Driving License: ಈ ಎಲ್ಲಾ ದೇಶಗಳು ಭಾರತೀಯ ಚಾಲನಾ ಪರವಾನಗಿ ಅನುಮತಿಸುತ್ತವೆ ನೋಡಿ...

ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯ ಪ್ರಯಾಣ ಸೌಲಭ್ಯಗಳನ್ನು ಬಳಸಬೇಕಾಗುತ್ತದೆ. ಆದರೆ, ಬಾಡಿಗೆಗೆ ಕಾರು ಪಡೆದು ಓಡಿಸಬೇಕೆಂದರೆ ಡ್ರೈವಿಂಗ್ ಲೈಸೆನ್ಸ್ ಇರಬೇಕಲ್ಲವೇ? ಹಾಗಾಗಿ ನೀವು ಈ ದೇಶಗಳಿಗೆ ಹೋದಲ್ಲಿ ನಮ್ಮ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಬಳಸಿಕೊಂಡು ವಾಹನ ಚಾಲನೆ ಮಾಡಬಹುದು. ಅಂತಹ ಪ್ರಮುಖ ದೇಶಗಳನ್ನು ಇಲ್ಲಿ ನೋಡೋಣ.

ನ್ಯೂಜಿಲ್ಯಾಂಡ್: ಒಂದು ವರ್ಷದವರೆಗೆ ಭಾರತೀಯ ಚಾಲನಾ ಪರವಾನಗಿಯೊಂದಿಗೆ ನ್ಯೂಜಿಲೆಂಡ್‌ನಲ್ಲಿ ವಾಹನಗಳನ್ನು ಓಡಿಸಬಹುದು. ಈ ಗಡುವಿನ ನಂತರ, ಸ್ಥಳೀಯ ಪರವಾನಗಿ ಅಥವಾ ಅಂತರರಾಷ್ಟ್ರೀಯ ಪರವಾನಗಿಯನ್ನು ಪಡೆಯಬೇಕು. ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು. ಡಿಎಲ್ ವಿವರಗಳು ಇಂಗ್ಲಿಷ್‌ನಲ್ಲಿರಬೇಕು ಅಥವಾ ನೀವು ನ್ಯೂಜಿಲ್ಯಾಂಡ್ ಟ್ರಾನ್ಸ್‌ಪೋರ್ಟ್ ಏಜೆನ್ಸಿಯಿಂದ ಇಂಗ್ಲಿಷ್ ಅನುವಾದವನ್ನು ಪಡೆಯಬಹುದು.

indian-driving-license-allowed-these-countries-australia-new-zealand

ಜರ್ಮನಿ ಹಾಗೂ ಯುಕೆ: ನಮ್ಮ ಭಾರತೀಯ ಪರವಾನಗಿ ಜರ್ಮನಿಯಲ್ಲಿ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಇದಲ್ಲದೆ, ಕಾರ್ಡ್‌ನಲ್ಲಿರುವ ವಿವರಗಳನ್ನು ಜರ್ಮನಿಗೆ ಅನುವಾದಿಸಿರಬೇಕು. ಹಾಗೆಯೇ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಯುಕೆಯಲ್ಲಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಆದರೆ ಅಲ್ಲಿನ ಸ್ಥಳೀಯ ಸರ್ಕಾರವು ಕೆಲವು ರೀತಿಯ ಕಾರುಗಳು ಮತ್ತು ವಾಹನಗಳ ಮಾತ್ರ ಓಡಿಸಲು ಒಪ್ಪಿಕೊಳ್ಳುತ್ತದೆ.

ಅಮೆರಿಕಾ: ಅಮೆರಿಕಾದ ಹಲವು ರಾಜ್ಯಗಳಲ್ಲಿ, ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ವ್ಯಕ್ತಿಯು ಕಾರನ್ನು ಬಾಡಿಗೆಗೆ ತೆಗೆದುಕೊಂಡು ಓಡಿಸಬಹುದು. ಆದರೆ ಪರವಾನಗಿಯ ವಿವರಗಳು ಇಂಗ್ಲಿಷ್‌ನಲ್ಲಿರಬೇಕು. ಅಲ್ಲದೆ ಇದು ನಮ್ಮ ದೇಶದಲ್ಲಿ ಮಾನ್ಯವಾಗಿರಬೇಕು. ಜೊತೆಗೆ ನೀವು ಅಮೆರಿಕಾ ಯಾವಾಗ ಪ್ರವೇಶಿಸಿದ್ದು ಸೇರಿದಂತೆ ಇತರ ವಿವರಗಳೊಂದಿಗೆ I-94 ಫಾರ್ಮ್ ಅನ್ನು ಸಹ ಒಯ್ಯಬೇಕು. ಇವೆಲ್ಲ ಸರಿಯಾಗಿದ್ದರೆ ನಮ್ಮ ಲೈಸೆನ್ಸ್ ಹಿಡಿದು ಒಂದು ವರ್ಷ ಅಮೆರಿಕದಲ್ಲಿ ಓಡಾಡಬಹುದು.

indian-driving-license-allowed-these-countries-australia-new-zealand

ಭೂತಾನ್: ಭಾರತವು ಭೂತಾನ್‌ನೊಂದಿಗೆ ಅತ್ಯಂತ ಸೌಹಾರ್ದಯುತ ಸಂಬಂಧವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಸ್ವಾಭಾವಿಕವಾಗಿಯೇ ಆ ದೇಶವು ಭಾರತೀಯರಿಗೆ ಇಲ್ಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ ವಾಹನಗಳನ್ನು ಓಡಿಸಲು ಅನುವು ಮಾಡಿಕೊಡುತ್ತದೆ. ಪಾಸ್‌ಪೋರ್ಟ್, ವೋಟರ್ ಐಡಿ ಮುಂತಾದ ದಾಖಲೆಗಳನ್ನು ಜೊತೆಯಲ್ಲಿ ಇಡಬೇಕು. ಆದರೆ ಭೂತಾನ್‌ನಲ್ಲಿ ಚಾಲನೆ ಮಾಡಲು ಸಾಕಷ್ಟು ಅನುಭವದ ಅಗತ್ಯವಿದೆ.

ಆಸ್ಟ್ರೇಲಿಯಾ: ಇಲ್ಲಿನ ಕೆಲವು ಭಾಗಗಳಲ್ಲಿ ಭಾರತೀಯ ಚಾಲನಾ ಪರವಾನಗಿಯನ್ನು ಅನುಮತಿಸಲಾಗಿದೆ. ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್, ದಕ್ಷಿಣ ಆಸ್ಟ್ರೇಲಿಯಾ, ದಿ ಕ್ಯಾಪಿಟಲ್ ರೀಜನ್, ನಾರ್ತರ್ನ್ ರೀಜನ್ ಮುಂತಾದ ಪ್ರದೇಶಗಳಲ್ಲಿ ಭಾರತೀಯ ಪರವಾನಗಿ ಮೂರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಈ ಗಡುವು ಒಂದು ವರ್ಷದವರೆಗೆ ಇರುತ್ತದೆ. ಆದರೆ ಅದರ ವಿವರಗಳು ಇಂಗ್ಲಿಷ್‌ನಲ್ಲಿರಬೇಕು.

indian-driving-license-allowed-these-countries-australia-new-zealand

ಕೆನಡಾ: ಕೆನಡಾ ಸರ್ಕಾರವು 60 ದಿನಗಳವರೆಗೆ ಭಾರತೀಯ ಚಾಲನಾ ಪರವಾನಗಿಯೊಂದಿಗೆ ವಾಹನಗಳನ್ನು ಚಾಲನೆ ಮಾಡಲು ಅನುಮತಿಸುತ್ತದೆ. ಆದರೆ ಡ್ರೈವಿಂಡ್ ಲೈಸೆನ್ಸ್ ಕಾರ್ಡ್‌ನಲ್ಲಿನ ಎಲ್ಲಾ ವಿವರಗಳು ಇಂಗ್ಲಿಷ್‌ನಲ್ಲಿರಬೇಕು. ಹಾಗೆಯೇ ನೀವು ದೇಶವನ್ನು ಪ್ರವೇಶಿಸಿದಾಗ ತೋರಿಸುವ ದಾಖಲೆಗಳು ನಿಮ್ಮ ಜೊತೆಯಲ್ಲಿ ಇರಬೇಕು ಎಂಬುದು ಕಡ್ಡಾಯವಾಗಿರುತ್ತದೆ.

ಈ ದೇಶಗಳು ಮಾತ್ರವಲ್ಲದೆ ಸಿಂಗಾಪುರ, ದಕ್ಷಿಣ ಆಫ್ರಿಕಾ, ಸ್ವೀಡನ್, ಫ್ರಾನ್ಸ್, ಮಲೇಷ್ಯಾ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭಾರತೀಯ ಚಾಲನಾ ಪರವಾನಗಿಯನ್ನು ಅನುಮತಿಸಲಾಗಿದೆ. ಆದರೆ ಕೆಲವು ತೊಡಕುಗಳನ್ನು ತಪ್ಪಿಸಲು ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಇದ್ದರೆ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಜೊತೆಗೆ ವೀಸಾ, ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳಂತಹ ದಾಖಲೆಗಳನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳುವುದು ಉತ್ತಮ. ಇದಲ್ಲದೆ, ವಿದೇಶಿ ಪ್ರಯಾಣಕ್ಕೆ ಟ್ರಾವಲ್ ಇನ್ಸೂರನ್ಸ್ ಕಡ್ಡಾಯವಾಗಿದೆ.

indian-driving-license-allowed-these-countries-australia-new-zealand

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 15, 2023, 17:15 [IST]
English summary
Indian driving license allowed these countries australia new zealand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+