Kia Seltos: ಭಾರತೀಯರಿಗೆ ಇಷ್ಟವಾದ ಕೈಗೆಟುಕುವ ಬೆಲೆಯ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್, ಬೇಡಿಕೆ ದ್ವಿಗುಣ!

ಭಾರತದ ಕಾರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ (Kia Seltos facelift) ಎಸ್‌ಯುವಿ ದೇಶೀಯ ಗ್ರಾಹಕರಿಗೆ ಇಷ್ಟವಾಗಿದೆ. ಅದಕ್ಕೆ ಈ ಕಾರು, ಪಡೆದುಕೊಂಡಿರುವ ಬುಕ್ಕಿಂಗ್ ಸಂಖ್ಯೆಯೇ ಸಾಕ್ಷಿ. ಕಂಪನಿ ಆರ್ಡರ್ ತೆಗೆದುಕೊಳ್ಳುವುದನ್ನು ಶುರು ಮಾಡಿದ ಒಂದೇ ತಿಂಗಳಲ್ಲಿ 31,716 ಮಂದಿ ಕಾಯ್ದಿರಿಸಿದ್ದಾರೆ.

ಒಟ್ಟು ಬುಕ್ಕಿಂಗ್‌ನಲ್ಲಿ ಶೇಕಡ 55% ಆರ್ಡರ್ ಹೆಚ್‌ಟಿಎಕ್ಸ್ (HTX) ರೂಪಾಂತರಕ್ಕೆ ಬಂದಿದೆ. ಇದರೊಟ್ಟಿಗೆ ಪ್ಯೂಟರ್ ಆಲಿವ್ ಬಣ್ಣದ ಆಯ್ಕೆಯೊಂದಿರುವ ಕಾರನ್ನು ಶೇಕಡ 19% ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ಹೆಚ್‌ಟಿಎಕ್ಸ್ ವೇರಿಯೆಂಟ್ ಈ ಮಟ್ಟದಲ್ಲಿ ಆರ್ಡರ್ ಪಡೆದುಕೊಳ್ಳುವುದಕ್ಕೆ ಕಾರಣ, ಅದರಲ್ಲಿರುವ ಆಕರ್ಷಕ ವೈಶಿಷ್ಟಗಳು. ಇದೇ ಬುಕ್ಕಿಂಗ್ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

Kia Seltos: ಭಾರತೀಯರಿಗೆ ಇಷ್ಟವಾದ ಕೈಗೆಟುಕುವ ಬೆಲೆಯ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್, ಬೇಡಿಕೆ ದ್ವಿಗುಣ!

ಹೆಚ್‌ಟಿಎಕ್ಸ್ ರೂಪಾಂತರ ಯಾವೆಲ್ಲ ಫೀಚರ್ಸ್ ಒಳಗೊಂಡಿದೆ ಎಂಬುದನ್ನು ನೋಡುವುದಾದರೆ, ಇದು ಅತ್ಯಾಧುನಿಕ ಸನ್‌ರೂಫ್, 17 - ಇಂಚಿನ ಅಲಾಯ್ ವೀಲ್ಸ್, ದೊಡ್ಡದಾದ 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಫುಲ್ ಎಲ್‌ಇಡಿ ಲೈಟಿಂಗ್, ಲೆಥೆರೆಟ್ ಅಪ್ಹೋಲ್ಸ್ಟರಿ, ಡ್ಯುಯಲ್ - ಝೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ರೂ.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ಬೇಡಿಕೆ ದ್ವಿಗುಣಗೊಂಡಂತೆ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕಾಯುವಿಕೆ ಅವಧಿಯು ಹೆಚ್ಚಾಗಿದೆ. ಟಾಪ್ ಎಂಡ್ ಜಿಟಿಎಕ್ಸ್ ಪ್ಲಸ್ ಹಾಗೂ ಎಕ್ಸ್ ಲೈನ್ ವೇರಿಯೆಂಟ್ ಮೂರು ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ. ಮಿಡ್ ಲೆವೆಲ್ ವೇರಿಯೆಂಟ್ಸ್ ಹೆಚ್‌ಟಿಎಕ್ಸ್ ಹಾಗೂ ಹೆಚ್‌ಟಿಎಕ್ಸ್ ಪ್ಲಸ್ ಮಾದರಿಗಳು ವಿತರಣೆಯಾಗಲು ಎರಡು ತಿಂಗಳು ಹಿಡಿಯಲ್ಲಿದ್ದು, ಎಂಟ್ರಿ ಲೆವೆಲ್ ಮಾದರಿಗಳು ಯಾವುದೇ ಕಾಯುವಿಕೆ ಅವಧಿಯನ್ನು ಹೊಂದಿಲ್ಲ

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ ರೂ.10.89 ಲಕ್ಷದಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಮೂರು ಎಂಜಿನ್ ಆಯ್ಕೆಗಳನ್ನು ಪಡೆದಿದೆ. 1.5 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು,133 bhp ಗರಿಷ್ಠ ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎಂಟಿ/ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

1.5 - ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 158 bhp ಪವರ್, 253 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಐಎಂಟಿ ಅಥವಾ 7 ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಹೊಂದಿದೆ. 1.5 ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ಸೆಲ್ಟೋಸ್ ಫೇಸ್‌ಲಿಫ್ಟ್, 114 bhp ಗರಿಷ್ಠ ಪವರ್, 250 Nm ಟಾರ್ಕ್ ಹೊರಹಾಕುತ್ತದೆ.

ಜೊತೆಗೆ 6 ಸ್ವೀಡ್ ಐಎಂಟಿ/ ಎಂಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಕೂಡ ಈ ಕಾರು, ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ತನ್ಸ್ ಸಿಸ್ಟಮ್), ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.

ರೂಪಾಂತರಗಳಿಗೆ ಅನುಗುಣವಾಗಿ ನೂತನ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿ, 17 kmpl ನಿಂದ 20.7 kmpl ಮೈಲೇಜ್ ನೀಡುತ್ತವೆ. ಸದ್ಯ, ಈ ಕಾರು ಗರಿಷ್ಠ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಂಡಿರುವುದರಿಂದ ಕಾಯುವಿಕೆ ಅವಧಿಯು ಹೆಚ್ಚಳಗೊಂಡಿದ್ದು, ಒಟ್ಟಿನಲ್ಲಿ ವಿದೇಶಿ ಕಂಪನಿ ಕಾರಾಗಿದ್ದರೂ ಭಾರತೀಯರ ಇಷ್ಟದ ಕಾರಾಗಿ ಹೊರಹೊಮ್ಮಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಡಿಮ್ಯಾಂಡ್ ಹೆಚ್ಚಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, August 18, 2023, 12:14 [IST]
English summary
Kia seltos facelift suv waiting period upto 3 months details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+