EV Charging Stations ಸ್ಥಾಪನೆಗೆ 800 ಕೋಟಿ ರೂ. ಮಂಜೂರು ಮಾಡಿದ ಕೇಂದ್ರ ಸರ್ಕಾರ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅವಲಂಬನೆಯನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಈಗಿರುವ ಇಂಧನ ಮೇಲಿನ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡುವ ಮೂಲಕ ಮಾಲಿನ್ಯ ತಗ್ಗಿಸುವುದರ ಜೊತೆಗೆ ತೈಲ ರಾಷ್ಟ್ರಗಳ ಮೇಲಿನ ಭಾರತದ ಅವಲಂಬನೆ ಕೂಡ ಕಡಿಮೆ ಮಾಡುವುದು ಮುಖ್ಯ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳ ಜಾಲವನ್ನು ರಚಿಸಲು 800 ಕೋಟಿ ರೂ. ಯೋಜನೆಗೆ ಅನುಮತಿ ನೀಡಿದೆ. ಪ್ರಸ್ತುತ, ದೇಶಾದ್ಯಂತ ಸುಮಾರು 6,586 ಚಾರ್ಜಿಂಗ್ ಕೇಂದ್ರಗಳಿವೆ. ಇದೀಗ ಹೊಸ ಅನುದಾನದಿಂದ ಎಲೆಕ್ಟ್ರಿಕ್ 2 ವೀಲರ್‌ಗಳು, 4 ವೀಲರ್‌ಗಳು, ಲಘು ವಾಣಿಜ್ಯ ವಾಹನಗಳು ಮತ್ತು ಮಿನಿ ಬಸ್‌ ಗಳನ್ನು ಚಾರ್ಜ್ ಮಾಡಲು ಹೆಚ್ಚುವರಿ 7,432 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು.

EV Charging Stations ಸ್ಥಾಪನೆಗೆ 800 ಕೋಟಿ ರೂ. ಮಂಜೂರು ಮಾಡಿದ ಕೇಂದ್ರ ಸರ್ಕಾರ

ಈ ಬೃಹತ್ ಮಟ್ಟದ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗಾಗಿ ಕೇಂದ್ರ ಸರ್ಕಾರವು ಹೊಸ ಆಲೋಚನೆಯೊಂದಿಗೆ ಮುಂದೆ ಬಂದಿದೆ. ದೇಶದಲ್ಲಿನ ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್), ಭಾರತೀಯ ತೈಲ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಮೂಲಕ ಪಿಎಸ್‌ಯು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (ಒಎಂಸಿ) ದೇಶಾದ್ಯಂತ 7,432 ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಮಹೇಂದ್ರ ನಾಥ್ ಪಾಂಡೆ ಕಳೆದ ಮಂಗಳವಾರ ಪ್ರಕಟಿಸಿದ್ದಾರೆ.

ಚಾರ್ಜಿಂಗ್ ಸ್ಟೇಷನ್‌ಗಳು ನಗರಗಳಲ್ಲಿ ಹೆಚ್ಚಾಗಿ ಸ್ಥಾಪನೆಯಾಗಿವೆ, ಹಾಗೆಯೇ ಹೆದ್ದಾರಿಗಳಲ್ಲೂ ಸ್ಥಾಪನೆಯಾಗಿದ್ದರೂ ನಗರಗಳಿಗೆ ಹೋಲಿಸಿಕೊಂಡರೆ ಕಡಿಮೆ ಎಂದೇ ಹೇಳಬಹುದು. ಇವಿಗಳ ಖರೀದಿ ಹೆಚ್ಚಾಗಬೇಕಾದರೆ ಹೆದ್ದಾರಿಗಳಲ್ಲಿನ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ ಅನಿವಾರ್ಯವಾಗಿದೆ. ಹಾಗಾಗಿ ವೇಗದ ಮತ್ತು ನಿಧಾನಗತಿಯ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೆದ್ದಾರಿಗಳ ಉದ್ದಕ್ಕೂ ಅಸ್ತಿತ್ವದಲ್ಲಿರುವ OMC ಸೌಲಭ್ಯಗಳಲ್ಲಿ ಸ್ಥಾಪಿಸಲಾಗುವುದು. ಇದು ದೂರದ ಪ್ರಯಾಣ ಮಾಡುವ ಇವಿ ಪ್ರಯಾಣಿಕರಿಗೆ ಅತ್ಯಂತ ಮುಖ್ಯ ಪ್ರಯಾಣದ ಮಾರ್ಗವಾಗಿದೆ ಎಂದು ಸರ್ಕಾರ ನಂಬಿದೆ.

