EV ಕಾರುಗಳ ಬ್ಯಾಟರಿ ಕಾಲಿಯಾದ್ರೆ ಚಿಂತೆಯೇ ಬೇಡ... Ford ಪವರ್‌ಬ್ಯಾಂಕ್ ತಂತ್ರಜ್ಞಾನಕ್ಕೆ ಸಲಾಂ

ಭಾರತೀಯ ಆಟೋ ಉತ್ಸಾಹಿಗಳಿಗೆ ಫೋರ್ಡ್ ಕಂಪನಿಯ ಬಗ್ಗೆ ಹೇಳಬೇಕಾಗಿಲ್ಲ. ಫೋರ್ಡ್‌ನವರ ಕಾರುಗಳು ದುಬಾರಿಯಾದ್ರು ಅವುಗಳ ಪರ್ಫಾಮೆನ್ಸ್ ಹಾಗೂ ಗುಣಮಟ್ಟಕ್ಕೆ ಹೆಸರಿಡಲು ಸಾಧ್ಯವಿಲ್ಲ. ತನ್ನದೇ ಜನಪ್ರಿಯತೆಯನ್ನು ಗ್ರಾಹಕರಲ್ಲಿ ಅಚ್ಚಳಿಯದೇ ಇಂದಿಗೂ ಉಳಿಸಿಕೊಂಡಿರುವ ಫೋರ್ಡ್ ಕಂಪನಿ, ಈಗ ಎಲೆಕ್ಟ್ರಿಕ್ ವಲಯದಲ್ಲೂ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದೆ.

ಹೊಸ ತಂತ್ರಜ್ಞಾನದೊಂದಿಗೆ ತನ್ನ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ರೇಂಜ್ ನೀಡಲು ಯೋಜಿಸಿದೆ. ಅಂದರೆ ಮಾರ್ಗಮಧ್ಯೆ ಬ್ಯಾಟರಿ ಕಾಲಿಯಾಗಿ ಚಾರ್ಜಿಂಗ್ ಮೂಲ ಸೌಕರ್ಯ ಸಿಗದಿದ್ದಾಗ ಹೆಚ್ಚುವರಿ ಚಾರ್ಜಿಂಗ್ ಅನ್ನು ತನ್ನ ರೂಫ್‌ಟಾಪ್‌ನಿಂದ ಪಡೆಯುವ ತಂತ್ರಜ್ಞಾನದಲ್ಲಿ ಫೋರ್ಡ್ ಕೆಲಸ ಮಾಡುತ್ತಿದೆ. ಈ ಸಂಬಂಧ ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಆಫೀಸ್ (USPTO)ಗೆ ರೂಫ್-ಮೌಂಟೆಡ್ ಬ್ಯಾಕ್‌ಅಪ್ ಬ್ಯಾಟರಿ ಪ್ಯಾಕ್‌ಗಾಗಿ ಪೇಟೆಂಟ್ ಕೂಡ ಸಲ್ಲಿಸಿದೆ.

ford-powerbank-technology

ಈ ತಂತ್ರಜ್ಞಾನವು ಭವಿಷ್ಯದ ಫೋರ್ಡ್ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜಿಂಗ್ ಸ್ಟೇಷನ್‌ಗಳ ಅವಶ್ಯಕತೆ ಇಲ್ಲದೇ ಕೇವಲ ಬಾಹ್ಯ ಶಕ್ತಿಯ ಮೂಲಕವೇ ಹೆಚ್ಚು ದೂರ ಓಡುವ ಸಾಮರ್ಥ್ಯವನ್ನು ನೀಡಲಿದೆ. ವಿವರವಾಗಿ ಹೇಳುವುದಾದರೆ ಇಂದೊಂದು ಪವರ್ ಬ್ಯಾಂಕ್ ಇದ್ದಂತೆ, ನಮ್ಮ ಮೊಬೈಲ್ ಫೋನ್‌ಗೆ ಚಾರ್ಜರ್ ಇಲ್ಲದಿದ್ದಾಗ ಹೇಗೆ ಪವರ್‌ಬ್ಯಾಂಕ್ ಬಳಸುತ್ತೇವೆಯೋ ಹಾಗೆ ರೂಫ್‌-ಮೌಂಟ್‌ನಲ್ಲಿರುವ ಪವರ್‌ ಬ್ಯಾಂಕ್ ಕಾರನ್ನು ಚಾರ್ಜ್‌ ಮಾಡುತ್ತದೆ.

ಉದಾಹರಣೆಗೆ ಈ ಕೆಳಗೆ ನೀಡಿರುವ ಚಿತ್ರವನ್ನು ಗಮನಿಸಿದರೆ ನಿಮಗೊಂದು ಐಡಿಯಾ ಬರಬಹುದು, ಈ ಚಿತ್ರವು ಲೈಟ್ನಿಂಗ್ ಓನರ್ ಫೋರಮ್ ಪೇಟೆಂಟ್ ಪಡೆದ ಚಿತ್ರದ ಜೊತೆಗೆ ಬಹಿರಂಗವಾಗಿದೆ. ಚಿತ್ರದಲ್ಲಿನ ಕಾರು ಫೋರ್ಡ್‌ ಕಂಪನಿಯ ಜನಪ್ರಿಯ ಮಾದರಿಯಾದ ಬ್ರಾಂಕೋ ತರಹದ ಎಸ್‌ಯುವಿಯಂತೆ ಕಾಣುತ್ತಿದ್ದು, ಅದರ ಮೇಲೆ ರೂಫ್ ರಾಕ್ ಹೊಂದಿದೆ. ಮತ್ತೇ ಅದರ ಮೇಲೆ ದೊಡ್ಡ ಪೆಟ್ಟಿಗೆಯನ್ನು ಇರಿಸಲಾಗಿದ್ದು, ಇದನ್ನೇ ಕಾರಿನ ಪವರ್‌ ಬ್ಯಾಂಕ್ ಎಂದು ಹೇಳಲಾಗುತ್ತಿದೆ.

ford-powerbank-technology

ಚಿತ್ರದಲ್ಲಿ ನೋಡಿದಂತೆ, ಬ್ಯಾಟರಿ ಸೆಲ್‌ಗಳನ್ನು ತಂಪಾಗಿಸಲು ರೂಫ್-ಮೇಲೆ ಬ್ಯಾಕ್‌ಅಪ್ ಬ್ಯಾಟರಿಯ ಎರಡೂ ಬದಿಗಳಲ್ಲಿ ಏರ್‌ವೆಂಟ್‌ಗಳನ್ನು ನೀಡಲಾಗಿದೆ. ಹಾಗೆಯೇ ಅದರೊಳಗಿನ ಉಷ್ಣ ಶಕ್ತಿಯ ಮಟ್ಟವನ್ನು ನಿರ್ವಹಿಸಲು ಮತ್ತು ಅದರ ಒಳಭಾಗವನ್ನು ತುಲನಾತ್ಮಕವಾಗಿ ತಂಪಾಗಿರಿಸಲು ಸಹಾಯ ಮಾಡಲು ಪಾಲಿಯುರೆಥೇನ್ ಫೋಮ್‌ನಿಂದ ಮುಚ್ಚಿದ ಮುಚ್ಚಳ ಮತ್ತು ಟ್ರೇ ಅನ್ನು ಒಳಗೊಂಡಿದೆ ಎಂದು ಪೇಟೆಂಟ್ ಅಪ್ಲಿಕೇಶನ್ ಚಿತ್ರ ತೋರಿಸುತ್ತದೆ.

ಈ ಪೆಟ್ಟಿಗೆಯನ್ನು ಸಂಪರ್ಕಿಸುತ್ತಾ ಚಾರ್ಜಿಂಗ್ ಕೇಬಲ್ ಬಾಕ್ಸ್‌ನ ಹಿಂಭಾಗದಿಂದ ಅಂಟಿಕೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು, ಇದರ ಮೂಲಕ ಕಾರಿನ ಬ್ಯಾಟರಿಯನ್ನು ರೀಚಾರ್ಜ್ ಮಾಡಲು ಬಳಸಬಹುದಾದ ಬ್ಯಾಕಪ್ ಬ್ಯಾಟರಿಯಂತೆ ಕಾಣುತ್ತಿದೆ. ಅಂದರೆ EV ಕಾರು ಮಾಲೀಕರು ಪ್ರವಾಸಕ್ಕೆ ಹೋಗುವಾಗ ಬ್ಯಾಕಪ್ ಬ್ಯಾಟರಿಯನ್ನು ಕೊಂಡೊಯ್ದರೆ ಚಾರ್ಜಿಂಗ್ ಸ್ಟೇಷನ್‌ಗಳ ಅಗತ್ಯವಿರುವುದಿಲ್ಲ ಎಂದು ಪೇಟೆಂಟ್ ಅಪ್ಲಿಕೇಶನ್‌ನಲ್ಲಿ ವರದಿಯಾಗಿದೆ.

ಫೋರ್ಡ್ ಈಗಾಗಲೇ ತನ್ನ ಆಲ್-ಎಲೆಕ್ಟ್ರಿಕ್ ಮುಸ್ತಾಂಗ್ ಮ್ಯಾಕ್-ಇ, F-150 ಲೈಟ್ನಿಂಗ್ ಮತ್ತು ಇ-ಟ್ರಾನ್ಸಿಟ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಎಲೆಕ್ಟ್ರಿಕ್ ವಲಯದಲ್ಲಿ ಎಲ್ಲಾ ತಯಾರಕರಂತಲ್ಲದೇ ಭಿನ್ನವಾಗಿರಲು ಈ ತಂತ್ರಜ್ಞಾನದೊಂದಿಗೆ ಮಾಲೀಕರಿಗೆ ಹೆಚ್ಚಿನ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ. ಈ ಸೌಲಭ್ಯದೊಂದಿಗೆ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಇಳಿದ್ರೆ ಹೊಸ ಕ್ರಾಂತಿ ಸೃಷ್ಟಿಯಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, June 12, 2023, 11:26 [IST]
English summary
Ford powerbank technology roof mounted backup battery pack
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+