ಟಾಟಾವನ್ನು ಮುಲಾಜಿಲ್ಲದೇ ಹಿಂದಿಕ್ಕಿದ ಮಾರುತಿ... ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ ಬ್ರೆಝಾ
ಟಾಟಾ ನೆಕ್ಸಾನ್ ಹಲವು ತಿಂಗಳುಗಳಿಂದ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ನಂ.1 SUV ಆಗಿ ಗುರ್ತಿಸಿಕೊಂಡಿದೆ. ಆದರೆ ಫೆಬ್ರವರಿ 2023 ರಲ್ಲಿ ಇದು ಮಾರುತಿ ಬ್ರೆಝಾಗೆ ಅಗ್ರ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಟಾಟಾ ನೆಕ್ಸಾನ್ ಕಳೆದ ವರ್ಷ ಇದೇ ಫೆಬ್ರವರಿಯಲ್ಲಿ ಮಾರಾಟವಾದ ಅಂಕಿಅಂಶಗಳಿಗೆ ಹೋಲಿಸಿಕೊಂಡರೆ ಉತ್ತಮ ಬೆಳವಣಿಗೆ ಸಾಧಿಸಿದೆಯಾದರೂ ಮಾರುತಿ ಬ್ರೆಝಾ ಇದಕ್ಕಿಂತಲೂ ಹೆಚ್ಚು ಮಾರಾಟ ಕಂಡಿದೆ.
ಟಾಟಾ ನೆಕ್ಸಾನ್ ಮಾರಾಟವು ಫೆಬ್ರವರಿ 2022 ರಲ್ಲಿ ಮಾರಾಟವಾದ 12,259 ಯುನಿಟ್‌ಗಳಿಗೆ ಹೋಲಿಸಿಕೊಂಡರೆ ಈ ಬಾರಿ (ಫೆಬ್ರವರಿ 2023 ರಲ್ಲಿ) 13,914 ಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಶೇ13.50 ರಷ್ಟು ಸುಧಾರಿಸಿದೆ. ಆದರೂ ಸಹ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಜನವರಿ 2023 ರಲ್ಲಿ ಟಾಟಾ ನೆಕ್ಸಾನ್ 15,567 ಯೂನಿಟ್‌ಗಳನ್ನು ಮಾರಾಟ ಮಾಡಿದ್ದು, ಇದನ್ನು ಫೆಬ್ರವರಿ ತಿಂಗಳಿಗೆ ಹೋಲಿಸಿಕೊಂಡರೆ ಶೇ10.62 ರಷ್ಟು ಕಡಿಮೆಯಾಗಿದೆ.

ಮಾರುತಿ ಬ್ರೆಝಾ ಫೆಬ್ರವರಿ 2023 ರಲ್ಲಿ 15,787 ಯುನಿಟ್‌ಗಳ ಮಾರಾಟದೊಂದಿಗೆ ವಾರ್ಷಿಕ ಮತ್ತು ತಿಂಗಳ ಬೆಳವಣಿಗೆಯನ್ನು ಸಾಧಿಸಿದೆ. ಇದು ಶೇ70.56 ರಷ್ಟು ವಾರ್ಷಿಕ ಮತ್ತು ಶೇ9.94 ರಷ್ಟು ತಿಂಗಳ ಮಾರಾಟ ಬೆಳವಣಿಗೆ ಸಾಧಿಸಿದೆ. ಫೆಬ್ರವರಿ 2022 ಮತ್ತು ಜನವರಿ 2023 ರಲ್ಲಿ ಕ್ರಮವಾಗಿ 9,256 ಯುನಿಟ್‌ಗಳು ಮತ್ತು 14,359 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ಬ್ರೆಝಾ ಟಾಟಾ ನೆಕ್ಸಾನ್ ಅನ್ನು ಹಿಂದಿಕ್ಕಿ ನಂ.1 ಎಸ್‌ಯುವಿ ಸ್ಥಾನಕ್ಕೆ ಮರಳಿರುವುದು ಇದೇ ಮೊದಲು ಎನ್ನಲಾಗಿದೆ.
ಟಾಟಾ ನೆಕ್ಸಾನ್ ಕಳೆದ ಹಲವಾರು ತಿಂಗಳುಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ SUV ಆಗಿದೆ. ಇದೀಗ ಟಾಟಾ ನೆಕ್ಸಾನ್ ತನ್ನ ಪ್ರಾಬಲ್ಯವನ್ನು ಕೊನೆಗೊಳಿಸಿದ್ದು, ಮಾರುತಿ ಸುಜುಕಿ ಬ್ರೆಝಾ ಅಗ್ರ ಸ್ಥಾನಕ್ಕೆ ಬಂದಿದೆ. ಇದರಿಂದ ಮಾರುತಿ ಸುಜುಕಿ ಅಭಿಮಾನಿಗಳು ಸಂತಸಗೊಂಡಿದ್ದು, ಟಾಟಾ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮಾರುತಿ ಸುಜುಕಿ ಬ್ರೆಜ್ಜಾದ ನವೀಕರಿಸಿದ ಹೊಸ ಫೆಸ್‌ಲಿಫ್ಟ್ ಮಾದರಿಯನ್ನು ಜೂನ್ 2022 ರಲ್ಲಿ ಮಾರುತಿ ಬಿಡುಗಡೆ ಮಾಡಿತ್ತು.

