ಸಿಟ್ರನ್ ಇಂಡಿಯಾ ಮುಖ್ಯಸ್ಥರ ಜೊತೆ ಸಂದರ್ಶನ: ಹೊಸ eC3 ಕಾರಿನ ಸೀಕ್ರೆಟ್ ಬಹಿರಂಗ
ಫ್ರೆಂಚ್ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಸಿಟ್ರನ್ ತನ್ನ ಮೊದಲ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, eC3ಯನ್ನು ಅನಾವರಣಗೊಳಿಸುವ ಮೂಲಕ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ತಿಂಗಳು ಅದ್ದೂರಿಯಾಗಿ ಲಾಂಚ್ ಆಗಲಿದ್ದು, ಈಗಾಗಲೇ (ಜನವರಿ 22) ಬುಕಿಂಗ್ ಆರಂಭವಾಗಿದೆ.
ಸಿಟ್ರನ್, ಸಿ5 ಏರ್‌ಕ್ರಾಸ್ ಎಸ್‌ಯುವಿಯೊಂದಿಗೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಈ ಕಾರನ್ನು ಕಂಪನಿಯು ಆಕರ್ಷಕವಾಗಿ ವಿನ್ಯಾಸಗೊಳಿಸಿತ್ತು. ಕಳೆದ ವರ್ಷ, ಸಿ-ಕ್ಯೂಬ್ಡ್ (C-Cubed) ಪ್ಲಾಟ್‌ಫಾರ್ಮ್ ಆಧಾರಿತ ಸಿಟ್ರನ್ ಸಿ3 ಕ್ರಾಸ್‌ಒವರ್ ಹ್ಯಾಚ್‌ಬ್ಯಾಕ್ ಅನ್ನು ಲಾಂಚ್ ಮಾಡಿತ್ತು. ಆಗಲೇ, ಅದರ ಎಲೆಕ್ಟ್ರಿಕ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿತ್ತು. ಹೇಳಿದಂತೆಯೇ ಕಳೆದ ತಿಂಗಳು ಸಿಟ್ರನ್ eC3ಯನ್ನು ಅನಾವರಣ ಮಾಡಿದೆ. ಆದರೆ, ಬೆಲೆಯನ್ನು ಘೋಷಣೆ ಮಾಡಿಲ್ಲ. ಇದು ಅಗ್ಗದ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಸಿಟ್ರನ್ ಇಸಿ3 ಕಾರನ್ನು ಚೆನ್ನೈನಲ್ಲಿ ಟೆಸ್ಟ್ ಡ್ರೈವ್ ಮಾಡಲು ನಮ್ಮ ತಂಡಕ್ಕೆ ಅವಕಾಶ ದೊರೆಯಿತು. ಆಗಲೇ ನಮ್ಮ ಪ್ರತಿನಿಧಿ ಸಿಟ್ರನ್ ಇಂಡಿಯಾದ ಬ್ರಾಂಡ್ ಹೆಡ್ ಸೌರಭ್ ವತ್ಸಾ ಅವರೊಂದಿಗೆ ಮಾತುಕತೆ ನಡೆಸಿದ್ದು. IEC ಆವೃತ್ತಿ ಸಿಟ್ರನ್ ಸಿ3 ಬಿಡುಗಡೆಯಾಗಿ ಕೇವಲ ಆರು ತಿಂಗಳ ಅಂತರದಲ್ಲಿ ಎಲೆಕ್ಟ್ರಿಕ್ eC3 ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಅನಾವರಣ ಮಾಡಲು ಹೇಗೆ ಸಾಧ್ಯವಾಯಿತು ಎಂಬ ವಿವರಗಳನ್ನು ಅವರು ಹಂಚಿಕೊಂಡಿದ್ದಾರೆ. ತಿಳಿಯೋಣ ಬನ್ನಿ..
ಇಂಟರ್ನಲ್ ಕಂಬುಸ್ಟಿವ್ನ್ ಎಂಜಿನ್ (ICE) ಹಾಗೂ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (BEV) ಕಾರುಗಳನ್ನು ಗಮನದಲ್ಲಿಟ್ಟುಕೊಂಡು ಸಿ-ಕ್ಯೂಬ್ಡ್ (C-Cubed) ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಸಿಟ್ರನ್ C3 ಕಾರು, 2,540 ಎಂಎಂ ವೀಲ್‌ಬೇಸ್ ಹೊಂದಿದ್ದು, ಸಬ್-4.0-ಮೀಟರ್ ಕಾರಿಗಿಂತ ಕೊಂಚ ದೊಡ್ಡದಾಗಿದೆ. ಇದೇ ಪ್ಲಾಟ್‌ಫಾರ್ಮ್ ಆಧರಿಸಿ, ಎಲೆಕ್ಟ್ರಿಕ್ eC3 ಕಾರನ್ನು ರೆಡಿ ಮಾಡಲಾಗಿದೆ. ಅಲ್ಲದೆ, ಈ ಎಲೆಕ್ಟ್ರಿಕ್ ಕಾರಿನ ಬೂಟ್ ಸ್ಪೇಸ್ ವಿಚಾರದಲ್ಲೂ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಸೌರಭ್ ವತ್ಸಾ ಹೇಳಿದ್ದಾರೆ.

ನೂತನ ಎಲೆಕ್ಟ್ರಿಕ್ eC3 ಕಾರಿನಲ್ಲಿ ಅಳವಡಿಸಿರುವ ಬ್ಯಾಟರಿ ಪ್ಯಾಕ್, ಸಂಪೂರ್ಣ ಚಾರ್ಜ್‌ನಲ್ಲಿ 320 km ಎಂದು ರೇಂಜ್ ನೀಡಲಿದೆ ಆದರೆ, ರಿಯಲ್ ವರ್ಲ್ಡ್ ಕಂಡೀಷನ್ (ದೇಶದ ವಿವಿಧ ರಸ್ತೆ)ನಲ್ಲಿ 240 ರಿಂದ 260 km ರೇಂಜ್ ನಿರೀಕ್ಷಿಸಬಹುದು ಎಂದು ಸೌರಭ್ ವತ್ಸಾ ಹೇಳುತ್ತಾರೆ. ಅಲ್ಲದೆ, ದೊಡ್ಡ ನಗರಗಳಲ್ಲಿ ಸುಲಭವಾಗಿ ಒಂದು ವಾರದ ಮಟ್ಟಿಗೆ ಸಂಚಾರ ನಡೆಸಬಹುದು. ಗ್ರಾಹಕರಿಗೆ ಎರಡು ಚಾರ್ಜಿಂಗ್ ಆಯ್ಕೆಯಲ್ಲಿ ಕಾರು ಖರಿದಿಗೆ ಲಭ್ಯವಿದೆ. ಅವುಗಳೆಂದರೆ, DC ಫಾಸ್ಟ್ ಚಾರ್ಜರ್, 3.3kW ಆನ್-ಬೋರ್ಡ್ ಚಾರ್ಜರ್ (ಮನೆ ವಿದ್ಯುತ್).
'ಈ ಹೊಸ ಕಾರನ್ನು ಎಲ್ಲ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಸಿಗುವಂತೆ ರೆಡಿ ಮಾಡಲಾಗಿದೆ. ಖರೀದಿ ನಂತರ ಸರ್ವಿಸ್ ಸೌಲಭ್ಯವನ್ನು ಒದಗಿಸಲಾಗುವುದು. ಜೊತೆಗೆ ಸಿಟ್ರಸ್ ಕುಟುಂಬಕ್ಕೆ ಹೊಸ ಖರೀದಿದಾರರನ್ನು ಸ್ವಾಗತಿಸಲು ನಾವು ಸಿದ್ದವಾಗಿದ್ದು, ಭಾರತದಲ್ಲಿ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಸಾಧಿಸಲು ಸಿಟ್ರಸ್ ಕಂಪನಿ ಸದಾ ಬೆಂಬಲವಾಗಿ ನಿಲ್ಲುತ್ತದೆ. ನಾವು ಗ್ರಾಹಕರಿಗೆ ಉತ್ತಮ ಸೇವೆಯನ್ನು ಕೊಡುತ್ತೇವೆ ಎಂದು ನಂಬಿದ್ದೇವೆ. ಅಲ್ಲದೆ, ನಮ್ಮ ಮೊಬೈಲ್ ಸರ್ವಿಸ್ ವಾಹನದ ಮೂಲಕವು ಸೇವೆ ನೀಡುತ್ತಿದ್ದೇವೆ' ಎಂದು ಸೌರಭ್ ವತ್ಸಾ ಹೇಳಿದ್ದಾರೆ.
ನೂತನ ಸಿಟ್ರನ್ ಇಸಿ3 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 29.2kwh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದರ ಮೋಟಾರ್ 56.2 bhp ಪವರ್ ಮತ್ತು 143 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, ಈ ಕಾರು ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 10.25 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಇದ್ದು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ಅನ್ನು ಸಂಪರ್ಕಿಸುತ್ತದೆ.
ಸಿಟ್ರಸ್ eC3 ಈ ಕಾರಿನ ಖರೀದಿ ಮೇಲೆ ಗ್ರಾಹಕರಿಗೆ 3-ವರ್ಷ/125,000 km ವಾರಂಟಿ ಇದ್ದು, ಮೋಟಾರ್ 5 ವರ್ಷಗಳವರೆಗೆ /100,000 km, ಬ್ಯಾಟರಿ ಪ್ಯಾಕ್ 7 ವರ್ಷಗಳು/140,000 km ವಾರಂಟಿ ಸಿಗಲಿದ್ದು, ಈ ಕಾರು, ಟಾಟಾದ ಅಗ್ಗದ ಬೆಲೆಯ ಟಿಯಾಗೊ ಇವಿಗೆ ಭಾರೀ ಪೈಟೋಟಿ ನೀಡಬಹುದು. ರೂ.10 -12 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಾಗಬಹುದು. ತುಂಬಾ ಅಗ್ಗದ ಬೆಲೆಯ ಕಾರಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೊಂಡುಕೊಳ್ಳಬಹುದು.


Click it and Unblock the Notifications








