ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಭಾರತವು ಏಷ್ಯಾದ ಆಟೋಮೊಬೈಲ್ ಉದ್ಯಮದಲ್ಲಿ ಪ್ರಬಲ ಶಕ್ತಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ನೆರೆಯ ದೇಶಗಳು ಭಾರತದಲ್ಲಿ ಉತ್ಪಾದನೆಯಾಗುವ ವಾಹನಗಳನ್ನು, ವಿಶೇಷವಾಗಿ SUVಗಳನ್ನು ಆಮದು ಮಾಡಿಕೊಳ್ಳುತ್ತವೆ. ಈ SUV ಗಳು ಏಷ್ಯ, ಆಫ್ರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿನ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಗಳಲ್ಲಿ ಜನಪ್ರಿಯವಾಗಿವೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಹಲವು ದೇಶಗಳಿಗೆ ನಮ್ಮ ಹೆಮ್ಮೆಯ ಭಾರತೀಯ ಬ್ರಾಂಡ್‌ಗಳಾದ ಟಾಟಾ ಹಾಗೂ ಮಹೀಂದ್ರಾ ಕಂಪನಿಗಳ ಕಾರುಗಳನ್ನು ರಫ್ತು ಮಾಡಲಾಗುತ್ತಿದೆ. ಅಲ್ಲಿನ ಸಾಮಾನ್ಯ ಜನರಿಗೂ ಕೂಡ ಭಾರತೀಯ ಬ್ರಾಂಡ್‌ಗಳ ಮೇಲೆ ವಿಶ್ವಾಸವಿದೆ. ಸದ್ಯಕ್ಕೆ ವಿದೇಶಿ ಮಿಲಿಟರಿ ಮತ್ತು ಅರೆಸೇನಾ ಪಡೆಗಳು ಬಳಸುತ್ತಿರುವ ಕೆಲವು ಭಾರತ-ನಿರ್ಮಿತ SUV ಮಾದರಿಗಳನ್ನು ಇಲ್ಲಿ ನೋಡೋಣ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಟಾಟಾ ಸಫಾರಿ ಸ್ಟೋರ್ಮ್ - ಅಲ್ಜೀರಿಯಾ

ಟಾಟಾ ಸಫಾರಿ ಸ್ಟೋರ್ಮ್ ಅಲ್ಜೀರಿಯಾದ ಪ್ರಮುಖ ಪೊಲೀಸ್ ವಾಹನವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಜೀರಿಯಾದ ಪೋಲೀಸ್ ಪಡೆ ಸಫಾರಿಯನ್ನು ಆಯ್ಕೆ ಮಾಡಿದ್ದು, ಇದು ಮಹೀಂದ್ರಾ ಸ್ಕಾರ್ಪಿಯೊನಂತಹ ಕಾರ್ಯಕ್ಷಮತೆ, ಆಂತರಿಕ ಸೌಕರ್ಯ, ಆಫ್-ರೋಡಿಂಗ್ ಸಾಮರ್ಥ್ಯ ಮತ್ತು ವೆಚ್ಚದ ಅತ್ಯುತ್ತಮ ಸಮತೋಲನವನ್ನು ಒದಗಿಸುತ್ತದೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಮಹೀಂದ್ರಾ ಎನ್ಫೋರ್ಸರ್ - ಭೂತಾನ್

ಬಹಳಷ್ಟು ಭಾರತೀಯ ನಿರ್ಮಿತ ಎಸ್‌ಯುವಿಗಳನ್ನು ಭೂತಾನ್‌ ಆಮದು ಮಾಡಿಕೊಳ್ಳುತ್ತಿದೆ. ವಿಶ್ವಾಸಾರ್ಹ ಬೊಲೆರೊ ಪಿಕ್-ಅಪ್ ಟ್ರಕ್‌ನ ಅರೆಸೈನಿಕ ಪ್ರತಿರೂಪವಾದ ಎನ್‌ಫೋರ್ಸರ್ ಅನ್ನು ಭೂತಾನ್‌ನ ಭದ್ರತಾ ಪಡೆಗಳು ಬಳಸುತ್ತಿವೆ. 4-ಸಿಲಿಂಡರ್, 2.5-ಲೀಟರ್ ಟರ್ಬೋಡೀಸೆಲ್ ಎಂಜಿನ್ 100 ಹೆಚ್‌ಪಿ ಮತ್ತು 240 Nm ಟಾರ್ಕ್ ಅನ್ನು ಉತ್ಪಾದಿಸಬಲ್ಲದು. 4-ವೀಲ್ ಡ್ರೈವ್ ಕಾನ್ಫಿಗರೇಶನ್‌ನ ಆಯ್ಕೆಯೂ ಇದೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಟಾಟಾ ಹೆಕ್ಸಾ - ಬಾಂಗ್ಲಾದೇಶ

ಟಾಟಾ ಮೋಟಾರ್ಸ್ ನಮ್ಮ ನೆರೆಹೊರೆಯ ದೇಶಗಳಿಗೆ 200 MPV ಗಳನ್ನು ಪೂರೈಸುವ ಒಪ್ಪಂದವನ್ನು ಮಾಡಿಕೊಂಡ ನಂತರ, ಟಾಟಾ ಹೆಕ್ಸಾ ಬಾಂಗ್ಲಾದೇಶ ಸೈನ್ಯದ ಅಧಿಕೃತ ವಾಹನವಾಯಿತು. ಈ ಒಪ್ಪಂದವನ್ನು ಪಡೆಯಲು ಟಾಟಾ ಮೋಟಾರ್ಸ್ ಹೆಕ್ಸಾವನ್ನು ಹಲವಾರು ಕಠಿಣ ಪರೀಕ್ಷೆಗಳ ಮೂಲಕ ಉತ್ತೀರ್ಣಗೊಳಿಸಿದೆ. ಈ ಮಾದರಿಯು ಗಾಢ ಆಲಿವ್ ಹಸಿರು ಬಣ್ಣದಲ್ಲಿರುತ್ತದೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಮಹೀಂದ್ರಾ ಎನ್ಫೋರ್ಸರ್ - ಫಿಲಿಪೈನ್ಸ್

ಮಹೀಂದ್ರಾ ಕಂಪನಿಯು ಹಿಂದೂ ಮಹಾಸಾಗರದಲ್ಲಿರುವ ದ್ವೀಪಸಮೂಹವಾಗಿರುವ ಫಿಲಿಪೈನ್ಸ್‌ಗೆ ತನ್ನ ವಾಹನಗಳನ್ನು ಪೂರೈಸಿದೆ. ಮಹೀಂದ್ರಾ ಎನ್‌ಫೋರ್ಸರ್ ಅನ್ನು ಇಲ್ಲಿ ಪೊಲೀಸ್ ಕಾರಾಗಿ ಬಳಸಲಾಗುತ್ತದೆ. ಮುಂಭಾಗದಲ್ಲಿ ಬೊಲೆರೊದಂತೆ ಕಾಣುವ ಮಹೀಂದ್ರಾ ಎನ್‌ಫೋರ್ಸರ್ ಅನ್ನು ಭಾರತದಲ್ಲಿ ತಯಾರಿಸಿ ನಂತರ ಫಿಲಿಪೈನ್ಸ್‌ಗೆ ರಫ್ತು ಮಾಡಲಾಗುತ್ತದೆ. 2015 ರಲ್ಲಿ, ಫಿಲಿಪೈನ್ ಪೋಲೀಸ್ ಫೋರ್ಸ್ ಒಟ್ಟು 1,470 ಎನ್‌ಫೋರ್ಸರ್ ಎಸ್‌ಯುವಿಗಳಿಗಾಗಿ P1.3 ಬಿಲಿಯನ್ ಖರ್ಚು ಮಾಡಿದೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಮಹೀಂದ್ರಾ XUV500 - ದಕ್ಷಿಣ ಆಫ್ರಿಕಾ

ಮಹೀಂದ್ರಾದ XUV500 ದಕ್ಷಿಣ ಆಫ್ರಿಕಾದ ಪೊಲೀಸರಿಗೆ ಹೆಚ್ಚು ಜನಪ್ರಿಯವಾದ SUV ಆಗಿದೆ. ದಕ್ಷಿಣ ಆಫ್ರಿಕಾದ ಪೊಲೀಸ್ ಇಲಾಖೆಯು ಹಿಂದಿನ ಮಾದರಿಯ ಟಾಪ್-ಸ್ಪೆಕ್ W8 ರೂಪಾಂತರವನ್ನು ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಬಳಸುತ್ತಿದ್ದಾರೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಮಹೀಂದ್ರಾ ಸ್ಕಾರ್ಪಿಯೋ ಗೆಟ್‌ಅವೇ - ಇಟಲಿ

ಪ್ರಪಂಚದ ಅತ್ಯಂತ ಅಪೇಕ್ಷಿತ ಆಟೋಮೊಬೈಲ್‌ಗಳಲ್ಲಿ ಕೆಲವು ಇಟಲಿಯಲ್ಲಿ ಉತ್ಪಾದಿಸಲ್ಪಟ್ಟಿವೆ. ಆದರೂ, ಇಟಾಲಿಯನ್ ಆಲ್ಪ್ಸ್‌ನಲ್ಲಿ ಕೆಲಸ ಮಾಡುವ ಇಟಾಲಿಯನ್ ಭದ್ರತಾ ತಂಡವಾದ Ssoccorso Alpino, ಸಾಧಾರಣ ಮತ್ತು ಬಾಳಿಕೆ ಬರುವ ಪಿಕಪ್ ಟ್ರಕ್ ಮಹೀಂದ್ರಾ ಸ್ಕಾರ್ಪಿಯೋ ಗೆಟ್‌ಅವೇ ಅನ್ನು ಬಳಸುತ್ತಿದೆ. ಸ್ಕಾರ್ಪಿಯೋ ಗೆಟ್‌ಅವೇ, ಟ್ವಿನ್ ಕ್ಯಾಬ್ ವಾಹನವನ್ನು ಇಟಾಲಿಯನ್ ಪೊಲೀಸರಿಗೆ ನೀಡಲಾಗುತ್ತದೆ, ಇದು ಸ್ಕಾರ್ಪಿಯೋ ಎಸ್‌ಯುವಿಯನ್ನು ಆಧರಿಸಿದೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಮಹೀಂದ್ರಾ ಸ್ಕಾರ್ಪಿಯೋ - ಮಾಲ್ಡೀವ್ಸ್

ಹೆಚ್ಚು ಜನಪ್ರಿಯವಾಗಿರುವ ಮಹೀಂದ್ರಾ ಎಸ್‌ಯುವಿ ಸ್ಕಾರ್ಪಿಯೊ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಇದು ದೇಶದ ಹೊರಗೂ ಸಹ ಬಹಳ ಜನಪ್ರಿಯವಾಗಿದೆ. ಮಾಲ್ಡೀವ್ಸ್‌ನ ಸುಂದರ ದ್ವೀಪಗಳ ರಾಜಧಾನಿಯಾಗಿರುವ ಮಾಲೆಯ ಪೊಲೀಸ್ ಅಧಿಕಾರಿಗಳು ಸ್ಕಾರ್ಪಿಯೋ SUV ಅನ್ನು ಬಳಸುತ್ತಿದ್ದಾರೆ. ಇಲ್ಲಿನ ಪೊಲೀಸರು ಬಳಸುವ ಮಾದರಿಯು ಉತ್ತಮ ಕಾರ್ಯಕ್ಷಮತೆಗಾಗಿ 4WD ವ್ಯವಸ್ಥೆಯನ್ನು ಹೊಂದಿದೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಮಹೀಂದ್ರಾ ಸ್ಕಾರ್ಪಿಯೋ - ಫಿಲಿಪೈನ್ಸ್

ಮಾಲ್ಡೀವ್ಸ್ ಪೊಲೀಸರಂತೆ ಫಿಲಿಪೈನ್ಸ್ ಪೊಲೀಸರು ಸಹ ಮಹೀಂದ್ರಾ ಎನ್‌ಫೋರ್ಸರ್ ಜೊತೆಗೆ ಮಹೀಂದ್ರಾ ಸ್ಕಾರ್ಪಿಯೊವನ್ನು ತನ್ನ ಫ್ಲೀಟ್‌ನಲ್ಲಿ ಬಳಸುತ್ತಿದ್ದಾರೆ. ಅಲ್ಲಿರುವ ಭದ್ರತಾ ಪಡೆ 2016 ರಲ್ಲಿ P394 ಮಿಲಿಯನ್‌ಗಿಂತಲೂ ಹೆಚ್ಚು ಈ 4-ವೀಲ್ ಡ್ರೈವ್-ಸಜ್ಜಿತ SUV ಯ 398 ಎಸ್‌ಯುವಿಗಳನ್ನು ಖರೀದಿಸಿದೆ.

ವಿದೇಶಗಳಲ್ಲಿ ಭಾರತೀಯ ಬ್ರಾಂಡ್‌ಗಳ ಹವಾ... ಅಲ್ಲಿನ ಪೊಲೀಸರಿಗೆ ಸಖತ್ ಇಷ್ಟವಂತೆ ನಮ್ಮ ಈ SUVಗಳು

ಮಹೀಂದ್ರಾ ಸ್ಕಾರ್ಪಿಯೋ - ಶ್ರೀಲಂಕಾ

ದೇಶದ ನೆರೆಯ ಶ್ರೀಲಂಕಾ ತನ್ನ ಪೊಲೀಸ್ ಹಾಗೂ ನೌಕಾಪಡೆಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೊವನ್ನು ಸಹ ಬಳಸುತ್ತಿದೆ. ದೇಶವು ಹಳೆಯ ಪೀಳಿಗೆಯ ಸ್ಕಾರ್ಪಿಯೊವನ್ನು ಬಳಸುತ್ತದೆ ಮತ್ತು ಇದು ಮಾದರಿಯ ಮೂಲ ರೂಪಾಂತರವನ್ನು ಒಳಗೊಂಡಿದೆ. LX-ಟ್ರಿಮ್‌ನಲ್ಲಿ ಸ್ಕಾರ್ಪಿಯೊದ 485 ಯುನಿಟ್‌ಗಳನ್ನು ಇಲ್ಲಿನ ಪೊಲೀಸ್ ಪಡೆ ಖರೀದಿಸಿದೆ.

Article Published On: Monday, March 20, 2023, 15:03 [IST]
English summary
Indian suvs are very popular with foreign police
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+