ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಕಾರು! ಆಕ್ಸಿಡೆಂಟ್ ವೀಡಿಯೊ ಫುಲ್ ವೈರಲ್!
ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ಎತ್ತಿನ ಗಾಡಿಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ವೀಡಿಯೊ ಇದೀಗ ಸಾಕಷ್ಟು ವೈರಲ್ ಆಗಿದೆ. ಎತ್ತಿನ ಗಾಡಿಗೆ ಗುದ್ದಿದ ಕಾರನ್ನು ಹ್ಯುಂಡೈ ವೆನ್ಯೂ ಎಸ್‌ಯುವಿ ಎಂದು ಗುರುತಿಸಲಾಗಿದೆ. ಇನ್ನು ಎತ್ತಿನ ಗಾಡಿ ಕಾರು ಡಿಕ್ಕಿ ಹೊಡೆದ ದೃಶ್ಯ ಹಿಂದೆ ಬರುತ್ತಿದ್ದ ಕಾರಿನಲ್ಲಿ ಅಳವಡಿಸಲಾದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ.
ಹೌದು, ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ಎತ್ತಿನ ಗಾಡಿಗೆ ಡಿಕ್ಕಿಹೊಡೆದಿದೆ. ಈ ದೃಶ್ಯ ಇದೀಗ ಆನ್‌ಲೈನ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ. ವೇಗವಾಗಿ ಕಾರು ಚಲಾಯಿಸದೇ ಇದ್ದರೂ ಕೂಡ ಅಪಘಾತ ನಡೆದಿರುವುದು ಕುತೂಹಲಕಾರಿಯಾಗಿದೆ. ಹಾಗಾದ್ರೆ ವೀಡಿಯೊದಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತಮಿಳುನಾಡಿನ ತೆಂಕಾಶಿ - ರಾಜಪಾಳ್ಯಂ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಈ ರಸ್ತೆಯಲ್ಲಿ ಹ್ಯುಂಡೈ ವೆನ್ಯೂ ಎಸ್‌ಯುವಿ ಕಾರು ಚಲಿಸುತ್ತಿದ್ದು, ಮುಂದೆ ಹೋಗುತ್ತಿದ್ದ ಎತ್ತಿನ ಗಾಡಿಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎತ್ತಿನಗಾಡಿ ಚಿಂದಿಯಾಗಿದ್ದು ಕಾರು ಎರಡು ಭಾರಿ ಪಲ್ಟಿ ಹೊಡೆದಿದೆ. ಇದನ್ನು ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್ ಸೆರೆಹಿಡಿದಿದೆ.
ಈ ವೀಡಿಯೊದಲ್ಲಿ ಗಮನಿಸಬೇಕಾದ ಕುತೂಹಲಕಾರಿ ಸಂಗತಿಯೆಂದರೆ, ಅಪಘಾತಕ್ಕೆ ಒಳಗಾದ ಹ್ಯುಂಡೈ ವೆನ್ಯೂ ಕಾರು ವೇಗವಾಗಿ ಚಾಲನೆ ಮಾಡುತ್ತಿರಲಿಲ್ಲ ಅನ್ನೊದು. ಕಾರಿನ ಚಾಲಕ ಸುಮಾರು 50 ಕಿಮೀ / ಗಂ ವೇಗದಲ್ಲಿ ಚಲಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಆದರೆ ಹ್ಯುಂಡೈ ವೆನ್ಯೂ ಸಣ್ಣ ಸೇತುವೆಯನ್ನು ದಾಟುತ್ತಿದ್ದಂತೆ, ಮುಂದೆ ನಿಧಾನವಾಗಿ ಚಲಿಸುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದೆ.
ಇನ್ನು ಈ ಅಪಘಾತಕ್ಕೆ ಮುಖ್ಯ ಕಾರಣ ಎಂದರೆ ಕಾರು ಚಾಲಕ ಎತ್ತಿನ ಬಂಡಿ ಮುಂದೆ ಸಾಗುತ್ತಿದ್ದರೂ ಬ್ರೇಕ್ ಹಾಕದೆ ಇರುವುದೇ ಕಾರಣ ಎನ್ನಲಾಗಿದೆ. ಅಂದರೆ ಕಾರಿನ ಚಾಲಕ ತನ್ನ ಮುಂದೆ ಎತ್ತಿನ ಗಾಡಿ ಹೋಗುತ್ತಿರುವುದನ್ನು ಗುರುತಿಸುವಲ್ಲಿ ವಿಫಲವಾಗಿದ್ದಾನೆ ಎನ್ನಲಾಗಿದೆ. ಇಲ್ಲವೇ ಕಾರಿನ ಚಾಲಕ ಏಕಾಏಕಿ ಎತ್ತಿನ ಗಾಡಿಯನ್ನು ನೋಡಿ ವಿಚಲಿತನಾಗಿರಬಹುದೆಂದು ಹೇಳಲಾಗಿದೆ.
ಸದ್ಯ ಹ್ಯುಂಡೈ ವೆನ್ಯೂ ಡ್ಯಾಶ್‌ಕ್ಯಾಮ್ ಫೂಟೇಜ್ ಅನ್ನು ವಿಶ್ಲೇಷಿಸಿದರೆ, ಅಪಘಾತದಲ್ಲಿ ಭಾಗಿಯಾಗಿರುವ ಹ್ಯುಂಡೈ ವೆನ್ಯೂ ಎಸ್‌ಯುವಿಯ ಚಾಲಕನ ಗೊಂದಲದ ಕಾರಣಕ್ಕೆ ತನ್ನ ಮುಂದಿನ ಎತ್ತಿನ ಗಾಡಿಯನ್ನು ಗುರುತಿಸಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಕಾರಿನಲ್ಲಿ ADAS ಇದ್ದರೆ ಜೀವ ಉಳಿಸಬಹುದು ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ.
ಈ ಒಂದು ವೀಡಿಯೊವನ್ನು ನೀವು ಗಮನಿಸಿದರೆ ರಸ್ತೆಗಳಲ್ಲಿ ಚಲಿಸುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಅತ್ಗತ್ಯವಾಗಿದೆ. ಅದರಲ್ಲೂ ವಿವಿಧ ರಸ್ತೆಗಳಲ್ಲಿ ನಿಗದಿತ ವೇಗದ ಮಿತಿಗಳಲ್ಲಿ ಚಾಲನೆ ಮಾಡಿರಿ. ವೇಗ ರೋಮಾಂಚನಕಾರಿ. ಆದರೆ, ನಮ್ಮ ಪ್ರಾಣಕ್ಕೆ ಕಂಟಕವಾಗಬಹುದು. ಇದರಿಂದ ನಮ್ಮ ಕುಟುಂಬಗಳು ಅನಾಥವಾಗಬಹುದು ಎಂಬುದನ್ನು ಯಾವಾಗಲೂ ನೆನಪಿಡಿ. ಬೈಸಿಕಲ್, ಬೈಕ್ ಹಾಗೂ ಕಾರುಗಳನ್ನು ಚಾಲನೆ ಮಾಡುವ ಮೊದಲು ಯಾವಾಗಲೂ ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತು ಇತರೆ ಸುರಕ್ಷತಾ ಸಾಧನಗಳನ್ನು ಬಳಕೆ ಮಾಡುವುದನ್ನು ಎಂದಿಗೂ ಮರೆಯದಿರಿ.
ಮದ್ಯಪಾನ ಮಾಡಿ ಎಂದಿಗೂ ವಾಹನಗಳನ್ನು ಚಲಾಯಿಸಬೇಡಿ. ಕೇವಲ ಎರಡು ಪೆಗ್ ಹಾಕಿದ ನಂತರ ನೀವು ಪೆನ್ನು ಸರಿಯಾಗಿ ಹಿಡಿಯಲು ಸಾಧ್ಯವಿಲ್ಲ. ಡ್ರೈವಿಂಗ್ ವೀಲ್ ಹಿಡಿದುಕೊಳ್ಳಲು ಸಾಧ್ಯವೇ... ನಿಮ್ಮನ್ನು ನೀವೇ ಪ್ರಶ್ನೆಮಾಡಿಕೊಳ್ಳಿ. ಅಲ್ಲದೆ, ಚಾಲನೆ ಮಾಡುವಾಗ ಮೊಬೈಲ್ ಫೋನ್ ಅಥವಾ ಇಯರ್ ಫೋನ್ ಅನ್ನು ಎಂದಿಗೂ ಬಳಸಬೇಡಿ. ರಸ್ತೆಯಲ್ಲಿ ಮೊಬೈಲ್ ಕರೆ ನಿಮ್ಮ ಜೀವನದ ಕೊನೆಯ ಕರೆ' ಆಗಬಹುದು ಎಂದು ಯಾವಾಗಲೂ ನೆನಪಿಡಿ.
ನೀವು ರಸ್ತೆಗೆ ಬರುವ ಮೊದಲು ಟ್ರಾಫಿಕ್ ಚಿಹ್ನೆಗಳು, ಸಿಗ್ನಲ್‌ಗಳು ಮತ್ತು ಸಂಚಾರ ಸುರಕ್ಷತೆ ನಿಯಮಗಳನ್ನು ತಿಳಿದುಕೊಳ್ಳಿ. 'ರಸ್ತೆ ಸುರಕ್ಷತಾ ನಿಯಮಗಳು ಅಪಘಾತಗಳನ್ನು ತಪ್ಪಿಸಲು ಉತ್ತಮ ಸಾಧನಗಳಾಗಿವೆ' ದಿರ್ಘವಧಿಯಾಗಿ ವಾಹನಗಳನ್ನು ಡ್ರೈವ್ ಮಾಡಬೇಡಿರಿ. ಪ್ರತಿ 2 ಗಂಟೆಗಳ ನಿರಂತರ ಚಾಲನೆಯ ನಂತರ ಕೊಂಚ ವಿಶ್ರಾಂತಿ ತೆಗೆದುಕೊಳ್ಳಲು ಪ್ರಯ್ನತ್ನಿಸಿ. 'ಮನುಷ್ಯ ಮನುಷ್ಯನೇ ಹೊರತು ಯಾವುದೇ ಯಂತ್ರವಲ್ಲ' ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ.


Click it and Unblock the Notifications