ಇದರ ಹೊರಾಂಗಣ ಮತ್ತು ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅಲ್ಲದೆ, 2022 ಮಾರುತಿ ಸುಜುಕಿ ಬ್ರೆಝಾ ಕಾರು ಸಾಕಷ್ಟು ಸೌಕರ್ಯಗಳನ್ನು ಹೊಂದಿದೆ. ಇವುಗಳಲ್ಲಿ ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 360-ಡಿಗ್ರಿ ಕ್ಯಾಮೆರಾ ಮತ್ತು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿವೆ. ಇದಲ್ಲದೇ, ಮಾರುತಿ ಸುಜುಕಿಯು ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಸಹ ಒದಗಿಸಿದೆ. ಇಂತಹ ಕಾರಣಗಳಿಂದಲೇ ಮಾರುತಿ ಸುಜುಕಿ ಬ್ರೆಝಾ ಅಗ್ರ ಸ್ಥಾನಕ್ಕೆ ಏರಿದೆ.
ಜೊತೆಗೆ ಈ ವರ್ಷದ ಜನವರಿಯಲ್ಲಿ ನಡೆದ 2023 ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಬ್ರೆಜ್ಜಾದ ಹೊಸ ಸಿಎನ್‌ಜಿ ಮಾದರಿಯನ್ನು ಸಹ ಪ್ರದರ್ಶಿಸಲಾಯಿತು. ಮುಂಬರುವ ವಾರಗಳಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಲಾಗುವುದು. ಈ ಹೊಸ ಮಾದರಿಯ ಆಗಮನವು ಮಾರುತಿ ಸುಜುಕಿ ಬ್ರೆಝಾ ಮಾರಾಟದಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಸ್ಪರ್ಧೆಯನ್ನು ಎದುರಿಸಲು ಟಾಟಾ ಪ್ರಸ್ತುತ ನೆಕ್ಸಾನ್ ಕಾರನ್ನು ದೊಡ್ಡ ರೀತಿಯಲ್ಲಿ ನವೀಕರಿಸುವ ಕೆಲಸ ಮಾಡುತ್ತಿದೆ.

ಟಾಟಾ ನೆಕ್ಸಾನ್‌ನ ನವೀಕರಿಸಿದ ಮಾದರಿಯು 2024 ರ ಆರಂಭದಲ್ಲಿ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಆದ್ದರಿಂದ ಮುಂಬರುವ ವರ್ಷಗಳಲ್ಲಿ ಮಾರುತಿ ಸುಜುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ನಡುವಿನ ಸ್ಪರ್ಧೆಯು ತೀವ್ರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನೆಕ್ಸಾನ್ ಫೇಸ್‌ಲಿಫ್ಟ್ ಅನ್ನು ADAS ಜೊತೆಗೆ ವ್ಯಾಪಕವಾದ ಬಾಹ್ಯ ಮತ್ತು ಆಂತರಿಕ ನವೀಕರಣಗಳೊಂದಿಗೆ ಪರೀಕ್ಷೆಯ ಮೇಲೆ ಕಣ್ಣಿಡಲಾಗಿದೆ. ಮುಂಬರುವ ವರ್ಷವು ಎಸ್‌ಯುವಿ ವಿಭಾಗದಲ್ಲಿ ಪೈಪೋಟಿಯು ರಂಗೇರಲಿದೆ ಎಂದೇ ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications