ಕಾರು ಖರೀದಿಸಲು ಇದೇ ಸರಿಯಾದ ಸಮಯ... ಜನವರಿಗೆ ಬೆಲೆ ಏರಿಕೆ ಪಕ್ಕಾ ಎಂದ ಮಹೀಂದ್ರಾ!
ಜನವರಿ 2024 ರಿಂದ ಜಾರಿಗೆ ಬರಲಿರುವ ತನ್ನ ಶ್ರೇಣಿಯ SUV ಗಳಿಗೆ ಮಹೀಂದ್ರಾ ಬೆಲೆ ಏರಿಕೆಯನ್ನು ಘೋಷಿಸಿದೆ. ಕಾರು ತಯಾರಕರು ನಂತರದ ದಿನಾಂಕದಂದು ಮಾಡೆಲ್-ವಾರು ಬೆಲೆ ಹೆಚ್ಚಳದ ಪ್ರಮಾಣವನ್ನು ಬಹಿರಂಗಪಡಿಸಲಿದ್ದಾರೆ. ಹಣದುಬ್ಬರ ಮತ್ತು ಹೆಚ್ಚಿದ ಸರಕುಗಳ ಬೆಲೆಗಳಿಂದಾಗಿ ಹೆಚ್ಚುತ್ತಿರುವ ವೆಚ್ಚಗಳು ಮಹೀಂದ್ರಾದಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಮಹೀಂದ್ರಾ ತನ್ನ ಅಧಿಕೃತ ಹೇಳಿಕೆಯಲ್ಲಿ, ಬ್ರ್ಯಾಂಡ್ ಈ ಹೆಚ್ಚುವರಿ ವೆಚ್ಚಗಳನ್ನು ಸಾಧ್ಯವಾದಷ್ಟು ಹಿಡಿದಿಟ್ಟುಕೊಳ್ಳಲು ಪ್ರಯತ್ನಗಳನ್ನು ಮಾಡಿದೆ. ಆದರೆ, ಈ ಹೆಚ್ಚಳದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಕೇವಲ ಮಹೀಂದ್ರಾ ಮಾತ್ರವಲ್ಲ ಮಾರುತಿ, ಹ್ಯುಂಡೈ, MG, ಆಡಿ ಮತ್ತು ಟಾಟಾ ಮೋಟಾರ್ಸ್ ತಮ್ಮ ಕಾರುಗಳ ಬೆಲೆಗಳನ್ನು ಮುಂದಿನ ತಿಂಗಳಿನಿಂದ ಹೆಚ್ಚಿಸಲಾಗುವುದು ಎಂದು ಬಹಿರಂಗಪಡಿಸಿವೆ.

ಹಬ್ಬದ ಸೀಸನ್‌ಗೆ ಮಹೀಂದ್ರಾ ಅಧಿಕ ಮಾರಾಟ: ಮಹೀಂದ್ರಾ ನವೆಂಬರ್ 2023 ರವರೆಗೆ ಒಟ್ಟಾರೆ 70,576 ವಾಹನಗಳ ಮಾರಾಟವನ್ನು ಘೋಷಿಸಿದೆ. ರಫ್ತು ಸೇರಿದಂತೆ ಶೇ 21 ರಷ್ಟು ಬೆಳವಣಿಗೆಯಾಗಿದೆ. ಯುಟಿಲಿಟಿ ವೆಹಿಕಲ್ಸ್ ವಿಭಾಗದಲ್ಲಿ, Mahindra ದೇಶೀಯ ಮಾರುಕಟ್ಟೆಯಲ್ಲಿ 39,981 ವಾಹನಗಳನ್ನು ಮಾರಾಟ ಮಾಡಿ ಶೇ 32 ರಷ್ಟು ಬೆಳವಣಿಗೆ ಕಂಡಿದ್ದು, ರಫ್ತು ಸೇರಿದಂತೆ ಒಟ್ಟಾರೆ 40,764 ವಾಹನಗಳನ್ನು ಮಾರಾಟ ಮಾಡಿದೆ.
ಹಾಗೆಯೇ ದೇಶೀಯ ಮಾರುಕಟ್ಟೆಯಲ್ಲಿ 22,211 ವಾಣಿಜ್ಯ ವಾಹನಗಳನ್ನು ಮಾರಾಟ ಮಾರಾಟ ಮಾಡಿರುವುದಾಗಿ ತಿಳಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಾರಾಟವಾದ 30,528 ಯೂನಿಟ್ ಟ್ರಾಕ್ಟರ್‌ಗಳಿಗೆ ಹೋಲಿಸಿದರೆ ಈ ವರ್ಷ ನವೆಂಬರ್‌ನಲ್ಲಿ 32,074 ಯೂನಿಟ್‌ಗಳ ಟ್ರ್ಯಾಕ್ಟರ್ ಸಗಟು ಮಾರಾಟವಾಗಿದೆ. ಹಾಗೆಯೇ ರಫ್ತುಗಳ ವಿಷಯಕ್ಕೆ ಬಂದರೆ ನವೆಂಬರ್ 2022 ರಲ್ಲಿ 1,348 ಯುನಿಟ್‌ಗಳಿಂದ ಕಳೆದ ತಿಂಗಳು 1,005 ಯುನಿಟ್‌ಗಳಿಗೆ ಇಳಿದಿದೆ ಎಂದು Mahindra ಹೇಳಿದೆ.

M&M ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ನಕ್ರಾ ಪ್ರಕಾರ, "ನಮ್ಮ SUV ಪೋರ್ಟ್‌ಫೋಲಿಯೊಗೆ ಬಲವಾದ ಬೇಡಿಕೆಯ ಬೆಂಬಲದೊಂದಿಗೆ ನಾವು ನಮ್ಮ ಬೆಳವಣಿಗೆಯ ಪ್ರವೃತ್ತಿಯನ್ನು ಮುಂದುವರಿಸುತ್ತೇವೆ. ನವೆಂಬರ್‌ನಲ್ಲಿ, ನಾವು ಒಟ್ಟು 39,981 ಯುನಿಟ್‌ಗಳನ್ನು ಮಾರಾಟ ಮಾಡಿದ್ದೇವೆ, ಇದು ಶೇ 32 ರಷ್ಟು ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಹಬ್ಬದ ಸಂದರ್ಭಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿತ್ತು, ತಿಂಗಳಲ್ಲಿ ಆಯ್ದ ದಿನಗಳಲ್ಲಿ ವಿವಿಧ ಭಾಗಗಳಲ್ಲಿ ನಾವು ಪೂರೈಕೆ ಸವಾಲುಗಳನ್ನು ಎದುರಿಸಿದ್ದೇವೆ. ನಾವು ಸೂಕ್ಷ್ಮವಾಗಿ ಗಮನಿಸಿ ಸವಾಲುಗಳನ್ನು ತಗ್ಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಗ್ರಾಹಕರಿಗೆ ಹೇಳಿದ ಸಮಯಕ್ಕೆ ಡೆಲಿವರಿಗಳನ್ನು ನೀಡಲು ಸಾಕಷ್ಟು ಶ್ರಮಿಸಲಾಗುತ್ತಿದೆ ಎಂದು ವಿಜಯ್ ನಕ್ರಾ ಹೇಳಿದರು.

"ಹಬ್ಬದ ಸೀಸನ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಕಂಡಿದ್ದು, ಖಾರಿಫ್ ಸುಗ್ಗಿ, ಧನ್ತೇರಸ್ ಮತ್ತು ದೀಪಾವಳಿಯ ಸಮಯದಲ್ಲಿ ಚಿಲ್ಲರೆ ಮಾರಾಟವು ಪ್ರಬಲವಾಗಿದೆ." ವ್ಯಾಪಾರದ ನಿಯಮಗಳು ರೈತರಿಗೆ ಅನುಕೂಲಕರವಾಗಿ ಮುಂದುವರಿಯುತ್ತವೆ, ಆದರೆ ಸರ್ಕಾರದ ಗ್ರಾಮೀಣ ಖರ್ಚು ಮತ್ತು ರಬಿ ಬಿತ್ತನೆಯ ಪ್ರಗತಿಯು ಗಮನಿಸಬೇಕಾದ ಅಂಶಗಳಾಗಿವೆ ಎಂದು M&M ಅಧ್ಯಕ್ಷ-ಫಾರ್ಮ್ ಸಲಕರಣೆ ವಲಯದ ಹೇಮಂತ್ ಸಿಕ್ಕಾ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications