ಹೆದ್ದಾರಿಯಲ್ಲಿ ಇವನ್ನು ಗಮನಿಸದಿದ್ದರೇ ಜೈಲು ಗ್ಯಾರೆಂಟಿ... ಕಾರು ಚಾಲಕನಿಗಿರಲಿಲ್ಲ ಬೇರೆ ದಾರಿ!
ಹೆದ್ದಾರಿಗಳಲ್ಲಿ ಸಿಗುವ ಜಂಕ್ಷನ್‌ಗಳ ಬಳಿ ವಾಹನಗಳನ್ನು ನಿಧಾನಗೊಳಿಸಬೇಕು ಎಂದು ಪದೇ ಪದೇ ಹೇಳಲಾಗುತ್ತದೆ. ಆದ್ರೆ ಚಾಲಕರು ಯಾರೂ ಇರುವುದಿಲ್ಲ ಎಂಬ ಧೈರ್ಯದಲ್ಲಿ ವೇಗವಾಗಿ ಚಲಿಸುತ್ತಾರೆ. ಇದೇ ರೀತಿ ಊಹಿಸಿ ಹ್ಯುಂಡೈ ವೆನ್ಯೂ ಚಾಲಕ ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆದಿರುವ ದೃಷ್ಯಗಳು ವೈರಲ್ ಆಗಿದ್ದು, ನೋಡಲು ಭಯಾನಕವಾಗಿದೆ.
ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ದೃಷ್ಯಗಳು ಸೆರೆಯಾಗಿದ್ದು, ಸಿಂಗಲ್ ಲೇನ್‌ನಲ್ಲಿ ಬರುತ್ತಿದ್ದ ಹ್ಯುಂಡೈ ವೆನ್ಯೂ ಕಾರು ರಸ್ತೆ ಖಾಲಿರಯಿರುವುದರಿಂದ ವೇಗದಲ್ಲಿ ಬರುತ್ತಿತ್ತು. ಕಾರು ಜಂಕ್ಷನ್ ಹತ್ತಿರ ಬರುತ್ತಿದ್ದಂತೆ ಅತ್ತಕಡೆಯಿಂದ ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಇದ್ದಕ್ಕಿದ್ದಂತೆ ವೆನ್ಯೂ ಕಾರಿನ ಮಾರ್ಗಕ್ಕೆ ಅಡ್ಡವಾಗಿ ಬಂದಿದ್ದಾರೆ. ಕಾರು ಹೆಚ್ಚು ವೇಗದಲ್ಲಿದ್ದ ಕಾರಣ ನಿಯಂತ್ರಣ ಸಿಗದೆ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಈ ವಿಡಿಯೋವನ್ನು ಪರಿಶೀಲಿಸಿದರೆ ಇದರಲ್ಲಿ ಇಬ್ಬರದ್ದೂ ತಪ್ಪಿದೆ ಎಂದು ಹೇಳಬಹುದು. ಸ್ಕೂಟರ್‌ನಲ್ಲಿ ಬಂದ ಯುವಕರು ಹೆದ್ದಾರಿಯಲ್ಲಿ ಏಕಾಏಕಿ ಹಾಗೆ ಮಾರ್ಗವನ್ನು ಅಡ್ಡಿ ಪಡೆಸುವುದು ಸರಿಯಲ್ಲ. ಹಾಗೆಯೇ ಹ್ಯುಂಡೈ ವೆನ್ಯೂ ಚಾಲಕ ಜಂಕ್ಷನ್ ಬಳಿ ವಾಹನವನ್ನು ನಿಧಾನಗೊಳಿಸದೇ ಅದೇ ವೇಗವನ್ನು ಮುಂದುವರಿಸಿರುವುದು ಅಪಘಾತಕ್ಕೆ ಕಾರಣವಾಗಿದ್ದು, ಒಂದು ವೇಳೆ ನಿಧಾನವಾಗಿ ಬಂದಿದ್ದರೇ ಅಪಘಾತ ತಪ್ಪಿಸಬಹುದಿತ್ತು.
