ನಾಲ್ಕೇ ದಿನಕ್ಕೆ ಕೈಕೊಟ್ಟ ಹೊಸ ಕಾರು: ಸಗಣಿ ಸಾಗಿಸಲು ಲಾಯಕ್ಕೆಂದ ಮಾಲೀಕ: 2 ತಿಂಗಳೊಳಗೆ ನೂರೆಂಟು ಸಮಸ್ಯೆ!
ಭಾರತದಲ್ಲಿ ದೇಶಿಯ ಬ್ರಾಂಡ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ, ಗ್ರಾಹಕರು ದೇಶದ ಉತ್ಪನ್ನಗಳನ್ನು ಖರೀದಿಸಿ ಭಾರತೀಯ ಬ್ರಾಂಡ್‌ಗಳನ್ನು ಜನಪ್ರಿಯಗೊಳಿಸಲು ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದರೆ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ದೇಶದ ಕೆಲ ಬ್ರಾಂಡ್‌ಗಳು ವಿಫಲವಾಗುತ್ತಿವೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಮಹೀಂದ್ರಾ ಸ್ಕಾರ್ಪಿಯೋ-ಎನ್ ಖರೀದಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರು ಖರೀದಿಸಿದ ಕೇವಲ 2 ತಿಂಗಳೊಳಗೆ ಅನೇಕ ಬಾರಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ಈಗ ವಾಹನದ ಟ್ರಂಕ್‌ನಲ್ಲಿ ಹಸುವಿನ ಸಗಣಿ, ಆಹಾರವನ್ನು ಸಾಗಿಸಲು ಎಸ್‌ಯುವಿಯನ್ನು ಬಳಸುತ್ತಿದ್ದಾರೆ. ಈ ಕುರಿತ ವಿಡಿಯೋ ಸದ್ಯ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗಿದೆ. ವಾಹನದ ಮಾಲೀಕ ಸೂರಜ್ ಠಾಕೂರ್, ಸ್ಕಾರ್ಪಿಯೋ-ಎನ್ ಖರೀದಿಸಿದಾಗಿನಿಂದ ಎದುರಿಸಿದ ಎಲ್ಲಾ ಸಮಸ್ಯೆಗಳನ್ನು ವಿವರಿಸುತ್ತಾ ಬ್ಯಾನರ್ ಅನ್ನು ವಾಹನದ ಮುಂಭಾಗದಲ್ಲಿ ಅಂಟಿಸಿದ್ದಾರೆ.

ಮಾಲೀಕರ ಪ್ರಕಾರ, ಕಾರನ್ನು ಖರೀದಿಸಿದ ಕೇವಲ ನಾಲ್ಕು ದಿನಗಳಲ್ಲಿಯೇ ಮೊದಲ ಸಮಸ್ಯೆ ಕಾಣಿಸಿಕೊಂಡಿದೆ. ಕೇವಲ 475 ಕಿ.ಮೀ ಓಡಿದ ಕಾರಿನಲ್ಲಿ ಕ್ಲಚ್ ಪ್ಲೇಟ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಆರಂಭವಾಗಿದೆ. 1,785 ಕಿ.ಮೀ ಓಡಿದ ಬಳಿಕ ಸ್ಟೀರಿಂಗ್ ರ್ಯಾಕ್ ಸಮಸ್ಯೆ ಎದುರಾಗಿದೆ, ಇದಾದ ಬಳಿಕ ವಾಹನವು 4,800 ಕಿ.ಮೀ ಕ್ರಮಿಸುವ ಹೊತ್ತಿಗೆ ಡಿಸ್ಕ್ ಬ್ರೇಕ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ.
5,212 ಕಿ.ಮೀ ಓಡಿಸಿದ ಬಳಿಕ ಕಾರಿನಲ್ಲಿ ಲಿಂಪ್ ಮೋಡ್ ಸಕ್ರಿಯಗೊಂಡು ಅದರ ವೇಗ 40 ಕಿ.ಮೀಗೆ ಸೀಮಿತಗೊಂಡಿದೆ. ನಿಖರವಾದ ಸಮಸ್ಯೆ ಅಸ್ಪಷ್ಟವಾಗಿದ್ದರೂ, ಹೆಚ್ಚಿನ ಹಾನಿ ಅಥವಾ ಸಮಸ್ಯೆಗಳನ್ನು ತಡೆಗಟ್ಟಲು ತುರ್ತು ಸಂದರ್ಭಗಳಲ್ಲಿ ಲಿಂಪ್ ಮೋಡ್ ಸಾಮಾನ್ಯವಾಗಿ ಸಕ್ರಿಯಗೊಳ್ಳುತಿತ್ತು. ಸ್ಕಾರ್ಪಿಯೋ-ಎನ್ ಲಿಂಪ್ ಮೋಡ್‌ನಲ್ಲಿ ಸಿಲುಕಿರುವ ವೀಡಿಯೊವನ್ನು ಕೂಡ ಮಾಲೀಕ ಹಂಚಿಕೊಂಡಿದ್ದಾರೆ.

ಲಿಂಪ್ ಮೋಡ್ ಎಂದರೇನು? ಎಂಜಿನ್ ಅಥವಾ ಟ್ರಾನ್ಸ್‌ಮಿಷನ್ ಕಂಟ್ರೋಲ್ ಯುನಿಟ್ ಎರಡೂ ಸಿಸ್ಟಮ್‌ನಿಂದ ದೋಷಯುಕ್ತ ನಿಯತಾಂಕವನ್ನು ಪತ್ತೆ ಮಾಡಿದಾಗ, ಎಂಜಿನ್‌ಗೆ ಹೆಚ್ಚಿನ ಹಾನಿಯನ್ನು ತಡೆಯಲು ಲಿಂಪ್ ಮೋಡ್ ಸಕ್ರಿಯಗೊಳ್ಳುತ್ತದೆ. ಲಿಂಪ್ ಮೋಡ್ ಸಾಮಾನ್ಯವಾಗಿ ಪವರ್ ಕಡಿಮೆ ಮಾಡಿ ಎಂಜಿನ್‌ಗೆ ಹಾನಿಯಾಗದಂತೆ ನಿಮ್ಮ ಕಾರನ್ನು ಮೆಕ್ಯಾನಿಕ್‌ವರೆಗೆ ಕೊಂಡೊಯ್ಯಲು ಎಂಜಿನ್ ಆರ್‌ಪಿಎಂ ಅನ್ನು ಮಿತಿಗೊಳಿಸುತ್ತದೆ.
ಈಗ ವಿಷಯಕ್ಕೆ ಬಂದರೆ ರಸ್ತೆಯಲ್ಲಿ 3 ರಿಂದ 5ನೇ ಗೇರ್ ಅನ್ನು ಬದಲಾಯಿಸುವಾಗಲೂ ಸಹ ಕೇವಲ 43 ಕಿ.ಮೀ ವೇಗ ಪಡೆಯಲು ಕಾರು ಹೆಣಗಾಡುತ್ತಿರುವುದನ್ನು ಈ ವಿಡಿಯೊದಲ್ಲಿ ನಾವು ನೋಡಬಹುದು. ವಿಚಿತ್ರವೆಂದರೆ, ವಾಹನದ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಯಾವುದೇ ದೋಷಗಳನ್ನು ಪ್ರದರ್ಶಿಸುತ್ತಿಲ್ಲ. ಎಷ್ಟೇ ಬಾರಿ ಸರ್ವಿಸ್ ಮಾಡಿಸಿದರೂ ಸಮಸ್ಯೆ ಪರಿಹರಿಸುವಲ್ಲಿ ಸೇವಾ ಕೇಂದ್ರ ವಿಫಲವಾಗಿದ್ದು, ಬೇಸತ್ತ ಮಾಲೀಕ ಕೊನೆಗೆ ಸಗಣಿ ಹಾಕಿ ವಿಡಿಯೋ ಮಾಡಿದ್ದಾರೆ.

ಮೂರೇ ದಿನಕ್ಕೆ ಹೊಸ ಮಹೀಂದ್ರಾ XUV700 ಸಮಸ್ಯೆ: ಈ ವರ್ಷದ ಆರಂಭದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಕಾರು ಖರೀದಿಸಿದ ಕೇವಲ ಮೂರು ದಿನಗಳಲ್ಲಿ ಹೊಚ್ಚಹೊಸ ಮಹೀಂದ್ರಾ XUV700 ಚೆನ್ನೈನಲ್ಲಿ ಕೆಟ್ಟುನಿಂತಿತ್ತು. ರಸ್ತೆಬದಿಯ ನೆರವು ಕೋರಿದರೂ ಡೀಲರ್ ಯಾರೂ ಕೂಡ ನೆರವಿಗೆ ಬರಲಿಲ್ಲ ಎಂದು ಮಾಲೀಕ ಆರೋಪಿಸಿದ್ದರು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಎಷ್ಟೋ ಲಕ್ಷಗಟ್ಟಲೇ ಮಹೀಂದ್ರಾ ಕಾರುಗಳು ಈವರೆಗೆ ಭಾರತದಲ್ಲಿ ಮಾರಾಟವಾಗಿವೆ. ಅದರಲ್ಲಿ ಕೇವಲ ಬೆರಳೆಣಿಕೆಯಷ್ಟು ಕಾರುಗಳು ಮಾತ್ರ ಹೀಗೆ ಸಮಸ್ಯೆಗಳನ್ನು ಎದುರಿಸಿವೆ. ಈಗ ಮಹೀಂದ್ರಾ ಸಂಸ್ಥೆಯನ್ನು ನಾವು ಸಮರ್ಥಿಸುತ್ತಿಲ್ಲ. ಇರುವ ಸತ್ಯವನ್ನು ಇಲ್ಲಿ ಬಿಚ್ಚಿಡಲಾಗಿದೆ. ಕಂಪನಿ ಕೂಡ ಗ್ರಾಹಕರ ಸಮಸ್ಯೆಗಳಿಗೆ ಕೂಡಲೇ ಪ್ರತಿಕ್ರಿಯಿಸಬೇಕಿದೆ. ಲಕ್ಷಾಂತರ ಹಣ ವೆಚ್ಚಿಸಿ ಕಾರು ಖರೀದಿಸುವ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದು ಡೀಲರ್‌ಗಳ ಆದ್ಯ ಕರ್ತವ್ಯವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications