ಸದ್ಯದಲ್ಲೇ ಕಿಯಾ ಪ್ರಮುಖ ಡೀಸೆಲ್ ಕಾರುಗಳು ಸ್ಥಗಿತಗೊಳ್ಳುವ ಸಾಧ್ಯತೆ!
ಕಿಯಾದಿಂದ ಕೆಲವು ಡೀಸೆಲ್ ಕಾರುಗಳನ್ನು ಭಾರತದಿಂದ ಹಂತ ಹಂತವಾಗಿ ಹೊರಹಾಕಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಅಂದರೆ ಮಾರಾಟದಿಂದ ಹೊರಗಿಡುವುದು ಇದರ ಉದ್ದೇಶವಾಗಿದೆ. ಕಂಪನಿಯ ಈ ಹಠಾತ್ ನಿರ್ಧಾರಕ್ಕೆ ಕಾರಣ ಮತ್ತು ಮಾರಾಟದಿಂದ ಹಿಂತೆಗೆದುಕೊಳ್ಳುವ ಕಾರು ಮಾದರಿಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕಳೆದ ಕೆಲವು ದಿನಗಳಿಂದ ಕೆಲವು ಕಾರು ಮಾದರಿಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ತೊರೆಯಲಿವೆ ಎಂಬ ವರದಿಗಳಾಗಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಹೊಸ ಎಮಿಷನ್ ನಿಯಮಗಳು, 'ಬಿಎಸ್ 6 ಹಂತ II', ಇದನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಜಾರಿಗೆ ತರಲಿದೆ. ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ಈ ನಿಯಮವು ಎಲ್ಲಾ ಹೊಸ ವಾಹನಗಳು ನೈಜ-ಸಮಯದ ಹೊರಸೂಸುವಿಕೆ ಪತ್ತೆ ಸಾಧನಗಳನ್ನು ಹೊಂದಿರಬೇಕು.

ಇದನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ತಮ್ಮ ಜನಪ್ರಿಯ ಕಾರು ಮಾದರಿಗಳಿಂದ ಕೆಲವು ಆಯ್ಕೆಗಳನ್ನು ಮಾತ್ರ ಮಾರಾಟದಿಂದ ತೆಗೆದುಹಾಕಲು ಯೋಜಿಸಿದೆ. ಕಿಯಾ ತನ್ನ ಜನಪ್ರಿಯ ಕಾರು ಮಾದರಿಗಳಲ್ಲಿ ಈ ರೀತಿಯ ಕ್ರಮವನ್ನು ತೆಗೆದುಕೊಳ್ಳಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಕಿಯಾ ಕಂಪನಿಯು ತನ್ನ ಪ್ರಮುಖ ಮಾದರಿಗಳಾದ ಸೆಲ್ಟೋಸ್, ಸಾನೆಟ್ ಮತ್ತು ಕಾರೆನ್ಸ್ ಮಾದರಿಗಳಿಂದ ಕೆಲವು ಆಯ್ಕೆಗಳನ್ನು ತೆಗೆದುಹಾಕುತ್ತಿದೆ.
ಕಂಪನಿಯು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಮಾರಾಟದಿಂದ ತೆಗೆದುಹಾಕುತ್ತಿದೆ. ಆದರೆ, ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಕಂಪನಿಯು ಕೆಲವೇ ದಿನಗಳಲ್ಲಿ ಮಾಹಿತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಕಂಪನಿಯು ಸಾನೆಟ್, ಸೆಲ್ಟೋಸ್ ಮತ್ತು ಕಾರೆನ್ಸ್‌ನಲ್ಲಿ IMT ನಂತಹ ಅತ್ಯುತ್ತಮ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತದೆ. ಇನ್ನು ವಿಷಯಕ್ಕೆ ಬಂದರೆ ಕಿಯಾ ಕಂಪನಿಯು ಸ್ಥಗಿತಗೊಳಿಸುತ್ತಿರುವ ಪ್ರಮುಖ ಆಯ್ಕೆಗಳನ್ನು ಈ ಕೆಳಗೆ ನೋಡೋಣ.

ಸೆಲ್ಟೋಸ್ ಕಾರು ಮಾದರಿಯನ್ನು 6- ಸ್ಪೀಡ್ IMT, 6- ಸ್ಪೀಡ್ ಮ್ಯಾನುವಲ್ ಮತ್ತು 6- ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಅದೇ ರೀತಿ, ಸೋನೆಟ್ ಮತ್ತು ಕಾರೆನ್ಸ್ ಕಾರು ಮಾದರಿಗಳನ್ನು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇವುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟಕ್ಕೆ ಲಭ್ಯವಿರುವ ಮ್ಯಾನುವಲ್ ಟ್ರಾನ್ಸ್ ಮಿಷನ್‌ಗಳು ಮಾರುಕಟ್ಟೆಯನ್ನು ತೊರೆಯುತ್ತಿವೆ ಎಂದು ಕಳೆದ ಕೆಲ ದಿನಗಳಿಂದ ಹೇಳಲಾಗುತ್ತಿದೆ.
ಹೊಸ ನಿಯಮದಿಂದಾಗಿ ಹೊಸ ವಾಹನಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಮಾರುತಿ ಸುಜುಕಿ ಈಗಾಗಲೇ ತನ್ನ ಕೆಲವು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಕಂಪನಿಯು ತನ್ನ ಇಗ್ನಿಸ್ ಕಾರಿನ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಕಠಿಣ ಹೆಜ್ಜೆ ಇಟ್ಟಿದೆ. ಇದಕ್ಕೆ ಹೊಸ ನಿಯಮವೊಂದೇ ಕಾರಣವಲ್ಲ. ಮಾರುತಿ ಸುಜುಕಿ ಹೊಸ ಇಗ್ನಿಸ್‌ಗೆ ಕೆಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಕೂಡ ಸೇರಿಸಿದೆ. ಪರಿಣಾಮವಾಗಿ, ಪ್ರೀಮಿಯಂ ಇಗ್ನಿಸ್ ಈಗ ರೂ. 27 ಸಾವಿರ ಏರಿಕೆಯಾಗಿದೆ. ಈ ಕಾರಿನಂತೆ ಇನ್ನು ಕೆಲವು ಕಾರು ಮಾದರಿಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.

ಈ ಬೆಲೆ ಏರಿಕೆಯು ಕೆಲವು ವೆರಿಯಂಟ್‌ಗಳಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುವುದಿಲ್ಲ ಎಂಬ ಕಾರಣದಿಂದಾಗಿ, ವಾಹನ ತಯಾರಕರು ಹೊಸ ನಿಯಮದ ಪ್ರಕಾರ ಅವುಗಳನ್ನು ನವೀಕರಿಸದೆ ಮಾರುಕಟ್ಟೆಯಿಂದ ಹೊರತೆಗೆಯಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಕಿಯಾ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. Kia EV6 ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇನ್ನೂ ಕೆಲವು ಕಾರು ಮಾದರಿಗಳನ್ನು ಮಾರಾಟಕ್ಕೆ ತರುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