ವೆನ್ಯೂ ಡ್ರೈವರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರರು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಪಾದಚಾರಿ ಸುರಕ್ಷತಾ ಕ್ರಮಗಳಿಂದಾಗಿ, ಇಬ್ಬರೂ ಸವಾರರಿಗೆ ಏನೂ ಆಗಿಲ್ಲ ಎಂದು ತಿಳಿದುಬಂದಿದೆ. ಘಟನೆ ಕುರಿತು ನಮ್ಮ ಸಂಕ್ಷಿಪ್ತ ವಿವರಣೆ ಎಂದರೆ ಸ್ಕೂಟರ್ ಸವಾರ ಮತ್ತು ವೆನ್ಯೂ ಚಾಲಕ ಇಬ್ಬರೂ ಇಲ್ಲಿ ತಪ್ಪು ಮಾಡಿದ್ದಾರೆ.

ಮೊದಲಿಗೆ ಜಂಕ್ಷನ್ ಸಮೀಪಿಸುತ್ತಿದ್ದಂತೆ ಯಾರೇ ಆಗಲಿ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಧಾನಗೊಳಿಸಬೇಕು, ಆದ್ರೆ ಇಲ್ಲಿ ವಿರುದ್ದವಾಗಿ ಆಗಿದೆ. ಸ್ಕೂಟರ್ ಸವಾರ ಸ್ತೆಯ ಅರ್ಧಭಾಗ ಒಳಗೆ ನುಗ್ಗಿರುವುದು ಖಂಡಿತ ಆತನ ತಪ್ಪಾಗಿದೆ. ಹಾಗೆಯೇ ಜಂಕ್ಷನ್ ಸಮೀಪಿಸುತ್ತಿರುವಂತೆ ವೆನ್ಯೂ ಚಾಲಕ ಕಾರನ್ನು ನಿಧಾನಗೊಳಿಸಬೇಕಾಗಿತ್ತು. ಹೀಗಾಗದ ಕಾರಣ ಕಾರು ಚಾಲಕನಿಗೆ ಬ್ರೇಕ್ ಹಾಕಲು ಸಾಕಷ್ಟು ಸಮಯ ಸಿಗಲಿಲ್ಲ.
ಅಲ್ಲದೆ, ಹ್ಯುಂಡೈ ವೆನ್ಯೂ ರಾಂಗ್ ಲೇನ್ ನಲ್ಲಿತ್ತು. ಭಾರತದಲ್ಲಿ, ನಾವು ರಸ್ತೆಯ ಎಡಭಾಗದಲ್ಲಿ ಚಾಲನೆ ಮಾಡುತ್ತೇವೆ ಮತ್ತು ಹ್ಯುಂಡೈ ವೆನ್ಯೂ ಅದರ ಬಲಗಡೆಯ ಲೇನ್‌ನಲ್ಲಿತ್ತು. ಸ್ಕೂಟರ್ ಸವಾರನು ಕಾರು ರಾಂಗ್ ಲೇನ್ ನಿಂದ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಚಾಲಕನು ಮದ್ಯದ ಅಮಲಿನಲ್ಲಿದ್ದನು ಎಂದು ತಿಳಿದು ಬಂದಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಹೆದ್ದಾರಿಗಳ ಹಾದುಹೋಗುವಾಗ ಸಿಗುವ ಹಳ್ಳಿಗಳ ಜಂಕ್ಷನ್‌ಗಳ ಬಳಿ ಟ್ರಾಫಿಕ್ ನಿಯಮಗಳನ್ನು ಸ್ಥಳಿಯರು ಪಾಲಿಸುವುದಿಲ್ಲ. ಇದು ಹಲವರಿಗೆ ಅನಿಭವವಾಗಿರುತ್ತದೆ, ಸಾಮಾನ್ಯವಾಗಿ ಜಂಕ್ಷನ್ ಮುಗಿದ ಬಳಿಕ ಯೂಟರ್ನ್ ಮಾಡಬೇಕೆಂದರೆ ಹಲವು ಕಿ.ಮೀಗಳು ಪ್ರಯಾಣಿಸಬೇಕಾದ್ದರಿಂದ ಸ್ಥಳೀಯರು ಅದನ್ನು ತಪ್ಪಿಸಲು ವಿರುದ್ಧ ದಿಕ್ಕಿನಲ್ಲಿ ಬಂದು ಹೆದ್ದಾರಿ ಪ್ರಯಾಣಿಕರನ್ನು ಅಘಾತಗೊಳಿಸುತ್ತಾರೆ.
ಆದ್ದರಿಂದ ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಾಸಿಂಗ್ ಅನ್ನು ಸಮೀಪಿಸುವಾಗ ನಿಮ್ಮ ವೇಗವನ್ನು ಕಡಿಮೆ ಮಾಡುವುದು ಸೂಕ್ತ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications