Just In
- 1 hr ago
ಟಾಟಾ ಪಂಚ್ ಎಂಜಿನ್ನಲ್ಲಿ ಭಾರೀ ಬದಲಾವಣೆ... ಇನ್ಮುಂದೆ ಕಡಿಮೆ ಕಂಪನ, ಒಳಗೆ ಪಿನ್ಡ್ರಾಪ್ ಸೈಲೆನ್ಸ್
- 1 hr ago
ಸ್ಮಾರ್ಟ್ ಕೀ ಫೀಚರ್ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಜನಪ್ರಿಯ ಹೋಂಡಾ ಆಕ್ಟಿವಾ ಸ್ಕೂಟರ್
- 1 hr ago
ಜ.26ಕ್ಕೆ 150 km ರೇಂಜ್ ನೀಡುವ ಸೆಲ್ಫ್ ಬ್ಯಾಲೆನ್ಸಿಂಗ್ BeiGo x4 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ
- 6 hrs ago
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
Don't Miss!
- Movies
ಬ್ಯಾನ್ ಮಾಡ್ತೇವೆ ಎಂದಿದ್ದ ಹೊಸಪೇಟೆಯಲ್ಲಿ ಹೇಗಿದೆ 'ಕ್ರಾಂತಿ' ಬುಕಿಂಗ್? ಸೋಲ್ಡ್ಔಟ್ ಆಯ್ತಾ, ಇಲ್ವಾ?
- Technology
ಏರ್ಟೆಲ್ ಗ್ರಾಹಕರಿಗೆ ಶಾಕ್; ಕರ್ನಾಟಕವೂ ಸೇರಿದಂತೆ 7 ರಾಜ್ಯಗಳಲ್ಲಿ ರೀಚಾರ್ಜ್ ದರ ಹೆಚ್ಚಳ!
- News
Republic Day Parade 2023: ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ: ಪ್ರಲ್ಹಾದ್ ಜೋಶಿ ಹೇಳಿದ್ದೇನು?
- Sports
ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೈಗೆಟುಕುವ ಬೆಲೆಯ ಹುಂಡೈ ಔರಾ, ಡಿಜೈರ್, ಅಮೇಜ್, ಟಿಗೋರ್ ಕಾರುಗಳು: ಯಾವುದು ಉತ್ತಮ!
ಭಾರತದಲ್ಲಿ ಗ್ರಾಹಕರು ಕೈಗೆಟುಕುವ ಬೆಲೆಯ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಅದರಂತೆ ವಿವಿಧ ವಾಹನ ತಯಾರಕ ಕಂಪನಿಗಳು ಅತ್ಯಾಕರ್ಷಕವಾಗಿರುವ ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಕೆಲದಿನಗಳ ಹಿಂದೆ ಹುಂಡೈ, ಔರಾ ಫೇಸ್‌ಲಿಫ್ಟ್ ಸಬ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.
ಈ ಹೊಸ ಹುಂಡೈ ಔರಾ ಫೇಸ್‌ಲಿಫ್ಟ್ ಸೆಡಾನ್ ಸುರಕ್ಷತೆ ದೃಷ್ಟಿಯಿಂದ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಹಾಗೂ ಟಾಟಾ ಟಿಗೋರ್ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ. ಈ ನಾಲ್ಕು ಕಾರುಗಳು ಬೆಲೆ, ಎಂಜಿನ್ ಕಾರ್ಯಕ್ಷಮತೆ ಹಾಗೂ ಸುತ್ತಳತೆ ಜೊತೆಗೆ ಯಾವೆಲ್ಲ ಪ್ರಮುಖಾಂಶಗಳನ್ನು ಹೊಂದಿವೆ ಎಂಬುದರ ಕುರಿತಂತೆ ಇಲ್ಲಿ ಹೋಲಿಕೆ ಮಾಡಲಾಗಿದೆ.
ಸುತ್ತಳತೆ:
ಹುಂಡೈ ಔರಾ ಫೇಸ್‌ಲಿಫ್ಟ್, 3995ಎಂಎಂ ಉದ್ದ, 1680ಎಂಎಂ ಅಗಲ, 1520ಎಂಎಂ ಎತ್ತರ ಹಾಗೂ 2450ಎಂಎಂ ವೀಲ್ ಬೇಸ್ ಅನ್ನು ಹೊಂದಿದ್ದು, ಮಾರುತಿ ಸುಜುಕಿ ಡಿಜೈರ್ 3995ಎಂಎಂ ಉದ್ದ, 1735 ಎಂಎಂ ಅಗಲ, 1515ಎಂಎಂ ಎತ್ತರ, ಹಾಗೂ 2450ಎಂಎಂ ವೀಲ್ ಬೇಸ್ ಪಡೆದಿದೆ. ಹೋಂಡಾ ಅಮೇಜ್ 3995ಎಂಎಂ ಉದ್ದ,1695 ಎಂಎಂ ಅಗಲ, 1498-1501 ಎತ್ತರ ಜೊತೆಗೆ 2470 ಎಂಎಂ ವೀಲ್ ಬೇಸ್ ಹೊಂದಿದೆ. ಟಾಟಾ ಟೀಗೂರ್ 3993 ಎಂಎಂ ಉದ್ದ, 1677ಎಂಎಂ ಅಗಲ, 1532ಎಂಎಂ ಎತ್ತರ ಹಾಗೂ 2450ಎಂಎಂ ವೀಲ್ ಬೇಸ್ ಪಡೆದಿದೆ.
ಮೂರು ಕಾರುಗಳಿಗೆ ಹೋಲಿಕೆ ಮಾಡಿದರೆ ಟಾಟಾ ಟೀಗೂರ್ ಉದ್ದದಲ್ಲಿ 2ಎಂಎಂ, ಜೊತೆಗೆ ಅಗಲದಲ್ಲೂ ಕಮ್ಮಿಯಿದೆ. ಆದರೆ, ಔರಾ ಫೇಸ್‌ಲಿಫ್ಟ್, ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಗಿಂತ ಟಾಟಾ ಟೀಗೂರ್ ಎತ್ತರವಾಗಿದೆ ಎಂದು ಹೇಳಬಹುದು. ಇನ್ನು ವೀಲ್ ಬೇಸ್ ಬಗ್ಗೆ ಹೇಳುವುದಾದರೆ, ಹೋಂಡಾ ಅಮೇಜ್ ಅತಿ ದೊಡ್ಡದಾದ 2470ಎಂಎಂ ವೀಲ್ ಬೇಸ್ ಹೊಂದಿದೆ. ಇದು ಇತರೇ ಮೂರು ಕಾರುಗಳಿಗಿಂತ 20ಎಂಎಂ ಹೆಚ್ಚಿದೆ ಎಂಬುದು ಗೊತ್ತಾಗುತ್ತದೆ.
ಎಂಜಿನ್ ಕಾರ್ಯಕ್ಷಮತೆ:
ಹೊಸ ಹುಂಡೈ ಔರಾ ಫೇಸ್‌ಲಿಫ್ಟ್ 1.2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಗರಿಷ್ಠ ಪವರ್, 114 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 MT (ಮಾನ್ಯುಯಲ್ ಟ್ರಾನ್ಸ್ಮಿಷನ್) ಅಥವಾ 5 AMT (ಆಟೋಮೆಟಿಕ್ ಮಾನ್ಯುಯಲ್ ಟ್ರಾನ್ಸ್ಮಿಷನ್) ಆಯ್ಕೆಯನ್ನು ಹೊಂದಿದೆ. ಮಾರುತಿ ಸುಜುಕಿ ಡಿಸೈರ್ 1.2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮೂಲಕ ಚಾಲಿತವಾಗಲಿದ್ದು, 90 PS ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 MT ಅಥವಾ 5 AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಹೋಂಡಾ ಅಮೇಜ್ 1.2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮೂಲಕವೇ ಕಾರ್ಯನಿರ್ವಹಿಸಲಿದ್ದು, 90 PS ಗರಿಷ್ಠ ಪವರ್, 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದು 5MT ಅಥವಾ CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಟಾಟಾ ಟೀಗೂರ್ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 86 PS ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 MT ಅಥವಾ 5 AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.
ಈ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಹೋಂಡಾ ಅಮೇಜ್ ಹಾಗೂ ಮಾರುತಿ ಸುಜುಕಿ ಡಿಸೈರ್ ಅತಿಹೆಚ್ಚು ಅಂದರೆ 90 PS ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಉಳಿದ ಎಲ್ಲ ಕಾರುಗಳು MT ಅಥವಾ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆತರೆ, ಅಮೇಜ್ ಕಾರು ಮಾತ್ರ CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಹುಂಡೈ ಔರಾ, ಮಾರುತಿ ಸುಜುಕಿ ಡಿಸೈರ್, ಟಾಟಾ ಟಿಗೋರ್ ಕಾರಿಗಳು CNG ಕಿಟ್ ಆಯ್ಕೆಯನ್ನು ಹೊಂದಿವೆ.
ಬೆಲೆ:
ಇವುಗಳು ಬಹುತೇಕ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಅಂದರೆ 10 ಲಕ್ಷದೊಳಗೆ ಖರೀದಿಗೆ ಸಿಗಲಿದೆ. ನೂತನ ಹುಂಡೈ ಔರಾ ಫೇಸ್‌ಲಿಫ್ಟ್ ರೂ.6.30 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.8.58 ಲಕ್ಷ (ಎಕ್ಸ್ ಶೋರೂಂ). ಇದೆ. ಟಾಟಾ ಟೀಗೂರ್ ಅತಿ ಕಡಿಮೆ ದರದಲ್ಲಿ ದೊರೆಯಲಿದ್ದು, ರೂ.6.10 ಲಕ್ಷ ಬೆಲೆಯನ್ನು ಹೊಂದಿದೆ. ಹೋಂಡಾ ಅಮೇಜ್ ದುಬಾರಿ ಕಾರಾಗಿದ್ದು, ರೂ.6.89 ಲಕ್ಷದಿಂದ ರೂ.9.48 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.