McLaren Artura: ಅಂಬಾನಿಗೆ ಇನ್ನೂ ಸಿಕ್ಕಿಲ್ಲ! ಅತ್ಯಂತ ದುಬಾರಿ ಕಾರು ಖರೀದಿಸಿದ ಈತ ಯಾರು?
ಭಾರತದ ಫ್ಯಾಷನ್ ಮತ್ತು ಜೀವನಶೈಲಿ (fashion and lifestyle) ಉದ್ಯಮದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಪರ್ಪಲ್ ಸ್ಟೈಲ್ ಲ್ಯಾಬ್ಸ್ CEO ಅಭಿಷೇಕ್ ಅಗರ್ವಾಲ್ ಕಾರೊಂದನ್ನು ಖರೀದಿಸಿ ಸುದ್ದಿಯಾಗಿದ್ದಾರೆ. ಅಂತಹದ್ದೇನಿದೆ ಇವರು ಖರೀದಿಸಿದ ಕಾರಿನಲ್ಲಿ ಅಂತೀರ? ಇಲ್ಲಿದೆ ನೋಡಿ ಕಾರಿನ ಪ್ರಮುಖ ವಿಶೇಷತೆಗಳು.
ಅಭಿಷೇಕ್ ಅಗರ್ವಾಲ್ ಅವರು McLaren Artura ಸೂಪರ್ ಕಾರನ್ನು ಖರೀದಿಸಿದ್ದಾರೆ. ಇವರು ಕಾರು ಖರೀದಿಸಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಆದ್ರೆ ಈ ಕಾರನ್ನು ಭಾರತದಲ್ಲಿ ಡೆಲಿವರಿ ಪಡೆದಿರುವುದೇ ವಿಶೇಷತೆ, ಏಕೆಂದರೆ ಮೆಕ್ಲಾರೆನ್ ಅರ್ಟುರಾ ಸೂಪರ್ ಕಾರನ್ನು ಖರೀದಿಸಿದ ಭಾರತದ ಮೊದಲ ವ್ಯಕ್ತಿಯಾಗಿ ಗುರ್ತಿಸಿಕೊಂಡಿಕೊಂಡಿದ್ದಾರೆ.

ಪರ್ಪಲ್ ಸ್ಟೈಲ್ ಲ್ಯಾಬ್ಸ್ CEO ಅಭಿಷೇಕ್ ಅಗರ್ವಾಲ್ ಅವರು ತಮ್ಮ ಹೊಸ ಮೆಕ್ಲಾರೆನ್ ಅರ್ಟುರಾ ಸೂಪರ್ ಕಾರಿನೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ಆಗಿವೆ. ಪ್ರಸಿದ್ಧ ಫೋಟೋಗ್ರಫರ್ ವೈರಲ್ ಭಯಾನಿ ಅವರು ಈ ಫೋಟೋಗಳನ್ನು ತೆಗೆದಿದ್ದಾರೆ. ಈ ಹೊಸ ಅರ್ಟುರಾ ಕಾರು ಮೆಕ್ಲಾರೆನ್‌ನಲ್ಲಿನ ಸೂಪರ್ ಕಾರುಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.
ಮೆಕ್ಲಾರೆನ್ ಅರ್ಟುರಾ ಮೊದಲ ಸರಣಿ-ಉತ್ಪಾದನೆಯ ಹೈ-ಪರ್ಫಾರ್ಮೆನ್ಸ್ ಹೈಬ್ರಿಡ್ (HPH) ಸೂಪರ್‌ಕಾರ್ ಆಗಿದ್ದು, ಪವರ್, ದಕ್ಷತೆ ಮತ್ತು ಆಕರ್ಷಣೀಯ ಲುಕ್‌ನೊಂದಿಗೆ ಎಂಥವರನ್ನು ತನ್ನತ್ತ ಸೆಳೆಯುತ್ತದೆ. ಇದರ ಟ್ವಿನ್ ಟರ್ಬೋಚಾರ್ಜ್ಡ್ V6 ಎಂಜಿನ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ. ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಅಸಾಧಾರಣ ಚಾಲನಾ ಅನುಭವ ನೀಡುತ್ತದೆ.

ಇದು ಹೈಬ್ರಿಡ್ ಕಾರ್ ಆಗಿರುವುದರಿಂದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಮೇಲೆ ತಿಳಿಸಿದಂತೆ 3.0-ಲೀಟರ್ V6 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಬರುತ್ತದೆ. ಇದರ ಪವರ್ ಬಗ್ಗೆ ಹೇಳುವುದಾದರೆ ಬರೋಬ್ಬರಿ 671 bhp ಮತ್ತು 720 Nm ಗರಿಷ್ಟ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಹೈಬ್ರಿಡ್ ಆಗಿರುವುದರಿಂದ ಹೆಚ್ಚಿನ ಮೈಲೇಜ್: ಹೈಬ್ರಿಡ್ ಕಾರಾಗಿರುವುದರಿಂದ ಅತ್ಯುತ್ತಮ ಮೈಲೇಜ್ ಸಿಗುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಈ ಸೂಪರ್ ಕಾರು ಲೀ.ಗೆ 20 ರಿಂದ 22 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದು ಕೇವಲ 3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹಲವು ವಿಶೇಷತೆಗಳನ್ನು ಒಳಗೊಂಡಿರುವ ಮೆಕ್ಲಾರೆನ್ ಅರ್ಟುರಾ ಕಾರಿನ ಬೆಲೆ 5.09 ಕೋಟಿ ರೂ. (ಎಕ್ಸ್ ಶೋ ರೂಂ) ನಿಂದ ಆರಂಭವಾಗುತ್ತದೆ. ಈ ಕಾರಿನ ತೂಕ ಕೇವಲ 1,489 ಕೆ.ಜಿ. ಇಲ್ಲಿ ಗಮನಾರ್ಹ ಅಂಶವೆಂದರೆ ಕಡಿಮೆ ತೂಕದ ಕಾರುಗಳು ಸಾಮಾನ್ಯವಾಗಿ ಉತ್ತಮ ಪರ್ಫಾಮೆನ್ಸ್ ನೀಡುತ್ತವೆ. ಹಾಗಾಗಿಯೇ ಈ ಕಾರು ಕೂಡ 3 ಕೇವಲ ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪಬಲ್ಲದು.
ಮೆಕ್ಲಾರೆನ್ ಅರ್ಟುರಾ ಕಾರಿನಲ್ಲಿ ಇ-ಮೋಡ್, ಕಂಫರ್ಟ್ ಮೋಡ್, ಸ್ಪೋರ್ಟ್ ಮೋಡ್ ಮತ್ತು ಟ್ರ್ಯಾಕ್ ಮೋಡ್ ಎಂಬ ಒಟ್ಟು 4 ಡ್ರೈವಿಂಗ್ ಮೋಡ್‌ಗಳನ್ನು ಒದಗಿಸಲಾಗಿದೆ. ಹಾಗೆಯೇ ಈ ಕಾರು eHVAC, ಹೊಸ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಮಾರ್ಟ್‌ಫೋನ್ ಮಿರರಿಂಗ್‌ನಂತಹ ಅತ್ಯಾಧುನಿಕ್ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








