ಅತ್ಯಾಕರ್ಷಕ ಮಹೀಂದ್ರಾ XUV 400 ಎಲೆಕ್ಟ್ರಿಕ್ ಎಸ್‌ಯುವಿ ಬುಕಿಂಗ್ ಆರಂಭ

ಭಾರತದಲ್ಲಿ ಪ್ರತಿಯೊಬ್ಬರು ಮಹೀಂದ್ರಾ ಕಾರುಗಳನ್ನು ತುಂಬಾ ಇಷ್ಟಪಟ್ಟು ಖರೀದಿಸುತ್ತಾರೆ. ಅದರಂತೆ ವೇಗವಾಗಿ ಬೆಳೆವಣಿಗೆಯಾಗುತ್ತಿರುವ ಎಲೆಕ್ಟ್ರಿಕ್ ವಾಹನ (ಇವಿ) ವಿಭಾಗಕ್ಕೂ ಕಂಪನಿಯು ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಕೆಲದಿನಗಳ ಹಿಂದಷ್ಟೇ ನೂತನ 'ಮಹೀಂದ್ರಾ XUV 400' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು.

ಮಹೀಂದ್ರಾ, ಗಣರಾಜ್ಯೋತ್ಸವದ ದಿನ (ಜನವರಿ 26) ತನ್ನ ಹೊಚ್ಚ ಹೊಸ ಮಹೀಂದ್ರಾ XUV 400 ಎಲೆಕ್ಟ್ರಿಕ್ ಎಸ್‌ಯುವಿಗಾಗಿ ಬುಕಿಂಗ್ ಆರಂಭಿಸಿದೆ. ಈ ಎಸ್‌ಯುವಿ ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರು ಹತ್ತಿರದ ಡೀಲರ್‌ಶಿಪ್ ಗೆ ಇಲ್ಲವೇ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.21,000 ಪಾವತಿಸುವ ಮೂಲಕ ಬುಕಿಂಗ್ ಮಾಡಬಹುದು. ಮಾರ್ಚ್ ತಿಂಗಳಲ್ಲಿ XUV400 ಇಎಲ್ ವೇರಿಯಂಟ್ ವಿತರಣೆಗಳು ಶುರುವಾಗಲಿದ್ದು, ದೀಪಾವಳಿ ಹಬ್ಬದ ವೇಳೆಗೆ XUV400 ಇಸಿ ವೇರಿಯಂಟ್ ಗ್ರಾಹಕರಿಗೆ ಸಿಗಲಿದೆ.

ಅತ್ಯಾಕರ್ಷಕ ಮಹೀಂದ್ರಾ XUV 400 ಎಲೆಕ್ಟ್ರಿಕ್ ಎಸ್‌ಯುವಿ ಬುಕಿಂಗ್ ಆರಂಭ

ಮಹೀಂದ್ರಾ ಕಂಪನಿಯು ಭಾರತೀಯ ಮಾರುಕಟ್ಟೆಗೆ XUV 400 ಎಲೆಕ್ಟ್ರಿಕ್ ಎಸ್‌ಯುವಿಯನ್ನು ರೂ.15.99 ಲಕ್ಷ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಎಸ್‌ಯುವಿ ಎರಡು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೇ, ಇಸಿ ಹಾಗೂ ಇಎಲ್. ಎಂಟ್ರಿ ಲೆವೆಲ್ ವೇರಿಯಂಟ್ ಇಸಿ ರೂ.15.99 ಲಕ್ಷ ದರವನ್ನು ಹೊಂದಿದ್ದರೆ, ಟಾಪ್ ಎಂಡ್ ವೇರಿಯಂಟ್ಇಎಲ್ ರೂ.18.99 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ದರಗಳು, ಮೊದಲ 5,000 ಬುಕಿಂಗ್ ಗಳಿಗೆ ಮಾತ್ರ ಅನ್ವಯಿಸುತ್ತದೆ.

ಹೊಸ ಮಹೀಂದ್ರಾ XUV 400 ಎಲೆಕ್ಟ್ರಿಕ್ ಎಸ್‌ಯುವಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 7.0-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಹೀಂದ್ರಾದ ಅಡ್ರಿನೊಎಕ್ಸ್ - ಕನೆಕ್ಟೆಡ್ ಕಾರ್ ಟೆಕ್ನಲಾಜಿ, OTA ಅಪ್ಡೇಟ್ಸ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಆಕರ್ಷಕ ಸನ್‌ರೂಫ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಹೊಸ ಗ್ರಾಹಕರನ್ನು ಈ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಲು ಸುಲಭವಾಗಿ ಸೆಳೆಯುತ್ತದೆ ಎಂದು ಹೇಳಬಹುದು.

ಪ್ರತಿಯೊಬ್ಬ ಎಲೆಕ್ಟ್ರಿಕ್ ಕಾರು ಖರೀದಿದಾರರು ಬ್ಯಾಟರಿ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆ. ಇನ್ನೂ ಮಹೀಂದ್ರಾ XUV 400ನಲ್ಲಿ ಬಳಕೆ ಮಾಡಿರುವ ಬ್ಯಾಟರಿ ಕುರಿತು ಮಾತನಾಡುವುದಾದರೆ, ಇದು ಎರಡು ಬ್ಯಾಟರಿ ಪ್ಯಾಕ್ ಹೊಂದಿದೆ. ಅವುಗಳೆಂದರೆ, 34.5kWh ಹಾಗೂ 39.4kWh. ಇವುಗಳಿಗೆ ಅಳವಡಿಕೆ ಮಾಡಲಾಗಿರುವ ಎಲೆಕ್ಟ್ರಿಕ್ ಮೋಟಾರ್, 150 hp ಗರಿಷ್ಠ ಪವರ್ 310 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 8.3 ಸೆಕೆಂಡುಗಳಲ್ಲಿ 0 - 100kph ವೇಗವನ್ನು ಪಡೆಯಲಿದ್ದು, 150 kph ಟಾಪ್ ಸ್ವೀಡ್ ಹೊಂದಿದೆ.

ಮಹೀಂದ್ರಾ XUV 400 ಎಲೆಕ್ಟ್ರಿಕ್ ಎಸ್‌ಯುವಿ ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಅವುಗಳೆಂದರೇ, ಫನ್, ಫಾಸ್ಟ್ ಹಾಗೂ ಫಿಯರ್‌ಲೆಸ್. 34.5kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಿರುವ ಕಾರು ಒಂದೇ ಚಾರ್ಜಿನಲ್ಲಿ 375 km ರೇಂಜ್ ನೀಡಿದರೇ, 39.4kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 456 km ರೇಂಜ್ ಕೊಡುವ ಸಾಮರ್ಥ್ಯ ಹೊಂದಿದೆ. ಈ ಎಸ್‌ಯುವಿ 50kW DC ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಕೇವಲ 50 ನಿಮಿಷದಲ್ಲಿ ಶೇಕಡ 0-80% ಚಾರ್ಜ್ ಆಗಲಿದೆ. ಶೇಕಡ 0-100% ಚಾರ್ಜ್ ಆಗಲು 7.2kW ಚಾರ್ಜರ್‌ನಲ್ಲಿ 6 ಗಂಟೆ 30 ನಿಮಿಷ ಹಾಗೂ 3.3kW AC ಚಾರ್ಜರ್‌ನಲ್ಲಿ 13 ಗಂಟೆ ಬೇಕಾಗುತ್ತದೆ.

ಮಹೀಂದ್ರಾ XUV 400 ಎಲೆಕ್ಟ್ರಿಕ್ ಎಸ್‌ಯುವಿಯು ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಖರೀದಿಗೆ ಸಿಗಲಿರುವ ಟಾಟಾ ನಿಕ್ಸನ್ ಇವಿ, ಎಂಜಿ ಝೆಡ್ಎಸ್ ಇವಿ ಹಾಗೂ ಹುಂಡೈ ಕೋನ ಇವಿಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಹೊಸ XUV 400 ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಇದು ಸುಲಭವಾಗಿ ಗ್ರಾಹಕರನ್ನು ಆಕರ್ಷಿಸಲಿದೆ. ಬೆಲೆಯು ಅಷ್ಟೊಂದು ದುಬಾರಿ ಇಲ್ಲದಿರುವುದರಿಂದ ಖರೀದಿದಾರರು ಇಷ್ಟಪಡಬಹುದು. ಹಬ್ಬದ ಸೀಸನ್ ನಲ್ಲಿ ಮತ್ತಷ್ಟು ಬೇಡಿಕೆ ಸೃಷ್ಟಿಯಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Mahindra xuv400 electric bookings opened details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X