ಕೇವಲ 41 ತಿಂಗಳುಗಳಲ್ಲಿ 8 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ
ಕಿಯಾ ಮೋಟಾರ್ಸ್ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕರಲ್ಲಿ ಒಂದಾಗಿದೆ. ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾ 2022ರಲ್ಲಿ 3,36,619 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2021ರ ಕಾರು ಮಾರಾಟಕ್ಕೆ ಹೋಲಿಸಿದರೆ ಕಿಯಾ ಇಂಡಿಯಾ ಕಂಪನಿಯು ಶೇಕಡಾ 47.7 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
ಕಿಯಾ ಇಂಡಿಯಾ ಕಂಪನಿಯು 2022ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ 2,54,556 ಯುನಿಟ್‌ಗನ್ನು ಮಾರಾಟ ಮಾಡಿದೆ. ಇನ್ನು 2022 ರಲ್ಲಿ ಕಿಯಾ ಇಂಡಿಯಾ ಕಂಪನಿಯು 82,063 ಯುನಿಟ್‌ಗಳ ರಫ್ತು ಮಾಡಿದೆ. ಈ ಅಂಕಿಅಂಶಗಳನ್ನು ಕಳೆದ ವರ್ಷದ ಅಂಕಿಅಂಶಗಳ ಜೊತೆಗೆ ಹೋಲಿಸಿದರೆ ರಫ್ತಿನಲ್ಲಿ ಶೇಕಡಾ 40.1 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ದಕ್ಷಿಣ ಕೊರಿಯಾದ ವಾಹನ ತಯಾರಕರು ಭಾರತದಲ್ಲಿ 2019ರ ಆಗಸ್ಟ್ ತಿಂಗಳಿನಿಂದ ಮಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ 8 ಲಕ್ಷ ಸಂಚಿತ ಮಾರಾಟವನ್ನು ಸಾಧಿಸಿದ್ದಾರೆ.

ಇದರ ಹೊರತಾಗಿ, 2022ರ ಡಿಸೆಂಬರ್ ತಿಂಗಳಿನಲ್ಲಿ ಕಿಯಾ ಇಂಡಿಯಾ 15,184 ಯುನಿಟ್ ಮಾರಾಟಗಳನ್ನು ನೋಂದಾಯಿಸಿದೆ, ಇದರ ಪರಿಣಾಮವಾಗಿ 94.7 ರಷ್ಟು ವಾರ್ಷಿಕ ಮಾರಾಟದ ಬೆಳವಣಿಗೆನ್ನು ಸಾಧಿಸಿದೆ, ಕಿಯಾ ಇಂಡಿಯಾ ಕಂಪನಿಯು 2022 ಒಂದು ಮೈಲಿಗಲ್ಲು ವರ್ಷವೆಂದು ಗುರುತಿಸಿದೆ ಏಕೆಂದರೆ ಬ್ರ್ಯಾಂಡ್ ತನ್ನ ಅತ್ಯಧಿಕ ರಫ್ತು ಅಂಕಿ 82,063 ಯುನಿಟ್‌ಗಳನ್ನು ನೋಂದಾಯಿಸುವ ಮೂಲಕ ಭಾರತದಲ್ಲಿ ಅಗ್ರ UV ರಫ್ತುದಾರನಾಗಿದ್ದಾರೆ. 2022 ಕಿಯಾ ಇಂಡಿಯಾಕ್ಕೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಅತ್ಯುತ್ತಮ ವರ್ಷವಾಗಿದೆ,
ದೇಶೀಯ ಮಾರುಕಟ್ಟೆಯಲ್ಲಿ ಲ್ಟೋಸ್ ಎಸ್‌ಯುವಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿ ಮುಂದುವರೆದಿದೆ ಮತ್ತು ಈ ಮಾದರಿಯು ಕೇವಲ ಒಂದು ವರ್ಷದಲ್ಲಿ 1 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಈ ಎಸ್‍ಯುವಿ 2022 ರಲ್ಲಿ 1,01,569 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ, ಸೊನೆಟ್ ಎಸ್‍ಯುವಿಯು ಅದೇ ವರ್ಷದಲ್ಲಿ 86,251 ಯುನಿಟ್‌ಗಳ ಮಾರಾಟವನ್ನು ವರದಿ ಮಾಡಿದೆ.
