ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ... ಹೇಗಿವೆ ಗೊತ್ತಾ ಹೈಟೆಕ್ ಸೌಲಭ್ಯಗಳು!

ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ನಮ್ಮ ಬೆಂಗಳೂರು ಕೂಡ ಒಂದು. ನಿತ್ಯ ಲಕ್ಷಾಂತರ ಜನರು ಬಿಎಂಟಿಸಿ, ಮೆಟ್ರೋ ಸಾರಿಗೆಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕೂಡ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿಗೆ ಹೈಟೆಕ್ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಂತ ಹಂತವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಇಳಿಸುತ್ತಿದ್ದಾರೆ. ಇದೀಗ ಸ್ಮಾರ್ಟ್‌ ಬಸ್‌ಸ್ಟಾಪ್ ಅನ್ನು ಕೂಡ ಪರಿಚಯಿಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿಯಲ್ಲಿ (ELCITA) ಸ್ಮಾರ್ಟ್ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಮತ್ತು ಬೆಂಗಳೂರಿನ ಸಂಚಾರ ವಿಶೇಷ ಪೊಲೀಸ್ ಆಯುಕ್ತರಾದ ಡಾ. ಎಂ.ಎ ಸಲೀಂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಇನ್ಫೋಸಿಸ್ ಅವೆನ್ಯೂ ಬಳಿಯ ವಿಮಾನ ನಿಲ್ದಾಣದ ಬಸ್ ಟರ್ಮಿನಸ್‌ನಲ್ಲಿ ಹೊಸ ಹೈಟೆಕ್ ಸ್ಮಾರ್ಟ್ ಬಸ್‌ ಸ್ಟಾಪ್ ಅನ್ನು ನಿರ್ಮಿಸಲಾಗಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ... ಹೇಗಿವೆ ಗೊತ್ತಾ ಹೈಟೆಕ್ ಸೌಲಭ್ಯಗಳು!

ಈ ಹೊಸ ಬಸ್ ಸ್ಟಾಪ್ ಸ್ಮಾರ್ಟ್‌ ಫೋನ್ ಮತ್ತು ಲ್ಯಾಪ್‌ ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳು, ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಮೆಷಿನ್ ಮತ್ತು ಸ್ಮಾರ್ಟ್ ಡಸ್ಟ್‌ಬಿನ್‌ಗಳಂತಹ ಹಿಂದೆಂದೂ ನೋಡಿರದ ಅನೇಕ ಸೌಲಭ್ಯಗಳನ್ನು ಹೊಂದಿದೆ. ಇನ್ನು ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿರುವ ವೆಂಡಿಂಗ್ ಮೆಷಿನ್‌ಗಳಿಂದಲೂ ಹಣ ಪಾವತಿಸಿ ಪ್ರಯಾಣಿಕರು ತಿಂಡಿ ತಿನಿಸುಗಳನ್ನು ಪಡೆಯಬಹುದು. ಇಂತಹ ಬಸ್‌ಸ್ಟಾಪ್‌ಗಳು ಮುಂದಿನ ದಿನಗಳಲ್ಲಿ ಬೆಂಗಳೂರಿನ ಇನ್ನೂ ಹೆಚ್ಚು ಕಡೆಗಳಲ್ಲಿ ನಿರ್ಮಾಣಗೊಳ್ಳಲಿವೆ ಎಂದು ಹೇಳಲಾಗಿದೆ.

ಇಲ್ಲಿನ ಸ್ಮಾರ್ಟ್ ಡಸ್ಟ್‌ಬಿನ್‌ಗಳು ತಮ್ಮ ಒಟ್ಟಾರೆ ಸಾಮರ್ಥ್ಯದ ಶೇ 70 ರಷ್ಟು ತ್ಯಾಜ್ಯವನ್ನು ತಲುಪಿದಾಗ ಅದನ್ನು ತೆರವುಗೊಳಿಸಲು ಎಚ್ಚರಿಕೆಯನ್ನು ಕಳುಹಿಸುತ್ತವೆ. ಹೆಚ್ಚುವರಿಯಾಗಿ, ಸ್ಮಾರ್ಟ್ ಬಸ್ ನಿಲ್ದಾಣವು ಮಾರ್ಗ ನಕ್ಷೆಯೊಂದಿಗೆ (Route map) ಬಸ್ ಸಮಯದ ಬಗ್ಗೆ ನೈಜ ಸಮಯದ ಮಾಹಿತಿಯನ್ನು ತೋರಿಸುತ್ತದೆ. 'ಸ್ಮಾರ್ಟ್' ಆಗಿರುವುದಲ್ಲದೇ ಹೊಸದಾಗಿ ಉದ್ಘಾಟನೆಗೊಂಡ ಬಸ್ ನಿಲ್ದಾಣವು 'ಗ್ರೀನ್' ಆಗಿದೆ, ಏಕೆಂದರೆ ಸಮೀಪದಲ್ಲೇ ಸಣ್ಣ ಉದ್ಯಾನವನ್ನು ಕೂಡ ಸ್ಥಾಪಿಸಿರುವುದು ವಿಶೇಷ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ... ಹೇಗಿವೆ ಗೊತ್ತಾ ಹೈಟೆಕ್ ಸೌಲಭ್ಯಗಳು!

ಸ್ಮಾರ್ಟ್ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭವನ್ನು ELCITA ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇಂದು ನಮ್ಮ ಇ-ನಗರದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಯುಗ ಆರಂಭವಾಗಿದೆ. ಶ್ರೀಮತಿ @gsatyavathi IAS (ವ್ಯವಸ್ಥಾಪಕ ನಿರ್ದೇಶಕರು, BMTC), ಮತ್ತು @SplCPTraffic IPS ವಿಶೇಷ ಪೊಲೀಸ್ ಆಯುಕ್ತರು (ಟ್ರಾಫಿಕ್), ಬೆಂಗಳೂರು ನಗರ, ಮೊದಲ ಸ್ಮಾರ್ಟ್ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು ಎಂದು ELCITA ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಬಸ್‌ಗಳು ಒಂದೆರಡು ಸಿಸಿಟಿವಿ ಕ್ಯಾಮೆರಾಗಳನ್ನು ಮತ್ತು ಎರಡು-ಮಾರ್ಗದ SOS ವ್ಯವಸ್ಥೆಯನ್ನು ಪ್ರಮಾಣಿತ ವೈಶಿಷ್ಟ್ಯಗಳಾಗಿ ಪಡೆಯುತ್ತವೆ.

KSRTC ನಿಂದ 15 "ಅಂಬಾರಿ ಉತ್ಸವ" ಹೈಟೆಕ್ ಬಸ್‌ಗಳು:
ಫೆ.21 ರಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು 50 ವೋಲ್ವೋ ಸ್ಲೀಪರ್ ಬಸ್‌ಗಳ ಪೈಕಿ ಮೊದಲ ಹಂತವಾಗಿ 15 "ಅಂಬಾರಿ ಉತ್ಸವ" ಸ್ಲೀಪರ್ ವಾಹನಗಳನ್ನು ಲೋಕಾರ್ಪಣೆ ಮಾಡಿತ್ತು. ಈ ಬಸ್‌ಗಳು ಹೈಟೆಕ್ ತಂತ್ರಜ್ಞಾನ, ಉತ್ತಮ ವಿನ್ಯಾಸ, ಐಷಾರಾಮಿ ಒಳಾಂಗಣ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ವೋಲ್ವೋ ಬಿಎಸ್- VI 9600s ಮಾದರಿಯ ಮಲ್ಟಿ ಆಕ್ಸಲ್ "ಅಂಬಾರಿ ಉತ್ಸವ" ಸ್ಲೀಪರ್ ವಾಹನಗಳು ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಿವೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ ಉದ್ಘಾಟನೆ... ಹೇಗಿವೆ ಗೊತ್ತಾ ಹೈಟೆಕ್ ಸೌಲಭ್ಯಗಳು!

ಹಂತ - ಹಂತವಾಗಿ 350 ಎಲೆಕ್ಟ್ರಿಕ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ ಎಂದು ಇಲಾಖೆ ತಿಳಿಸಿದೆ. ಬಸ್‌ನಲ್ಲಿ 40 ಆಸನಗಳ 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್-ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವವನ್ನು ನೀಡುತ್ತದೆ. KSRTC ವೋಲ್ವೋ- 9600s ವಾಹನವು ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟವನ್ನು ಒಳಗೊಂಡ ಬಲಿಷ್ಠ ಸ್ಕ್ಯಾಂಡಿನೇವಿಯನ್ ವಿನ್ಯಾಸದಲ್ಲಿ ರೂಪಗೊಂಡಿರುವ ವಾಹನವಾಗಿದೆ.

KSRTC ವೋಲ್ವೋ-9600s ಮಾದರಿಯ ವಾಹನದ ಮುಂಭಾಗವು ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿದ್ದು, ವೇಗದ ಕಾರ್ಯಾಚರಣೆಗಳಲ್ಲಿ ಗಾಳಿಯ ಎಳೆತವನ್ನು ಕಡಿಮೆ ಮಾಡಲು ಪೂರಕವಾಗಿ, ಇಂಧನವನ್ನು ಉಳಿತಾಯ ಮಾಡುತ್ತದೆ. ಹೊಸದಾಗಿ ವಿನ್ಯಾಸಗೊಳಿಸಿದ ಪನೊರಮಿಕ್ ವಿಂಡೋಗಳನ್ನು ಹೊಂದಿರುವ KSRTC ವೋಲ್ವೋ- 9600s ವಾಹನವು ಪ್ರಯಾಣಿಕರಿಗೆ ಪನಾರಮಿಕ್ ನೋಟವನ್ನು ನೀಡುತ್ತದೆ. ವಾಹನವು ಉತ್ತಮ ಕಾರ್ಯಕ್ಷಮತೆ ಜೊತೆಗೆ ಐಷಾರಾಮಿ ಗುಣಗಳನ್ನು ಹೊಂದಿದ್ದು, ಉತ್ತಮ ಪ್ರಯಾಣದ ಅನುಭವ ನೀಡುತ್ತದೆ.

Article Published On: Wednesday, March 1, 2023, 12:57 [IST]
English summary
Inauguration of smart bus station in electronic city
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+