ಕಂಪನಿಗಳಿಗೆ ಕಂಟಕವಾದ ಕೆಲ ಕಾರುಗಳು... ಏನೇ ಮಾಡಿದ್ರೂ ಬೇಡ ಎನ್ನುತ್ತಿದ್ದಾರೆ ಗ್ರಾಹಕರು!

ಆಟೋ ಉದ್ಯಮದಲ್ಲಿ ಯಾವುದೇ ಕಾರು ಕಂಪನಿಯಾಗಿರಲಿ ತಮ್ಮ ಎಲ್ಲಾ ವಾಹನಗಳು ಉತ್ತಮವಾಗಿ ಮಾರಾಟವಾಗುವುದಿಲ್ಲ. ಬದಲಾಗಿ ಕೆಲವು ಭಾರೀ ಬೇಡಿಕೆ ಪಡೆದ್ರೆ, ಇನ್ನೂ ಕೆಲವು ಗ್ರಾಹಕರನ್ನು ಮೆಚ್ಚಿಸಲು ವಿಫಲವಾಗುತ್ತವೆ. ಮಾರುತಿ ಸುಜುಕಿ ಬಲೆನೊ, ವ್ಯಾಗನ್ಆರ್, ಬ್ರೆಝಾ, ನೆಕ್ಸಾನ್, ಟಾಟಾ ಪಂಚ್ ನಂತಹ ಕಾರುಗಳು ಮಾರುಕಟ್ಟೆಯಲ್ಲಿ ಭಾರೀ ಮಾರಾಟವನ್ನು ಹೊಂದಿವೆ.

ಆದರೆ ಈ ಕಾರುಗಳನ್ನು ತಯಾರಿಸಿದ ಕಂಪನಿಗಳ ಇನ್ನೂ ಕೆಲವು ವಾಹನಗಳು ಗ್ರಾಹಕರಿಗೆ ಇಷ್ಟವಾಗುತ್ತಿಲ್ಲ. ಪ್ರತಿ ತಿಂಗಳ ಮಾರಾಟದಲ್ಲಿ ಈ ಕಾರುಗಳು ಕಳಪೆ ಪ್ರದರ್ಶನ ನೀಡುತ್ತಿವೆ. ಈ ಕಾರುಗಳಲ್ಲಿ ಉತ್ತಮ ವೈಶಿಷ್ಟ್ಯಗಳಿದ್ದರೂ ಸಹ ಮಾರಾಟದಲ್ಲಿ ಹಿನ್ನಡೆ ಕಾಣುತ್ತಿವೆ. ಇದಕ್ಕೆ ಹಲವು ಕಾರಣಗಳಿರಬಹುದು. ಸದ್ಯ ನವೆಂಬರ್ 2023 ರಲ್ಲಿ ಕಡಿಮೆ ಮಾರಾಟವಾದ (least selling cars) ಕಾರುಗಳನ್ನು ಇಲ್ಲಿ ನೋಡೋಣ.

least-selling-cars-november-2023-renault-kiger-hyundai-tucson-maruti-ciaz

ರೆನಾಲ್ಟ್ ಕಿಗರ್ (Renault Kiger): ಭಾರತದಲ್ಲಿ, ರೆನಾಲ್ಟ್ ಕಂಪನಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ, Kiger ಹಲವಾರು ಮುಂದುವರಿದ ಹಾಗೂ ತನ್ನ ವಿಭಾಗದ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆದರೆ ಈ ಕಾರು ಕಂಪನಿಯ ನಿರೀಕ್ಷೆಯಂತೆ ಗ್ರಾಹಕರನ್ನು ಸೆಳೆಯುತ್ತಿಲ್ಲ. ಕಳೆದ ತಿಂಗಳು ರೆನಾಲ್ಟ್ ಕಿಗರ್ ಕೇವಲ 530 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದಕ್ಕೆ ಇತರ ಕಾರುಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ.

ಸಿಟ್ರನ್ ಸಿ3 (Citroen C3): ಫ್ರೆಂಚ್ ಕಾರು ತಯಾರಕ ಕಂಪನಿ ಸಿಟ್ರನ್ ತನ್ನ ಅತ್ಯಂತ ಕೈಗೆಟುಕುವ ಹ್ಯಾಚ್‌ಬ್ಯಾಕ್, ಸಿಟ್ರನ್ C3 ಅನ್ನು ಜುಲೈ 2022 ರಲ್ಲಿ ಬಿಡುಗಡೆ ಮಾಡಿತು. ಆದರೆ, ಈ ಕಾರು ಒಂದು ವರ್ಷದ ನಂತರವೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ವಿಫಲವಾಗಿದೆ. ನವೆಂಬರ್ 2023 ರಲ್ಲಿ, ಕಂಪನಿಯು C3 ನ 265 ಕಾರುಗಳನ್ನು ಮಾತ್ರ ಮಾರಾಟ ಮಾಡಿದೆ.

least-selling-cars-november-2023-renault-kiger-hyundai-tucson-maruti-ciaz

ಹ್ಯುಂಡೈ ಟಕ್ಸನ್ (Hyundai Tucson): ಹ್ಯುಂಡೈನ 7 ಆಸನಗಳ ಟಕ್ಸನ್ ಎಸ್‌ಯುವಿ ತನ್ನ ಉತ್ತಮ ವಿನ್ಯಾಸ, ವೈಶಿಷ್ಟ್ಯಗಳನ್ನು ಹೊಂದಿರುವ ಹೊರತಾಗಿಯೂ ಗ್ರಾಹಕರನ್ನು ಸೆಳೆಯಲು ಪರದಾಡುತ್ತಿದೆ. ನವೆಂಬರ್ 2023 ರ ಹೊತ್ತಿಗೆ, ಕಾರಿನ 118 ಯುನಿಟ್‌ಗಳು ಮಾತ್ರ ಮಾರಾಟವಾಗಿವೆ. ಇದನ್ನು ಕಂಪನಿಯೇ ನಿಲ್ಲಿಸುವುದು ಒಳಿತು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಮಾರುತಿ ಸಿಯಾಜ್ (Maruti Ciaz): ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಮಾರುತಿಯ ಪ್ರೀಮಿಯಂ ಸೆಡಾನ್ ಸಿಯಾಜ್ ಇಂದು ಗ್ರಾಹಕರಿಂದ ದೂರ ಉಳಿದಿದೆ. ಕಳೆದ ತಿಂಗಳು ಕಂಪನಿಯು ಕೇವಲ 278 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿದೆ. ಮಾರುತಿ ಸಿಯಾಜ್ ಬೆಲೆ ರೂ. 9.30 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಬೆಲೆಯೂ ಕಡಿಮೆ ಮಾರಾಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

least-selling-cars-november-2023-renault-kiger-hyundai-tucson-maruti-ciaz

ಎಂಜಿ ಗ್ಲೋಸ್ಟರ್ (MG Gloster): ಭಾರತದಲ್ಲಿ ಕಂಪನಿಯ ಪೂರ್ಣ ಗಾತ್ರದ SUV ಆಗಿದೆ. ಕಂಪನಿಯ ಎರಡನೇ SUV, Hector ನ ಮಾರಾಟವು ಉತ್ತಮವಾಗಿದೆ. ಆದರೆ ಗ್ಲೋಸ್ಟರ್ ಗ್ರಾಹಕರನ್ನು ಸೆಳೆಯುತ್ತಿಲ್ಲ. ಗ್ಲೋಸ್ಟರ್ 4X4 ಸಾಮರ್ಥ್ಯದ SUV ಆಗಿದೆ. ಇದು ADAS ಲೆವೆಲ್-1 ಸ್ವಾಯತ್ತ ಚಾಲನಾ ವೈಶಿಷ್ಟ್ಯವನ್ನು ಸಹ ಹೊಂದಿದೆ. ಕಳೆದ ತಿಂಗಳು ಕೇವಲ 172 ಜನರು ಈ ಎಸ್‌ಯುವಿಯನ್ನು ಖರೀದಿಸಿದ್ದಾರೆ.

ಜೀಪ್ ಕಂಪಾಸ್ (Jeep Compass): ಜೀಪ್ ಕಂಪಾಸ್ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಸಮರ್ಥ ಆಫ್ ರೋಡ್ SUV ಗಳಲ್ಲಿ ಒಂದಾಗಿದೆ. ಒರಟಾದ ರಸ್ತೆಗಳಲ್ಲಿಯೂ ಸಹ ಕಾರಿನ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಕಂಪನಿಯು ಇದರಲ್ಲಿ 4X4 ಡ್ರೈವ್ ಟ್ರೈನ್ ಅನ್ನು ನೀಡುತ್ತದೆ. ಈ ಎಸ್‌ಯುವಿ ಗ್ರಾಹಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿದೆ. ಕಳೆದ ತಿಂಗಳು ಕಂಪಾಸ್ ಎಸ್‌ಯುವಿಯ 216 ಕಾರುಗಳು ಮಾತ್ರ ಮಾರಾಟವಾಗಿವೆ.

More from DriveSpark

Article Published On: Tuesday, December 12, 2023, 10:19 [IST]
English summary
Least selling cars november 2023 renault kiger hyundai tucson maruti ciaz
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+