ಟ್ರಕ್‌ಗೆ ಅಡ್ಡ ಬಂದವೆಲ್ಲವೂ ಧ್ವಂಸ... ಹೊಸೂರಿನಲ್ಲಿ ಅಪಘಾತ: ಭಯಾನಕ ವಿಡಿಯೋ ವೈರಲ್ ಸರಣಿ

ವಿಶ್ವದಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗುವ ದೇಶಗಳಲ್ಲಿ ಭಾರತವೂ ಒಂದು. ಇಲ್ಲಿನ ರಸ್ತೆ ನಿಯಮಗಳನ್ನು ಪಾಲಿಸುವವರಿಗಿಂತ ಉಲ್ಲಂಘಿಸುವವರೇ ಹೆಚ್ಚು, ಇದೇ ಕಾರಣಕ್ಕೆ ಅಪಘಾತಗಳು ಹೆಚ್ಚಾಗಿ ನಡೆಯುತ್ತವೆ. ಉಳಿದಂತೆ ವಾಹನಲ್ಲಿನ ಸಮಸ್ಯೆ ಹಾಗೂ ನಿಯಂತ್ರಣ ಕಳೆದುಕೊಳ್ಳುವ ಮೂಲಕ ನಡೆಯುವ ಅಪಘಾತಗಳು ತೀರಾ ಕಡಿಮೆ.

ಇತ್ತೀಚೆಗೆ, ಟ್ರಕ್ ಘಟನೆಯ ಭಯಾನಕ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ, ವೇಗವಾಗಿ ಬಂದ ಬೃಹತ್ ಟ್ರಕ್‌ವೊಂದು ಮೋಟಾರ್‌ಸೈಕಲ್, ಕಾರು, ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವಿಡಿಯೋ ಎಂಥವರನ್ನು ಒಂದು ಕ್ಷಣ ಹುಬ್ಬೇರಿಸುವಂತೆ ಮಾಡುತ್ತದೆ. ಈ ಭಯಾನಕ ಘಟನೆಯ ವಿಡಿಯೋವನ್ನು ರಾಕೇಶ್ ಪ್ರಕಾಶ್ ಎಂಬಾತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಬೆಂಗಳೂರಿಗೆ ತೀರಾ ಹತ್ತಿರವಾಗಿರುವ ತಮಿಳುನಾಡಿನ ಕೈಗಾರಿಕಾ ನಗರವಾದ ಹೊಸೂರಿನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಟ್ರಕ್‌ಗೆ ಅಡ್ಡ ಬಂದವೆಲ್ಲವೂ ಧ್ವಂಸ... ಹೊಸೂರಿನಲ್ಲಿ ಅಪಘಾತ: ಭಯಾನಕ ವಿಡಿಯೋ ವೈರಲ್ ಸರಣಿ

ವಿಡಿಯೋದ ಆರಂಭದಲ್ಲಿ, ನಗರದ ಸಾಮಾನ್ಯ ಟ್ರಾಫಿಕ್ ಅವ್ಯವಸ್ಥೆಯೊಂದಿಗೆ ಎಲ್ಲವೂ ಸಾಮಾನ್ಯವಾಗಿ ಕಾಣುತ್ತದೆ. ಆದರೆ, ಕೆಲವೇ ಕ್ಷಣಗಳಲ್ಲಿ ಎಲ್ಲವೂ ಬದಲಾಗುತ್ತದೆ. ಚಲಿಸುತ್ತಿದ್ದ ಬಸ್ ಒಂದು ಡಿವೈಡರ್ ದಾಟಿ ಮುಂದೆ ಸಾಗುತ್ತದೆ, ಇದೇ ವೇಳೆ ಮತ್ತೊಂದು ಬದಿಯಿಂದ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ಟ್ರಕ್, ಹಾಗೆಯೇ ಹಿಂಭಾಗದಿಂದ ಟಾಟಾ ಇಂಡಿಕಾ ಮತ್ತು ಬೈಕ್‌ನಲ್ಲಿ ವ್ಯಕ್ತಿಯೊಬ್ಬರು ಡಿವೈಡರ್ ದಾಟುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಮಹೀಂದ್ರಾ ಟ್ರಕ್ ರಸ್ತೆಯಲ್ಲಿ ಅಡ್ಡ ಬಂದವನ್ನೆಲ್ಲಾ ಡಿಕ್ಕಿ ಹೊಡೆದಿದೆ.

ವೇಗವಾಗಿ ಬಂದ ಟ್ರಕ್ ಮೊದಲು ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ನುಜ್ಜುಗುಜ್ಜಾದ ಬಳಿಕ, ಟ್ರಕ್ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು ಮತ್ತಷ್ಟು ಅಸ್ಥಿರವಾಗುತ್ತದೆ. ನಂತರ ಅಲ್ಲೇ ನಿಂತಿದ್ದ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದು ಕೊನೆಯದಾಗಿ ಇಂಡಿಕಾ ಕಾರಿಗೆ ಗುದ್ದಿದೆ. ಅಪಘಾತದಲ್ಲಿ, ಟಾಟಾ ಇಂಡಿಕಾ 360 ಡಿಗ್ರಿ ರೌಂಡ್ ಹಾಕುವುದನ್ನು ಕಾಣಬಹುದು. ಟ್ರಕ್ ಅಂತಿಮವಾಗಿ ರಸ್ತೆಯ ಡಿವೈಡರ್‌ಗೆ ಹಾಕಿದ್ದ ಹಳಿಗಳನ್ನು ಗುದ್ದಿ ಮುನ್ನುಗ್ಗುತ್ತಾ ಬಂದು ನಿಂತಿತು.

