Mercedes-AMG GT 63 S E Performance ಕಾರು ಬಿಡುಗಡೆ: 2.9 ಸೆಕೆಂಡುಗಳಲ್ಲಿ 100 ಕಿ.ಮೀ ಸ್ಪೀಡ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ಇ ಪರ್ಫಾಮೆನ್ಸ್ (Mercedes-AMG GT 63 SE) ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ಇ ಪರ್ಫಾಮೆನ್ಸ್ ಕಾರಿನ ಬೆಲೆಯು ಪ್ಯಾನ್ ಇಂಡಿಯಾ ಎಕ್ಸ್ ಶೋರೂಂ ಪ್ರಕಾರ ರೂ.3.3 ಕೋಟಿಯಾಗಿದೆ.

ಹೊಸ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ಇ ಪರ್ಫಾಮೆನ್ಸ್ ಕಾರು ಎಎಂಜಿ ಜಿಟಿ ಮಾದರಿಯನ್ನು ಆಧರಿಸಿದೆ. ಇದು ಕೆಲವು ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳೊಂದಿಗೆ ಬಂದಿದೆ, ಹೊಸ ಮಾದರಿಯು ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹಿಂಭಾಗದ ಬಂಪರ್‌ನಲ್ಲಿ ಚಾರ್ಜಿಂಗ್ ಪೋರ್ಟ್, ಹೊಸ ಎಕ್ಸಾಸ್ಟ್ ಸಿಸ್ಟಮ್ ಮತ್ತು ಹೊಸ ಶೈಲಿಯ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಕಾರಿನಲ್ಲಿ 20 ಮತ್ತು 21-ಇಂಚಿನ ಅಲಾಯ್ ವ್ಹೀಲ್ ಆಯ್ಕೆಯನ್ನು ನೀಡಿದೆ.

Mercedes-AMG GT 63 S E

ಈ ಐಷಾರಾಮಿ ಮರ್ಸಿಡಿಸ್ ಪರ್ಫಾಮೆನ್ಸ್ ಕಾರಿನ ಕ್ಯಾಬಿನ್ ಒಳಗೆ, ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ ಡ್ಯುಯಲ್ 12.4-ಇಂಚಿನ ಡಿಸ್ ಪ್ಲೇಗಳನ್ನು ನೀಡೀದೆ. ಇದರಲ್ಲಿರುವ MBUX ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮೂಲಕ ಇವಿ ರೇಂಜ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಪವರ್ ಗೇಜ್‌ನಂತಹ ಹಲವಾರು ಹೈಬ್ರಿಡ್-ನಿರ್ದಿಷ್ಟ ಮಾಹಿತಿಯನ್ನು ಡ್ರೈವರ್‌ಗಳಿಗೆ ನೀಡುತ್ತದೆ.

ಇನ್ನು ಈ ಕಾರಿನಲ್ಲಿ ಸ್ಪೋರ್ಟ್ ಸೀಟುಗಳು, ಸ್ಟೀರಿಂಗ್ ವೀಲ್ ಮತ್ತು ಇತರವುಗಳಂತಹ AMG-ನಿರ್ದಿಷ್ಟ ಅಂಶಗಳನ್ನು ಹೊಂದಿದೆ. ಈ ಪರ್ಫಾಮೆನ್ಸ್ ಕಾರಿನ ಹೆಸರಿನಲ್ಲಿರುವ "ಇ" ಅಕ್ಷರವು ಎಲೆಕ್ಟ್ರಿಕ್‌ಗೆ ಸಂಬಂಧಿಸಿದೆ, ಏಕೆಂದರೆ ಇದು ಸಣ್ಣ ಎಲೆಕ್ಟ್ರಿಕ್ ಮೋಟಾರ್ ಮತ್ತು ಹಿಂದಿನ ಆಕ್ಸಲ್‌ನಲ್ಲಿ ಬ್ಯಾಟರಿಯನ್ನು ಪಡೆಯುತ್ತದೆ. ಸಂಪೂರ್ಣ ಸೆಟಪ್ ಅನ್ನು Mercedes-AMG ತಂಡವು ಆಂತರಿಕವಾಗಿ ಅಭಿವೃದ್ಧಿಪಡಿಸಿದೆ.