EV Charging Stations ಸ್ಥಾಪನೆಗೆ 800 ಕೋಟಿ ರೂ. ಮಂಜೂರು ಮಾಡಿದ ಕೇಂದ್ರ ಸರ್ಕಾರ

ಹಾಗೆಯೇ ಆಧ್ಯತೆ ಮೇರೆಗೆ ಭಾರತದಲ್ಲಿ ಅಗತ್ಯವಿರುವ ಎಲ್ಲಾ ಮೆಟ್ರೋ ನಗರಗಳು, MoHUA (ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ)ದಿಂದ ಸೂಚಿಸಲಾದ ಸ್ಮಾರ್ಟ್ ಸಿಟಿಗಳು, ದೇಶದಾದ್ಯಂತ ಗುಡ್ಡಗಾಡು ರಾಜ್ಯಗಳ ನಗರಗಳು ಮತ್ತು ದೇಶದಾದ್ಯಂತ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು. "ಇದು ಭಾರತದಲ್ಲಿನ EV ಮಾಲೀಕರಿಗೆ ತಡೆರಹಿತ ಮತ್ತು ಅನುಕೂಲಕರವಾದ ಚಾರ್ಜಿಂಗ್ ಅನುಭವವನ್ನು ಒದಗಿಸುತ್ತದೆ. ಹಾಗೆಯೇ ಭಯವಿಲ್ಲದೇ ದೂರದ ಪ್ರಯಾಣಕ್ಕೆ ಸಹಕರಿಸುತ್ತದೆ.

ಚಾರ್ಜಿಂಗ್ ಸ್ಟೇಷನ್‌ಗಳನ್ನು ವಿಶಾಲ ಹಾಗೂ ಅನುಕೂಲಕರವಾಗಿ ನೆಲೆಗೊಂಡಿರುವ OMC ಚಿಲ್ಲರೆ ಮಳಿಗೆಗಳ ವಾಹನ ಚಾಲಕರ ಪ್ರಯಾಣದ ಮಾರ್ಗದಲ್ಲಿ ಸ್ಥಾಪಿಸಲಾಗುವುದು. ಗ್ರಾಹಕರ ಸೌಕರ್ಯಕ್ಕಾಗಿ ಸುರಕ್ಷತೆ, ವಿಸ್ತೃತ ಕೆಲಸದ ಸಮಯ, ಉತ್ತಮ ಬೆಳಕು, ತುರ್ತು ಸಹಾಯ, ವಾಶ್‌ರೂಮ್‌ಗಳು, ಇತ್ಯಾದಿ ಸೌಲಭ್ಯಗಳನ್ನು ಸಹ ನೀಡುತ್ತದೆ "ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ಈ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಏರಿಕೆಯಾಗಲಿದೆ ಎಂದು ಹಲವರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

EV Charging Stations ಸ್ಥಾಪನೆಗೆ 800 ಕೋಟಿ ರೂ. ಮಂಜೂರು ಮಾಡಿದ ಕೇಂದ್ರ ಸರ್ಕಾರ

ಇನ್ನು ಪ್ರಸ್ತುತ ಎಲೆಕ್ಟ್ರಿಕ್ ವಾಹನ ರಂಗವು ಇಂಧನ ಚಾಲಿತ ವಾಹನಗಳಿಗೆ ಪೈಪೋಟಿ ನೀಡುವ ಹಂತಕ್ಕೆ ತುಂಬಾ ಹತ್ತಿರದಲ್ಲಿವೆ. ಈಗಾಗಲೇ ಪ್ರಮುಖ ವಾಹನ ತಯಾರಕರು ತಮ್ಮ ಇಂಧನ ಚಾಲಿತ ವಾಹನಗಳ ಜೊತೆಗೆ ತಲಾ ಒಂದೆರಡು ಎಲೆಕ್ಟ್ರಿಕ್ ಮಾದರಿಗಳನ್ನು ಮಾರಾಟದಲ್ಲಿ ಇರಿಸಿದ್ದಾರೆ. ಇದುವರೆಗೂ ಇವಿ ವಾಹನವನ್ನು ತರದ ಮಾರುತಿ ಕೂಡ ಕಳೆದ ಆಟೋ ಎಕ್ಸ್‌ಪೋದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸುತ್ತು. ಹಾಗಾಗಿ ಭವಿಷ್ಯವು ಇವಿ ವಾಹನಗಳದ್ದೇ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಕೂಡ ತುಂಬಾ ಮುಖ್ಯ. ಹಾಗಾಗಿ ಕೇಂದ್ರ ಸರ್ಕಾರ ಬೃಹತ್ ಚಾರ್ಜಿಂಗ್ ಕೇಂದ್ರಗಳ ಸ್ಥಾಪಿಸುವ ಯೋಜನೆಯೊಂದಿಗೆ ಮುಂದೆ ಬಂದಿದೆ. ಇದರ ಜೊತೆಗೆ ಇವಿ ತಯಾರಕ ಕಂಪನಿಗಳು ಕೂಡ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯಲ್ಲಿ ನಿರತವಾಗಿವೆ. ತಮ್ಮ ಗ್ರಾಹಕರ ಸೌಕರ್ಯ ಹಾಗೂ ತಮ್ಮ ವಾಹನಗಳು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ವೇಗದ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತಿವೆ.

Article Published On: Wednesday, March 29, 2023, 15:55 [IST]
English summary
Government sanctioned 800 crores for ev charging stations
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+