ಮಾರಾಟದಲ್ಲಿ ಟಾಟಾ ಟಾಪ್ ಸೆಲ್ಲರ್ ನೆಕ್ಸಾನ್ ಎಸ್‍ಯುವಿಯನ್ನು ಹಿಂದಿಕ್ಕಿದ ಮತ್ತೊಂದು ಮಾರುತಿ ಕಾರು

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಪಾರುಪತ್ಯ ಸಾಧಿಸುತ್ತಿದೆ. ಮಾರುತಿ ಸುಜುಕಿ ಭಾರತದಲ್ಲಿ ಪಾರುಪತ್ಯ ಮುಂದುವರೆಸಲು ಹೊಸ ಕಾರುಗಳನ್ನು ಪರಿಚಯಿಸುತ್ತಿವೆ. ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.

2023ರ ಜುಲೈ ತಿಂಗಳಿನ ಮಾರಾಟದಲ್ಲಿ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಮಾದರಿಯು ಟಾಟಾ ನೆಕ್ಸಾನ್ ಸೇರಿದಂತೆ ಹಲವಾರು ಜನಪ್ರಿಯ ಎಸ್‍ಯುವಿಯನ್ನು ಹಿಂದಿಕ್ಕಿದೆ. 2023ರ ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯ 13,220 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಯಿತು. ಈ ಎಸ್‍ಯುವಿಯು 2023ರ ಜನವರಿಯಲ್ಲಿ ಆಟೋ ಎಕ್ಸ್‌ಪೋ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿ ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು.

maruti suzuki fronx

ಬಿಡುಗಡೆಯಾಗಿ ಮಾರುತಿ ಸುಜುಕಿ ಫ್ರಾಂಕ್ಸ್ ಮೂರನೇ ತಿಂಗಳಿನಲ್ಲಿ, ಫ್ರಾಂಕ್ಸ್ ಮೂರನೇ ಅತಿ ಹೆಚ್ಚು ಮಾರಾಟವಾದ ಎಸ್‍ಯುವಿಯಾಗಿದೆ. ಕಳೆದ ತಿಂಗಳ ಅತಿ ಹೆಚ್ಚು ಮಾರಾಟವಾದ ಎಸ್‍ಯುವಿಗಳಲ್ಲಿ ಮಾರುತಿ ಸುಜುಕಿ ಬ್ರೆಝಾ ಮತ್ತು ಹ್ಯುಂಡೈ ಕ್ರೆಟಾ ಅಗ್ರಸ್ಥಾನದಲ್ಲಿದೆ. ಇವುಗಳ ನಂತರ ಮೂರನೇ ಸ್ಥಾನವನ್ನು ಫ್ರಾಂಕ್ಸ್ ಪದೆದುಕೊಂಡಿದೆ. ಕಳೆದ ತಿಂಗಳು ಟಾಟಾ ನೆಕ್ಸಾನ್ ಮಾದರಿಯ 12,349 ಯುನಿಟ್ ಗಳು ಮಾರಾಟವಾಗಿದೆ. ಇದನ್ನು ಮಾರುತಿ ಫ್ರಾಂಕ್ಸ್ ಮಾದರಿಗೆ ಹೋಲಿಸಿದರೆ 871 ಯುನಿಟ್‌ಗಳು ಕಡಿಮೆಯಾಗಿದೆ.

ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರಿನ ಬಗ್ಗೆ ಹೇಳುವುದಾದರೆ, ಇದು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ರೂಪಾಂರಗಳಲ್ಲಿ ಲಭ್ಯವಿದೆ. ಈ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.0 ಲೀಟರ್ ಟರ್ಬೊ ಮತ್ತು 1.2 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.

ಇದರಲ್ಲಿ 1.2 K12C ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ 6,000rpm ನಲ್ಲಿ 88.5bhp ಮತ್ತು 4,400rpm ನಲ್ಲಿ 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗಿದೆ. ಬಲೆನೊ ಆರ್‌ಎಸ್‌ನೊಂದಿಗೆ ಕೊನೆಯದಾಗಿ ಕಂಡ ಟರ್ಬೋಚಾರ್ಜ್ಡ್ 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಹೆಚ್ಚು ಶಕ್ತಿಶಾಲಿ ಎಂಜಿನ್ ಆಗಿದೆ.

1.0-ಲೀಟರ್ ಎಂಜಿನ್ 5,500rpm ನಲ್ಲಿ 98.7bhp ಮತ್ತು 2,000 ರಿಂದ 4,500rpm ವರೆಗೆ 147.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೂಸ್ಟರ್‌ಜೆಟ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಆಗಿ ನೀಡಲಾಗಿದೆ. ಇನ್ನು ಈ ಮಾರುತಿ ಫ್ರಾಂಕ್ಸ್ 1.2 ಲೀಟರ್ Dualjet-AMT ಗೇರ್‌ಬಾಕ್ಸ್ ಸಂಯೋಜನೆಯೊಂದಿಗೆ 22.89 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

1.2 ಲೀಟರ್ ಪೆಟ್ರೋಲ್ ಜೊತೆಗೆ ಮ್ಯಾನ್ಯುವಲ್ ಆವೃತ್ತಿಯು 21.7 ಎಂಜಿನ್ ಆವೃತ್ತಿಯು 21.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು 1.0 ಲೀಟರ್ ಬೂಸ್ಟರ್‌ಜೆಟ್ ರೂಪಾಂತರಗಳು ಮ್ಯಾನುವಲ್‌ನೊಂದಿಗೆ 21.50 ಕಿ.,ಮೀ ಮೈಲೇಜ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 20.01 ಕಿ.ಮೀ ಮೈಲೇಜ್ ನೀಡುತ್ತದೆ. ಈ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ ರೂಪಾಂತರವು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ವೀಲ್ ಕವರ್‌ಗಳೊಂದಿಗೆ ಸ್ಟೀಲ್ ವೀಲ್‌ಗಳು ಹೊಂದಿದೆ.

ಡ್ಯುಯಲ್-ಟೋನ್ ಇಂಟೀರಿಯರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಫ್ಯಾಬ್ರಿಕ್ ಸೀಟ್ ಅಪ್ಹೋಲ್‌ಸ್ಟರಿ, ಸ್ಟೀರಿಂಗ್‌ಗಾಗಿ ಟಿಲ್ಟ್ ಹೊಂದಾಣಿಕೆ ಮತ್ತು 60:40 ಹಿಂಭಾಗದ ಫೀಚರ್ಸ್ ಗಳೊಂದಿಗೆ ಪ್ಯಾಕ್ ಮಾಡಲಾಗಿದೆ. ಇದರೊಂದಿಗೆ ಇನ್ನು ಸೀಟ್ ಸ್ಪ್ಲಿಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿಯರ್ ಡಿಫಾಗರ್ ಅನ್ನು ಹೊಂದಿದೆ.

ಬಲೆನೊ ಆಧಾರಿತ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ. ಇವುಗಳು ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಅರ್ಥನ್ ಬ್ರೌನ್, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಒಪ್ಯುಲೆಂಟ್ ರೆಡ್ ಆಗಿದೆ. ಇನ್ನು ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಅರ್ಥನ್ ಬ್ರೌನ್, ಒಪ್ಯುಲೆಂಟ್ ರೆಡ್ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಸೇರಿವೆ. ಇವೆಲ್ಲವೂ ನೀಲಿ ಕಪ್ಪು ರೂಫ್ ಹೊಂದಿದೆ.

Article Published On: Saturday, August 5, 2023, 14:07 [IST]
English summary
Maruti suzuki fronx beats tata nexon sales in july 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+