2022 ರಲ್ಲಿ ಕಿಯಾ ಕಾರೆನ್ಸ್ ಪ್ರಬಲವಾದ 62,756 ಯುನಿಟ್ ಮಾರಾಟವನ್ನು ದಾಖಲಿಸಿದೆ ಮತ್ತು ಭಾರತದಲ್ಲಿ ಭಾರತದ ಎರಡನೇ ಅತಿ ಹೆಚ್ಚು ಮಾರಾಟವಾದ ಕುಟುಂಬ MPV ಆಯಿತು ಎಂದು ಉಲ್ಲೇಖಿಸಬೇಕಾದ ಅಂಶವಾಗಿದೆ. ಮತ್ತೊಂದೆಡೆ, ಕಿಯಾ ಕಾರ್ನಿವಲ್ ಮತ್ತು ಆಲ್-ಎಲೆಕ್ಟ್ರಿಕ್ ಕಿಯಾ ಇವಿ6 ಕ್ರಮವಾಗಿ 3,550 ಮತ್ತು 430 ಯುನಿಟ್ ಗಳನ್ನು ಮಾರಾಟ ಮಾಡಿದೆ, ಇದಲ್ಲದೆ, ಹಸಿರು ತಂತ್ರಜ್ಞಾನವನ್ನು ಉತ್ತೇಜಿಸಲು ದೇಶದ ಮೊದಲ ಮತ್ತು ವೇಗವಾದ '240kWh' EV ಚಾರ್ಜರ್ ಅನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ವೇಗವಾಗಿ ಚಾರ್ಜಿಂಗ್ EV ಮೂಲಸೌಕರ್ಯವನ್ನು ನಿರ್ಮಿಸಲು ಕಿಯಾ ಇಂಡಿಯಾ ಕೊಡುಗೆ ನೀಡಿದೆ.
ಇನ್ನು ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ಈ ವರ್ಷದ ಆರಂಭದಲ್ಲಿ ಕಾರೆನ್ಸ್ ಅನ್ನು ಪರಿಚಯಿಸಿತು. ಇದು ಬ್ರ್ಯಾಂಡ್‌ನ ಎರಡನೇ ಎಂಪಿವಿಯಾಗಿದ್ದು, ಕಾರ್ನಿವಲ್ ಈಗಾಗಲೇ ಇಲ್ಲಿ ಮಾರಾಟವಾಗುತ್ತಿದ್ದು, ಪ್ರೀಮಿಯಂ ಜಾಗದಲ್ಲಿ ಉತ್ತಮ ಮಾರಾಟವನ್ನು ಗಳಿಸುತ್ತಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, ಕಿಯಾ ಹೊಸ ಜನರೇಷನ್ ಕಾರ್ನಿವಲ್ ಅನ್ನು ಮಾರಾಟ ಮಾಡುತ್ತಿದೆ. ಹೊಸ ಜನರೇಷನ್ ಕಿಯಾ ಕಾರ್ನಿವಲ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ.
ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಪ್ರೀಮಿಯರ್ ಮೋಟಾರಿಂಗ್ ಶೋ ಅನ್ನು ಆಯೋಜಿಸಲಾಗುವುದು ಮತ್ತು ಕಿಯಾ ಇತ್ತೀಚೆಗೆ ಇವಿ9 ಏಳು ಆಸನಗಳ ಎಲೆಕ್ಟ್ರಿಕ್ ಎಸ್‍ಯುವಿ ಕಾನ್ಸೆಪ್ಟ್ ಟೀಸರ್ ಅನ್ನು ಬಿಡುಗಡೆ ಮಾಡಿದೆ. ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ. ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಪ್ರೀಮಿಯರ್ ಮೋಟಾರಿಂಗ್ ಶೋ ಅನ್ನು ಆಯೋಜಿಸಲಾಗುವುದು ಮತ್ತು ಕಿಯಾ ಇತ್ತೀಚೆಗೆ EV9 ಏಳು ಆಸನಗಳ ಎಲೆಕ್ಟ್ರಿಕ್ ಎಸ್‍ಯುವಿಯ ಟೀಸರ್ ಬ್ಬಿಡುಗಡೆ ಮಾಡಿದೆ.
ಇನ್ನು ಕಿಯಾ ಇಂಡಿಯಾ ಕಂಪನಿಯು ತನ್ನ EV9 ಎಲೆಕ್ಟ್ರಿಕ್ SUV ಅನ್ನು ಜನವರಿಯಲ್ಲಿ ಮುಂಬರುವ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಮುಂದೆ ತರಲಿದೆ. ಅಂದರೆ ಕಿಯಾ ತನ್ನ EV6 ಬಳಿಕ ಎರಡನೇ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಿದೆ. ಇದನ್ನು ಧೃಡಪಡಿಸುವ ನಿಟ್ಟಿನಲ್ಲಿ ಹೊಸ ಟೀಸರ್ ಬಿಡುಗಡೆ ಮಾಡಿ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಕಳೆದ ವರ್ಷ 2021 ರಲ್ಲಿ ಅಮೆರಿಕಾದ ಲಾಸ್ ಏಂಜಲ್ಸ್ ನಗರದಲ್ಲಿ ಆಟೋ ಎಕ್ಸ್‌ಪೋ ನಡೆದಾಗ, ಕಿಯಾ ತನ್ನ EV9 ಪರಿಕಲ್ಪನೆಯ (ಕಾನ್ಸೆಪ್ಟ್ ಕಾರ್) ಕಾರನ್ನು ಪರಿಚಯಿಸಿತು.


Click it and Unblock the Notifications








