ಭಾರತದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ RWD ವಿತರಣೆ ಪ್ರಾರಂಭ: ಅದು ಕೈಗೆಟುಕುವ ಬೆಲೆಯಲ್ಲಿಯೇ..

ಭಾರತದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ (RWD) ವಿತರಣೆಗಳು ಶುರುವಾಗಿವೆ. ಅತಿಹೆಚ್ಚು ನವೀನ ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯನ್ನು ಹೊಂದಿರುವ ಈ ಆಫ್ - ರೋಡ್ ಎಸ್‌ಯುವಿ ಹೊಸ ಖರೀದಿದಾರರನ್ನು ಆಕರ್ಷಿಸುತ್ತಿದೆ ಎಂದು ಹೇಳಬಹುದು. ಇಲ್ಲಿ ಥಾರ್ ಎಸ್‌ಯುವಿ ಕುರಿತಂತೆ ಹೆಚ್ಚಿನ ವಿವರವನ್ನು ತಿಳಿಸಿಕೊಡಲಾಗಿದೆ.

ಈ ತಿಂಗಳ ಆರಂಭದಲ್ಲಿ ಮಹೀಂದ್ರಾ ಕಂಪನಿ ಥಾರ್ RWD (ರೇರ್ ವೀಲ್ ಡ್ರೈವ್) ಎಸ್‌ಯುವಿ ದರವನ್ನು ಬಹಿರಂಗಪಡಿಸಿತ್ತು. ಇದು ರೂ.9.99 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಟಾಪ್ ಎಂಡ್ ಮಾದರಿ ದರ 13.49 ಲಕ್ಷ (ಎಕ್ಸ್ ಶೋರೂಂ ಭಾರತ) ಇದೆ. ಥಾರ್ 4WD ಆವೃತ್ತಿಗೆ ಹೋಲಿಸಿದರೆ, RWD ಆವೃತ್ತಿಯು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಅದರಲ್ಲಿ ರೂ.4 ಲಕ್ಷದವರೆಗೆ ತೆರಿಗೆ ಪ್ರಯೋಜನಗಳು ಸೇರಿವೆ.

ಭಾರತದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ RWD ವಿತರಣೆ ಪ್ರಾರಂಭ

ನೂತನ ಮಹೀಂದ್ರಾ ಥಾರ್ RWD ಆವೃತ್ತಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.5 - ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು 117 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 6 ಸ್ವೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಆದರೆ, ದೊಡ್ಡದಾದ 2.2 - ಲೀಟರ್ mHawk ಡೀಸೆಲ್ ಎಂಜಿನ್ ಹೊಂದಿರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಈ ಹೊಚ್ಚ ಹೊಸ ಮಹೀಂದ್ರಾ ಥಾರ್ 3-ಡೋರ್ RWD ಆವೃತ್ತಿಯು ಎರಡು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಬ್ಲೇಜಿಂಗ್ ಬ್ರೊನ್ಜ್ ಮತ್ತು ಎವರೆಸ್ಟ್ ವೈಟ್. ಆದರೆ, ಈ ಬಣ್ಣಗಳು ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಸಿಗಲಿದೆ. ಅಲ್ಲದೆ, ಮಹೀಂದ್ರಾ ಥಾರ್ RWD ಹೊರ ಭಾಗ ಹಾಗೂ ಒಳ ಭಾಗದ ಕ್ಯಾಬಿನ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಕಂಪನಿ ಮಾಡಿಲ್ಲ. ಇದು ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದೆ ಎಂದು ಹೇಳಬಹುದು.

ಭಾರತದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ RWD ವಿತರಣೆ ಪ್ರಾರಂಭ

ಇದರ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಏಳು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲ್ಇಡಿ DRLs, ಕ್ರೂಸ್ ಕಂಟ್ರೋಲ್, ಅಡ್ಜಸ್ಟ್ಏಬಲ್ ವಿಂಗ್ ಮಿರರ್‌ಗಳು, ಆಟೋ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಮೌಂಟೆಡ್ ಕಂಟ್ರೋಲ್‌, ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್ ಹಾಗೂ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಹತ್ತು ಹಲವು ಹೊಸ ಬಗೆಯ ವೈಶಿಷ್ಟ್ಯಗಳನ್ನು ಪಡೆದಿದ್ದು, ಹೊಸ ಖರೀದಿದಾರರನ್ನು ಆಕರ್ಷಿಸಲಿದೆ.

ಸದ್ಯ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು 5 - ಡೋರ್ ಥಾರ್ ತಯಾರಿಸುವ ಕಾರ್ಯದಲ್ಲಿ ಮಹೀಂದ್ರಾ ಕಂಪನಿ ತೊಡಗಿದ್ದು, ಅದು ಬಹುತೇಕ 3 - ಡೋರ್ ಥಾರ್ ಎಸ್‌ಯುವಿ ಒಳಗೊಂಡಿರುವ ಎಲ್ಲ ರೀತಿಯ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, 2024ರ ಆರಂಭದಲ್ಲಿ ಎಕ್ಸ್ ಶೋರೂಂ ತಲುಪಲಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಮಾರುತಿ ಸುಜುಕಿ 5 - ಡೋರ್ ಜಿಮ್ನಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ RWD ವಿತರಣೆ ಪ್ರಾರಂಭ

ಈಗಾಗಲೇ ಬುಕಿಂಗ್ ಆರಂಭವಾಗಿರುವ ಮಾರುತಿ ಸುಜುಕಿ 5 - ಡೋರ್ ಜಿಮ್ನಿ ಬಗ್ಗೆ ಹೇಳುವುದಾದರೆ, ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೇಳಬಹುದು. ಜಿಮ್ನಿ, 1.5 ಲೀಟರ್ K15B ಪೆಟ್ರೋಲ್ ಎಂಜಿನ್ ಹೊಂದಿದ್ದು, 103 bhp ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6 ಏರ್‌ಬ್ಯಾಗ್ಸ್, ಸ್ಟಾರ್ಟ್/ಸ್ಟಾಪ್ ಬಟನ್, ಹೆಡ್‌ಲೈಟ್ ವಾಷರ್, ಆಟೋಮೆಟಿಕ್ ಎಲ್‌ಇಡಿ ಲೈಟ್ ಹಾಗೂ 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಒಟ್ಟಾರೆಯಾಗಿ ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಹೀಂದ್ರಾ ರೆಡಿ ಮಾಡಿರುವ ಈ ಆಫ್ - ರೋಡ್ ಥಾರ್ ಎಸ್‌ಯುವಿ ಹೊಸ ಯುವ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ 5 - ಡೋರ್ ಥಾರ್ ಬಿಡುಗಡೆಯಾಗಲಿದೆ. ಇದು ಮಾರುಕಟ್ಟೆಗೆ ಬಂದ ಮೇಲೆ ಹೊಸ ಅದ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದು, ಖರೀದಿದಾರರು ಸಹ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ಕಾಯುತ್ತಿದ್ದಾರೆ.

Most Read Articles

Kannada
English summary
Mahindra thar rwd delivery has started in india details kannada
Story first published: Wednesday, February 1, 2023, 12:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X