Mercedes-AMG GT 63 S E

ಈ ಫಾರ್ಫಮೆನ್ಸ್ ಕಾರಿನಲ್ಲಿ 4-ಲೀಟರ್ ಬೈ-ಟರ್ಬೊ V8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 640 hp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಲೆಕ್ಟ್ರಿಕ್ ಮೋಟಾರ್ ಹೆಚ್ಚುವರಿ 204hp ಪವರ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಸಂಯೋಜಿತವಾಗಿ 843bhp ಮತ್ತು 1470Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದ್ದು, ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಈ ಹೊಸ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ಇ ಪರ್ಫಾಮೆನ್ಸ್ ಕಾರು ಕೇವಲ 2.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಪರ್ಫಾಮನ್ಸ್ ಕಾರು 316 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.

Mercedes-AMG GT 63 S E

ಈ ಕಾರಿನಲ್ಲಿ 6.1kWh ಬ್ಯಾಟರಿ ಪ್ಯಾಕ್ ಅನ್ನು 12 ಕಿ.ಮೀ ಎಲೆಕ್ಟ್ರಿಕ್ ಚಾಲನೆಗೆ ಬಳಸಬಹುದು ಮತ್ತು ಈ ಇವಿ ಮೋಡ್‌ನಲ್ಲಿ, ಟಾಪ್ ಸ್ಪೀಡ್ 130 ಕಿ.ಮೀ ಆಗಿರುತ್ತದೆ. ಚಾರ್ಜಿಂಗ್ ಸ್ಟೇಷನ್‌ನಲ್ಲಿ 3.7kW ಆನ್-ಬೋರ್ಡ್ AC ಚಾರ್ಜರ್ ಬಳಸಿ ಅಥವಾ ಹೋಮ್ ಸಾಕೆಟ್ ಬಳಸಿ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಎಲೆಕ್ಟ್ರಿಕ್ ಮೋಟರ್ V8 ಎಂಜಿನ್‌ಗೆ ಹೆಚ್ಚುವರಿ ಪವರ್ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

ಹೊಸ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ಇ ಪರ್ಫಾಮೆನ್ಸ್ ಕಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ನೇರ ಪ್ರತಿಸ್ಪರ್ಧಿ ಪೋರ್ಷೆ Panamera Turbo S E-ಹೈಬ್ರಿಡ್ ಕಾರ್ ಆಗಿದೆ. ಇನ್ನು ಮರ್ಸಿಡಿಸ್ ಕಂಪನಿಯು A-ಕ್ಲಾಸ್‌ನಿಂದ GLS ಮೇಬ್ಯಾಕ್‌ವರೆಗಿನ ಹೆಚ್ಚಿನ ಮಾದರಿಗಳಲ್ಲಿ ಕಾಯುವ ಅವಧಿಯನ್ನು ಕಡಿಮೆ ಮಾಡಿದೆ ಎಂದು ಹೇಳಿದೆ. ಎ-ಕ್ಲಾಸ್ , ಸಿ-ಕ್ಲಾಸ್ ಮತ್ತು ಇ-ಕ್ಲಾಸ್‌ಗಳಂತಹ ಸೆಡಾನ್‌ಗಳಿಗೆ ಕಾಯುವ ಅವಧಿಯು 3 ತಿಂಗಳಿಗಿಂತ ಕಡಿಮೆ ಇದೆ.

More from DriveSpark

Article Published On: Tuesday, April 11, 2023, 13:52 [IST]
English summary
Mercedes amg gt 63 s e performance launched price specs features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+