Mercedes: ಈ ವರ್ಷದ ಕೊನೆ ಬಿಡುಗಡೆ, ಮರ್ಸಿಡಿಸ್-ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ಬಂತು.. ವಿಶೇಷತೆಗಳೇನು?

ಮರ್ಸಿಡಿಸ್-ಬೆಂಝ್ (Mercedes - Benz) ಪ್ರಖ್ಯಾತ ಐಷಾರಾಮಿ ಕಾರು ತಯಾರಕ ಕಂಪನಿಯಾಗಿ ಜನಮನ್ನಣೆ ಗಳಿಸಿದೆ. ಪ್ರಮುಖ ಸಿನಿತಾರೆಯರು, ಕ್ರೀಡಾಪಟುಗಳು ಹಾಗೂ ಉದ್ಯಮಿಗಳು ಈ ಕಾರುಗಳನ್ನು ಖರೀದಿಸುತ್ತಾರೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್-ಬೆಂಝ್ ಜಿಎಲ್ಇ ಎಲ್‌ಡಬ್ಲ್ಯೂ (Mercedes-Benz GLE LWB) ಬಿಡುಗಡೆಯಾಗಿದೆ.

ನೂತನ ಕಾರು, ಜಿಎಲ್ಇ ಎಸ್‌ಯುವಿಯ ನವೀಕರಿಸಿದ (ಫೇಸ್‌ಲಿಫ್ಟ್) ಆವೃತ್ತಿಯಾಗಿದ್ದು, ಮೂರು ರೂಪಾಂತರ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಎಸ್‌ಯುವಿ ರೂ.96.40 ಲಕ್ಷ (ಭಾರತ ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದ್ದು, ಮರ್ಸಿಡಿಸ್-ಬೆಂಝ್ ಎಎಂಜಿ ಸಿ43 (Mercedes-AMG C43) ಜೊತೆಯಲ್ಲಿ ಲಾಂಚ್ ಆಗಿದೆ. ಈ ವರ್ಷ ಕಂಪನಿ ಕಡೆಯಿಂದ ಬಿಡುಗಡೆಗೊಂಡ ಕೊನೆಯ ಕಾರುಗಳು ಇವಾಗಿವೆ.

Mercedes: ಈ ವರ್ಷದ ಕೊನೆ ಬಿಡುಗಡೆ, ಮರ್ಸಿಡಿಸ್-ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ಬಂತು.. ವಿಶೇಷತೆಗಳೇನು?

ಹೊಸ ಮರ್ಸಿಡಿಸ್-ಬೆಂಝ್ ಜಿಎಲ್ಇ ಎಲ್‌ಡಬ್ಲ್ಯೂ (Mercedes-Benz GLE LWB) ಎಸ್‌ಯುವಿ, ಬುಕ್ಕಿಂಗ್ ಇಂದಿನಿಂದ ಆರಂಭವಾಗಿದ್ದು, ನವೆಂಬರ್ ಅಂತ್ಯದೊಳಗೆ ವಿತರಣೆ ಶುರುವಾಗಲಿದೆ. ವಿನ್ಯಾಸದ ದೃಷ್ಟಿಯಿಂದ ಈ ಕಾರು, ಹೆಚ್ಚು ಅತ್ಯಾಧುನಿಕವಾಗಿದೆ. ಮುಂಭಾಗ ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿಂಗಲ್ ಸ್ಲ್ಯಾಟ್ ಗ್ರಿಲ್, ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್ಸ್, ನವೀನವಾದ ಎಲ್‌ಇಡಿ ಟೈಲ್‌ಲೈಟ್‌ ಹಾಗೂ ಹಿಂಭಾಗದ ಹೊಸದಾದ ಬಂಪರ್, ಜೊತೆಗೆ ಲಾಂಗ್ ವೀಲ್ ಬೇಸ್ ಹೊಂದಿದೆ.

