Maruti Jimny: ಈ ವಿಡಿಯೋ ನೋಡಿದ ಮೇಲೆ ಮಾರುತಿ ಮೇಲಿನ ಗೌರವ ಹೆಚ್ಚಾಯ್ತು!
ಯೂಟ್ಯೂಬರ್ ಒಬ್ಬರು ಇತ್ತೀಚೆಗೆ ಮಾರುತಿ ಜಿಮ್ನಿ ಪರ್ಫಾಮೆನ್ಸ್ ಟೆಸ್ಟ್ ಮಾಡಿದ್ದು, ಈ ಜನಪ್ರಿಯ ಎಸ್‌ಯುವಿಯ ಟಾಪ್ ಸ್ಪೀಡ್ ಬಯಲಾಗಿದೆ. ಹೊಸ ಮಾರುತಿ ಸುಜುಕಿ ಜಿಮ್ನಿಯನ್ನು ಹೆದ್ದಾರಿಗೆ ಕೊಂಡೊಯ್ದು ಕಾರಿನ ಟಾಪ್ ಸ್ಪೀಡ್ ಮತ್ತು ಹೈ-ಸ್ಪೀಡ್ ಡೈನಾಮಿಕ್ಸ್ ಅನ್ನು ಪರೀಕ್ಷಿಸಿ, ವೀಡಿಯೊವನ್ನು ತಮ್ಮ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
Maruti Jimny ಗರಿಷ್ಠ ವೇಗವನ್ನು ಪರೀಕ್ಷಿಸಲು ಮುಂಬೈ ಎಕ್ಸ್‌ಪ್ರೆಸ್‌ವೇಗೆ ಹೋಗಿದ್ದಾರೆ. ಜಿಮ್ನಿ ಮೊದಲ ಗೇರ್‌ನಲ್ಲಿ 50 ಕಿ.ಮೀ ತಲುಪಿದ್ದು, ಇದು ಸ್ವಲ್ಪಮಟ್ಟಿಗೆ ಶಬ್ದ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ನಂತರ ಎರಡನೇ ಗೇರ್‌ನಲ್ಲಿ 90 ಕಿ.ಮೀ ವೆಗ ತಲುಪಿದೆ. ಮೂರನೇ ಗೇರ್‌ನಲ್ಲಿ ಸುಮಾರು 120 ಕಿ.ಮೀ ತಲುಪಿದ್ದು, ನಾಲ್ಕನೇ ಗೇರ್‌ನಲ್ಲಿ ಕಾರು 140 ಕಿ.ಮೀ ತಲುಪಿದೆ.

ಅಂತಿಮವಾಗಿ ಐದನೇ ಗೇರ್‌ನಲ್ಲಿ 155 ಕಿ.ಮೀ ವೇಗವನ್ನು ತಲುಪಿದೆ. ಸುಮಾರು 150 ಕಿ.ಮೀ ವೇಗದಲ್ಲಿ ಕ್ಯಾಬಿನ್‌ನಲ್ಲಿ ಸಾಕಷ್ಟು ಶಬ್ದವಿದ್ದರೂ, ಕಾರು ಸ್ಥಿರವಾಗಿತ್ತು. SUV ಆಗಿದ್ದರೂ, ಅತಿಯಾದ ಬಾಡಿ ರೋಲ್ ಕಾಣಿಸಿಕೊಂಡಿಲ್ಲ. ಈ ವೇಗದಲ್ಲಿ, ಅದರ ನೇರ ಪ್ರತಿಸ್ಪರ್ಧಿಯಾದ ಮಹೀಂದ್ರ ಥಾರ್ ತುಸು ವಾಬ್ಲಿಂಗ್ ಮತ್ತು ಕಾನ್ಫಿಡೆನ್ಸ್ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಇದಾದ ಬಳಿಕ ಸುಮಾರು 100 ಕಿ.ಮೀಗೆ ನಿಧಾನಗೊಳಿಸಿದ್ದಾರೆ, ಜಿಮ್ನಿ 155 ಕಿ.ಮೀ ವೇಗ ತಲುಪುತ್ತದಾದರೂ, ಅತಿಯಾದ ಕ್ಯಾಬಿನ್ ಶಬ್ದದಿಂದಾಗಿ ಆ ವೇಗದಲ್ಲಿ ಓಡಿಸಬಾರದು ಎಂದು ಹೇಳಿದರು. ಬದಲಿಗೆ 100 ಕಿ.ಮೀ ವೇಗದಲ್ಲಿ ಕ್ರೂಸ್ ಮಾಡಲು ಸಲಹೆ ನೀಡಿದ್ದಾರೆ. ಗಂಟೆಗೆ 100 ಕಿ.ಮೀ ವೇಗವನ್ನು ಕಾಯ್ದುಕೊಳ್ಳುವುದು ಮೈಲೇಜ್ ಕೂಡ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಅವರ ಪ್ರಕಾರ, ಮಾರುತಿ ಸುಜುಕಿ ಜಿಮ್ನಿ ವೇಗವನ್ನು ಹೆಚ್ಚಿಸಿದಾಗ ಕ್ಯಾಬಿನ್ ಹೆಚ್ಚು ಶಬ್ದ ಮಾಡುತ್ತದೆ. ಆದರೆ, ಕಾರು ಸ್ಥಿರವಾಗಿದೆ ಎಂಬುದು ಅವರ ಅಭಿಪ್ರಾಯ. ಅಲ್ಲದೆ, ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿ ಆಗಿದ್ದರೂ, ಹೆಚ್ಚಿನ ಬಾಡಿ ರೋಲ್ ಇಲ್ಲ. ಇದನ್ನು ಮಾರುತಿ ಸುಜುಕಿ ಜಿಮ್ನಿ ಕಾರಿನ ಖಡಕ್ ಆವೃತ್ತಿಯಂತೆ ಕಾಣಬಹುದು. ಒಟ್ಟಾರೆ ಮಾರುತಿ ಸುಜುಕಿ ಜಿಮ್ನಿಯನ್ನು ಆತ್ಮವಿಶ್ವಾಸದಿಂದ ಓಡಿಸಬಹುದು ಮಾರುತಿ ಮೇಲೆ ಗೌರವ ಹೆಚ್ಚಾಯ್ತು ಎಂದಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಜಿಮ್ನಿ ಆರಂಭಿಕ ಬೆಲೆಯು 12.74 ಲಕ್ಷ ರೂ. ಇದೆ. ಟಾಪ್ ರೂಪಾಂತರದ ಬೆಲೆ 15.05 ಲಕ್ಷ ರೂ. ಇವು ಎಕ್ಸ್ ಶೋ ರೂಂ ಬೆಲೆಗಳಾಗಿವೆ. ಮಾರುತಿ ಸುಜುಕಿ ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಗ್ರಾಹಕರಲ್ಲಿ ಬಹಳ ಜನಪ್ರಿಯವಾಗಿದೆ.
ಕಂಪನಿಯು ಜಿಮ್ನಿಯನ್ನು ಒಂದೇ ಪವರ್‌ಟ್ರೇನ್ ಆಯ್ಕೆಯೊಂದಿಗೆ ನೀಡುತ್ತಿದೆ. 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್ಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಟಿಕ್ ಟ್ರಾನ್ಸಷನ್‌ದೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ ಗರಿಷ್ಠ 104.8 PS ಪವರ್ ಔಟ್‌ಪುಟ್ ಮತ್ತು 134.2 Nm ಗರಿಷ್ಠ ಟಾರ್ಕ್ ಔಟ್‌ಪುಟ್ ಅನ್ನು ನೀಡುತ್ತದೆ.
ಮಾರುತಿ ಸುಜುಕಿ ಜಿಮ್ನಿ ಮ್ಯಾನುವಲ್ ರೂಪಾಂತರಗಳು 16.94 kmpl ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ, ಆದರೆ ಆಟೋಮ್ಯಾಟಿಕ್ ಆವೃತ್ತಿಗಳು 16.39 kmpl ಮೈಲೇಜ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಸುಜುಕಿಯ AllGrip Pro 4 ವೀಲ್ ಡ್ರೈವ್ ವ್ಯವಸ್ಥೆಯು ಎಲ್ಲಾ ರೂಪಾಂತರಗಳಲ್ಲಿ ಪ್ರಮಾಣಿತವಾಗಿದೆ.


Click it and Unblock the Notifications