ಟ್ರಕ್ ಸಂಪೂರ್ಣವಾಗಿ ನಿಲ್ಲುವ ಮೊದಲು ವೀಡಿಯೊ ರೆಕಾರ್ಡ್ ಆದಬಸ್‌ಗೆ ಕೊನೆಯದಾಗಿ ಡಿಕ್ಕಿ ಹೊಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಬಸ್ಸಿನಲ್ಲಿ ಅಳವಡಿಸಲಾಗಿದ್ದ ಸಣ್ಣ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋಯನ್ನು ಸೂಕ್ಷ್ಮವಾಗಿ ನೋಡಿದರೆ ದೇಶದ ಸರಾಸರಿ ನಗರದ ಸಾಮಾನ್ಯ ಟ್ರಾಫಿಕ್ ಅವ್ಯವಸ್ಥೆಯ ಬಗ್ಗೆ ನಾವು ಕೆಲವು ಪ್ರಮುಖ ವಿಷಯಗಳನ್ನು ಗಮನಿಸಬಹುದು. ಮೊದಲನೆಯದಾಗಿ, ವಿಡಿಯೋದಲ್ಲಿರುವ ಪ್ರತಿಯೊಂದು ವಾಹನವೂ ಕೂಡ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು.

ಹಲವಾರು ದ್ವಿಚಕ್ರವಾಹನ ಚಾಲಕರು ಹೆಲ್ಮೆಟ್ ಧರಿಸದೇ ರಸ್ತೆ ದಾಟುತ್ತಿರುವುದನ್ನು ನಾವು ಗಮನಿಸಬಹುದು. ಟ್ರಕ್ ಯಾವ ಕಾರಣದಿಂದ ಇಷ್ಟೆಲ್ಲಾ ಹಾನಿ ಮಾಡಿದೆ ಎಂಬುದರ ಕುರಿತು ತಿಳಿದುಬಂದಿಲ್ಲ. ಟ್ರಕ್‌ನ ಬ್ರೇಕ್‌ಗಳು ವಿಫಲವಾಗಿದೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ, ಆದರೆ ಸಾಮಾನ್ಯವಾಗಿ ಅತಿ ವೇಗವು ಯಾವಾಗಲೂ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮುಂಬೈ ಬಳಿಯ ವಾಶಿ ಟೋಲ್ ಪ್ಲಾಜಾದಲ್ಲಿ ಅತಿ ವೇಗದ ಡಂಪರ್ ಟ್ರಕ್ ಒಂಬತ್ತು ವಾಹನಗಳನ್ನು ಅಪಘಾತಕ್ಕೀಡು ಮಾಡಿತ್ತು.

ಹೀಗೆ ದೇಶದಲ್ಲಿ ನಿತ್ಯ ಒಂದಿಲ್ಲ ಒಂದು ಕಾರಣಕ್ಕೆ ಅಪಘಾಗಳು ನಡೆಯುತ್ತಲೇ ಇರುತ್ತವೆ. ಪ್ರಮುಖ ನಗರಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಹೆಚ್ಚಾಗಿ ಪಾಲನೆ ಮಾಡಲಾಗುತ್ತದೆ. ಆದರೆ ಹೊರವಲಯಗಳಲ್ಲಿ ಪೋಲಿಸರು ಹೆಚ್ಚಾಗಿ ಇಲ್ಲದಿರುವುದರಿಂದ ವಾಹನ ಚಾಲಕರು ಮನಬಂದಂತೆ ಡ್ರೈವಿಂಗ್ ಮಾಡುತ್ತಾರೆ ಎಂಬುದಕ್ಕೆ ಮೇಲಿನ ಈ ವಿಡಿಯೋ ಸಾಕ್ಷಿಯಾಗಿದೆ. ಒಟ್ಟಾರೆ ಈ ಅಪಘಾತವು ಭಾರೀ ನಷ್ಟವನ್ನು ಉಂಟುಮಾಡಿದ್ದು, ಟ್ರಕ್ ಹಾಗೂ ಡ್ರೈವರ್‌ನನ್ನು ವಶಕ್ಕೆ ಪಡೆಯಲಾಗಿದೆ. ಯಾವ ಕಾರಣಕ್ಕೆ ಟ್ರಕ್ ನಿಯಂತ್ರಣ ಕಳೆದುಕೊಂಡಿದೆ ಎಂಬುದರ ಮಾಹಿತಿ ಹೊರಬೀಳಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, March 27, 2023, 15:30 [IST]
English summary
Hosur deadly truck accident video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+