Just In
- 5 min ago
ಶೀಘ್ರ ವೈಯಕ್ತಿಕ ಬಳಕೆಗೆ ಸಿಗಲಿದೆ ಬಜಾಜ್ ಕ್ಯೂಟ್: ಅದು ಬೈಕ್ ದರದಲ್ಲಿಯೇ...!
- 23 min ago
ಮಂಗಳೂರಿನಲ್ಲಿ ಐಕಾನಿಕ್ ವಿಲ್ಲೀಸ್ ಜೀಪ್ನಂತೆ ಮಾಡಿಫೈಗೊಂಡ ಮಹೀಂದ್ರಾ ಥಾರ್
- 38 min ago
ಮಾರುತಿಯಿಂದ 2023 ರಲ್ಲಿ 5 ಹೊಸ ಎಸ್ಯುವಿಗಳ ಬಿಡುಗಡೆ... ಶೀಘ್ರದಲ್ಲೇ 3 ಕಾರುಗಳು ಮಾರುಕಟ್ಟೆಗೆ
- 3 hrs ago
ಬಿಡುಗಡೆಗೆ ಸಜ್ಜಾಗಿರುವ 2023 ಹೋಂಡಾ ಸಿಟಿ ಫೇಸ್ಲಿಫ್ಟ್ನಲ್ಲಿ ಇವೆಲ್ಲವನ್ನು ನಿರೀಕ್ಷಿಸಬಹುದು!
Don't Miss!
- Movies
ಪುಟ್ಟಕ್ಕನ ಮನೆಗೆ ಆಗಮಿಸಿದ ರಾಜಿ; ಲಗ್ನ ಪತ್ರಿಕೆಯಲ್ಲಿ ರಾಜಿ ಹೆಸರು ಹಾಕುತ್ತಾಳಾ ಸ್ನೇಹಾ?
- News
ಕಡಿಮೆ ಬಡ್ಡಿದರದಲ್ಲಿ ರೈತರಿಗೆ 20 ಲಕ್ಷ ಸಾಲ ಘೋಷಿಸಿದ ಸಿದ್ದರಾಮಯ್ಯ
- Finance
ಬಜೆಟ್ 2023: ಗಣರಾಜ್ಯೋತ್ಸವ ದಿನದಂದೇ ಬಜೆಟ್ ಹಲ್ವಾ ಸಮಾರಂಭ
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಧೂಳೆಬ್ಬಿಸಲು ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್
ಭಾರತದಲ್ಲಿ ಪ್ರತಿಯೊಬ್ಬ ಗ್ರಾಹಕರು ಮಹೀಂದ್ರಾ ಕಂಪನಿ ತಯಾರಿಸುವ ವಾಹನಗಳನ್ನು ಖರೀದಿ ಮಾಡಲು ಬಯಸುತ್ತಾರೆ. ಅವುಗಳ ಬೆಲೆ, ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಗ್ರಾಹಕರಿಗೆ ಇಷ್ಟವಾಗುತ್ತದೆ ಎಂದು ಹೇಳಬಹುದು. ಅದರಂತೆ ಕಂಪನಿಯು ಅಗ್ಗದ ಬೆಲೆಯಲ್ಲಿ ದೊರೆಯುವ ಕಾರುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತದೆ.
ಇದೀಗ ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿ ಬಹುನಿರೀಕ್ಷಿತ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಅನ್ನು(Mahindra Bolero Neo Limited Edition) ಬಿಡುಗಡೆ ಮಾಡಿದೆ. ಈ ಎಸ್‌ಯುವಿ ರೂ.11.50 ಲಕ್ಷ (ಎಕ್ಸ್ ಶೋರೂಂ ಭಾರತ) ಬೆಲೆಯನ್ನು ಹೊಂದಿದ್ದು, ಬಹುತೇಕ ಟಾಪ್ ಎಂಡ್ ಮಾದರಿಯಾದ ಬೊಲೆರೊ ಎನ್10ಗೆ ಹೋಲುತ್ತದೆ ಎಂದು ಹೇಳಬಹುದು. ಸದ್ಯ ಲಾಂಚ್ ಆಗಿರುವ ಈ ನೂತನ ಎಸ್‌ಯುವಿ ಸಾಕಷ್ಟು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಖರೀದಿದಾರರನ್ನು ಆಕರ್ಷಿಸಬಹುದು.
ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಹೊರ ಹಾಗೂ ಒಳ ಭಾಗದ ವಿನ್ಯಾಸದ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ರೂಫ್ ಸ್ಕೀ-ರಾಕ್‌ಗಳು, ಫಾಗ್ ಲೈಟ್‌ಗಳು, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್ ಜೊತೆ ಆಕರ್ಷಕ ಹೆಡ್‌ಲ್ಯಾಂಪ್‌ನ್ನು ಹೊಂದಿದೆ. ಒಳಭಾಗದಲ್ಲಿ ಈ ಎಸ್‌ಯುವಿ ಡ್ಯೂಯಲ್ ಟೋನ್ ಫ್ಯಾಕ್ಸ್ ಲೆದರ್ ಸೀಟ್ಸ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಫಸ್ಟ್ ಮತ್ತು ಸೆಕೆಂಡ್ ರೋನಲ್ಲಿ ಆರ್ಮ್ ರೆಸ್ಟ್ ಅನ್ನು ಪಡೆದಿದ್ದು, ಗ್ರಾಹಕರು ಲೈಕ್ ಮಾಡುತ್ತಾರೆ ಎನ್ನುವ ವಿಶ್ವಾಸದಲ್ಲಿ ಕಂಪನಿಯಿದೆ.
ನೂತನವಾಗಿ ಬಿಡುಗಡೆಯಾಗಿರುವ ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 1.5-ಲೀಟರ್ mHawk 100 ಡೀಸೆಲ್ ಎಂಜಿನ್ ಹೊಂದಿದ್ದು, 100 bhp ಗರಿಷ್ಠ ಪವರ್ ಹಾಗೂ 260 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಕೇವಲ 5 - ಸ್ವೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಮಾದರಿಯು ಏಳು ಸೀಟ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ ಎಂದು ಹೇಳಬಹುದು.
ಇಷ್ಟೇಅಲ್ಲದೆ, ಹೊಸ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್, ಏಳು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೊಲೆರೊ ನಿಯೋ ಎನ್10 ಸಹ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ. ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್‌ಟೀರಿಯರ್ ರೇರ್ ವ್ಯೂ ಮಿರರ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಅಲಾಯ್ ವೀಲ್ಸ್, ಫ್ರಂಟ್, ರೇರ್ ಪವರ್ ವಿಂಡೋಸ್ ಹಾಗೂ ಏರ್‌ಬ್ಯಾಗ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಬೊಲೆರೊ ನಿಯೋ ಎನ್10 ರೂಪಾಂತರವು 5 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಡೈಮಂಡ್ ವೈಟ್, ರಾಕಿ ಬೀಜ್, ಮೆಜೆಸ್ಟಿಕ್ ಸಿಲ್ವರ್, ನಪೋಲಿ ಬ್ಲಾಕ್ ಹಾಗೂ ಹೈವೇ ರೆಡ್. ಅಲ್ಲದೆ, ಇದು 1493 ಸಿಸಿ ಎಂಜಿನ್ ಹೊಂದಿದ್ದು, 3750 rpmನಲ್ಲಿ 100 bhp ಪವರ್, 750-2250 rpmನಲ್ಲಿ 260nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ ಮ್ಯಾನುಯಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಸಿಗಲಿದೆ ಎಂದು ಹೇಳಬಹುದು.
ಈ ಬೊಲೆರೊ ನಿಯೋ ಎನ್10 ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದ್ದು, 17.29 kmpl ಮೈಲೇಜ್ ನೀಡಲಿದ್ದು, ರೂ.11.99 ಲಕ್ಷ ಆನ್ ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಇಷ್ಟೇ ಬೆಲೆಯ ಆಸುಪಾಸಿನಲ್ಲಿ ಮಹೀಂದ್ರಾದ ಇತರೆ ಎಸ್‌ಯುವಿಗಳು ಖರೀದಿಗೆ ಲಭ್ಯವಿವೆ. ಮಹೀಂದ್ರಾ ಬೊಲೆರೊ B6 ಎಂಜಿನ್ ಆಯ್ಕೆ ಹೊಂದಿರುವ ಕಾರಿನ ಬೆಲೆ ರೂ.10.48 ಲಕ್ಷ ಇದ್ದು, ಮಹೀಂದ್ರಾ XUV300 W8 ಡೀಸೆಲ್ ಆವೃತ್ತಿ ದರ ರೂ.12.41 ಲಕ್ಷ ಇದೆ.
ಸದ್ಯ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಅಷ್ಟೇನೂ ಹೆಚ್ಚಿನ ಬೆಲೆಯನ್ನು ಹೊಂದಿಲ್ಲ ಎಂದು ಹೇಳಬಹುದು. ಇದು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿಯೇ (ರೂ.11.50 ಲಕ್ಷ) ಇದೆ. ಈ ಹೊಸ ಎಸ್‌ಯುವಿ ಒಂದಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಭಾರತದಂತಹ ರಸ್ತೆಗಳಲ್ಲಿ ಸಂಚರಿಸಲು ಹೇಳಿ ಮಾಡಿಸಿದಂತಹ ವಾಹನವಾಗಿದೆ. ಇದರ ವಿತರಣೆಗಳು ಆರಂಭವಾದ ಮೇಲೆ ಮತ್ತಷ್ಟು ಹೊಸ ಗ್ರಾಹಕರನ್ನು ಸೆಳೆಯುವ ಸಾಧ್ಯತೆಯಿದ್ದು, ಬೇಡಿಕೆಯು ಹೆಚ್ಚಾಗಬಹುದು.