ಭಾರತದಲ್ಲಿ ಐಷಾರಾಮಿ Mercedes-AMG C43 4MATIC ಬಿಡುಗಡೆ: ಅತ್ಯಾಧುನಿಕ ಸೆಡಾನ್ ವಿಶೇಷತೆಗಳು
Mercedes-Benz ಇಂಡಿಯಾ ಇಂದು ಹೊಸ AMG C 43 4MATIC ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. AMG C 43 4MATIC ಅನ್ನು ಸಂಪೂರ್ಣವಾಗಿ Affalterbach ನಲ್ಲಿ AMG ಪ್ರಸಿದ್ಧವಾದ 'ಒನ್ ಮ್ಯಾನ್ ಒನ್ ಎಂಜಿನ್' ತತ್ವಶಾಸ್ತ್ರಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಿರುವುದಾಗಿ ಕಂಪನಿ ಹೇಳಿದೆ.
Mercedes-Benz ಇಂಡಿಯಾ ಹೊಸ ಕಾರನ್ನು ರೂ. 98 ಲಕ್ಷ (ಎಕ್ಸ್ ಶೋ ರೂಂ)ಕ್ಕೆ ಬಿಡುಗಡೆ ಮಾಡಿದೆ. ಅತ್ಯಂತ ಶಕ್ತಿಶಾಲಿ C-ಕ್ಲಾಸ್ ಎಂದು ಸ್ಥಾನ ಪಡೆದಿರುವ C43 ಆಕ್ರಮಣಕಾರಿ ಅಂಶಗಳನ್ನು ಪಡೆದಿದೆ. ಇದು ಉನ್ನತ-ಕಾರ್ಯಕ್ಷಮತೆಯ AMG ಆಗಿರುವುದರಿಂದ, ಅಫಲ್ಟರ್‌ಬ್ಯಾಕ್‌ನಲ್ಲಿರುವ AMG HQ ನಿಂದ ನೇರವಾಗಿ CBU ಮೂಲಕ ಭಾರತಕ್ಕೆ ತರಲಾಗುತ್ತದೆ.

ಈ ಹೊಸ ಐಷಾರಾಮಿ ಸೆಡಾನ್ 2.0 - ಲೀಟರ್ 4 - ಸಿಲಿಂಡರ್ ಎಂಜಿನ್ C - ಕ್ಲಾಸ್‌ನಲ್ಲಿ ಎಲೆಕ್ಟ್ರಿಕ್ ಎಕ್ಸಾಸ್ಟ್ ಗ್ಯಾಸ್ ಟರ್ಬೋಚಾರ್ಜರ್ ಅನ್ನು ಒಳಗೊಂಡಿರುವ ವಿಶ್ವದ ಮೊದಲ ಸರಣಿ - ಉತ್ಪಾದನಾ ಘಟಕವಾಗಿದೆ. ಇದು ಮೊದಲಿಗಿಂತ ಹೆಚ್ಚು ಕ್ರಿಯಾತ್ಮಕ ಚಾಲನಾ ಅನುಭವವನ್ನು ನೀಡುತ್ತದೆ ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ತಿಳಿಸಿದೆ.
ವಿಶೇಷತೆಗಳೇನು: Mercedes-Benz AMG C 43 4MATIC ಸೆಡಾನ್ ಕಾರಿಗಾಗಿ ಫಾರ್ಮುಲಾ 1TM ಎಂಜಿನ್ ತಂತ್ರಜ್ಞಾನವನ್ನು ನೇರವಾಗಿ ಪಡೆಯಲಾಗಿದೆ. ಇದರ ಈ ಹೊಸ ವ್ಯವಸ್ಥೆಯನ್ನು ಮರ್ಸಿಡಿಸ್-AMG ಪೆಟ್ರೋನಾಸ್ F1 ತಂಡವು ಅನೇಕ ವರ್ಷಗಳಿಂದ ಮೋಟಾರ್‌ಸ್ಪೋರ್ಟ್‌ನ ಪ್ರಮುಖ ವರ್ಗದಲ್ಲಿ ಯಶಸ್ವಿಯಾಗಿ ಬಳಸುತ್ತಿರುವ ತಂತ್ರಜ್ಞಾನದ ನೇರ ಉತ್ಪನ್ನವಾಗಿದೆ ಎಂದು ಮರ್ಸಿಡಿಸ್ ತಿಳಿಸಿದೆ.

