Innova Hycross vs Maruti Invicto: ಇನ್ನೋವಾ ಗತ್ತು ಇನ್ವಿಕ್ಟೊಗಿದೆಯೇ? ಬನ್ನಿ ನೋಡೇಬಿಡೋಣ

ಎಲ್ಲರಿಗೂ ತಿಳಿದಿರುವಂತೆ ಇನ್ನೋವಾ ಕ್ರಿಸ್ಟಾ ಒಂದು ಕಾಲದ ಎಂಪಿವಿ ವಿಭಾಗವನ್ನು ರಾಜನಾಗಿ ಆಳಿದ ಕಾರು. ಬೆಲೆ, ವೈಶಿಷ್ಟ್ಯ, ವಿನ್ಯಾಸ, ಪರ್ಫಾಮೆನ್ಸ್‌ನಲ್ಲಿ ಇಂದಿಗೂ ಅದರ ಗತ್ತನ್ನು ಮೀರಿಸುವಂತಹ ಕಾರು ಮಾರುಕಟ್ಟೆಗೆ ಬಂದಿಲ್ಲ. ಒಂದಷ್ಟು ಎಂಪಿವಿಗಳು ಇದ್ರೂ ಬೆಲೆ ಹಾಗೂ ಸೌಕರ್ಯದ ವಿಷಯದಲ್ಲಿ ಕ್ರಿಸ್ಟಾಗೆ ಸೆಡ್ಡು ಹೊಡೆಯಲು ಸಾಧ್ಯವಾಗಲಿಲ್ಲ.

ಕಾಲ ಕಳೆದಂತೆ ಹೊಸ ಪೀಳಿಗೆಗೆ ಕ್ರಿಸ್ಟಾವನ್ನು ಪ್ರೀಮಿಯಂ ಆಗಿ ನೀಡಲು ನಿರ್ಧರಿಸಿದ ತಯಾರಕರು ಇನ್ನೋವಾ ಹೈಕ್ರಾಸ್ ಅನ್ನು ಪರಿಚಯಿಸಿದ್ದಾರೆ. ಇದು ಬಹುತೇಕ ಎಸ್‌ಯುವಿಯಾಗಿ ಕಾಣುವ ಎಂಪಿವಿ ಎಂದೇ ಹೇಳಬಹುದು. ಈಗಾಗಲೇ ಬಿಡುಗಡೆಯಾಗಿ ಡೆಲಿವರಿ ಕೂಡ ಆಗಿದೆ. ಈಗ ಮಾರುತಿ ಸುಜುಕಿ ಸರದಿಯಾಗಿದ್ದು, ಕಂಪನಿಯವರು ಇತ್ತೀಚೆಗೆ ಟೊಯೊಟಾ ಹೈಕ್ರಾಸ್ ಅನ್ನು ಆಧರಿಸಿದ ಮಾರುತಿ ಇನ್ವಿಕ್ಟೊವನ್ನು ಬಿಡುಗಡೆ ಮಾಡಿದ್ದಾರೆ.

innova-hycros-vs-maruti-invicto

ಎಲ್ಲರಿಗೂ ತಿಳಿದಿರವಂತೆ ಟೊಯಾಟಾ ಕಾರಗಳ ರೀಬ್ಯಾಡ್ಜಿಂಗ್ ಆವೃತ್ತಿಗಳಾಗಿ ಮಾರುತಿ ಕಾರುಗಳು ಬರುತ್ತವೆ. ಇನ್ನು ಮಾರುತಿ ಇನ್ವಿಕ್ಟೊ ಕಂಪನಿಯ ಲೈನ್-ಅಪ್‌ನಲ್ಲಯೇ ಟಾಪ್‌ನಲ್ಲಿದೆ. ಹಾಗೆಯೇ ಇದು ಬ್ರ್ಯಾಂಡ್‌ನ Nexa ಡೀಲರ್‌ಶಿಪ್ ಮೂಲಕ ಮಾರಾಟವಾಗಲಿದೆ. ಎರಡೂ MPV ಗಳು ಮೇಲಿನ ಫೋಟದಲ್ಲಿರುವಂತೆಯೇ ಒಂದೇ ಡಿಸೈನ್ ಹೊಂದಿವೆ.

ಬಹುತೇಕ ಒಂದೇ ಡಿಸೈನ್ ಹೊಂದಿದ್ದರೂ ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ವ್ಯತ್ಯಾಸಗಳನ್ನು ಕಾಣಬಹುದು. ಪ್ರಮುಖವಾಗಿ ಮುಂಭಾಗದ ಗ್ರಿಲ್, ಹೆಡ್‌ಲೈಟ್‌ಗಳು, ಮುಂಭಾಗದ ಬಂಪರ್, ಅಲಾಯ್ ವೀಲ್‌ಗಳು, ಟೈಲ್ ಲ್ಯಾಂಪ್‌ಗಳು ಮತ್ತು ಇಂಟೀರಿಯರ್‌ನಲ್ಲಿ ಪ್ರತ್ಯೇಕವಾಗಿ ಕಾಣುತ್ತವೆ. ಇನ್ನು ಎರಡು ಕಾರುಗಳ ನಡುವಿನ ಬೆಲೆ ವಿಚಾರಕ್ಕೆ ಬಂದರೆ ಕೆಳಗಿನಂತಿವೆ.

Maruti Invicto Price
Zeta+ 7 Seater ₹24.79 Lakh
Zeta+ 8 Seater ₹24.89 Lakh
Alpha+ 7 Seater ₹28.42 Lakh
Toyota Innova Hycross Price
VX Hybrid 7-Seater ₹25.03 Lakh
VX Hybrid 8-Seater ₹25.08 Lakh
VX (O) Hybrid 7-Seater ₹27.00 Lakh
VX (O) Hybrid 8-Seater ₹27.05 Lakh
ZX Hybrid 7-Seater ₹29.35 Lakh
ZX (O) Hybrid 7-Seater ₹29.99 Lakh

ವೈಶಿಷ್ಟ್ಯಗಳ ವಿಷಯದಲ್ಲಿ ಇನ್ನೋವಾ ಹೈಕ್ರಾಸ್ ಬೆಲೆಗೆ ತಕ್ಕ ಮಾದರಿಯಾದ್ರೆ, ಮಾರುತಿ ಇನ್ವಿಕ್ಟೊದಲ್ಲಿ ಕೆಲವನ್ನು ಕೈಬಿಡಲಾಗಿದೆ. ಇದೇ ಕಾರಣಕ್ಕೆ ಇನ್ವಿಕ್ಟೊ ಬೆಲೆ ಕಡಿಮೆಯಾಗಿದೆ ಎನ್ನಲಾಗಿದೆ. ಮಾರುತಿ MPV ಹಿಂದಿನ ಕ್ಯಾಪ್ಟನ್ ಸೀಟ್‌ಗಳಲ್ಲಿ ಓಟ್ಟೋಮನ್ ಫಂಕ್ಷನ್ ಹಾಗೂ ADAS ಟೆಕ್ ಅನ್ನು ನೀಡಿಲ್ಲ. ಆದ್ರೆ ಇನ್ನೋವಾ ಹೈಕ್ರಾಸ್‌ನಲ್ಲಿ ಉನ್ನತ-ಸ್ಪೆಕ್ ಟ್ರಿಮ್‌ಗಳಲ್ಲಿ ಇವೆರಡನ್ನು ಪಡೆಯಬಹುದು.

ಮಾರುತಿ ಸುಜುಕಿ ಇನ್ವಿಕ್ಟೊ Zeta+ ಮತ್ತು Alpha+ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಹಾಗೆಯೇ 7 ಮತ್ತು 8-ಸೀಟರ್ ಲೇಔಟ್‌ಗಳಲ್ಲಿ ಲಭ್ಯವಿದೆ, ಆದರೆ ಉನ್ನತ-ಸ್ಪೆಕ್ ಆಲ್ಫಾ + 7-ಆಸನಗಳ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಮತ್ತೊಂದೆಡೆ, Innova Hycross ನ ಸ್ಟಾಂಗ್ ಹೈಬ್ರಿಡ್ ವೇರಿಯೆಂಟ್‌ಗಳು VX, VX(O), ZX ಮತ್ತು ZX(O), 7 ಮತ್ತು 8-ಆಸನಗಳ ವಿನ್ಯಾಸದಲ್ಲಿ ಲಭ್ಯವಿದೆ.

innova-hycros-vs-maruti-invicto

ಒಟ್ಟಾರೆ ಹೊಸ Invicto ಮಾದರಿಯು ಮಾರುತಿಯ ಲೈನ್ ಅಪ್‌ನಲ್ಲಿಯೇ ಟಾಪ್‌ನಲ್ಲಿದ್ದರೂ, ಇನ್ನೋವಾ ಹೈಕ್ರಾಸ್‌ನಂತೆ ವೈಶಿಷ್ಟ್ಯಗಳನ್ನು ನೀಡುವುದಿಲ್ಲ. ಉಳಿದಂತೆ ಇದು ಟೊಯೋಟಾ ಹೈಕ್ರಾಸ್‌ನಂತೆ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಬ್ರ್ಯಾಂಡ್‌ನ Nexa ಡೀಲರ್‌ಶಿಪ್ ಮೂಲಕ ಮಾರಾಟವಾಗಲಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ.

Article Published On: Thursday, July 6, 2023, 16:26 [IST]
English summary
Innova hycross vs maruti invicto does invicto beat innova
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+