ಈ ನೂತನ ಕಾರು, ಸಾಕಷ್ಟು ವಿನೂತನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನವೀನ ಸ್ಟೀರಿಂಗ್ ವೀಲ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಮರುವಿನ್ಯಾಸಗೊಳಿಸಲಾದ ಏರ್‌ಕಾನ್ ವೆಂಟ್ಸ್, ಫೋರ್ ಜೋನ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, 360 - ಡಿಗ್ರಿ ಸರೌಂಡ್ ಕ್ಯಾಮೆರಾ, ಟ್ರಾನ್ಸ್ಪರೆಂಟ್ ಬಾನೆಟ್ ಫಂಕ್ಷನ್, ಎಲೆಕ್ಟ್ರಿಕ್ ಸನ್ ಬ್ಲೈಂಡ್ಸ್, ಪನೋರಮಿಕ್ ಸನ್‌ರೂಫ್‌ ಅನ್ನು ಪಡೆದಿದೆ.

Mercedes: ಈ ವರ್ಷದ ಕೊನೆ ಬಿಡುಗಡೆ, ಮರ್ಸಿಡಿಸ್-ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ಬಂತು.. ವಿಶೇಷತೆಗಳೇನು?

ಮರ್ಸಿಡಿಸ್-ಬೆಂಝ್ ಜಿಎಲ್ಇ ಎಲ್‌ಡಬ್ಲ್ಯೂ ಎಸ್‌ಯುವಿ, ಮೂರು ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. ಅವುಗಳೆಂದರೆ, 2.0 - ಲೀಟರ್ ಡೀಸೆಲ್, 3.0 - ಲೀಟರ್ ಡೀಸೆಲ್ ಮತ್ತು 3.0 - ಲೀಟರ್ ಪೆಟ್ರೋಲ್. 4 ಸಿಲಿಂಡರ್ ಪೆಟ್ರೋಲ್ ಎಂಜಿನ್ 265 bhp ಗರಿಷ್ಠ ಪವರ್ ಹಾಗೂ 550 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಆದರೆ, 6 ಸಿಲಿಂಡರ್ ಎಂಜಿನ್ 362 bhp ಪವರ್, 750 Nm ಪೀಕ್ ಟಾರ್ಕ್, 375 bhp ಗರಿಷ್ಠ ಪವರ್ ಮತ್ತು 500 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ. ಇವೆಲ್ಲ ಎಂಜಿನ್‌ 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿವೆ. ಈ ಕಾರು AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

Mercedes: ಈ ವರ್ಷದ ಕೊನೆ ಬಿಡುಗಡೆ, ಮರ್ಸಿಡಿಸ್-ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ಬಂತು.. ವಿಶೇಷತೆಗಳೇನು?

ಮರ್ಸಿಡಿಸ್-ಬೆಂಝ್ ಜಿಎಲ್ಇ ಎಲ್‌ಡಬ್ಲ್ಯೂ ಎಸ್‌ಯುವಿಯೊಂದಿಗೆ ಬಿಡುಗಡೆಯಾಗಿರುವ ಮರ್ಸಿಡಿಸ್-ಬೆಂಝ್ ಎಎಂಜಿ ಸಿ43 ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯೋಣ. ಈ ಕಾರು, ರೂ.98 ಲಕ್ಷ ಆರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ನವೀನವಾಗಿ ವಿನ್ಯಾಸ ಹೊಂದಿದ್ದು, ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ. 11.9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

Mercedes: ಈ ವರ್ಷದ ಕೊನೆ ಬಿಡುಗಡೆ, ಮರ್ಸಿಡಿಸ್-ಬೆಂಝ್ ಜಿಎಲ್ಇ ಫೇಸ್‌ಲಿಫ್ಟ್ ಬಂತು.. ವಿಶೇಷತೆಗಳೇನು?

ಮರ್ಸಿಡಿಸ್-ಬೆಂಝ್ ಎಎಂಜಿ ಸಿ43 ಪವರ್‌ಟ್ರೇನ್ ಕುರಿತು ಮಾತನಾಡುವುದಾದರೆ, ಇದು 2.0 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 402 bhp ಗರಿಷ್ಠ ಪವರ್ ಹಾಗೂ 500 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 9 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಒಳಗೊಂಡಿದ್ದು, ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 2, 2023, 15:50 [IST]
English summary
Mercedes benz gle lwb suv launched india what is special
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+