48-ವೋಲ್ಟ್ ಆನ್‌ಬೋರ್ಡ್ ಎಲೆಕ್ಟ್ರಿಕಲ್ ಸಿಸ್ಟಮ್‌ನಿಂದ ನಡೆಸಲ್ಪಡುವ, ಎಲೆಕ್ಟ್ರಿಕ್ ಎಕ್ಸಾಸ್ಟ್ ಗ್ಯಾಸ್ ಟರ್ಬೋಚಾರ್ಜರ್ 1,75,000 rpm ವರೆಗಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. C 43 4MATIC ಕೇವಲ 4.6 ಸೆಕೆಂಡುಗಳಲ್ಲಿ 100 km/h ವೇಗವನ್ನು ಸುಲಭವಾಗಿ ಸಾಧಿಸಬಲ್ಲದು. ಹಾಗೆಯೇ 500Nm ಟಾರ್ಕ್ ಹಾಗೂ 6750 rpm ನಲ್ಲಿ 300 kW (408 hp) ರೇಟೆಡ್ ಪವರ್ ಉತ್ಪಾದಿಸಬಲ್ಲದು.
Mercedes-AMG C43 ಮುಖ್ಯಾಂಶಗಳು: ಈ C-ಕ್ಲಾಸ್ ಬ್ರ್ಯಾಂಡ್‌ನ ಪರ್ಫಾಮೆನ್ಸ್ ವಿಭಾಗದಲ್ಲಿ ಬಂದಿರುವುದರಿಂದ, ಸಿಗ್ನೇಚರ್ ಗ್ರಿಲ್ ಮತ್ತು ಅಡಾಪ್ಟಿವ್ LED ಹೆಡ್‌ಲ್ಯಾಂಪ್‌ಗಳನ್ನು ಪ್ರಮಾಣಿತವಾಗಿ ಒಳಗೊಂಡಿದೆ. ಇದರೊಂದಿಗೆ, ನಾಲ್ಕು-ಬಾಗಿಲಿನ ಸೆಡಾನ್ ಆಕ್ರಮಣಕಾರಿ ಬಂಪರ್‌ಗಳು, ದೊಡ್ಡ AMG-ನಿರ್ದಿಷ್ಟ ಅಲಾಯ್ ವೀಲ್‌ಗಳು ಮತ್ತು ಕ್ವಾಡ್ ಎಕ್ಸಾಸ್ಟ್ ಟೈಲ್‌ಪೈಪ್‌ಗಳನ್ನು ಸಹ ಒಳಗೊಂಡಿದೆ.

ಒಳಗೆ ಬಣ್ಣದ ಸುತ್ತುವರಿದ ಲೈಟ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು ಬರ್ಮೆಸ್ಟರ್‌ನಿಂದ ಸೌಂಡ್ ಸಿಸ್ಟಮ್ ಹೊಂದಿದೆ. 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, AMG ಸ್ಪೋರ್ಟ್ಸ್ ಸೀಟ್‌ಗಳು ಮತ್ತು ಮೂರು-ಸ್ಪೋಕ್ ಸ್ಟೀರಿಂಗ್ ವೀಲ್. ಕ್ಯಾಬಿನ್ ಸುತ್ತಲೂ ಸ್ಪೋರ್ಟ್ಸ್ ಪೆಡಲ್‌ಗಳು ಸಹ ಇವೆ. 4ಮ್ಯಾಟಿಕ್ ಎಲ್ಲಾ ನಾಲ್ಕು ವೀಲ್‌ಗಳಿಗೆ ಪವರ್ ಕಳುಹಿಸುತ್ತದೆ. ಹಿಂಭಾಗದ ಆಕ್ಸಲ್ ಸ್ಟೀರಿಂಗ್ ಮತ್ತು ಬೂಸ್ಟ್ ಫಂಕ್ಷನ್‌ನಿಂದ ಪ್ರಯೋಜನ ಪಡೆಯುತ್ತದೆ.
ಹೆಚ್ಚಿನ ವೇಗದಲ್ಲಿ, ಸ್ಟೀರಿಂಗ್ ಪವರ್ ನೆರವು ಕಡಿಮೆಯಾಗುತ್ತದೆ, ಕಡಿಮೆ ವೇಗದಲ್ಲಿ ಇದು ಸ್ಥಿರವಾಗಿ ಹೆಚ್ಚಾಗುತ್ತದೆ. "ಸ್ಪೋರ್ಟ್" ಮತ್ತು "ಸ್ಪೋರ್ಟ್ +" ಸಸ್ಪೆನ್ಷನ್ ಸೆಟ್ಟಿಂಗ್‌ಗಳಲ್ಲಿ, ಚಾಲಕ ಸ್ಟೀರಿಂಗ್ ವೀಲ್ ಮೂಲಕ ಡ್ರೈವಿಂಗ್ ಸ್ಥಿತಿಯ ಬಗ್ಗೆ ಗಮನಾರ್ಹವಾಗಿ ಹೆಚ್ಚಿನ ಪ್ರತಿಕ್ರಿಯೆಯನ್ನು ಅನುಭವಿಸಬಹುದು ಎಂದು ಕಂಪನಿ ತಿಳಿಸಿದೆ.

