ನೀವು ಊಹಿಸಲಾಗದಷ್ಟು ಅಗ್ಗದ ಬೆಲೆ: ಭಾರತದಲ್ಲಿ ಲಾಂಚ್ ಆಗುತ್ತೆ ಪ್ರಸಿದ್ಧ ಕಂಪನಿಯ ಎಲೆಕ್ಟ್ರಿಕ್ ಕಾರು!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ವೇಗವಾಗಿ ಬೆಳವಣಿಗೆಯಾಗುತ್ತಿದೆ. ಅದಕ್ಕೆ ತಕ್ಕಂತೆ ವಿವಿಧ ವಾಹನ ತಯಾರಕ ಕಂಪನಿಗಳು ಹಲವು ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತಾರೆ. ಶೀಘ್ರದಲ್ಲಿ ಪ್ರಮುಖ ಬ್ರಿಟಿಷ್ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ಸ್ ಪುಟ್ಟ ಎಲೆಕ್ಟ್ರಿಕ್ ಕಾರೊಂದನ್ನು ಲಾಂಚ್ ಮಾಡಲಿದೆ.

ದೇಶದ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಲು ಎಂಜಿ ಮೋಟಾರ್ಸ್ ಪ್ರಯತ್ನಿಸುತ್ತಿದ್ದು, ಅದರ ಭಾಗವಾಗಿ ಎಂಜಿ ಏರ್ (MG Air) ಹೆಸರಿನ 2-ಡೋರ್ ಪುಟ್ಟ ಎಲೆಕ್ಟ್ರಿಕ್ ಕಾರೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಾರು ಹಲವು ಬಾರಿ ರಸ್ತೆಯಲ್ಲಿ ಪರೀಕ್ಷೆ ನಡೆಸುವಾಗ ಕಂಡು ಬಂದಿತ್ತು. ಇತ್ತೀಚಿಗೆ ಬರೋಡಾದ ರಸ್ತೆಯಲ್ಲಿ ಪರೀಕ್ಷಾರ್ಥವಾಗಿ ಸಂಚರಿಸುವಾಗ ಕಾಣಿಸಿಕೊಂಡಿದೆ. ಇದು ನೋಡಲು ಬಹುತೇಕ ದೇಶದ ರಸ್ತೆಗಳಲ್ಲಿ ಈ ಮೊದಲು ಸಂಚರಿಸುತ್ತಿದ್ದ 'ರೇವಾ' ಕಾರಿನಂತೆಯೇ ಇದೆ.

ನೀವು ಊಹಿಸಲಾಗದಷ್ಟು ಅಗ್ಗದ ಬೆಲೆ: ಭಾರತದಲ್ಲಿ ಲಾಂಚ್ ಆಗುತ್ತೆ ಪ್ರಸಿದ್ಧ ಕಂಪನಿಯ ಎಲೆಕ್ಟ್ರಿಕ್ ಕಾರು!

ನೂತನ ಎಂಜಿ ಏರ್ ಕಾರು, ಕೇವಲ 2,900 ಎಂಎಂ ಉದ್ದವಿರಲಿದ್ದು, ಮಾರುಕಟ್ಟೆಯಲ್ಲಿ ಬಂದ ಮೇಲೆ ನೇರವಾಗಿ ಯಾವುದೇ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಒಂದೊಮ್ಮೆ ಇದಕ್ಕೆ ಪ್ರಬಲ ಪೈಪೋಟಿಯಾಗಿ ಟಾಟಾ ಕಂಪನಿಯ ಬಹುನೀರಿಕ್ಷಿತ ಕಾರದ 'ನ್ಯಾನೋ' ಎಲೆಕ್ಟ್ರಿಕ್ ರೂಪದಲ್ಲಿ ಬರಬಹುದು. ಆದರೆ, ಟಾಟಾ ನ್ಯಾನೋ ಇವಿ ಉತ್ಪಾದನೆಯ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಡಿಸಿಲ್ಲ. ಇದು ಎಂಜಿ ಏರ್ ಇವಿಗೆ ವರವಾಗಲಿದೆ ಎಂದು ಹೇಳಬಹುದು.

