5-ಸೀಟರ್ ಬೆಲೆಯಲ್ಲಿ 7-ಸೀಟರ್ ಕಾರು... 26 ಕಿ.ಮೀ ಮೈಲೇಜ್... ಫೀಚರ್ಸ್‌ಗೆ ವಾವ್ ಅಂತೀರ!

ನಿಮ್ಮ ಕುಟುಂಬವು ಐದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿದ್ದರೆ, ದೂರದ ಪ್ರಯಾಣಕ್ಕೆ ಖಂಡಿತ 7 - ಸೀಟರ್ ಕಾರು ಬೇಕಾಗುತ್ತದೆ. ಸಾಮಾನ್ಯವಾಗಿ 7 ಸೀಟರ್ ಕಾರುಗಳು ದುಬಾರಿ ಎಂದು ಭಾವಿಸುತ್ತಾರೆ. ಆದ್ರೆ ನಿಮಗೆ ಆ ಭಯವಿಲ್ಲದೆ 5 ಸೀಟರ್ ಬೆಲೆಯ 7 ಸೀಟರ್ ಕಾರಿನ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾಂಪಾಕ್ಟ್ ಎಸ್‌ಯುವಿಗಲ್ಲಿ ಮಾರುತಿ ಬ್ರೆಝಾ ಕೂಡ ಒಂದು. ಅತಿ ಹೆಚ್ಚು ಬೇಡಿಕೆಯೊಂದಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರಾಗಿ ಬ್ರೆಝಾ ಗುರ್ತಿಸಿಕೊಂಡಿದೆ. ಇನ್ನೊಂದೆಡೆ ಇದೇ ಬೆಲೆಗೆ ಎಂಪಿವಿಗಳಲ್ಲಿ ಅತಿ ಹೆಚ್ಚು ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಫ್ಯಾಮಿಲಿ ಕಾರನ್ನು ಖರೀದಿಸಬಹುದಾಗಿದೆ. ಅದೇ ಮಾರುತಿ ಎರ್ಟಿಗಾ, ಇದು ನಿಮಗೆ ರೂ. 8.64 ಲಕ್ಷ ಎಕ್ಸ್‌ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

maruti-7-seater-car-price-5-seater-ertiga-brezza

ಮಾರುತಿ ಸುಜುಕಿ ಎರ್ಟಿಗಾ ಸದ್ಯ ಭಾರತದಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ 7 ಸೀಟರ್ ಕಾರಾಗಿ ಜನಪ್ರಿಯತೆ ಪಡೆದಿದೆ. ದೇಶದಲ್ಲಿ ಹೆಚ್ಚು ಮಾರಾಟವಾಗುವ 7-ಸೀಟರ್ ಮಾರುತಿ ಎರ್ಟಿಗಾ ಆರಂಭಿಕ ಬೆಲೆಯು ರೂ. 8.64 ಲಕ್ಷದಿಂದ ರೂ. 13.08 ಲಕ್ಷ (ಎಕ್ಸ್ ಶೋ ರೂಂ)ವೆರೆಗೆ ಇದೆ. ಇನ್ನೊಂದೆಡೆ 5-ಸೀಟರ್ ಬ್ರೆಝಾ ಬೆಲೆಯು ರೂ. 8.29 ಲಕ್ಷದಿಂದ ರೂ. 13.98 ಲಕ್ಷ (ಎಕ್ಸ್ ಶೋ ರೂಂ)ವೆರೆಗೆ ಇದೆ.

ಎರಡು ಕಾರುಗಳ ಬೆಲೆ ವತ್ಯಾಸವನ್ನು ಗಮನಿಸಿದರೆ ಎರ್ಟಿಗಾ ಟಾಪ್ ಎಂಡ್ ವೇರಿಯೆಂಟ್ ಬ್ರೆಝಾ ಟಾಪ್ ಎಂಡ್ ವೇರಿಯೆಂಟ್‌ಗಿಂತ ಅಗ್ಗವಾಗಿದೆ. ಇದೇ ಕಾರಣ ನೋಡಿ ಎರ್ಟಿಗಾ ಉತ್ತಮ ಮಾರಾಟದ ಹಿಂದಿನ ಪ್ರಮುಖ ಕಾರಣ. ಅದರ ಕೈಗೆಟುಕುವ ಬೆಲೆಯಿಂದಾಗಿ ತನ್ನ ವಿಭಾಗದಲ್ಲಿ (MPV) ಹೆಚ್ಚು ಮಾರಾಟವಾಗುವ ಕಾರಾಗಿ ಗುರ್ತಿಸಿಕೊಂಡಿದೆ.

maruti-7-seater-car-price-5-seater-ertiga-brezza

ಎರ್ಟಿಗಾ ವೈಶಿಷ್ಟ್ಯಗಳು: ಇದು ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 7-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಕಾರ್ ತಂತ್ರಜ್ಞಾನ (ಟೆಲಿಮ್ಯಾಟಿಕ್ಸ್), ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು, ಆಟೋ ಎಸಿ, 4 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಬ್ರೇಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸಂವೇದಕಗಳನ್ನು ಒಳಗೊಂಡಿದೆ. ಜೊತೆಗೆ ISOFIX ಚೈಲ್ಡ್ ಸೀಟ್ ಆಂಕಾರೇಜ್, ಹಿಲ್ ಹೋಲ್ಡ್ ಕಂಟ್ರೋಲ್ ನಂತಹ ವೈಶಿಷ್ಟ್ಯಗಳು ಕೂಡ ಇವೆ.

ಪವರ್ಟ್ರೇನ್: ಎರ್ಟಿಗಾ 1.5-ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಬ್ರೆಝಾದಲ್ಲಿಯೂ ಬರುತ್ತದೆ. ಇದು 103 PS ಪವರ್, 136.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5 - ಸ್ಪೀಡ್ ಮ್ಯಾನುವಲ್, 6 - ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ.

maruti-7-seater-car-price-5-seater-ertiga-brezza

ಮಾರುತಿ ಎರ್ಟಿಗಾ CNG ವೇರಿಯೆಂಟ್ 5 - ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. CNG ಯಲ್ಲಿ ಇದು 88 PS ಪವರ್, 121.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG ನಲ್ಲಿ ಎರ್ಟಿಗಾ 26.11 ಕಿ.ಮೀ ಮೈಲೇಜ್ ಮೈಲೇಜ್ ನಿಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 9, 2023, 16:33 [IST]
English summary
Maruti 7 seater car price 5 seater ertiga brezza
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+