ಮಹೀಂದ್ರಾ ಸ್ಕಾರ್ಪಿಯೋ ಎನ್ ಬೆಲೆ ಭಾರೀ ಏರಿಕೆ: ಇಲ್ಲಿದೆ ವಿವರ

ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಹುನಿರೀಕ್ಷಿತ ಮಹೀಂದ್ರಾ ಸ್ಕಾರ್ಪಿಯೋ ಎನ್ ಬೆಲೆ ಅಂತಿಮವಾಗಿ ಗರಿಷ್ಠ ರೂ. 1 ಲಕ್ಷದವರೆಗೆ ಏರಿಕೆಯಾಗಿದೆ. ಅದರ ಅತ್ಯುನ್ನತ ಕಾರ್ಯಕ್ಷಮತೆ, ಸುರಕ್ಷತೆಯ ದೃಷ್ಟಿಯಿಂದ ಸ್ಕಾರ್ಪಿಯೋ ಎಲ್ಲರಿಗೂ ಇಷ್ಟವಾಗುತ್ತದೆ. ಇಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಬೆಲೆ ಏರಿಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

'ಮಹೀಂದ್ರಾ ಸ್ಕಾರ್ಪಿಯೋ ಎನ್' ಬೆಲೆ ಹೆಚ್ಚಳವು ವೇರಿಯಂಟ್, ಪೆಟ್ರೋಲ್ ಮತ್ತು ಡೀಸೆಲ್ ಟ್ರಿಮ್‌ಗಳ ಆಯ್ಕೆಯ ಆಧಾರದ ಮೇಲೆ ಬೇರೆ - ಬೇರೆಯಾಗಿದೆ. ಹೊಸ ಎಸ್‌ಯುವಿಯ ಬೆಲೆ ಇದೀಗ 12.74 ಲಕ್ಷದಿಂದ 24.05 ಲಕ್ಷದವರೆಗೆ (ಎಕ್ಸ್ - ಶೋರೊಂ) ಇದೆ. ಹೆಚ್ಚಿನ ಇನ್‌ಪುಟ್ ವೆಚ್ಚದಿಂದ ಬೆಲೆ ಏರಿಕೆಯಾಗಿದೆ. ಅದರ ಒಂದು ಭಾಗವನ್ನು ಈಗ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ. ನೂತನ ದರಗಳು ಜನವರಿ 2023 ರಿಂದ ಜಾರಿಗೆ ಬರಲಿವೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಬೆಲೆ ಭಾರೀ ಏರಿಕೆ: ಇಲ್ಲಿದೆ ವಿವರ

ಮಹೀಂದ್ರಾ ಸ್ಕಾರ್ಪಿಯೊ ಎನ್ ಪೆಟ್ರೋಲ್ ರೂಪಾಂತರದ ಬೇಸ್ ಮಾದರಿ Z2 MT 7 ಸೀಟರ್‌ ಬೆಲೆ ರೂ.12.74 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ಹಿಂದಿನ ಬೆಲೆ 11.99 ಲಕ್ಷಕ್ಕಿಂತ ಶೇಕಡ 6.26% ಅಥವಾ 75,000 ಹೆಚ್ಚಳವಾಗಿದೆ. Z2 MT E, Z4 MT ಮತ್ತು Z4 MT E ರೂಪಾಂತರದ ಬೆಲೆ 75,000 ರೂಪಾಯಿ ಏರಿಕೆಯಾಗಿದೆ. Z8 MT ಮತ್ತು AT ರೂಪಾಂತರದ ಬೆಲೆಯನ್ನು 65,000 ರೂಪಾಯಿ ಹೆಚ್ಚಿಸಲಾಗಿದೆ. ಮಹೀಂದ್ರಾ ಸ್ಕಾರ್ಪಿಯೊ N Z8 L 6/7 ಸೀಟರ್‌ ಬೆಲೆಯನ್ನು ರೂ.55,000 ಅಧಿಕಗೊಳಿಸಲಾಗಿದೆ. Z8 L AT 6/7 ಸೀಟರ್‌ ಬೆಲೆ 15,000 ರೂ. ಹೆಚ್ಚಳ ಮಾಡಲಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೊ ಎನ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ, 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್, 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಇದರಲ್ಲಿರುವ ಮೊದಲ ಎಂಜಿನ್ ಆಯ್ಕೆಯು 175 PS ಪವರ್ ಮತ್ತು 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎರಡನೇ ಎಂಜಿನ್ ಆಯ್ಕೆಯು 203 PS ಪವರ್ ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 20.32 ಸೆಂಟರ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಕನೆಕ್ಟಿವಿಟಿ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ಕ್ರೂಸ್ ಕಂಟ್ರೋಲ್‌, 6-ವೇ ಪವರ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಡ್ಯಾಶ್‌ಬೋರ್ಡ್, ಪ್ರೀಮಿಯಂ ಆಗಿರುವ ಗ್ರೇ ಮತ್ತು ಬ್ಲ್ಯಾಕ್ ಲೆದರ್ ಸೀಟುಗಳು ಸೋನಿ 3D ಆಡಿಯೊ ಸಿಸ್ಟಮ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೊ - ಎನ್ ಉತ್ತಮ ಡಿಸೈನ್ ಅನ್ನು ಹೊಂದಿದೆ. ಫ್ರಂಟ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸಿ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು, ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳು, ಸಿಗ್ನೇಚರ್ ವೀಲ್ ಆರ್ಚ್‌ಗಳು, ರೂಫ್ ರೈಲ್ಸ್, ಡೈಮಂಡ್ ಕಟ್ ಅಲಾಯ್ ವೀಲ್ಸ್, ಸ್ಕಾರ್ಪಿಯೊ ಸ್ಟಿಂಗ್ ಕ್ರೋಮ್ ವಿಂಡೋ ಲೈನ್, ಸಿಗ್ನೇಚರ್ ಡಬಲ್ ಬ್ಯಾರೆಲ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಶಾರ್ಕ್-ಫಿನ್ ಆಂಟೆನಾ, ಲೋಡ್ ಬೇರಿಂಗ್ ಸ್ಕೀಮ್, ರ್ಯಾಕ್, ರೂಫ್ ಸ್ಪಾಯ್ಲರ್ ಮತ್ತು ಫೋಲ್ಡಬಲ್ ಸೈಡ್ ಮಿರರ್‌ಗಳನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೊ - ಎನ್‌ ಕಾರಿನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳಿವುದಾದರೆ, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ರೋಲ್ ಓವರ್ ಮಿಟಿಗೇಶನ್, ಬ್ರೇಕ್ ಡಿಸ್ಕ್ ವೈಪಿಂಗ್ ಮತ್ತು ಐಸೊಫಿಕ್ಸ್ ಸೀಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಡೀಪ್ ಫಾರೆಸ್ಟ್, ನಾಪೋಲಿ ಬ್ಲಾಕ್, ಎವರೆಸ್ಟ್ ವೈಟ್, ರೆಡ್ ರೇಜ್, ಡ್ಯಾಜ್ಲಿಂಗ್ ಸಿಲ್ವರ್, ರಾಯಲ್ ಗೋಲ್ಡ್ ಮತ್ತು ಗ್ರ್ಯಾಂಡ್ ಕ್ಯಾನ್ಯನ್ ಎಂಬ 7 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Mahindra scorpio n price hike here the details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X