ಹ್ಯುಂಡೈ ಐ10 ನಿಯೋಸ್, ಟಾಟಾ ಟಿಯಾಗೊ, ಸ್ವಿಫ್ಟ್.. ಅಗ್ಗದ ಕಾರುಗಳು: ಖರೀದಿಗೆ ಯಾವುದು ಬೆಸ್ಟ್?

ದೇಶೀಯ ಮಾರುಕಟ್ಟೆಯಲ್ಲಿ 'ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್' ಕಾರು ಲಾಂಚ್ ಆಗಿದೆ. ಇದು ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಕಾರಾಗಿದ್ದು, ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೇವಲ 11,000 ರೂ. ಟೋಕನ್ ಮೊತ್ತ ಪಾವತಿಸಿ ಈ ಕಾರನ್ನು ಬುಕಿಂಗ್ ಮಾಡಬಹುದು.

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಈ ಜನವರಿಯಲ್ಲೇ ತನ್ನ ಬಹುನಿರೀಕ್ಷಿತ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದು ದೊಡ್ಡದಾದ ಗ್ರಿಲ್‌ನೊಂದಿಗೆ ಮುಂಭಾಗದಲ್ಲಿ ಮರು ವಿನ್ಯಾಸಗೊಳಿಸಿದ ಹೊಸ ಟೈಲ್ ಲೈಟ್‌ಗಳೊಂದಿಗೆ ಟೈಲ್‌ಗೇಟ್‌ನಂತಹ ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ಅಲ್ಲದೆ, ಪ್ರತಿಯೊಬ್ಬ ಖರೀದಿದಾರರ ಪ್ರಮುಖ ಆದ್ಯತೆಯಾಗಿರುವ ಸುರಕ್ಷತಾ ದೃಷ್ಟಿಯಿಂದಲೂ 6 ಏರ್‌ಬ್ಯಾಗ್‌ಗಳ ಜೊತೆಗೆ ನವೀನ ವೈಶಿಷ್ಟ್ಯಗಳನ್ನು ಪಡೆದಿದೆ ಎಂದು ಹೇಳಬಹುದು.

ಹ್ಯುಂಡೈ ಐ10 ನಿಯೋಸ್, ಟಿಯಾಗೊ, ಸ್ವಿಫ್ಟ್: ಖರೀದಿಗೆ ಯಾವುದು ಬೆಸ್ಟ್?

ನೂತನ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್' ಕಾರು, ಈಗಾಗಲೇ ಸಾಕಷ್ಟು ಖ್ಯಾತಿಗಳಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಟಾಟಾ ಟಿಯಾಗೊಗೆ ಕಾರಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೀವು ಈ ಮೂರು ಕಾರುಗಳಲ್ಲಿ ಯಾವುದಾದರೂ ಒಂದನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇಲ್ಲಿ ಹ್ಯುಂಡೈ ಐ10 ನಿಯೋಸ್, ಟಾಟಾ ಟಿಯಾಗೊ ಹಾಗೂ ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳ ಬೆಲೆ, ಎಂಜಿನ್ ಕಾರ್ಯಕ್ಷಮತೆ ಹಾಗೂ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೋಲಿಕೆ ಮಾಡಲಾಗಿದೆ.

ಸುತ್ತಳತೆ:
ಹೊಸ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, 3815 ಎಂಎಂ ಉದ್ದ, 1680 ಎಂಎಂ ಅಗಲ, 1520 ಎಂಎಂ ಎತ್ತರ ಮತ್ತು 2450 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಹೋಲಿಕೆ ಮಾಡಿದಾಗ ಅತಿ ಉದ್ದ ಹಾಗೂ ಅಗಲವಾಗಿರುವ ಹ್ಯಾಚ್‌ಬ್ಯಾಕ್ ಆಗಿದೆ. ಟಾಟಾ ಟಿಯಾಗೊ ಇಲ್ಲಿ ಅತಿ ಎತ್ತರವಾಗಿದೆ ಎಂದು ಹೇಳಬಹುದು. ಎತ್ತರಕ್ಕೆ ಸಂಬಂಧಿಸಿದಂತೆ ಸ್ವಿಫ್ಟ್ ಕೇವಲ 5 ಎಂಎಂ ಕಡಿಮೆಯಿದೆ. ಸ್ವಿಫ್ಟ್ ಮತ್ತು ಗ್ರಾಂಡ್ i10 ನಿಯೋಸ್ ಕಾರುಗಳು ಟಾಟಾ ಟಿಯಾಗೊಗಿಂತ 50 ಎಂಎಂ ಹೆಚ್ಚಿನ ಉದ್ದದ ವೀಲ್‌ಬೇಸ್ ಅನ್ನು ಹೊಂದಿವೆ.

