ ಎಲೆಕ್ಟ್ರಿಕ್ ಕಾರಾಗಿದೆ. ಈ ಮೊದಲ ಅಂದರೆ, 1936 ರಿಂದ 1955ರವರೆಗೆ ಇದೇ ಹೆಸರಲ್ಲಿ ಕಂಪನಿಯು ಇಂಧನ ಚಾಲಿತ ಕಾರನ್ನು ಉತ್ಪಾದನೆ ಮಾಡುತ್ತಿತ್ತು. ಆ ಕಾಲದಲ್ಲಿ ನಗರ ಸಂಚಾರಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿ ಇತ್ತು.

ಪ್ರಪಂಚವೇ ಮೆಚ್ಚಿದ್ದ Fiat ಟೊಪೊಲಿನೊ ಎಲೆಕ್ಟ್ರಿಕ್ ಕಾರಾಗಿ ರೀಎಂಟ್ರಿ

ಸದ್ಯ, ರೀ-ಎಂಟ್ರಿ ಕೊಡಲು ಸಿದ್ದವಾಗಿರುವ ಟೊಪೊಲಿನೊ ಕಾರಿನ ಫೋಟೋವನ್ನು ನೋಡಿದಾಗ ಅದರ ಬಣ್ಣ 1957ರಲ್ಲಿ ಬಿಡುಗಡೆಯಾಗಿದ್ದ ಫಿಯೆಟ್ 500 ಕಾರಿಗೆ ಹೋಲಿಕೆಯಾಗುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರು, ಗಟ್ಟಿಮುಟ್ಟದ ಬಟ್ಟೆಯಲ್ಲಿ ಮಾಡಿದ ಮೇಲ್ಚಾವಣಿ (retractable roof) ಅನ್ನು ಹೊಂದಿದೆ. ಜೊತೆಗೆ ಯಾವುದೇ ರೀತಿಯ ಡೋರ್ ಹೊಂದಿಲ್ಲ. ನಗರ ಪ್ರದೇಶ ಸಂಚಾರ ದಟ್ಟಣೆ ಇರುವ ರಸ್ತೆಗಳಿಗೆ ಯೋಗ್ಯವಾಗಿವೆ.

ಕಂಪನಿಯೇ ಹೇಳುವಂತೆ ಇದು ಎರಡು ಆಸನ ಆಯ್ಕೆಯೊಂದಿರುವ ಕಾರಾಗಿದ್ದು, ಪುಟ್ಟ ಕುಟುಂಬಗಳಿಗೆ ಸೂಕ್ತವಾಗಿದೆ. ಈ ಟೊಪೊಲಿನೊದಲ್ಲಿ ಯಾವ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ, ಸಂಪೂರ್ಣ ಚಾರ್ಜಿನಲ್ಲಿ 74 km ರೇಂಜ್ ನೀಡಬಹುದು. ಜೊತೆಗೆ 45kph ಟಾಪ್ ಸ್ವೀಡ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಕಂಪನಿ ಸಿಇಒ ಒಲಿವಿಯರ್ ಫ್ರಾಂಕೋಯಿಸ್ ಅವರು, '2027ರ ವೇಳೆಗೆ ಫಿಯೆಟ್ ಕಂಪನಿ ಸಂಪೂರ್ಣ ಲೈನ್-ಅಪ್ ನಲ್ಲಿ ಎಲೆಕ್ಟ್ರಿಕ್ ಕಾರುಗಳೇ ಇರಲಿವೆ. ಅದರಲ್ಲೂ ಯುರೋಪ್ ವಾಹನ ಮಾರುಕಟ್ಟೆಯಲ್ಲಿ ನಿರ್ಣಾಯಕರಾಗಲು ಬಯಸುತ್ತವೆ. ಹೊಸ ಕಾರಿನೊಂದಿಗೆ ಇದು ಸಾಧ್ಯವಾಗುತ್ತದೆ ಎಂದು ನಂಬಿದ್ದೇವೆ .ಫಿಯೆಟ್ ಜನರ ಟೆಸ್ಲಾ ಆಗಿರಬೇಕು' ಎಂದು ಹೇಳಿದ್ದಾರೆ.

ಫಿಯೆಟ್ ಕಂಪನಿಯ ಟೊಪೊಲಿನೊ ಕಾರು ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಖಚಿತವಾಗಿ ತಿಳಿದಿಲ್ಲ. ಇದೊಂದು ಪುಟ್ಟ ಕಾರಾಗಿರುವುದರಿಂದ ಬೆಲೆ ತುಂಬಾ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದ್ದು, ಸುಮಾರು ರೂ.6 ಲಕ್ಷ ದೊಳಗೆ ಖರೀದಿಗೆ ಸಿಗಬಹುದು. ಆದರೆ, ಈ ಕಾರು ಭಾರತದಲ್ಲಿ ಲಾಂಚ್ ಆಗುವ ಬಗ್ಗೆ ಯಾವುದೇ ವಿವರ ಲಭ್ಯವಾಗಿಲ್ಲ.

ಇನ್ನು, ಫಿಯೆಟ್ ದೇಶೀಯ ಮಾರುಕಟ್ಟೆಯಲ್ಲಿ 'ಪಾಲಿಯೊ' ಕಾರನ್ನು ಕಾರನ್ನು ಮಾರಾಟ ಮಾಡುತ್ತಿತ್ತು. ಆದರೆ, ಕೆಲವು ವರ್ಷಗಳ ಹಿಂದೆ, ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಆಗೊಮ್ಮೆ, ಈಗೊಮ್ಮೆ ರಸ್ತೆಯಲ್ಲಿ ನೋಡಲು ಕಾಣಸಿಗುತ್ತದೆ. ಕಡೆಯದಾಗಿ ಈ ಕಾರು, ರೂ.3.59 ಲಕ್ಷ ಬೆಲೆಯನ್ನು ಹೊಂದಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತಿದ್ದ ಪಾಲಿಯೊ, 15.5 kmpl ಇಂಧನ ದಕ್ಷತೆ ಹೊಂದಿತ್ತು.

ಫಿಯೆಟ್ ಟೊಪೊಲಿನೊ, ಭಾರತದಲ್ಲಿ ಬಿಡುಗಡೆಯಾಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಈಗಾಗಲೇ 2 ಡೋರ್ ಆಯ್ಕೆಯಲ್ಲಿ ಎಂಜಿ ಕಾಮೆಟ್ ಇವಿ ಖರೀದಿಗೆ ಸಿಗುತ್ತಿದೆ. ಇದು ರೂ.7.98 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ಇದರಲ್ಲಿ 17.3 KWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಫುಲ್ ಚಾರ್ಜಿನಲ್ಲಿ 230 km ರೇಂಜ್ ಕೊಡಲಿದೆ.

Article Published On: Thursday, June 1, 2023, 16:16 [IST]
English summary
Fiat topolino comeback as micro electric car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+