ಇದು ಸಾಧ್ಯವೇ? ಪ್ಯಾಸೆಂಜರ್ ಸೀಟಿನಲ್ಲಿ ಕುಳಿತು ಕಾರು ಓಡಿಸಿದ ಮಹಾನುಭಾವ!
ಭಾರತ ಮಾತ್ರವಲ್ಲ ವಿಶ್ವದ ಹಲವೆಡೆ ಕಾರುಗಳನ್ನು ಸ್ಟಂಟ್ ಮಾಡುವುದನ್ನು ನಾವು ನೊಡಿದ್ದೇವೆ. ಆದ್ರೆ ಈ ಸ್ಟಂಟ್‌ಗಳನ್ನು ಖಾಸಗಿ ಸ್ಥಳಗಳಲ್ಲಿ ಮಾಡಿದರೆ ಯಾವುದೇ ಅಪಾಯವಿರುವುದಿಲ್ಲ, ಇಲ್ಲೊಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ವಿಚಿತ್ರವಾದ ಸ್ಟಂಟ್ ಮಾಡಿದ್ದಾನೆ. ಈ ಸಾಹಸವು ತನಗೆ ಮಾತ್ರವಲ್ಲ ಎದುರು ಬರುವ ಪ್ರಯಾಣಿಕರಿಗೂ ಅಪಾಯಕಾರಿ.
ಮೊದಲಿಗೆ ಈತ ಮಾಡಿರುವ ಈ ಸ್ಟಂಟ್ ಅನ್ನು ಮೆಚ್ಚಲೇಬೇಕು ಆದ್ರೆ, ಇದು ಇತರರಿಗೆ ಅಪಾಯ ಎಂಬುದನ್ನು ಕೂಡ ಗಮನಿಸಬೇಕು. ಸದ್ಯ ಈ ವಾಹನ ಸವಾರನ ಸ್ಟಂಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಯಾಣಿಕರ ಸೀಟಿನಿಂದ ಮಾರುತಿ ಸುಜುಕಿ ಆಲ್ಟೊವನ್ನು ಓಡಿಸುತ್ತಿರುವ ವ್ಯಕ್ತಿಯನ್ನು ಈ ವಿಡಿಯೋದಲ್ಲಿ ನೋಡಬಹುದು. ಅಷ್ಟೇ ಅಲ್ಲ, ಹ್ಯಾಚ್‌ಬ್ಯಾಕ್‌ನ ಸ್ಟೀರಿಂಗ್ ವೀಲ್ ಅನ್ನು ತನ್ನ ಪಾದಗಳಿಂದ ನಿಯಂತ್ರಿಸಿದ್ದಾನೆ.

ಇದು ಸಾಧ್ಯವಲ್ಲದ ಸ್ಟಂಟ್ ಆಗಿದ್ದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ, ಆದ್ರೆ ಇದು ಬೇಜವಾಬ್ದಾರಿಯನ್ನು ಕೂಡ ತೋರುತ್ತಿದೆ. ಸಖತ್ ವೈರಲ್ ಆಗಿರುವ ಈ ವಿಡಿಯೋ, ಕೆಲವು ತಮಾಷೆಯ ಕಾಮೆಂಟ್‌ಗಳ ಜೊತೆಗೆ, ಅಜಾಗರೂಕ ಚಾಲನೆ ಮತ್ತು ಇಂತಹ ಸಾಹಸಗಳ ಸಂಭವನೀಯ ಅಪಾಯಗಳ ಬಗ್ಗೆ ಕಳವಳ ಕೂಡ ವ್ಯಕ್ತವಾಗಿದೆ. ತನ್ನ ಮೋಜಿನ ಡ್ರೈವಿಂಗ್‌ಗಾಗಿ ಇತರರನ್ನು ಅಪಯಕ್ಕೆ ದೂಡುವುದಾಗಿದೆ.
ವೀಡಿಯೊದಲ್ಲಿ, ವ್ಯಕ್ತಿ ಪ್ರಯಾಣಿಕ ಸೀಟಿನಲ್ಲಿ ಕುಳಿತು ಆತನ ಕಾಲುಗಳು ಡ್ಯಾಶ್‌ಬೋರ್ಡ್‌ಗೆ ಅಡ್ಡಲಾಗಿ ಇಟ್ಟುಕೊಂಡಿದ್ದಾನೆ. ಸ್ಟೀರಿಂಗ್ ವೀಲ್ ಅನ್ನು ಹಿಡಿಯಲು ತನ್ನ ಎಡ ಪಾದವನ್ನು ಬಳಸಿದ್ದಾನೆ, ಆದರೆ ಅವನ ಬಲ ಕಾಲು ಆಕ್ಸಿಲೇಟರ್ ಮತ್ತು ಬ್ರೇಕ್ ಪೆಡಲ್‌ಗಳನ್ನು ನಿರ್ವಹಿಸಲು ಬಳಸಿದ್ದಾನೆ. ಎಲ್ಲರನ್ನು ಆಶ್ಚರ್ಯಗೊಳಿಸುವಂತೆ ಕಾಲುಗಳಲ್ಲಿ ಕಾರನ್ನು ಸುಲಭವಾಗಿ ಓಡಿಸಿ ಅಚ್ಚರಿಗೊಳಿಸಿದ್ದಾನೆ.

ಆದರೆ ನಮಗೆ ತಿಳಿದಿರುವಂತೆ ಇದು ಡ್ರೈವಿಂಗ್ ಸ್ಕೂಲ್‌ನ ಕಾರಾಗಿರಬಹುದು. ಪ್ರಯಾಣಿಕರ ಸೀಟಿನಲ್ಲಿ ಕುಳಿತು ಕಾರನ್ನು ಹೀಗೆ ಓಡಿಸುವುದು ಅಸಾಧ್ಯವೇನಲ್ಲ, ಆದ್ರೆ ಅಷ್ಟು ಸುಲಭವಾಗಿಯು ಓಡಿಸಲು ಸಾಧ್ಯವಿಲ್ಲ. ಡ್ರೈವಿಂಗ್ ಸ್ಕೂಲ್ ಕಾರಾದ್ರೆ ಪ್ಯಾಸೆಂಜರ್ ಸೀಟಿನ ಬಳಿಯು ಕಲಿಸುವವರಿಗಾಗಿ ಪೆಡಲ್‌ಗಳನ್ನು ನೀಡಲಾಗುತ್ತದೆ. ಹಾಗಾಗಿ ಈತ ಈ ಸ್ಟಂಟ್ ಮಾಡಿರಬಹುದು ಎಂಬುದು ನಮ್ಮ ಅಭಿಪ್ರಾಯ.
ಕಾರಿನ ಪ್ರಯಾಣಿಕರ ಬದಿಯಲ್ಲಿ ಪೆಡಲ್ ಮತ್ತು ಬ್ರೇಕ್ ಏಕೆ ಇರುತ್ತದೆ ಎಂದು ಆಶ್ಚರ್ಯಪಡುವವರಿಗೆ, ಕಾರ್ ಡ್ರೈವಿಂಗ್ ಕಲಿಯುವವರು ನಿಯಂತ್ರಣವನ್ನು ಕಳೆದುಕೊಂಡರೆ ಅಂತಹ ಕಾರುಗಳು ಎರಡೂ ಬದಿಗಳಲ್ಲಿ ಕ್ಲಚ್, ಆಕ್ಸಿಲೇಟರ್ ಮತ್ತು ಬ್ರೇಕ್ ಪೆಡಲ್‌ಗಳನ್ನು ಹೊಂದಿರುತ್ತವೆ. ಇದರಿಂದ ಸಂಭವನೀಯ ಅಪಘಾತಗಳನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ವಿಡಿಯೋವನ್ನು ಮನುಷ್ಯ ಹೇಗೆ ಕೌಶಲ್ಯಪೂರ್ಣ ರೀತಿಯಲ್ಲಿ ಓಡಿಸುತ್ತಾನೆ ಎಂದು ಕೆಲವರು ನಿಜವಾಗಿಯೂ ಇಷ್ಟಪಟ್ಟರೆ, ಇತರರು ಅದನ್ನು ಇಷ್ಟಪಡಲಿಲ್ಲ. ಭಾರತದಲ್ಲಿ ಆ ರೀತಿ ವಾಹನ ಚಲಾಯಿಸುವುದು ಸರಿಯೇ ಎಂದು ಕೂಡ ಈ ವಿಡಿಯೋ ಜನ ಮಾತನಾಡುವಂತೆ ಮಾಡಿದೆ. ಸಂಚಾರಿ ನಿಯಮಗಳ ಪ್ರಕಾರ ಪ್ರಯಾಣಿಕರ ಆಸನದಿಂದ ವಾಹನ ಚಲಾಯಿಸುವಂತಿಲ್ಲ ಎಂದು ನಿರ್ದಿಷ್ಟವಾಗಿ ಹೇಳದಿದ್ದರೂ ಸಹ, ಇದು ಅಪಾಯಕಾರಿ ಡ್ರೈವಿಂಗ್ ಎಂಬುದನ್ನು ಮರೆಯಬಾರದುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications