Kia Sonet: ಜನಪ್ರಿಯ ಕಿಯಾ ಸೋನೆಟ್‌ ಕಾರಿಗೆ ಹೊಸ ಫೀಚರ್ ಘೋಷಣೆ, ಅದು ಕಡಿಮೆ ಬೆಲೆಗೆ ಲಭ್ಯ

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಯಾಗಿದ್ದರೂ ಕಿಯಾ (Kia), ದೇಶದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಅದರ ಸೋನೆಟ್‌ (Sonet) ಕಾರು ಸಾಕಷ್ಟು ಜನಮನ್ನಣೆ ಗಳಿಸಿದೆ. ಕಂಪನಿಯು ತನ್ನ ಗ್ರಾಹಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದ್ದು, ಸೋನೆಟ್‌ ಮಾದರಿಗೆ ಹೊಸ ಫೀಚರ್ ಪರಿಚಯಿಸಿದೆ.

ಇನ್ಮುಂದೆ, ಸೋನೆಟ್‌ ಸ್ಮಾರ್ಟ್‌ಸ್ಟ್ರೀಮ್ ಜಿ1.2 ಹೆಚ್‌ಟಿಕೆ ಪ್ಲಸ್ ರೂಪಾಂತರದಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ನೀಡಲಾಗುವುದು ಎಂದು ಕಿಯಾ ಇಂಡಿಯಾ ಸೋಮವಾರ ಘೋಷಣೆ ಮಾಡಿದೆ. ಈ ವೇರಿಯೆಂಟ್ ರೂ.9.76 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಸೌಲಭ್ಯವನ್ನು ನೀಡುವ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶವನ್ನು ಕಂಪನಿ ಹೊಂದಿದೆ.

Kia Sonet: ಜನಪ್ರಿಯ ಕಿಯಾ ಸೋನೆಟ್‌ ಕಾರಿಗೆ ಹೊಸ ಫೀಚರ್ ಘೋಷಣೆ, ಅದು ಕಡಿಮೆ ಬೆಲೆಗೆ ಲಭ್ಯ

ಈ ಕಿಯಾ ಸೋನೆಟ್‌ ಸ್ಮಾರ್ಟ್‌ಸ್ಟ್ರೀಮ್ ಜಿ1.2 ಹೆಚ್‌ಟಿಕೆ ಪ್ಲಸ್ ವೇರಿಯೆಂಟ್, 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಸನ್‌ರೂಫ್ ಜೊತೆಗೆಯಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಪ್ರೊಜೆಕ್ಷನ್, 4 ಸ್ವೀಕರ್ಸ್, ಆಟೋಮೆಟಿಕ್ ಏರ್ ಕಂಡಿಷನರ್ ಫೀಚರ್ಸ್ ಹೊಂದಿದೆ.

ಕಿಯಾ, 2020ರಲ್ಲಿ ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಸೋನೆಟ್‌ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು. ಇದು, ಅಂದಿನಿಂದಲೇ ಕಂಪನಿಯ ಜನಪ್ರಿಯ ಕಾರೆಂದು ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದೆ. ಕಳೆದ ಮೂರು ವರ್ಷದಲ್ಲಿ 3.3 ಲಕ್ಷ ಗ್ರಾಹಕರ ಮನೆಗೆ ಸೋನೆಟ್‌ ತಲುಪಿದೆ. ಕಂಪನಿ, ಮತ್ತಷ್ಟು ಖರೀದಿದಾರರನ್ನು ಸೆಳೆಯಲು 3 ವರ್ಷ ಉಚಿತ ನಿರ್ವಹಣೆ, 5 ವರ್ಷದ ವಾರಂಟಿ ಹಾಗೂ ಶೂನ್ಯ ಡೌನ್ ಪೇಮೆಂಟ್ ಯೋಜನೆಗಳನ್ನು ಘೋಷಣೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

Kia Sonet: ಜನಪ್ರಿಯ ಕಿಯಾ ಸೋನೆಟ್‌ ಕಾರಿಗೆ ಹೊಸ ಫೀಚರ್ ಘೋಷಣೆ, ಅದು ಕಡಿಮೆ ಬೆಲೆಗೆ ಲಭ್ಯ

ಈ ವರ್ಷದ ಮಾರ್ಚ್ ತಿಂಗಳಲ್ಲಿ ಕಿಯಾ ಕಂಪನಿ, ತನ್ನ ಸೋನೆಟ್‌ ಎಸ್‌ಯುವಿ ಲೈನ್ಅಪ್ ಅನ್ನು ಬಿಎಸ್6 ಹಂತ 2 ಹಾಗೂ ಇ20 (ಶೇಕಡ 20% ಎಥೆನಾಲ್ ಹಾಗೂ 80% ಪೆಟ್ರೋಲ್) ಇಂಧನ ಬೆಂಬಲಿಸುವಂತೆ ಮೇಲ್ದರ್ಜೆಗೇರಿಸಲಾಗಿತ್ತು. ಜೊತೆಗೆ 1.5 - ಲೀಟರ್ WGT ಡೀಸೆಲ್ ಎಂಜಿನ್ ಬದಲಾಗಿ, 1.5 - ಲೀಟರ್ VGT ಡಿಸೇಲ್ ಎಂಜಿನ್ ಅಳವಡಿಸಿತ್ತು

ಇದರೊಟ್ಟಿಗೆ, ಐಡಲ್ ಸ್ಟಾಪ್/ ಸ್ಟಾರ್ಟ್ ಬಟನ್, ಅಮೆಜಾನ್ ಅಲೆಕ್ಸಾಗಾಗಿ ಕಿಯಾ ಕನೆಕ್ಟ್ ಸ್ಕಿಲ್ ಅನ್ನು ನೂತನ ಸೋನೆಟ್‌ ಮಾದರಿಗಳು ಪಡೆದಿದ್ದವು. ಇನ್ನು, ಕಲೆದ ಜುಲೈ ತಿಂಗಳಲ್ಲಿ ಕಿಯಾ ಕಂಪನಿ, ಫೇಸ್‌ಲಿಫ್ಟ್ ಸೆಲ್ಟೋಸ್ ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು ಇದು, ರೂ.10.89 ಲಕ್ಷದಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ 1.5 - ಲೀಟರ್ ಪೆಟ್ರೋಲ್, 1.5 - ಲೀಟರ್ GDi ಟರ್ಬೊ ಪೆಟ್ರೋಲ್ ಹಾಗೂ 1.5 - ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 17 kmpl ನಿಂದ 20.7 kmpl (ARAI) ಮೈಲೇಜ್ ನೀಡುತ್ತದೆ.

ಸೆಲ್ಟೋಸ್ ಫೇಸ್‌ಲಿಫ್ಟ್ ಪಡೆದಿರುವ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು, 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಪೇನ್ ಸನ್‌ರೂಫ್‌, ಡ್ಯುಯಲ್-ಝೋನ್ ಆಟೋಮೆಟಿಕ್ ಕ್ಲೇಮೇಟ್ ಅನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ), 6 ಏರ್‌ಬ್ಯಾಗ್ಸ್, ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, August 29, 2023, 12:26 [IST]
English summary
Kia sonet suv offers sunroof rs 9 76 lakh details
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+