Maruti SUV's: ಕೈಕೊಟ್ಟವೇ ಮಾರುತಿಯ ಬಹುನಿರೀಕ್ಷಿತ ಎಸ್‌ಯುವಿಗಳು! ಹೇಗಿದೆ ಮಾರಾಟ?
ಭಾರತೀಯ ಕಾರು ಮಾರುಕಟ್ಟೆಯು ಬಹುತೇಕ ಎಸ್‌ಯುವಿಗಳಿಂದಲೇ ತುಂಬಿ ಹೋಗಿದೆ. ಗ್ರಾಹಕರಿಂದ ಎಸ್‌ಯುವಿಗಳಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಕೂಡ ಸಾಲು ಸಾಲು ಎಸ್‌ಯುವಿಗಳನ್ನು ಹೊರ ತರುವ ಮೂಲಕ ಒಟ್ಟಾರೆ ಎಸ್‌ಯುವಿ ವಿಭಾಗವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ.
ಇದಕ್ಕೆ ಸಾಕ್ಷಿಯೆಂಬಂತೆ ಮಾರುತಿ ಸುಜುಕಿಯು ನಾಲ್ಕು ಹೊಸ "SUV ಗಳನ್ನು" (Maruti SUV's) ಪರಿಚಯಿಸುವ ಮೂಲಕ ಆಕ್ರಮಣವನ್ನು ಈಗಾಗಲೇ ಪ್ರಾರಂಭಿಸಿದೆ. ಆದ್ರೆ ಅದು ಅಷ್ಟು ಸುಲಭವಲ್ಲ ಭಾರತದಲ್ಲಿ ಎಸ್‌ಯುವಿ ವಿಭಾಗವನ್ನು ಆಳುತ್ತಿರುವ ದೇಶೀಯ ಬ್ರಾಂಡ್‌ಗಳಾದ ಟಾಟಾ ಹಾಗೂ ಮಹೀಂದ್ರಾ ಕಂಪನಿಗಳು ಈಗಾಗಲೇ ತಮ್ಮ ಹಿಡಿತವನ್ನು ಸಾಧಿಸಿವೆ. ಹಾಗಾದ್ರೆ ಮಾರುತಿಯವರ ಎಸ್‌ಯವಿಗಳು ಯಾವ ಮಟ್ಟಿಗೆ ಯಶಸ್ವಿಯಾಗಿವೆ ಇಲ್ಲಿ ನೋಡೋಣ.

ಮಾರುತಿ ಗ್ರ್ಯಾಂಡ್ ವಿಟಾರಾ: ಮಾರುತಿ ಬ್ರೆಝಾ ಈಗಾಗಲೇ ಮಾರುಕಟ್ಟೆಯಲ್ಲಿ 15,000 ಯುನಿಟ್‌ಗಳ ಸರಾಸರಿ ಮಾಸಿಕ ಮಾರಾಟದೊಂದಿಗೆ ಮುನ್ನುಗ್ಗುತ್ತಿದ್ದರೇ, ಕಳೆದ ವರ್ಷ ಹಬ್ಬದ ಸೀಸನ್‌ನಲ್ಲಿ ಗ್ರಾಂಡ್ ವಿಟಾರಾವನ್ನು ಪರಿಚಯಿಸುವ ಮೂಲಕ ಎಸ್‌ಯುವಿ ವಿಭಾಗದ ಆಕ್ರಮಣವನ್ನು ಪ್ರಾರಂಭಿಸಿತು. ಇದು ಬ್ರ್ಯಾಂಡ್‌ನ ಮೊದಲ ಸ್ಟ್ರಾಂಗ್ ಹೈಬ್ರಿಡ್ ಕಾರು ಮತ್ತು AWD ಅನ್ನು ನೀಡುವ ಮೊದಲ ಮತ್ತು ಏಕೈಕ ಕಾರಾಗಿದೆ.
ಇದು ಯಾವ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ಒಮ್ಮೆ ನೋಡೋದಾದ್ರೆ, ಗ್ರ್ಯಾಂಡ್ ವಿಟಾರಾ 55,000 ಆರಂಭಿಕ ಬುಕಿಂಗ್‌ಗಳೊಂದಿಗೆ ಆತ್ಮೀಯ ಸ್ವಾಗತವನ್ನು ಪಡೆದಿದೆ. ಇದು ಕೆಲವು ರೂಪಾಂತರಗಳಿಗೆ 5 ತಿಂಗಳಿಗಿಂತ ಹೆಚ್ಚು ಕಾಯುವ ಅವಧಿಯನ್ನು ಹೊದಿದೆ. ಗ್ರ್ಯಾಂಡ್ ವಿಟಾರಾ ಮಾಸಿಕ ಮಾರಾಟವು ಈಗ ಸುಮಾರು 9,500 ಯುನಿಟ್‌ಗಳ ಆಸುಪಾಸಿನಲ್ಲಿ ನಿಂತಿದೆ.