ಹ್ಯುಂಡೈ ಐ10 ನಿಯೋಸ್, ಟಿಯಾಗೊ, ಸ್ವಿಫ್ಟ್: ಖರೀದಿಗೆ ಯಾವುದು ಬೆಸ್ಟ್?

ಪವರ್‌ಟ್ರೇನ್‌:
ಎಲ್ಲಾ ಮೂರು ಹ್ಯಾಚ್‌ಬ್ಯಾಕ್‌ಗಳು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿವೆ. ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್ 83 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಮ್ಯಾನುವಲ್ ಆಯ್ಕೆಯಲ್ಲಿ 20.7 kmpl ಮತ್ತು AMTಯಲ್ಲಿ 20.1 kmpl ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಹೇಳಬಹುದು.

ಟಾಟಾ ಟಿಯಾಗೊ ಒಟ್ಟು ಆರು ರೂಪಾಂತರಗಳನ್ನು ಖರೀದಿಗೆ ಲಭ್ಯವಿದೆ. ಅವುಗಳೆಂದರೆ, XE, XM, XT(O), XT, XZ ಹಾಗೂ XZ+. ಈ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು,5-ಸ್ವೀಡ್ ಮ್ಯಾನುವಲ್ ಮತ್ತು ಐಚ್ಛಿಕ 5-ಸ್ವೀಡ್ AMT ಗೇರ್‌ಬಾಕ್ಸ್‌ ಹೊಂದಿದೆ. CNG ಕಿಟ್ ಹೊಂದಿರುವ ಕಾರು, (5-ಸ್ವೀಡ್ ಮ್ಯಾನುವಲ್) 73 PS ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಹ್ಯುಂಡೈ ಐ10 ನಿಯೋಸ್, ಟಿಯಾಗೊ, ಸ್ವಿಫ್ಟ್: ಖರೀದಿಗೆ ಯಾವುದು ಬೆಸ್ಟ್?

ಮಾರುತಿ ಸ್ವಿಫ್ಟ್ 1.2-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 90 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (MT)ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ 1.2-ಲೀಟರ್ MT - 22.38kmpl, 1.2-ಲೀಟರ್ AMT - 22.56kmpl, CNG MT - 30.90km/kg ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಹೇಳಬಹುದು.

ಬೆಲೆ:
ಹ್ಯುಂಡೈ ಗ್ರಾಂಡ್ i10 ನಿಯೋಸ್ ಆರಂಭಿಕ ಬೆಲೆ ರೂ.5.68 ಲಕ್ಷದಿಂದ ಪ್ರಾರಂಭವಾಗಿ, ರೂ.8.46 ಲಕ್ಷವರೆಗೆ ಇರಬಹುದು. ಟಾಟಾ ಟಿಯಾಗೊ ಅತ್ಯಂತ ಕಡಿಮೆ ವೆಚ್ಚದ ಕಾರು ಆಗಿದ್ದು, ಇದರ ಬೆಲೆ ರೂ.5.45 ಲಕ್ಷದಿಂದ ರೂ.7.90 ಲಕ್ಷದವರೆಗೆ ಇದೆ. ಇನ್ನು, ಪ್ರತಿಯೊಬ್ಬರು ಇಷ್ಟಪಡುವ ಮಾರುತಿ ಸುಜುಕಿ ಸ್ವಿಫ್ಟ್ ಕೊಂಚ ಹೆಚ್ಚಿನ ಬೆಲೆಯನ್ನು ಹೊಂದಿದೆ. ಇದು ರೂ.5.92 ಲಕ್ಷದಿಂದ ರೂ.8.85 ಲಕ್ಷ (ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ)ದಲ್ಲಿ ಇದೆ.

ಸುರಕ್ಷತಾ ವೈಶಿಷ್ಟ್ಯಗಳು:
ಹ್ಯುಂಡೈ ಗ್ರಾಂಡ್ i10 ನಿಯೋಸ್ಎ ಬಿಎಸ್ ಮತ್ತುಇಬಿಡಿ. ಜೊತೆಗೆ ನಾಲ್ಕು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಟಾಪ್ - ಎಂಡ್ ಆವೃತ್ತಿಯು ಆರು ಏರ್‌ಬ್ಯಾಗ್‌ಗಳು, ISOFIX ಆಂಕಾರೇಜ್‌ಗಳು ಪಡೆದಿದೆ. ಟಾಟಾ ಟಿಯಾಗೊ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ಎಬಿಎಸ್ ಜೊತೆಗೆ ಇಬಿಡಿಯನ್ನು ಹೊಂದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.

Most Read Articles

Kannada
English summary
Hyundai i10 nios tata tiago maruti suzuki swift price specs comparison
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X