ಎಂಜಿ ಏರ್ ಇವಿ ಹೊರ ಹಾಗೂ ಒಳಭಾಗದಲ್ಲಿ ಅತ್ಯಾಧುನಿಕ ವಿನ್ಯಾಸ ಹಾಗೂ ಯುವ ಖರೀದಿದಾರರನ್ನು ಸೆಳೆಯುವ ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದರ ಬೆಲೆಯೂ ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬೇರೆಲ್ಲ ಎಲೆಕ್ಟ್ರಿಕ್ ಕಾರುಗಳಿಗಿಂತ ಕಡಿಮೆ ಇರಲಿದೆಯಂತೆ. ನೂತನ ಎಂಜಿ ಏರ್ ಇವಿ ರೂ.8 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುವ ನೀರಿಕ್ಷೆ ಇದೆ. ಕೆಲವರು ಅದಕ್ಕಿಂತಲ್ಲೂ ಕಡಿಮೆ ಬೆಲೆಗೆ ಸಿಗಬಹುದು ಎಂದು ಹೇಳುತ್ತಿದ್ದಾರೆ.

ಏರ್ ಇವಿ ಕಾರ್ಯಕ್ಷಮತೆ ಬಗ್ಗೆ ಎಂಜಿ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಈ ಕಾರನ್ನು ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ (GSEV) ಪ್ಲಾಟ್‌ಫಾರ್ಮ್ ಅಡಿ ರೆಡಿ ಮಾಡಲಾಗಿದ್ದು, ಇದು 20kWh ಅಥವಾ 25kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಅಲ್ಲದೆ, ಇದರಲ್ಲಿ ಅಳವಡಿಕೆ ಮಾಡಲಾಗಿರುವ ಎಲೆಕ್ಟ್ರಿಕ್ ಮೋಟಾರ್ 40 hp ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿರಲಿದ್ದು, ಗರಿಷ್ಠ 150 km ರೇಂಜ್ ನೀಡಬಹುದು.

ಈ ಹೊಸ ಎಂಜಿ ಏರ್ ಇವಿ ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ಎರಡು ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿರಲಿದೆ. ಮಾಹಿತಿ ಪ್ರಕಾರ, ಮುಂದಿನ ತಿಂಗಳು ಏರ್ ಇವಿಯ ಉತ್ಪಾದನೆ ಆರಂಭವಾಗಲಿದ್ದು, ಕಂಪನಿಯು ವಾರ್ಷಿಕ 36,000 ಯುನಿಟ್ ಕಾರುಗಳನ್ನು ತಯಾರಿಸುವ ಗುರಿಯನ್ನು ಹೊಂದಿದ್ದು, ಬಿಡುಗಡೆ ಬಗ್ಗೆ ಕಂಪನಿ ಯಾವುದೇ ವಿಚಾರವನ್ನು ತಿಳಿಸಿಲ್ಲ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಟಾಟಾದ ಟಿಯಾಗೊ ಇವಿ ಹಾಗೂ ಸಿಟ್ರಸ್ ಇಸಿ3 ಕಡಿಮೆ ಬೆಲೆಯಲ್ಲಿ ದೊರೆಯುವ ಎಲೆಕ್ಟ್ರಿಕ್ ಕಾರಾಗಿವೆ.

ಅಗ್ಗದ ಎಲೆಕ್ಟ್ರಿಕ್ ಕಾರೆಂದು ಖ್ಯಾತಿಗಳಿಸಿರುವ ಟಾಟಾ ಟಿಯಾಗೊ ಇವಿ ರೂ.8.49 ಲಕ್ಷದಿಂದ ರೂ.11.79 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು 19.2kWh, 24kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ದೊಡ್ಡದಾದ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿರುವ ಕಾರು, 75 PS ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಚಿಕ್ಕ ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 61 PS ಪವರ್, 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕ್ರಮವಾಗಿ 250 km, 315 km ರೇಂಜ್ ನೀಡಲಿವೆ.

ಈಗಾಗಲೇ ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಎಂದು ಹೇಳಲಾಗಿರುವ ಸಿಟ್ರಸ್ ಇಸಿ3 ಕಾರಿನ ಬುಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು, ರೂ.25,000 ಪಾವತಿಸಿ, ಬುಕ್ ಮಾಡಬಹುದು. ಈ ಕಾರು, ರೂ.10ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆಯಂತೆ. 29.2 kWh ಬ್ಯಾಟರಿ ಪ್ಯಾಕ್ ಹೊಂದಿರುವ ಈ ಕಾರು, 57 hp ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಗರಿಷ್ಠ 320 km ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Thursday, February 9, 2023, 16:00 [IST]
English summary
Mg air ev launch in india soon details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+