'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..

ಭಾರತದಲ್ಲಿ ಮಹೀಂದ್ರಾದ ಸ್ಕಾರ್ಪಿಯೊ ಎನ್ ಎಸ್‌ಯುವಿಗೆ ಸರಿಸಾಟಿಯೇ ಇಲ್ಲ. ಅತ್ಯುತ್ತಮ ಕಾರ್ಯವೈಖರಿ ಹಾಗೂ ನವೀನ ವೈಶಿಷ್ಟ್ಯಗಳಿರುವುದರಿಂದ ಪ್ರತಿಯೊಬ್ಬರು ಅದನ್ನು ಖರೀದಿ ಮಾಡಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ, ಸ್ಕಾರ್ಪಿಯೊ ಎನ್ ಎಸ್‌ಯುವಿಯ Z6 ಡೀಸೆಲ್, Z8 ಪೆಟ್ರೋಲ್ & ಡೀಸೆಲ್ ರೂಪಾಂತರದ ವಿತರಣೆ ಪಡೆಯಲು 2 ವರ್ಷ ಕಾಯಲೇಬೇಕು.

ಆರು ಅಥವಾ ಏಳು ಸೀಟ್ ಆಯ್ಕೆ ಹೊಂದಿರುವ 'ಮಹೀಂದ್ರಾ ಸ್ಕಾರ್ಪಿಯೊ ಎನ್' ವಿವಿಧ ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಅವುಗಳೆಂದರೆ, Z2, Z4, Z6, Z8 ಮತ್ತು Z8 L. ಆರಂಭಿಕ ಬೆಲೆ ರೂ.12.74 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ರೂ.24.05 ಲಕ್ಷ ಎಕ್ಸ್ ಶೋರೂಂ ದರಕ್ಕೆ ಸಿಗಲಿದೆ. ನೀವೇನಾದರೂ ಎಂಟ್ರಿ ಲೆವೆಲ್ Z2 ರೂಪಾಂತರದ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯನ್ನು ಬುಕಿಂಗ್ ಮಾಡಿದರೆ, ವಿತರಣೆ ಪಡೆಯಲು 85 ರಿಂದ 90 ವಾರ ಕಾಯಬೇಕು.

ಮಹೀಂದ್ರಾ ಸ್ಕಾರ್ಪಿಯೊ ಎನ್ ಈ ರೂಪಾಂತರಗಳಿಗೆ 2 ವರ್ಷ ಕಾಯಬೇಕು..

ಮಹೀಂದ್ರಾ ಸ್ಕಾರ್ಪಿಯೊ ಎನ್ Z4 ರೂಪಾಂತರವು ಸುಮಾರು 90 ರಿಂದ 95 ವಾರಗಳ ಬಳಿಕ ನಿಮಗೆ ಸಿಕ್ಕರೆ, ಅದಕ್ಕಿಂದ ಹೆಚ್ಚಿನ ಸಮಯ ಅಂದರೆ 100 ರಿಂದ 105 ವಾರ ಕಾಯುವಿಕೆಯ ನಂತರ Z6 ಡೀಸೆಲ್ ಆವೃತ್ತಿಯನ್ನು ವಿತರಣೆ ಮಾಡಲಾಗುತ್ತದೆ. ಬಹುತೇಕ Z8 ರೂಪಾಂತರದ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಿಗೂ ಇದೇ ಸಮಯ ಬೇಕಾಗಲಿದೆ. ಇಷ್ಟೇಅಲ್ಲದೆ, Z8 ಐಷಾರಾಮಿ ರೂಪಾಂತರ ಮಾತ್ರ ಕೊಂಚ ಬೇಗನೇ ವಿತರಣೆಯಾಗಲಿದೆ. ಆದರೂ ಅದು ಸಿಗುವುದು 20 ರಿಂದ 25 ವಾರಗಳ ಬಳಿಕವಷ್ಟೇ.

ಟಾಪ್ ಎಂಡ್ ರೂಪಾಂತರವಾದ Z8 L ಬುಕ್ ಮಾಡಿದರೆ, 70 ರಿಂದ 75 ವಾರಗಳ ನಂತರ ದೊರೆಯುತ್ತದೆ. ಸಾಕಷ್ಟು ಅತ್ಯಾಧುನಿಕ ಹೊರಭಾಗ ಹಾಗೂ ಒಳಭಾಗದ ವೈಶಿಷ್ಟ್ಯಗಳನ್ನು ನೂತನ ಸ್ಕಾರ್ಪಿಯೊ ಎನ್ ಹೊಂದಿದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ ಇದು ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, 2.0-ಲೀಟರ್ 4 - ಸಿಲಿಂಡರ್ ಪೆಟ್ರೋಲ್ ಮತ್ತು 2.2-ಲೀಟರ್ 4 - ಸಿಲಿಂಡರ್ ಡೀಸೆಲ್ ಎಂಜಿನ್. ಇವರೆಡು 6 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿವೆ.

ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರುವ ಎಸ್‌ಯುವಿಯು 203 hp ಗರಿಷ್ಠ ಪವರ್ ಹಾಗೂ 370 ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದ್ದು, ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿರುವ ಎಸ್‌ಯುವಿ 203 hp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಕೆಲವು ಮಾದರಿಗಳನ್ನು RWD (ರೇರ್ ವೀಲ್ ಡ್ರೈವ್) ಹಾಗೂ ಟಾಪ್ ಎಂಡ್ ಮಾದರಿಯನ್ನು 4WD (ಫೋರ್ ವೀಲ್ ಡ್ರೈವ್) ಕಾನ್ಫಿಗರೇಶನ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್ ನವೀನ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಸೋನಿ 3D ಆಡಿಯೊ ಸಿಸ್ಟಮ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ ಬ್ರೇಕಿಂಗ್ ಸಿಸ್ಟಮ್) ಜೊತೆಗೆ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ರೋಲ್ ಓವರ್ ಮಿಟಿಗೇಶನ್ ನಂತಹ ವೈಶಿಷ್ಟ್ಯಗಳಿವೆ.

ಸ್ಕಾರ್ಪಿಯೊ ಎನ್ ಮಾತ್ರವಲ್ಲದೆ, ಮಹೀಂದ್ರಾದ ಮತ್ತೊಂದು ಎಸ್‌ಯುವಿಯಾಗಿರುವ XUV700ಗೂ ಇಷ್ಟೇ ಮಟ್ಟದಲ್ಲಿ ಜನಪ್ರಿಯತೆ ಇದೆ. ಇದರ ಕೆಲವು ರೂಪಾಂತರಗಳನ್ನು ಖರೀದಿಸಲು ಗ್ರಾಹಕರು ಕನಿಷ್ಠ ಪಕ್ಷ 18-20 ತಿಂಗಳವರೆಗೆ ಕಾಯಬೇಕಾಗಿದೆ. ರೂ.13.45 ಲಕ್ಷದಿಂದ ರೂ.24.95 ಲಕ್ಷ ದರವನ್ನು ಹೊಂದಿದೆ. ಅಲ್ಲದೆ, ಮಹೀಂದ್ರಾ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೊ ಎನ್ ಬೆಲೆಯನ್ನು ಒಂದು ಲಕ್ಷದವರೆಗೆ ಹಾಗೂ XUV700 ಬೆಲೆಯನ್ನು ರೂ.64,000ವರೆಗೆ ಏರಿಸಿದೆ. ಒಟ್ಟಾರೆ ಇವುಗಳ ಜನಪ್ರಿಯತೆಗೆ ಬೇರೆ ಯಾವ ಕಂಪನಿಗಳು ಕಾರುಗಳು ಸಮವೇ ಅಲ್ಲ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Mahindra scorpio n highest waiting period two year details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X