ಅಡಾಪ್ಟಿವ್ ಡ್ಯಾಂಪಿಂಗ್ ಸಿಸ್ಟಮ್‌ನೊಂದಿಗೆ ರೈಡ್ ಕಂಟ್ರೋಲ್ ಸಸ್ಪೆನ್ಷನ್: ಅಡಾಪ್ಟಿವ್ ಡ್ಯಾಂಪಿಂಗ್ ಸಿಸ್ಟಮ್‌ನೊಂದಿಗೆ AMG ರೈಡ್ ಕಂಟ್ರೋಲ್ ಸ್ಟೀಲ್-ಸ್ಪ್ರಿಂಗ್ ಸಸ್ಪೆನ್ಷನ್, ನಿರ್ಣಾಯಕ ಸ್ಪೋರ್ಟಿ ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಸಂಯೋಜಿಸುತ್ತದೆ. ಸ್ಪ್ರಿಂಗ್ ಕಂಟ್ರೋಲ್ ಆರ್ಮ್‌ನಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ಸ್ಟೀರಿಂಗ್ ಗೆಣ್ಣುಗಳು (Steering knuckles) ಮತ್ತು ಸಸ್ಪೆನ್ಷನ್ ಜಾಯಿಂಟ್‌ಗಳೊಂದಿಗೆ ಮುಂಭಾಗದ ಆಕ್ಸಲ್ ಮತ್ತು ಹಿಂದಿನ ಆಕ್ಸಲ್‌ನಿಂದ ಇದಕ್ಕೆ ಆಧಾರವನ್ನು ಒದಗಿಸಲಾಗಿದೆ.
ಇದಕ್ಕೆ ಪೂರಕವಾಗಿ, ಅಡಾಪ್ಟಿವ್ ಡ್ಯಾಂಪಿಂಗ್ ಸಿಸ್ಟಂ ಪ್ರತಿ ಚಕ್ರದಲ್ಲಿನ ಡ್ಯಾಂಪಿಂಗ್ ಅನ್ನು ಪ್ರಸ್ತುತ ಬೇಡಿಕೆಗೆ ನಿರಂತರವಾಗಿ ಅಳವಡಿಸಿಕೊಳ್ಳುತ್ತದೆ. ಯಾವಾಗಲೂ ಮೊದಲೇ ಆಯ್ಕೆಮಾಡಿದ ಸಸ್ಪೆನ್ಷನ್ ಮಟ್ಟ, ಚಾಲನಾ ಶೈಲಿ ಮತ್ತು ರಸ್ತೆಯ ಮೇಲ್ಮೈ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಒಟ್ಟಾರೆ ಈಗಿನ ಇತರ ಕಾರುಗಳಿಗಿಂತ ತುಂಬಾ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವುದಾಗಿ ಕಂಪನಿ ತಿಳಿಸಿದೆ.


Click it and Unblock the Notifications