ಜಿಮ್ನಿ: ಈ ವರ್ಷದ ಆರಂಭದಲ್ಲಿ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಐದು-ಬಾಗಿಲಿನ ಆವೃತ್ತಿಯನ್ನು ಪರಿಚಯಿಸಿತು. ಇದು ಭಾರತೀಯ ಗ್ರಾಹಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿತು. ವಾಹನವು ದೀರ್ಘ ಕಾಯುವ ಅವಧಿಯನ್ನು ಹೊಂದಿದೆ. ಇದರ ಮಾಸಿಕ ಮಾರಾಟವು ಈಗ ಸುಮಾರು 3,000 ರಿಂದ 4,000 ಯುನಿಟ್‌ಗಳನ್ನು ದಾಟಿದೆ. ಇದು ಬ್ರ್ಯಾಂಡ್‌ಗೆ ಅಷ್ಟೇನೂ ಹಿಟ್ ಆಗದಿದ್ದರೂ, ಜಿಮ್ನಿ ಉತ್ತಮ ಆಫ್‌ರೋಡರ್ ಎಂದು ಕರೆಸಿಕೊಂಡಿದೆ.
ಮಾರುತಿ ಫ್ರಾಂಕ್ಸ್: ಈ ವರ್ಷದ ಆರಂಭದಲ್ಲಿ, ಮಾರುತಿ ಸುಜುಕಿಯು ಬಲೆನೊ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಮತ್ತು ಹ್ಯಾಚ್‌ಬ್ಯಾಕ್‌ನೊಂದಿಗೆ ಅನೇಕ ಭಾಗಗಳನ್ನು ಹಂಚಿಕೊಳ್ಳುವ ಮೂಲಕ ಫ್ರಾಂಕ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು. ಫ್ರಾಂಕ್ಸ್ ನೆಕ್ಸಾ ಶೋರೂಮ್‌ಗಳಿಗೆ ಸರಾಸರಿ 9,000 ಹೆಚ್ಚುವರಿ ಗ್ರಾಹಕರನ್ನು ಕರೆತಂದಿದೆ. ಫ್ರಾಂಕ್ಸ್‌ನ ವಿಭಿನ್ನ ಕ್ರಾಸ್‌ಒವರ್-ಪ್ರೇರಿತ ವಿನ್ಯಾಸವು ರಸ್ತೆಗಳಲ್ಲಿ ಅದರ ವಿಶಿಷ್ಟ ಉಪಸ್ಥಿತಿಯನ್ನು ಖಚಿತಪಡಿಸಿದೆ.

ಇನ್ವಿಕ್ಟೊ: ಮಾರುತಿ ಸುಜುಕಿಯ ಇತ್ತೀಚಿನ ಕೊಡುಗೆಯೆಂದರೆ ಇನ್ವಿಕ್ಟೊ, ಇದು ಬ್ರ್ಯಾಂಡ್‌ನ ಅತ್ಯಂತ ದುಬಾರಿ ಮಾದರಿಯಾಗಿದೆ. MPV ಎಂದು ವರ್ಗೀಕರಿಸಲಾಗಿದ್ದರೂ, ಮಾರುತಿ ಸುಜುಕಿಯು ಆಕ್ರಮಣಕಾರಿ ನೋಟದಿಂದ ವಾಹನಕ್ಕೆ SUV ಟ್ಯಾಗ್ ಅನ್ನು ನೀಡಲಾಗಿದೆ. ಹೊಸ Invicto ದೂರದ ಪ್ರಾಯಾಣಗಳಿಗಾಗಿ ವಿನ್ಯಾಸಗೊಳಿಸಲಾದ ಹೈಬ್ರಿಡ್-ಆಟೋಮ್ಯಾಟಿಕ್ ಕಾರು. ಟೊಯೋಟಾ ಒದಗಿಸಿದ ನಿಗದಿತ ಸಂಖ್ಯೆಯ ಘಟಕಗಳ ಕಾರಣದಿಂದಾಗಿ, ವಾಹನಕ್ಕಾಗಿ ಈಗಾಗಲೇ ಗಮನಾರ್ಹವಾದ ಕಾಯುವ ಅವಧಿಯಿದೆ.
ಮೇಲೆ ನೀಡಲಾದ ಎಲ್ಲಾ ಎಸ್‌ಯುವಿಗಳು ಆಯಾ ವಿಭಾಗದಲ್ಲಿ ಉತ್ತಮ ಮಾರಾಟವನ್ನು ದಾಖಲಿಸಿವೆ. ಅಂದ್ರೆ ತೀರಾ ಕೆಳಮಟ್ಟದ ಮಾಟವನ್ನು ದಾಖಲಿಸಿಲ್ಲ ಹಾಗೆಯೇ ಈಗಿರುವ ಪ್ರತಿಸ್ಪರ್ಧಿಗಳಿಗೆ ತೀರ್ವ ಪೈಪೋಟಿಯು ಅಲ್ಲ. ಒಟ್ಟಾರೆ ತನ್ನ ವಿಭಾಗದ ಉತ್ತಮ ಮಾರಾಟ ಮಾದರಿಗಳು ಎಂದು ಹೇಳಬಹುದು. ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications