ಈ ಕಾರುಗಳನ್ನು ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ 1000 ಕಿಮೀ ಕ್ರಮಿಸುತ್ತವೆ: ಟೊಯೊಟಾ, ಮಾರುತಿ ಬೆಸ್ಟ್ ಗುರು!

ಹೊಸ ಕಾರು ಖರೀದಿಸುವವರಿಗೆ 'ಮೈಲೇಜ್' ಎಂಬುದು ಪ್ರಮುಖ ವಿಚಾರವಾಗಿದೆ. ಮಾರುತಿ ಸುಜುಕಿ (Maruti Suzuki), ಟೊಯೊಟಾ (Toyota) ಕಂಪನಿ ವಾಹನಗಳು ಹೆಚ್ಚಿನ ಇಂಧನ ದಕ್ಷತೆ ಹೊಂದಿರುವುದರಿಂದ ಬಹುತೇಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಇಲ್ಲಿ ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ, 1000 ಕಿಮೀ ಕ್ರಮಿಸುವ 5 ಕಾರುಗಳ ಕುರಿತು ವಿವರಿಸಲಾಗಿದೆ.

ಮೊದಲಿಗೆ, ಟೊಯೋಟಾ ಹೈರೈಡರ್ (Toyota Hyryder) ಬಗ್ಗೆ ಮಾತನಾಡೋಣ. ಈ ಕಾರು, 45 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. ಸುಮಾರು 27.93 kmpl ಮೈಲೇಜ್ ನೀಡುತ್ತದೆ. ನೀವು ಹೈರೈಡರ್ ಅನ್ನು ಫುಲ್ ಟ್ಯಾಂಕ್ ಮಾಡಿದರೆ, 1257 ಕಿಮೀ ವರೆಗೆ ಸಂಚಾರಿಸಬಹುದು. ದೇಶೀಯ ಮಾರುಕಟ್ಟೆಯಲ್ಲಿ ಟೊಯೋಟಾ ಹೈರೈಡರ್, ರೂ.10.86 ಲಕ್ಷದಿಂದ ರೂ.19.99 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಕಾರುಗಳನ್ನು ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ 1000 ಕಿಮೀ ಕ್ರಮಿಸುತ್ತವೆ: ಟೊಯೊಟಾ, ಮಾರುತಿ ಬೆಸ್ಟ್ ಗುರು!

ಟೊಯೋಟಾ ಹೈರೈಡರ್ ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಅವುಗಳೆಂದರೆ, 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್. ಜೊತೆಗೆ 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿಯೂ ಸಿಗುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಯಮ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ (Maruti Suzuki Grand Vitara)ದ ಹೈಬ್ರಿಡ್ ಎಂಜಿನ್ ಪಡೆಡಿರುವ ರೂಪಾಂತರವು 27.93 kmpl ಮೈಲೇಜ್ ನೀಡುತ್ತದೆ. ಈ ಕಾರನ್ನು ಫುಲ್ ಟ್ಯಾಂಕ್ ಮಾಡಿದರೆ, 1257 ಕಿಲೋಮೀಟರ್ ತನಕ ಕ್ರಮಿಬಹುದು. ಪ್ರಸ್ತುತ, ಭಾರತದ ಕಾರು ಮಾರುಕಟ್ಟೆಯಲ್ಲಿ ಗ್ರಾಂಡ್ ವಿಟಾರಾ, ರೂ.10.70 ಲಕ್ಷದಿಂದ ರೂ.19.95 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ರೀ-ಬ್ಯಾಡ್ಜ್ ಆವೃತ್ತಿಯಾದ ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಎಂಪಿವಿ, 2.0 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 23.24 kmpl ಮೈಲೇಜ್ ನೀಡುತ್ತದೆ. ಇದು, 52 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಒಳಗೊಂಡಿದ್ದು, ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿದರೆ, 1208 ಕಿಲೋಮೀಟರ್ ವರೆಗೆ ಕ್ರಮಿಸಲಿದೆ.

ಈ ಮಾರುತಿ ಸುಜುಕಿ ಇನ್ವಿಕ್ಟೋ, ರೂ.24.79 ಲಕ್ಷದಿಂದ ರೂ.28.42 ಲಕ್ಷ ಬೆಲೆಯಲ್ಲಿ 7 ರಿಂದ 8 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ,7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌, ರೂಫ್ ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿ ಬಗ್ಗೆ ಮಾತನಾಡುವುದಾದರೆ, ಇದರ ಹೈಬ್ರಿಡ್ ಎಂಜಿನ್ ರೂಪಾಂತರಗಳು, 21.1 kmpl ಮೈಲೇಜ್ ನೀಡುತ್ತದೆ. ಈ ಕಾರನ್ನು ಫುಲ್ ಟ್ಯಾಂಕ್ ಮಾಡಿದರೆ, 1097 ಕಿಲೋಮೀಟರ್ ವರೆಗೆ ಓಡಿಸಬಹುದು. ಇನ್ನೋವಾ ಹೈಕ್ರಾಸ್ ಎಂಪಿವಿ ರೂ.18.82 ಲಕ್ಷದಿಂದ ರೂ.30.26 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಕೆಲವು ರೂಪಾಂತರಗಳನ್ನು ವಿತರಣೆ ಪಡೆಯಲು 15 ತಿಂಗಳು ಬೇಕಾಗುತ್ತದೆ.

ಕಡೆಯದಾಗಿ ಹೋಂಡಾ ಸಿಟಿ ಇ:ಹೆಚ್ಇವಿ (Honda City e:HEV) ಸೆಡಾನ್ ಬಗ್ಗೆ ಹೇಳುವುದಾದರೆ, ಈ ಕಾರಿನ ಪೆಟ್ರೋಲ್ ಎಂಜಿನ್, 27.13 kmpl ಮೈಲೇಜ್ ಕೊಡುತ್ತದೆ. 40 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಒಳಗೊಂಡಿದ್ದು, ಪೂರ್ತಿ ಇಂಧನವನ್ನು ತುಂಬಿದರೆ, 1085 ಕಿಲೋಮೀಟರ್ ಕ್ರಮಿಸುತ್ತದೆ. ಈ ಕಾರು, ರೂ.18.89 ಲಕ್ಷದಿಂದ ರೂ.20.39 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 12, 2023, 16:49 [IST]
English summary
Five car full tank go 1000 km maruti honda toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+